Connect with us

ಬೆಂಗಳೂರು

ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ

ಬೆಂಗಳೂರು: ಜಲಮಂಡಳಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಫೆ.೨೮ ಮಂಗಳವಾರದAದು ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನೀರು ಪುರೈಕೆಯಲ್ಲಿ ವ್ಯತ್ಯಯವಾಗಲಿದೆ, ನಾಳೆ ಬೆಳಗ್ಗೆ ೬ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ನೀರು ಪೂರೈಕೆ ಸ್ಧಗಿತಗೊಳ್ಳಲಿದೆ, ಕಾವೇರಿ ನೀರು ಸರಬರಾಜು ಯೋಜನೆಯ ನಾಲ್ಕನೇ ಹಂತದ ಎರಡನೇ ಘಟ್ಟದಲ್ಲಿ ಸಂಪೂರ್ಣ ಪೂರೈಕೆ ಸ್ಧಗಿತಗೊಳ್ಳಲಿದೆ, ಸಾರ್ವಜನಿಕರು ನಾಳೆಯ ನಿತ್ಯೋಪಯೋಗಿ ಕಾರ್ಯಗಳಿಗೆ ಇಂದೇ ನೀರು ಸಂಗ್ರಹಿಸಿಟ್ಟುಕೊಳ್ಳಬೇಕೆAದು ಜಲಮಂಡಳಿ ಮುನ್ಸೂಚನೆ ನೀಡಿದೆ,

ಬೆಂಗಳೂರು

ಮತ್ತೆ ಹೆಚ್ಚಾಯುತ ಮದ್ಯಗಳ ಬೆಲೆ!

ಬೆಂಗಳೂರು: ಮದ್ಯಗಳ ಬೆಲೆಯನ್ನು ಮತ್ತೆ ಹೆಚ್ಚಿಸಿ ರಾಜ್ಯ ಸರ್ಕಾರ ಮಂಗಳವಾರ ಸಂಜೆ ಅಧಿಸೂಚನೆ ಹೊರಡಿಸಿದೆ, 

ಇದರಿಂದ ಈಗಾಗಲೇ ಬೆಲೆಯೇರಿಕೆಯಿಂದ ಬೇಸತ್ತಿರುವ ಪಾನ ಪ್ರಿಯರಿಗೆ ಮತ್ತೆ ಗಾಯದ ಮೇಲೆ ಬರೆಯಳೆದಂತಾಗಿದೆ,

ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ ಸುಂಕ ಸಂಗ್ರಹ ಗುರಿ ನೀಡಿರುವುದನ್ನು ಗಮನದಲ್ಲಿರಿಸಿಕೊಂಡು ಬೆಲೆ ಹೆಚ್ಚಳ ಮಾಡಲಾಗಿದೆ, ಅಲ್ಲದೇ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದಲ್ಲಿ ಮದ್ಯದ ಬೆಲೆಯನ್ನು ಸ್ಪರ್ಧಾತ್ಮಕವಾಗಿ ನಿಗದಿಪಡಿಸಲಾಗಿದೆ, ಎಂದು ಅಬಕಾರಿ ಇಲಾಖೆ ತಿಳಿಸಿದೆ, 

ಅಧಿಸೂಚನೆಯಂತೆ ಬಿಯರ್ ಬೆಲೆಯನ್ನು ಶೇ 10 ರಷ್ಟು ಹೆಚ್ಚಿಸಲಾಗಿದೆ, ಮಿಕ್ಕಂತೆ ವಿಸ್ಕಿ, ಬ್ರಾಂಡಿ, ಜಿನ್, ರಮ್ ಬೆಲೆಯನ್ನು ಪ್ರತಿ ಮೂರು ತಿಂಗಳಿಗೆ ಶೇ 10 ರಷ್ಟು ಹೆಚ್ಚಿಸಲು ಪ್ರಸ್ತಾವನೆ ನೀಡಲಾಗಿದೆ, ಇದರಿಂದ ದುಬಾರಿ ಮದ್ಯಗಳನ್ನು ಹಾಗೂ ಟಾಡಿ ವೈನ್ ಮತ್ತ ಫೆನ್ನಿಯನ್ನು ಬೆಲೆಯೇರಿಕೆಯಿಂದ ಹೊರಗಿರಿಸಿದಂತಾಗಿದೆ, 

Continue Reading

ಬೆಂಗಳೂರು

ಉಗ್ರರಿಂದ ಹತ್ಯೆಯಾದ ಮಂಜುನಾಥ್, ಭರತ್ ಭೂಷಣ್ ಮಕ್ಕಳಿಗೆ ಉಚಿತ ಶಿಕ್ಷಣ-ತೇಜಸ್ವಿ ಸೂರ್ಯ

ಬೆಂಗಳೂರು: ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಹತ್ಯೆಯಾದ ರಾಜ್ಯದ ಮಂಜುನಾಥ್ ಮತ್ತು ಭರತ್ ಭೂಷಣ್ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದರು,
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್ ಹತ್ಯೆಯಾಗಿದ್ದಾರೆ, ಉಗ್ರರು ಅವರ ಕುಟುಂಬದ ಜಾತಿ ಅಂತಸ್ತು ಕೇಳಿ ಗುಂಡಿಕ್ಕಿಕೊಂದಿಲ್ಲ, ಹಿಂದೂ ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾರೆ, ಹಿಂದೂಗಳ ಚಡ್ಡಿಯನ್ನು ಬಿಚ್ಚಿಸಿದ್ದಾರೆ ಎಂದು ಸೂರ್ಯ ಅವರು ಆಕ್ರೋಶ ಹೊರಹಾಕಿದರು,
ಕೇರಳದ ಮಾವುತನಿಗೆ 15 ಲಕ್ಷ ಪರಿಹಾರ ನೀಡುವ ಕಾಂಗ್ರೆಸ್ ಸರ್ಕಾರ ಉಗ್ರದಾಳಿಯಲ್ಲಿ ಹತರಾಗಿರುವ ಕನ್ನಡಿಗ ಕುಟುಂಬಗಳಿಗೆ ಕೇವಲ ರೂ 10 ಲಕ್ಷ ನೀಡಿರುವುದು ವಿಪರ್ಯಾಸ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾನವೀಯತೆ ಸಂವೇದನೆಯನ್ನೇ ಕಳೆದುಕೊಂಡಿರುವುದು ದುರಂತ, ವೃತರ ಕುಟುಂಬಕ್ಕೆ ಕನಿಷ್ಠ ತಲಾ 1 ಲಕ್ಷ ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು,

Continue Reading

ಬೆಂಗಳೂರು

ಮೆಟ್ರೋದಲ್ಲಿ ಊಟ ಮಹಿಳೆಗೆ ದಂಡ

‘ನಮ್ಮ ಮೆಟ್ರೋ’ಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಮಹಿಳಾ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ 500 ದಂಡ ವಿಧಿಸಿದೆ. ಇದೀಗ ಈ ಕುರಿತು ಬಿಎಂಆರ್‌ಸಿಎಲ್ ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.

ಬಿಎಂಆರ್‌ಸಿಎಲ್ ನೀಡಿದ ಮಾಹಿತಿ ಪ್ರಕಾರ, ಮಾದವರ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರು ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದರು. ಅವರು ಮೆಟ್ರೋ ರೈಲಿನೊಳಗೇ ಊಟ ಮಾಡುವ ಮೂಲಕ ಸ್ವಚ್ಛತಾ ನಿಯಮಗಳ ವಿರುದ್ಧ ವರ್ತಿಸಿದ್ದರು. ಈ ಕೃತ್ಯವನ್ನು ಅಲ್ಲಿದ್ದ ಮತ್ತೊಬ್ಬ ಪ್ರಯಾಣಿಕರು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಬಿಎಂಆರ್‌ಸಿಎಲ್ ಮಹಿಳೆಯ ವಿರುದ್ಧ ತಕ್ಷಣ ಕ್ರಮ ತೆಗೆದುಕೊಂಡಿದೆ.

ಇಂದು ಬೆಳಿಗ್ಗೆ, ನೈಸ್ ರಸ್ತೆ ಜಂಕ್ಷನ್ ಬಳಿಯ ಮಾದವರ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಮಹಿಳೆಯನ್ನು ತಪಾಸಣೆ ನಡೆಸಿ, ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ₹500 ದಂಡ ವಿಧಿಸಿದರು. ಬಿಎಂಆರ್‌ಸಿಎಲ್ ನಿಯಮಾವಳಿಯ ಪ್ರಕಾರ, ಮೆಟ್ರೋ ಆವರಣದಲ್ಲಿ ಅಥವಾ ಮೆಟ್ರೋ ರೈಲಿನೊಳಗೆ ಆಹಾರ ಅಥವಾ ಪಾನೀಯ ಸೇವಿಸುವುದು ಸಂಪೂರ್ಣ ನಿಷೇಧಿಸಲಾಗಿದೆ.

ಬಿಎಂಆರ್‌ಸಿಎಲ್ ಹೇಳಿಕೆಯಲ್ಲಿ, “ಮೆಟ್ರೋ ಸರ್ವಜನಿಕ ಬಳಕೆಯ ಸ್ಥಳವಾಗಿದ್ದು, ಎಲ್ಲ ಪ್ರಯಾಣಿಕರು ನಿಯಮಗಳನ್ನು ಗೌರವಿಸುವುದು ಮತ್ತು ಪಾಲಿಸುವುದು ಅತ್ಯಂತ ಅವಶ್ಯಕ. ಪ್ರತಿ ಪ್ರಯಾಣಿಕನ ಸಹಕಾರದೊಂದಿಗೆ ಮಾತ್ರ ನಾವು ಸ್ವಚ್ಛ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಹಾದಿಯನ್ನು ನಿರ್ಮಾಣ ಮಾಡಬಹುದು,” ಎಂದು ತಿಳಿಸಲಾಗಿದೆ.

Continue Reading

Trending