ಸಿನಿಮಾ
ದಾಖಲೆ ಬರೆದ ಉಪೇಂದ್ರ UI ಫಸ್ಟ್ ಲುಕ್ ಟೀಸರ್: 23 ಮಿಲಿಯನ್ ವೀಕ್ಷಣೆ ಕಂಡ ಟೀಸರ್!

ಅಂದು ನಾನು, ನಂತರ ನೀನು.. ಈಗ ನಾನು ನೀನು.. ಯು ಅಂಡ್ ಐ ಎಂದು ಉಪ್ಪಿ ಹೊಸ ಪ್ರಪಂಚಕ್ಕೆ ಕರೆದೊಯ್ದಿದ್ದಾರೆ. ಯುಐ ಸಿನಿಮಾದ ಫಸ್ಟ್ ಲುಕ್ ಟೀಸರ್ ನಮ್ಮನ್ನು ಹೊಸ ಫ್ಯಾಂಟಸಿ ಜಗತ್ತಿಗೆ ಕರೆದೊಯ್ದಿದೆ. ಇತ್ತೀಚೆಗಷ್ಟೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ ಅಲ್ಲು ಅರವಿಂದ್ ಯು ಐ ಟೀಸರ್ ಬಿಡುಗಡೆ ಮಾಡಿದ್ದರು. ಇದೀಗ ಟೀಸರ್ ದೊಡ್ಡ ರೆಕಾರ್ಡ್ ಬರೆದಿದೆ. ರಿಯಲ್ ಸ್ಟಾರ್ ನಟನೆ ನಿರ್ದೇಶನದ ಯು ಐ 23 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಹತ್ತರಿತ್ತರ 2ವರೆ ಕೋಟಿ ಟೀಸರ್ ನೋಡಿದ್ದಾರೆ. ಉಪೇಂದ್ರ ಯು ಐ ಇತ್ತೀಚೆಗೆ ಬಿಡುಗಡೆಯಾದ ಬಹುತೇಕ ಟೀಸರ್ಗಳಿಂದ ಭಿನ್ನವಾಗಿದೆ. ಸಮ್ಥಿಂಗ್ ಡಿಫರೆಂಟ್ ಇದೆ. ಪೈರೆಟಸ್ ಆಫ್ ಕ್ಯಾರೀಬೀನ್ನ ಲೋಕವೋ ಎಂಬ ಭ್ರಮೆ ಹುಟ್ಟಿಸುತ್ತದೆ. ಈ ಸಿನಿಮಾದಲ್ಲಿ ಉಪೇಂದ್ರ ಮತ್ತು ರೀಷ್ಮಾ ನಾಣಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಾಧು ಕೋಕಿಲಾ ಸೇರಿದಂತೆ ಹಾಸ್ಯ ನಟರೂ ಇದ್ದಾರೆ. ಕೆಪಿ ಶ್ರೀಕಾಂತ್ ಸಿ ಮನೋಹರನ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಸ್ಯಾಂಡಲ್ವುಡ್ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ ಯುಐ.
ಸಿನಿಮಾ
Breaking News ಪ್ರಭಾಸ್-ಅನುಷ್ಕಾ ಮತ್ತೆ ತೆರೆಯ ಮೇಲೆ? ಬಾಹುಬಲಿ ಜೋಡಿಯ ಐದನೇ ಬಾರಿಗೆ ಬೃಹತ್ ಕಮ್‌ಬ್ಯಾಕ್!

ಡೈ ಹಾರ್ಡ್ ಫ್ಯಾನ್ಸ್‌ಗಾಗಿ ಒಂದು ಬಂಪರ್ ಸುದ್ದಿ! ಬಾಹುಬಲಿ ಫೇಮ್ ಡಾರ್ಲಿಂಗ್ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಕೊನೆಗೂ ಐದನೇ ಬಾರಿ ತೆರೆಯ ಮೇಲೆ ಒಂದಾಗೋ ಲೆಕ್ಕಾಚಾರ ನಡೆದಿದೆ.
ಕನ್ನಡದ ಕರಾವಳಿಯಲ್ಲಿ ಹುಟ್ಟಿದ ಅನುಷ್ಕಾ ಶೆಟ್ಟಿ, ನಾಗಾರ್ಜುನರ ಸೂಪರ್ ಸಿನಿಮಾದಿಂದ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಿಲ್ಲಾ, ಮಿರ್ಚಿ, ಬಾಹುಬಲಿ-1 ಮತ್ತು 2 ಮುಂತಾದ ಸಿನಿಮಾಗಳಲ್ಲಿ ಪ್ರಭಾಸ್ ಜೊತೆಗೆ ನಟಿಸಿ ಬ್ಲಾಕ್ ಬಸ್ಟರ್ ಹಿಟ್‌ಗಳನ್ನು ಕೊಟ್ಟರು.
ಅವರಿಬ್ಬರ ನಡುವೆ ರೀಲ್ ಲೈಫ್‌ಲೂ ಹಾಗೂ ರಿಯಲ್ ಲೈಫ್‌ಲೂ ವಿಶೇಷ ಕೆಮಿಸ್ಟ್ರಿ ಇತ್ತು ಎನ್ನಲಾಗುತ್ತಿತ್ತು. ಈ ಜೋಡಿಯ ನಡುವಿನ “ಸಂಥಿಂಗ್ ಸಂಥಿಂಗ್” ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಆದರೂ, ಇಬ್ಬರೂ ಇಂದಿಗೂ ಬ್ಯಾಚುಲರ್‌ಗಳೇ ಇದ್ದು, ವಿವಾಹದ ಸುದ್ದಿ ಬಾರದೇ ಉಳಿಯಿತು.
ಮತ್ತೆ ಒಂದಾಗ್ತಾರಾ ಈ ಹಿಟ್ ಜೋಡಿ?
ಬಾಹುಬಲಿ-2 ನಂತರ ಕೆಲ ವರ್ಷಗಳ ಬೃಹತ್ ಅಂತರವಿದ್ದರೂ, ಇದೀಗ ಪ್ರಭಾಸ್ ಮತ್ತು ಅನುಷ್ಕಾ ಮತ್ತೆ ಒಂದಾಗೋ ಯೋಚನೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇದೆ. ಮೂಲಗಳ ಪ್ರಕಾರ, ಬಾಹುಬಲಿ ನಿರ್ಮಾಪಕರೇ ಮತ್ತೆ ಇವರನ್ನು ಒಟ್ಟುಗೂಡಿಸಿ ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾಕ್ಕೆ ಸಜ್ಜಾಗುತ್ತಿದ್ದಾರೆ.
ಅನುಷ್ಕಾ ಶೆಟ್ಟಿ ಸದ್ಯ “ಘಾಟಿ” ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ಬ್ಯುಸಿಯಾಗಿದ್ದರೆ, ಪ್ರಭಾಸ್ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಇವರಿಬ್ಬರ ಒಟ್ಟುಗೂಡಿಕೆಯ ಸುದ್ದಿ ಅಭಿಮಾನಿಗಳಲ್ಲಿ ನೂತನ ಉತ್ಸಾಹ ಮೂಡಿಸಿದೆ.
ಡೈರೆಕ್ಟರ್ ಯಾರು? ಸಲಾರ್ ಸೀಕ್ವೆಲಾ?
ಇದೇ ಸಿನಿಮಾ ಹೊಸ ಕಥೆಯ ಮೇಲಾಗಿರಬಹುದಾ ಅಥವಾ ಸಲಾರ್‌ನ ಮುಂದುವರಿಕೆಯಾ ಎಂಬ ಅನುಮಾನಗಳು ಮೂಡಿವೆ. ಪ್ರಭಾಸ್ ಈಗಾಗಲೇ ಹಲವಾರು ಸಿನಿಮಾಗಳಿಗೆ ಸೈನ್ ಮಾಡಿರುವ ಕಾರಣ, ಅಧಿಕೃತ ಘೋಷಣೆಗಾಗಿ ಇನ್ನಷ್ಟು ದಿನ ಕಾಯಬೇಕಾಗಿದೆ.
ಸಿನಿಮಾ
ಮಲಯಾಳಂ ನಟ ಶನ್ವಾಜ್ ನಿಧನ: ಸುಮಲತಾ ಅವರಿಂದ ಭಾವುಕ ಶ್ರದ್ಧಾಂಜಲಿ

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ದಂತಕಥೆ ಪ್ರೇಮ್ ನಜೀರ್ ಅವರ ಪುತ್ರ, ಹಿರಿಯ ನಟ ಅಬ್ದುಲ್ ಶನ್ವಾಜ್ (71) ಅವರು ನಿಧನರಾಗಿದ್ದಾರೆ. ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಇಂದು ನಿಶ್ಶಬ್ದವಾಗಿ ಬದುಕು ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಶನ್ವಾಜ್ ಅವರ ನಿಧನಕ್ಕೆ ಹಲವು ಹಳೆಯ ಸಹನಟರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದು, ಹಿರಿಯ ನಟಿ ಹಾಗೂ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.
“ಅಬ್ದುಲ್ ಶನ್ವಾಜ್ ನಿಧನ ಸುದ್ದಿ ನನಗೆ ತುಂಬಾ ದುಃಖ ತಂದಿದೆ. ನಾವು 80ರ ದಶಕದಲ್ಲಿ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ತಂದೆ ಪ್ರೇಮ್ ನಜೀರ್ ಜೊತೆಗೂ ನಟನೆಗೆ ಅವಕಾಶ ಲಭ್ಯವಾಗಿತ್ತು. ಶೂಟಿಂಗ್ ಬಿಡುವಿನ ಸಮಯದಲ್ಲಿ ಶನ್ವಾಜ್ ಜತೆ ಬ್ಯಾಡ್ಮಿಂಟನ್ ಅಥವಾ ಕ್ಯಾರಮ್ ಆಡುತ್ತಿದ್ದೆವು. ಅವರು ಬಹಳ ಶ್ರದ್ಧಾ ಹಾಗೂ ಶಿಸ್ತಿನಿಂದ ಜೀವನ ನಡೆಸುತ್ತಿದ್ದವರು. ಪರಿಪೂರ್ಣ ವ್ಯಕ್ತಿತ್ವದ ಮಾದರಿ,” ಎಂದು ಸುಮಲತಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಚಿತ್ರರಂಗ ಹಾಗೂ ಅಭಿಮಾನಿಗಳ ಹೃದಯದಲ್ಲಿ ಶನ್ವಾಜ್ ಅವರು ಅಮರರಾಗಿದ್ದು, ಅವರ ಕೊಡುಗೆ ಸದಾ ನೆನಪಾಗಿರಲಿದೆ.
ಸಿನಿಮಾ
ಆಗಸ್ಟ್ 14ರಂದು ಬಾಕ್ಸ್ ಆಫೀಸ್‌ನಲ್ಲಿ ಧಮಾಕಾ! ಹೃತಿಕ್-ತಾರಕ್‌ರ ವಾರ್ 2 ವಿರುದ್ಧ ರಜನೀಕಾಂತ್‌ರ ಕೂಲಿ ಕ್ಲ್ಯಾಶ್

ಬೆಂಗಳೂರು:
ಬಾಕ್ಸ್ ಆಫೀಸ್‌ನಲ್ಲಿ ಆಗಸ್ಟ್ 14ಕ್ಕೆ ಅಸಲಿ ಯುದ್ಧವಿದೆ! ಏಕೆಂದರೆ, ಜೂನಿಯರ್ ಎನ್‌ಟಿಆರ್ ಮತ್ತು ಹೃತಿಕ್ ರೋಷನ್ ಅಭಿನಯದ ವಾರ್ 2 ಹಾಗೂ ತಲೈವಾ ರಜನೀಕಾಂತ್ ನಟನೆಯ ಮಲ್ಟಿಸ್ಟಾರರ್ ಕೂಲಿ ಒಂದು ದಿನವೇ ರಿಲೀಸ್ ಆಗಲಿದ್ದು, ಪ್ರೇಕ್ಷಕರ ಗಮನ ಸೆಳೆಯಲು ಎರಡೂ ಚಿತ್ರಗಳು ಸಜ್ಜಾಗಿವೆ.
ಒಂದೆಡೆಯಿಂದ ಯಶ್ ರಾಜ್ ಫಿಲಂಸ್‌ನ ಸ್ಪೈ ಯೂನಿವರ್ಸ್‌ನ ಎಕ್ಸ್‌ಟ್ರಾ ಆ್ಯಕ್ಷನ್‌ನೊಂದಿಗೆ ವಾರ್-2, ಇನ್ನೊಂದೆಡೆಯಿಂದ ರಜನಿಕಾಂತ್, ಆಮೀರ್ ಖಾನ್, ಉಪೇಂದ್ರ ಮತ್ತು ನಾಗಾರ್ಜುನ ಅವರ ಅಭಿನಯದ ಹೈಬಜ್ ಸಿನಿಮಾ ಕೂಲಿ — ಇವೆರಡೂ ಚಿತ್ರಗಳು ಧೂಮ್ರಪಾನದಂತೆ ಬಾಕ್ಸ್ ಆಫೀಸ್‌ನಲ್ಲಿ ಹೊತ್ತಿಕೊಳ್ಳಲಿವೆ.
ವಾರ್ 2 ವಿಶೇಷತೆ:
- ಹೃತಿಕ್ ರೋಷನ್ – ಜೂ. ಎನ್‌ಟಿಆರ್ ಕಾಂಬಿನೇಷನ್
- 6500+ ಸ್ಕ್ರೀನ್ಸ್‌ನಲ್ಲಿ ರಿಲೀಸ್
- ₹90 ಕೋಟಿ ರೇಟಿಗೆ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟ
- ಪೇಟ್ರಿಯಾಟಿಕ್ ಆಕ್ಷನ್, ಕಿಯಾರಾ-ಹೃತಿಕ್ ಹಾಟ್ ಸಾಂಗ್
ಕೂಲಿ ಹೈಲೈಟ್ಸ್:
- ರಜನೀಕಾಂತ್ ಜೊತೆ ಮಲ್ಟಿಸ್ಟಾರರ್ ಕಲಾವಿದರು
- 700+ ಸ್ಕ್ರೀನ್ಸ್‌ನಲ್ಲಿ ವರ್ಲ್ಡ್‌ವೈಡ್ ರಿಲೀಸ್
- ಸನ್ ಪಿಕ್ಚರ್ಸ್ ದಿಗ್ಗಜ ಬ್ಯಾನರ್
- ಟ್ರೈಲರ್‌ನಲ್ಲಿ ಕೆಲವು ಮಿಶ್ರ ಪ್ರತಿಕ್ರಿಯೆಗಳು
ಯುದ್ಧದ ಫಲಿತಾಂಶ?
ಇದು ಕೇವಲ ಹೃತಿಕ್ ಮತ್ತು ತಾರಕ್ ನಡುವಿನ ವಾರ್ ಅಲ್ಲ, ಇದು ಬಾಕ್ಸ್ ಆಫೀಸ್‌ನಲ್ಲಿ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಕಾದು ನೋಡುತ್ತಿರುವ “ಬಿಗ್ ಕ್ಲ್ಯಾಶ್”. ತಲೈವಾ ರಜನೀಕಾಂತ್‌ರ ವರ್ಚಸ್ಸು ಹಾಗೂ ವಾರ್-2ನ ಹೈಪ್ನ ನಡುವಿನ ಸ್ಪರ್ಧೆ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವಲ್ಲಿ ನಿರ್ಧಾರಕವಾಗಲಿದೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು9 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ