ದೇಶ
55 ರೂ ಗಳಿಗೆ ಟೀ ಮಾರಿದ್ದ ಅಯೋಧ್ಯೆಯ ಹೋಟೆಲ್ಗೆ ಈಗ ಸಂಕಷ್ಟ
ಅಯೋಧ್ಯೆ: ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಸಮಯದಲ್ಲಿ ಜನಗಳ ಸುಲಿಗೆಗೆ ಇಳಿದಿದ್ದ ಹೋಟೆಲ್ ಒಂದಕ್ಕೆ ಈಗ ಸಂಕಷ್ಟ ಶುರುವಾಗಿದೆ, ಶಬರಿ ರಸೋಯಿ ಎಂಬ ಹೋಟೆಲ್ನಲ್ಲಿ ಒಂದು ಕಪ್ ಚಹಾಗೆ 55 ರೂ ಮತ್ತು ಒಂದು ಬ್ರೆಡ್ ಟೋಸ್ಟ್ ಗೆ 65 ರೂ ದರ ವಿಧಿಸಲಾಗಿತ್ತು, ಈ ಬಿಲ್ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ತೀವ್ರವಾಗಿ ವೈರಲ್ ಆಗಿತ್ತು, ಈಗ ಅಯೋಧ್ಯಾ ಅಭಿವೃದ್ಧಿ ಮಂಡಳಿ ಶಬರಿ ರಸೋಯಿ ಹೋಟೆಲ್ಗೆ ಶೋಕಾಸ್ ನೋಟಿಸ್ ಜಾರಿಮಾಡಿದೆ, ಮೂಲಗಳ ಪ್ರಕಾರ ಕಡಿಮೆ ದರದಲ್ಲಿ ಆಹಾರ ಖಾದ್ಯಗಳನ್ನು ಒದಗಿಸುವುದಾಗಿ ಪರವಾನಗಿ ಪಡೆದಿರುವ ಈ ಹೋಟೆಲ್ 10 ರೂ ದರದಲ್ಲಿ ಚಹಾ ಒದಗಿಸಬೇಕಾಗಿತ್ತು, ಕವಚ್ ಫೆಸಿಲಿಟಿ ಮ್ಯಾನೇಜ್ ಮೆಂಟ್ ಹೆಸರಿನಲ್ಲಿ ಅಯೋಧ್ಯೆಯ ವಾಣಿಜ್ಯ ಸಂಕೀರ್ಣದಲ್ಲಿ ನಿರ್ಮಿಸಿರುವ ಈ ಹೋಟೆಲ್ ಗೆ ಈಗ ಪರವಾನಗಿ ರದ್ದತಿಯ ಆತಂಕ ಎದುರಿಸುತ್ತಿದೆ,