ಚುನಾವಣೆ
ಸ್ವಂತ ಕಚೇರಿ ತೆರೆದ ಈಶ್ವರಪ್ಪ ಮೋದಿ ಫೋಟೋ ಬಳಕೆ
ಶಿಮಮೊಗ್ಗ:ಶಿಮಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಅವರೀಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ,
ಕೆ ಎಸ್ ಈಶ್ವರಪ್ಪ ಅವರು ನಗರದಲ್ಲಿ ಇಂದು ತಮ್ಮ ಕಚೇರಿಯನ್ನು ಆರಂಭಿಸಿದ್ದಾರೆ, ರಾಷ್ಟçಭಕ್ತರ ಬಳಗದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ, ತಮ್ಮ ಕಚೇರಿಗೆ ಶಿವಮೊಗ್ಗ ಲೋಕಸಭಾ ಕಾರ್ಯಲಯ ಎಂದು ಹೆಸರಿಟ್ಟು ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಬಳಸಿದ್ದಾರೆ,
ಈಶ್ವರಪ್ಪ ತಮ್ಮ ಕಚೇರಿಗೆ ಅಳವಡಿಸಿರುವ ಬ್ಯಾನರ್ನಲ್ಲಿ ನರೇಂದ್ರ ಮೋದಿ ಅವರ ಫೋಟೋವನ್ನು ಬಳಸಲಾಗಿದ್ದು ಅದರಲ್ಲಿ ದೇಶಕ್ಕಾಗಿ ಮೋದಿ ಹಾಗೂ ಶಿವಮೊಗ್ಗಕ್ಕೆ ಹಿಂದುತ್ವವಾದಿ ಎಂದು ಬರೆಯಲಾಗಿದೆ,
ಈಶ್ವರಪ್ಪ ಅವರ ನಡೆ ಇದೀಗ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರಿಗೆ ಇರುಸುಮುರುಸು ಉಂಟುಮಾಡುವ ಸಾಧ್ಯತೆಯಿದೆ, ಈ ಬಳೆವಣಿಗೆ ಬಗ್ಗೆ ನಾಯಕರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ,
ಚುನಾವಣೆ
GBA ವಾರ್ಡ್ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
ಬೆಂಗಳೂರು (ಫೆಬ್ರವರಿ 13, 2026): ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಏಜೆಂಟ್ (BLA-1) ಆರ್.ಎಸ್. ದೀಪಕ್ ಕುಮಾರ್ ಅವರು ಹೊಸದಾಗಿ ರಚಿಸಲಾದ Greater Bengaluru Authority (GBA) ವಾರ್ಡ್ಗಳಲ್ಲಿನ ಬೂತ್ ಹಂಚಿಕೆ ಮತ್ತು ಮತದಾರರ ಪಟ್ಟಿಯಲ್ಲಿರುವ ಗಂಭೀರ ಲೋಪಗಳ ಕುರಿತು Karnataka State Election Commission ಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ GBA ಟಿಕೆಟ್ ಆಕಾಂಕ್ಷಿ ಸಿ.ಎಂ. ಸತ್ಯನಾರಾಯಣ (CMC) ಅವರು hosasuddi.in ಜೊತೆಗೆ ಮಾತನಾಡಿ, “ಈ ತಪ್ಪುಗಳನ್ನು ತಕ್ಷಣ ಸರಿಪಡಿಸದಿದ್ದರೆ ನಮ್ಮ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಮುಂದಾಗಬೇಕಾಗುತ್ತದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಈ ವಿಷಯದಲ್ಲಿ ಜವಾಬ್ದಾರಿಯಾಗಿ ಕೆಲಸ ಮಾಡಬೇಕು. ಆದರೆ ಯಾರೂ ಗಮನ ಹರಿಸುತ್ತಿಲ್ಲ ಎಂಬುದು ವಿಷಾದನೀಯ. GBA ಅಧಿಕಾರಿಗಳು ಕೂಡಲೇ ಇದನ್ನು ಪರಿಶೀಲಿಸಿ ತಿದ್ದುಪಡಿ ಮಾಡಬೇಕು” ಎಂದು ಆಗ್ರಹಿಸಿದರು.
ಪ್ರಮುಖ ದೂರುಗಳು
ದೂರುದಲ್ಲಿ ಮೂರು ಪ್ರಮುಖ ತಾಂತ್ರಿಕ ಮತ್ತು ಆಡಳಿತಾತ್ಮಕ ಲೋಪಗಳನ್ನು ಎತ್ತಿ ತೋರಿಸಲಾಗಿದೆ:
- ವೆಬ್ಸೈಟ್ನಲ್ಲಿ ಮಾಹಿತಿ ಕೊರತೆ: ಹಲವಾರು ಬೂತ್ಗಳ ವಿವರಗಳು ಅಧಿಕೃತ GBA ವೆಬ್ಸೈಟ್ನಲ್ಲಿ ಲಭ್ಯವಿಲ್ಲ.
- ವಾರ್ಡ್ಗಳ ಅದಲು-ಬದಲು: ಒಂದು ವಾರ್ಡ್ಗೆ ಸೇರಬೇಕಾದ ಬೂತ್ಗಳನ್ನು ಮತ್ತೊಂದು ವಾರ್ಡ್ಗೆ ಸೇರಿಸಲಾಗಿದೆ.
- ಮತದಾರರ ಗೊಂದಲ: ಒಂದೇ ಪ್ರದೇಶದ ಮತದಾರರನ್ನು ಎರಡು ಬೇರೆ ವಾರ್ಡ್ಗಳಿಗೆ ಹಂಚಿರುವುದರಿಂದ ಮತದಾರರ ಪಟ್ಟಿಯಲ್ಲಿ ಅವ್ಯವಸ್ಥೆ.
ವಾರ್ಡ್ವಾರು ಕಂಡುಬಂದಿರುವ ಲೋಪಗಳು
ಶಿವನಪಾಳ್ಯ (19):
ಬೂತ್ ಸಂಖ್ಯೆ 25ರಿಂದ 31ರವರೆಗೆ ಕೆಂಗೇರಿ (21) ಅಥವಾ ಕೆಂಗೇರಿ ಕೋಟೆ (20) ವಾರ್ಡ್ಗೆ ಸೇರಬೇಕಿದೆ. ಬೂತ್ 19 ಮತ್ತು 31 ವೆಬ್ಸೈಟ್ನಲ್ಲಿ ಕಾಣುತ್ತಿಲ್ಲ.
ಉಲ್ಲಾಳ (16):
ಬೂತ್ ಸಂಖ್ಯೆ 1, 2, 3 ಮತ್ತು 6 ವೆಬ್ಸೈಟ್ನಲ್ಲಿ ಲಭ್ಯವಿಲ್ಲ.
ನಾಡಪ್ರಭು ಕೆಂಪೇಗೌಡ ನಗರ (13):
ಹಳೆಯ ಬೂತ್ 52ರ ಮತದಾರರು ಈಗ ವಾರ್ಡ್ 12ರಲ್ಲಿ ಸೇರಿದ್ದಾರೆ. ಬೂತ್ 37 ವೆಬ್ಸೈಟ್ನಲ್ಲಿ ನಾಪತ್ತೆಯಾಗಿದೆ. ಬೂತ್ 37-40 ಮತ್ತು 24-25 ಎರಡು ವಾರ್ಡ್ಗಳ ನಡುವೆ ಹಂಚಿಹೋಗಿವೆ.
ಬ್ಯಾಡರಹಳ್ಳಿ (15):
ಬೂತ್ ಸಂಖ್ಯೆ 23 ಮತ್ತು 24 ವೆಬ್ಸೈಟ್ನಲ್ಲಿ ಲಭ್ಯವಿಲ್ಲ.
ಕೆಂಗೇರಿ (21) ಮತ್ತು ಕೆಂಗೇರಿ ಕೋಟೆ (20):
ಶ್ರೀನಿವಾಸಪುರ, ಗಣಕಲ್ಲು ಮತ್ತು ಓಂಕಾರ ಆಶ್ರಮ ಬೂತ್ಗಳನ್ನು ಎರಡು ವಾರ್ಡ್ಗಳಿಗೆ ವಿಂಗಡಿಸಲಾಗಿದೆ. ಇವುಗಳನ್ನು ಒಂದೇ ವಾರ್ಡ್ಗೆ ಸೇರಿಸಲು ಮನವಿ.
ಕೆಂಗಲ್ ಹನುಮಂತಯ್ಯ ವೆಸ್ಟ್ (18):
ಬೆಥೆಸ್ಡಾ ಇಂಟರ್ನ್ಯಾಷನಲ್ ಸ್ಕೂಲ್ನ ಬೂತ್ ಸಂಖ್ಯೆ 5ರ ವಿವರ ವೆಬ್ಸೈಟ್ನಲ್ಲಿ ಕಾಣುತ್ತಿಲ್ಲ.
ತಕ್ಷಣದ ಕ್ರಮಕ್ಕೆ ಆಗ್ರಹ
“ಮತದಾರರ ಪಟ್ಟಿಯಲ್ಲಿ ಮತದಾರರು ಸಂಘಟಿತ ರೀತಿಯಲ್ಲಿ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ದಯವಿಟ್ಟು ಮೇಲಿನ ತಪ್ಪುಗಳನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಿ” ಎಂದು ಆರ್.ಎಸ್. ದೀಪಕ್ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ಪ್ರತಿಯನ್ನು ಯಶವಂತಪುರ ಕ್ಷೇತ್ರದ ಚುನಾವಣಾಧಿಕಾರಿಗೂ (R.O.) ರವಾನಿಸಲಾಗಿದೆ.
ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ದೂರು ಮಹತ್ವ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ಪ್ರತಿಕ್ರಿಯೆ ಏನಾಗಲಿದೆ ಎಂಬುದು ಕಾದು ನೋಡಬೇಕಿದೆ.
ಚುನಾವಣೆ
ತಮಿಳುನಾಡು ಚುನಾವಣೆಗೂ ಮುನ್ನ 1.31 ಕೋಟಿ ಮಹಿಳೆಯರಿಗೆ ₹5,000 ಜಮೆ: ಡಿಎಂಕೆ ಸರ್ಕಾರದ ಘೋಷಣೆ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ Dravida Munnetra Kazhagam (DMK) ಸರ್ಕಾರ ಮಹಿಳಾ ಫಲಾನುಭವಿಗಳಿಗೆ ₹5,000 ಹಣ ಜಮೆ ಮಾಡಿದೆ.
Kalaignar Magalir Urimai Thogai Scheme ಯೋಜನೆಯಡಿ ರಾಜ್ಯದ 1.31 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ ₹5,000 ಜಮೆಯಾಗಿದೆ. ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಹಣದ ಜೊತೆಗೆ ಬೇಸಿಗೆ ಸಮಯದ ನೆರವಿಗಾಗಿ ಹೆಚ್ಚುವರಿಯಾಗಿ ₹2,000 ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
‘ದ್ರಾವಿಡ 2.0’ ಭರವಸೆ
ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ‘ದ್ರಾವಿಡ 2.0’ ಸರ್ಕಾರದ ಅಡಿಯಲ್ಲಿ ತಿಂಗಳಿಗೆ ನೀಡುವ ಮೊತ್ತವನ್ನು ₹2,000ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ M. K. Stalin ಭರವಸೆ ನೀಡಿದ್ದಾರೆ.
ಯೋಜನೆಯ ಹಿನ್ನೆಲೆ
ಈ ಯೋಜನೆಯನ್ನು ಸೆಪ್ಟೆಂಬರ್ 2023ರಲ್ಲಿ ಆರಂಭಿಸಲಾಗಿತ್ತು. ಆರಂಭದಲ್ಲಿ 1.13 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ₹1,000 ನೀಡಲಾಗುತ್ತಿತ್ತು. ಈಗ ಫಲಾನುಭವಿಗಳ ಸಂಖ್ಯೆಯನ್ನು 1.31 ಕೋಟಿಗೆ ವಿಸ್ತರಿಸಲಾಗಿದೆ.
ಎಐಎಡಿಎಂಕೆ ಪ್ರತಿಕ್ರಿಯೆ
ಇದೇ ರೀತಿಯ ಭರವಸೆಯನ್ನು ಕಳೆದ ತಿಂಗಳು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ All India Anna Dravida Munnetra Kazhagam ಪ್ರಧಾನ ಕಾರ್ಯದರ್ಶಿ Edappadi K. Palaniswami ನೀಡಿದ್ದರು.
ರಾಜಕೀಯ ವಲಯದಲ್ಲಿ ಈ ಘೋಷಣೆ ಚುನಾವಣಾ ಪೂರ್ವ ತಂತ್ರವೆಂದು ಚರ್ಚೆ ನಡೆಯುತ್ತಿದೆ.
ಚುನಾವಣೆ
BENGALURU : ವಾರ್ಡ್ ಮರುವಿಂಗಡಣೆ ವಿರೋಧಿಸಿ ಶಾಸಕ ಎಂ. ಕೃಷ್ಣಪ್ಪ ಹೈಕೋರ್ಟ್ ಅರ್ಜಿ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಲವು ವಾರ್ಡುಗಳ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡುಗಳಿಗೆ ಸೇರಿಸಿರುವ ಕ್ರಮವನ್ನು ಪ್ರಶ್ನಿಸಿ, ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ರಾಜ್ಯ ಸರ್ಕಾರ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ರಾಜ್ಯ ಸರ್ಕಾರ, ಜಿಬಿಎ ಮುಖ್ಯ ಆಯುಕ್ತ, ದಕ್ಷಿಣ ನಗರ ಪಾಲಿಕೆ ಆಯುಕ್ತ, ವಾರ್ಡ್ ಮರುವಿಂಗಡಣೆ ಆಯೋಗ, ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ನೋಟಿಸ್ ನೀಡಿರುವ ನ್ಯಾಯಾಲಯ, ಈ ವಿಚಾರದಲ್ಲಿ ಸರ್ಕಾರದಿಂದ ಸ್ಪಷ್ಟನೆ ಪಡೆಯಲು ಸೂಚಿಸಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ವಾರ್ಡುಗಳ ಕೆಲವು ಭಾಗಗಳನ್ನು ಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಗೆ ಸೇರಿಸಲಾಗಿದೆಯೇ ಎಂಬುದನ್ನು ವಿವರಿಸುವಂತೆ ಸರ್ಕಾರದ ವಕೀಲರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಲಾಗಿದೆ.
ಅರ್ಜಿಯಲ್ಲಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಎಳೇನಹಳ್ಳಿ ವಾರ್ಡಿನ ಅಕ್ಷಯನಗರ ಹಾಗೂ ಅದರ ಸುತ್ತಲಿನ ಪ್ರದೇಶಗಳು ಮತ್ತು ಕೊತ್ತನೂರು ವಾರ್ಡಿನ ಕ್ಲಾಸಿಕ್ ಆರ್ಚರ್ಡ್ ಪ್ರದೇಶವನ್ನು ಕ್ರಮವಾಗಿ ಬೊಮ್ಮನಹಳ್ಳಿ ಕ್ಷೇತ್ರದ ವಿಜಯಾ ಬ್ಯಾಂಕ್ ಲೇಔಟ್ ಮತ್ತು ದೊರೆಸಾನಿಪಾಳ್ಯ ವಾರ್ಡುಗಳಿಗೆ ಸೇರಿಸಿರುವುದನ್ನು ಆಕ್ಷೇಪಿಸಲಾಗಿದೆ. ಒಂದು ವಾರ್ಡನ್ನು ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರಿಸುವುದು ಜಿಬಿಎ ಕಾಯ್ದೆ ಮತ್ತು ವಾರ್ಡ್ ಮರುವಿಂಗಡಣೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಿ, ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸೇರಿಸಿರುವ ಪ್ರದೇಶಗಳನ್ನು ಮರುವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ವಾರ್ಡುಗಳಿಗೆ ಸೇರಿಸಬೇಕೆಂದು ಹೈಕೋರ್ಟ್ಗೆ ಮನವಿ ಮಾಡಲಾಗಿದೆ.
ಈ ನಡುವೆ, ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆ ಹಿನ್ನೆಲೆ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಐದು ನಗರ ಪಾಲಿಕೆಗಳ 369 ವಾರ್ಡುಗಳಲ್ಲಿ ಒಟ್ಟು 88,91,411 ಮತದಾರರು ಇದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
-
ದೇಶ6 hours agoSHAKTI SCHEME : ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್: ಸಚಿವ ಸಂಪುಟದ ಮಹತ್ವದ ನಿರ್ಧಾರ
-
ದೇಶ6 hours agoಫುಟ್ಪಾತ್ನಲ್ಲಿ ಬೈಕ್ಗೆ ಮಹಿಳೆಯ ಅಡ್ಡಿ: ಕೇರಳದಲ್ಲಿ ವೈರಲ್ ವಿಡಿಯೋ
-
ದೇಶ7 hours agoBangladesh Election 2026: ಬಿಎನ್ಪಿ ಭರ್ಜರಿ ಗೆಲುವು, ತಾರಿಖ್ ರೆಹಮಾನ್ ಮುಂದಿನ ಪ್ರಧಾನಿ
-
ದೇಶ5 hours agoRBI : ಸಾಲ ವಸೂಲಿಗೆ ಹೊಸ ನಿಯಮಗಳು: ಆರ್ಬಿಐ ಕಟ್ಟುನಿಟ್ಟಿನ ಮಾರ್ಗಸೂಚಿ
-
ಕ್ರೀಡೆ4 hours agoBENGALURU : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ಗೆ ಒಪ್ಪಿಗೆ: 35 ಸಾವಿರ ಜನ ಮಿತಿ, ಭದ್ರತೆಗೆ ಸಮಿತಿ
-
ದೇಶ4 hours agoಶಾಂಘೈನಲ್ಲಿ ದೈತ್ಯ ಸಿಂಕ್ಹೋಲ್: ರಸ್ತೆ ಕುಸಿದು ವಾಹನಗಳು ಒಳಗೆ, ಭಯಾನಕ ವಿಡಿಯೋ ವೈರಲ್
-
ದೇಶ6 hours agoದೇವನಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ: 7 ಮಂದಿ ದುರ್ಮರಣ
-
ಚುನಾವಣೆ28 minutes agoGBA ವಾರ್ಡ್ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
