ದೇಶ
ಪಾರಿವಾಳಗಳನ್ನೇ ಬೇಹುಗಾರಿಕೆಗೆ ಬಳಸೋದ್ಯಾಕೆ?
ಈಗ ಶ್ವಾನ ಪಡೆಯಂತೆ ಅದೇ ರೀತಿ ಮಹಾಯುದ್ಧದ ವೇಳೆ ಪಾರಿವಾಳಗಳ ದಳ ಇತ್ತು. ಅಮೆರಿಕ (America) ಸೇನೆಯಲ್ಲಿದ್ದ ಚೆರ್ ಅಮಿ (CherAmi) ಎಂಬ ಪಾರಿವಾಳ 1918 ಅಕ್ಟೋಬರ್ 14ರಂದು ಜರ್ಮನ್ ಸೇನೆ ವಿರುದ್ಧದ ಆಪರೇಷನ್ ಭಾಗಿಯಾಗಿ ಸುಮಾರು 194 ಸೈನಿಕರ ರಕ್ಷಣೆಗೆ ಕಾರಣವಾಗಿತ್ತು. ಬೆಟ್ಟ ಪ್ರದೇಶವೊಂದರಲ್ಲಿ ಅಮೆರಿಕದ ಸೈನಿಕರನ್ನು ಸಂಪೂರ್ಣವಾಗಿ ಜರ್ಮನ್ ಸೈನಿಕರು ಸುತ್ತುವರೆದಿದ್ದಾಗ ಚೆರ್ ಅಮಿ ಪಾರಿವಾಳವನ್ನ ಆ ಭಾಗಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಪಾರಿವಾಳದ ದೇಹಕ್ಕೆ ಅಮೆರಿಕ ಸೈನಿಕರು ಪತ್ರವೊಂದನ್ನು ಕಟ್ಟಿ ಕಳಿಸುತ್ತಾರೆ. ಚೆರ್ ಅಮಿ ಹಾರಿ ಬರುವಾಗ ಜರ್ಮನ್ ಸೈನಿಕರ ಗುಂಡಿನ ದಾಳಿಯಾಗಿ ಕಾಲಿಗೆ ಗುಂಡು ತಗುಲುತ್ತದೆ. ಇಷ್ಟಾದರೂ ಅಮೆರಿಕ ಸೇನಾ ನೆಲೆಗೆ ವಾಪಸ್ ಬಂದು ಸಂದೇಶ ನೀಡುತ್ತದೆ. ಬಳಿಕ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಿ ತನ್ನೆಲ್ಲಾ ಸೈನಿಕರನ್ನು ರಕ್ಷಿಸಿತ್ತು. 1919 ಜೂನ್ 13ರಂದು ಚೆರ್ ಅಮಿ ಪಾರಿವಾಳ ಸಾವನ್ನಪ್ಪುತ್ತದೆ.
ಪಾರಿವಾಳಗಳ ಸಾಮರ್ಥ್ಯ ಎಷ್ಟಿದೆ?
ಬೇಹುಗಾರಿಕೆ ಹಾಗೂ ಪತ್ರ ರವಾನೆಗೆ ಪಾರಿವಾಳಗಳನ್ನು ಬಳಸೋಕೆ ಒಂದು ಕಾರಣ ಇದೆ. ಏಕೆಂದರೆ ಪಾರಿವಾಳಗಳು ಎಷ್ಟೇ ದೂರ ಹೋದರು, ಎಲ್ಲಿಂದ ಹಾರಾಟ ಶುರು ಮಾಡುತ್ತವೆಯೋ ಅಲ್ಲಿಗೆ ಮರಳುವ ಸಾಮರ್ಥ್ಯವಿದೆ. ಇದೇ ಕಾರಣಕ್ಕೆ 1917ರಲ್ಲಿ ಅಮೆರಿಕದ ಗುಪ್ತಚುರಕ ಸಿಐಎ ಪಾರಿವಾಳಗಳ ಮೂಲಕ ಗೂಢಾಚಾರಿಕೆ ನಡೆಸಲು ನಿರ್ಧರಿಸಿತ್ತು. ಪಾರಿವಾಳಗಳಿಗೆ ವಿಶೇಷ ತರಬೇತಿ ನೀಡಿ, ಅವುಗಳ ಕಾಲಿಗೆ ಕ್ಯಾಮೆರಾ ಕಟ್ಟಿ ಹಲವು ಆಪರೇಷನ್‍ಗಳನ್ನು ಅಮೆರಿಕ ಮಾಡಿದೆ. ಮಹಾಯುದ್ಧ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪಾರಿವಾಳಗಳ ಕಾಲಿಗೆ ಕಟ್ಟಿ ತೆಗೆಯಲಾಗಿದ್ದ ಫೋಟೋಗಳನ್ನ 2019ರಲ್ಲಿ ಸಿಐಎ ಬಿಡುಗಡೆ ಕೂಡ ಮಾಡಿತ್ತು. ಕೋಲ್ಡ್ ವಾರ್ ಸಮಯದಲ್ಲಿ ರಷ್ಯಾ ರಾಜಧಾನಿ ಮಾಸ್ಕೋಗೂ ಅಮೆರಿಕ ತನ್ನ ಪಾರಿವಾಳಗಳನ್ನ ಕಳುಹಿಸಿತ್ತು. ರಷ್ಯಾ ಸಬ್‍ಮರೀನ್‌ಗಳನ್ನು ನಿರ್ಮಿಸುತ್ತಿರುವುದನ್ನು ಇದೇ ಪರಿವಾಳಗಳು ಪತ್ತೆ ಮಾಡಿದ್ದವು. ಪಾರಿವಾಳಗಳು ನೆಲಕ್ಕೆ ತುಂಬಾ ಹತ್ತಿರದಲ್ಲೇ ಹಾರುವುದರಿಂದ ಅವುಗಳ ಮೂಲಕ ಬೇಹುಗಾರಿಕೆ ಕೂಡ ಸುಲಭವಾಗಿದೆ.
ಪಾರಿವಾಳಗಳಿಗೆ ದಾರಿ ತಪ್ಪಿದರೂ ಸಹ ಕೆಲ ಸಮಯದ ಬಳಿಕ ಮತ್ತೆ ಎಲ್ಲಿಂದ ಬಂದಿದ್ದವೋ ಅಲ್ಲಿಗೇ ಬಂದಿಳಿಯುತ್ತವೆ. ಪಾರಿವಾಳಗಳಿಗೆ ಈ ಸಾಮರ್ಥ್ಯದ ಬಗ್ಗೆ ಈಗಲೂ ಸಂಶೋಧನೆ ನಡೆಯುತ್ತಿದೆ. ಕೆಲವು ಸಂಶೋಧಕರ ಪ್ರಕಾರ, ಸೂರ್ಯನ ಸಂಚಾರವನ್ನ ಗಮನಿಸಿ ಪಾರಿವಾಳಗಳು ಮಾರ್ಗ ಹಾಗೂ ಜಾಗವನ್ನು ಪತ್ತೆ ಹಚ್ಚುತ್ತವೆ ಎನ್ನುತ್ತಾರೆ.
ಎಂಟು ತಿಂಗಳ ಬಳಿಕ ಜೈಲಿಂದ ಬಿಡುಗಡೆಯಾದ ಪಾರಿವಾಳಗಳು!
ಈ ವರ್ಷ ಜ.30 ರಂದು, ಚೀನಾದ ಗೂಢಚಾರ ಎಂದು ಶಂಕಿಸಲಾದ ಪಾರಿವಾಳವನ್ನು ಮುಂಬೈನಲ್ಲಿ ಎಂಟು ತಿಂಗಳ ಬಂಧನದ ನಂತರ ಕಾಡಿಗೆ ಬಿಡಲಾಯಿತು. ಈ ಪಾರಿವಾಳಗಳನ್ನು ಮೇ 2023 ರಲ್ಲಿ ಮುಂಬೈ ಬಂದರಿನ ಬಳಿ ಅದರ ಉಂಗುರಗಳ ಮೇಲಿನ ಚೈನೀಸ್ ಬರಹದ ಆಧಾರದ ಮೇಲೆ ಇದು ಬೇಹುಗಾರಿಕೆಯ ಅನುಮಾನವನ್ನು ಹುಟ್ಟುಹಾಕಿತ್ತು. ಸಂಪೂರ್ಣ ತನಿಖೆ ಬಳಿಕ ಇದು ತೈವಾನ್‍ನಿಂದ ತಪ್ಪಿಸಿಕೊಂಡು ಆಕಸ್ಮಿಕವಾಗಿ ಭಾರತವನ್ನು ತಲುಪಿದೆ ಎಂದು ತಿಳಿದು ಬಂದಿತ್ತು
2016ರಲ್ಲಿ ಪಾಕಿಸ್ತಾನದ 150 ಬೇಹುಗಾರಿಕಾ ಪಾರಿವಾಳಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪಾರಿವಾಳಗಳ ಮೇಲೆ ಜಮ್ಮುವಿನ ಉಪ ಆಯುಕ್ತರ ಕುರಿತಂತೆ ಕೆಲ ಪದಗಳನ್ನು ಬರೆಯಲಾಗಿತ್ತು. ಅಲ್ಲದೇ ಪಾರಿವಾಳಗಳ ಕಾಲಿಗೆ ಕೆಲ ವಿಶೇಷವಾದ ಆಯಸ್ಕಾಂತೀಯ ರಿಂಗ್ ಗಳನ್ನೂ ಹಾಕಲಾಗಿತ್ತು. ಹೀಗಾಗಿ ಪಾರಿವಾಳಗಳನ್ನು ಬೇಹುಗಾರಿಕೆಗೆ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.
ಈ ಹಿಂದೆ ಭಾರತ ಹಾಗೂ ಪಾಕ್ ಗಡಿಯಲ್ಲಿ ಬಲೂನ್‍ಗಳನ್ನು ಪಾರಿವಾಳ ಕಾಲಿಗೆ ಕಟ್ಟಿ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಉರ್ದು ಭಾಷೆಯಲ್ಲಿ ಬೆದರಿಕೆ ಹಾಕಿದ್ದನ್ನು ನಾವಿಲ್ಲಿ ಗಮನಿಸಬಹುದು
ಪಾರಿವಾಳಗಳಂತೆ ಡಾಲ್ಫಿನ್, ಯಾಕ್ ಕೂಡ ಬಳಕೆ
ಪಾರಿವಾಳಗಳನ್ನು ಮೀರಿ, 1960 ರ ದಶಕದಿಂದಲೂ ಅಮೆರಿಕ ನೌಕಾಪಡೆಯಿಂದ ತರಬೇತಿ ಪಡೆದ ಡಾಲ್ಫಿನ್‍ಗಳನ್ನು ಜಲಾಂತರ್ಗಾಮಿ ನೌಕೆಗಳು ಮತ್ತು ನೀರೊಳಗಿನ ಗಣಿಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿದೆ. ಚೀನಾ ಗಡಿಯಲ್ಲಿ ಯಾಕ್‍ಗಳನ್ನು ಬೇಹುಗಾರಿಕೆಗೆ ಬಳಸಲಾಗುತ್ತಿದೆ ಎಂದು ಇತ್ತೀಚೆಗೆ ವರದಿ ಸಹ ಆಗಿತ್ತು.
ದೇಶ
ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ಹಿನ್ನಡೆ: ದೆಹಲಿ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ಬಾಲಿವುಡ್ ನಟ ಹಾಗೂ ಹಾಸ್ಯ ಕಲಾವಿದ ರಾಜ್‌ಪಾಲ್ ಯಾದವ್ (Rajpal Yadav) ವಿರುದ್ಧದ ಚೆಕ್ ಬೌನ್ಸ್ (Cheque Bounce Case) ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮಾಧ್ಯಮ ವರದಿಗಳ ಪ್ರಕಾರ, ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಿರುವ ನ್ಯಾಯಾಲಯವು ಅವರಿಗೆ ಮೂರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ವರದಿಗಳ ಪ್ರಕಾರ, ರಾಜ್‌ಪಾಲ್ ಯಾದವ್ ವಿರುದ್ಧ ದಾಖಲಾಗಿದ್ದ ಏಳು ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪ್ರತಿ ಪ್ರಕರಣಕ್ಕೂ ₹1.05 ಕೋಟಿ ದಂಡದಂತೆ ಒಟ್ಟು ₹7.35 ಕೋಟಿ ಪಾವತಿಸಲು ಸೂಚಿಸಲಾಗಿದೆ. ಜೊತೆಗೆ ದೂರುದಾರರಿಗೆ ₹1,04,75,000 ಪರಿಹಾರ ನೀಡುವಂತೆ ಹಾಗೂ ಪ್ರತಿ ಪ್ರಕರಣಕ್ಕೆ ₹25,000 ರಾಜ್ಯಕ್ಕೆ ದಂಡ ಪಾವತಿಸುವಂತೆ ಆದೇಶಿಸಿರುವುದಾಗಿ ವರದಿಯಾಗಿದೆ.
ಈ ಪ್ರಕರಣದ ಹಿನ್ನೆಲೆ 2010ರಲ್ಲಿ ನಿರ್ಮಾಣಗೊಂಡ ‘ಅತಾ ಪತಾ ಲಾಪತಾ’ ಸಿನಿಮಾಗೆ ಸಂಬಂಧಿಸಿದೆ. ಈ ಚಿತ್ರ ನಿರ್ಮಾಣ ಮತ್ತು ನಿರ್ದೇಶನಕ್ಕಾಗಿ ರಾಜ್‌ಪಾಲ್ ಯಾದವ್ ಮುರಳಿ ಪ್ರಾಜೆಕ್ಟ್ಸ್ ಸಂಸ್ಥೆಯಿಂದ ₹5 ಕೋಟಿ ಸಾಲ ಪಡೆದಿದ್ದರು ಎಂದು ಹೇಳಲಾಗಿದೆ. ಸಿನಿಮಾ ವಾಣಿಜ್ಯವಾಗಿ ಯಶಸ್ಸು ಕಾಣದ ಕಾರಣ ಸಾಲ ಮರುಪಾವತಿಯಲ್ಲಿ ವಿಳಂಬವಾಗಿದ್ದು, ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು.
ಈ ಹಿಂದೆ ಸಂಬಂಧಿಕರ ಮದುವೆ ಹಿನ್ನೆಲೆಯಲ್ಲಿ ರಾಜ್‌ಪಾಲ್ ಯಾದವ್ ಅವರಿಗೆ ತಾತ್ಕಾಲಿಕ ಜಾಮೀನು ದೊರೆತಿತ್ತು. ಇತ್ತೀಚೆಗೆ ಬಿಡುಗಡೆಯಾದ ‘ವೆಲ್ಕಮ್ ಟು ಜಂಗಲ್’ ಚಿತ್ರದಲ್ಲಿಯೂ ಅವರು ಅಭಿನಯಿಸಿದ್ದರು.
ಗಮನಿಸಿ: ಈ ಸುದ್ದಿ ವಿವಿಧ ಮಾಧ್ಯಮ ವರದಿಗಳ ಆಧಾರಿತವಾಗಿದೆ. ಪ್ರಕರಣದ ಕುರಿತು ಸಂಬಂಧಿತ ನ್ಯಾಯಾಲಯದ ಅಧಿಕೃತ ಆದೇಶ ಹಾಗೂ ದಾಖಲೆಗಳ ಆಧಾರದ ಮೇಲೆ ಮುಂದಿನ ಮಾಹಿತಿ ಪ್ರಕಟವಾಗುವ ಸಾಧ್ಯತೆ ಇದೆ.
ದೇಶ
ಮೈಸೂರು ದಸರಾ ದಿನಾಂಕ ಘೋಷಣೆ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) 2026 ಉತ್ಸವದ ದಿನಾಂಕವನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದಸರಾ ಉತ್ಸವದ ಸಿದ್ಧತೆಗಳು ಹಾಗೂ ಕಾರ್ಯಕ್ರಮಗಳ ವೇಳಾಪಟ್ಟಿಗೆ ಅನುಮೋದನೆ ನೀಡಲಾಗಿದೆ.
ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ಅಕ್ಟೋಬರ್ 11ರಂದು ಮೈಸೂರು ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಇದೇ ದಿನದಿಂದ ನವರಾತ್ರಿ (Navaratri) ಆಚರಣೆ ಆರಂಭವಾಗಲಿದೆ. ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲಾ ಕಾರ್ಯಕ್ರಮಗಳು ನಡೆಯಲಿವೆ.
ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ **ಜಂಬೂಸವಾರಿ (Jumboo Savari)**ಯನ್ನು ಅಕ್ಟೋಬರ್ 21ರಂದು ವಿಜಯದಶಮಿ ದಿನ ಅದ್ದೂರಿಯಾಗಿ ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಸಂಪ್ರದಾಯದಂತೆ ಅಲಂಕೃತ ಅಂಬಾರಿಯಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಗಲಿದ್ದು, ಸಾವಿರಾರು ಭಕ್ತರು ಹಾಗೂ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಈ ಐತಿಹಾಸಿಕ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಸಭೆಯಲ್ಲಿ ಭದ್ರತೆ, ಸಂಚಾರ ವ್ಯವಸ್ಥೆ, ಪ್ರವಾಸೋದ್ಯಮ, ಸ್ವಚ್ಛತೆ, ವಿದ್ಯುತ್, ಕುಡಿಯುವ ನೀರು ಹಾಗೂ ಸಾರ್ವಜನಿಕ ಸೌಲಭ್ಯಗಳ ಕುರಿತು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಮೈಸೂರು ದಸರಾ ಕರ್ನಾಟಕದ ಅತ್ಯಂತ ದೊಡ್ಡ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದ್ದು, ರಾಜ್ಯದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮಹತ್ವದ ವೇದಿಕೆಯಾಗಿದೆ. ಈ ಬಾರಿ ಉತ್ಸವವನ್ನು ಇನ್ನಷ್ಟು ವೈಭವದಿಂದ ಆಯೋಜಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ.
ದೇಶ
ತಮಿಳುನಾಡು ಸರ್ಕಾರದ ಹೊಸ ಆದೇಶ: ಸರ್ಕಾರಿ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆ ಸಂಪೂರ್ಣ ನಿಷೇಧ
ಚೆನ್ನೈ: ತಮಿಳುನಾಡು (Tamil Nadu) ಸರ್ಕಾರವು ಸರ್ಕಾರಿ ಶಾಲೆಗಳ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ರಾಜ್ಯದ ಸರ್ಕಾರಿ ಶಾಲೆಗಳು (Government Schools) ಹಾಗೂ ತರಗತಿ ಕೊಠಡಿಗಳಲ್ಲಿ (Classrooms) ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಖಾಸಗಿ ವ್ಯಕ್ತಿಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ತಮಿಳುನಾಡು ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ (Raj Mohan) ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನಪ್ರತಿನಿಧಿಗಳಿಗೆ ಮಾತ್ರ ಶಾಲಾ ಆವರಣ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಉಳಿದ ಯಾವುದೇ ರಾಜಕೀಯ ಚಟುವಟಿಕೆ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಆವರಣವನ್ನು ಬಳಸಲು ಅವಕಾಶ ಇರುವುದಿಲ್ಲ.
ಹೊಸ ನಿಯಮಗಳ ಅನ್ವಯ, ಶಾಲಾ ತರಗತಿ ಕೊಠಡಿಗಳನ್ನು ಯಾವುದೇ ರಾಜಕೀಯ ನಾಯಕರು ಅಥವಾ ನಿರ್ದಿಷ್ಟ ವ್ಯಕ್ತಿಗಳ ಸನ್ಮಾನ, ಹೊಗಳಿಕೆ, ಪ್ರಶಂಸಾ ಕಾರ್ಯಕ್ರಮಗಳು ಅಥವಾ ಹುಟ್ಟುಹಬ್ಬದ ಆಚರಣೆಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಸಂಪೂರ್ಣವಾಗಿ ವಿದ್ಯಾರ್ಥಿಗಳ ಕಲಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂಬುದನ್ನು ಸರ್ಕಾರ ಪುನರುಚ್ಚರಿಸಿದೆ.
ಇದಲ್ಲದೆ, ಸರ್ಕಾರಿ ಶಾಲೆಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ರಾಜಕೀಯ ತಟಸ್ಥತೆಯನ್ನು ಕಾಯ್ದುಕೊಂಡು, ಶಿಕ್ಷಣ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ಒಳಗೊಂಡಿರಬೇಕು ಎಂದು ಸೂಚಿಸಲಾಗಿದೆ. ಈ ಆದೇಶದ ಅನುಷ್ಠಾನಕ್ಕಾಗಿ ಪಾಲಿಸಬೇಕಾದ ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಸರ್ಕಾರದ ಈ ಕ್ರಮವು ಶಾಲಾ ಆವರಣದಲ್ಲಿ ರಾಜಕೀಯ ಪ್ರಭಾವವನ್ನು ತಡೆಯುವ ಜೊತೆಗೆ, ವಿದ್ಯಾರ್ಥಿಗಳಿಗೆ ಶಾಂತ ಹಾಗೂ ತಟಸ್ಥ ಶೈಕ್ಷಣಿಕ ವಾತಾವರಣ ಒದಗಿಸುವ ಉದ್ದೇಶ ಹೊಂದಿದೆ.
-
ದೇಶ9 hours agoGBA ELECTION : ಪಾಲಿಕೆ ಚುನಾವಣೆಗೆ ಮತ್ತೊಂದು ಟ್ವಿಸ್ಟ್! ಆಗಸ್ಟ್ 31 ಗಡುವು ಮೀರುವ ಸಾಧ್ಯತೆ
-
ದೇಶ5 hours ago7 ದಿನದಲ್ಲಿ ವಾಹನ ತೆರವುಗೊಳಿಸಿ, ಇಲ್ಲದಿದ್ದರೆ ಹರಾಜು! ಬೆಂಗಳೂರು ಪೊಲೀಸರ ಖಡಕ್ ಎಚ್ಚರಿಕೆ
-
ಕ್ರೀಡೆ9 hours agoಚೆನ್ನೈನಲ್ಲಿ BBL 2026-27 KICK OFF : ಮೆಲ್ಬೋರ್ನ್ ರೆನೆಗೇಡ್ಸ್ vs ಪರ್ತ್ ಸ್ಕಾರ್ಚರ್ಸ್
-
ಆರೋಗ್ಯ8 hours agoಮೆಡಿಕಲ್ ಶಾಪ್ಗಳಿಗೆ ಹೊಸ ಮಾರ್ಗಸೂಚಿ: ಔಷಧ ಮಾರಾಟದ ದಾಖಲೆ 3 ವರ್ಷ ಕಡ್ಡಾಯ
-
ಅಪರಾಧ9 hours agoಅಪರಾಧಿಗಳಿಗೆ ನಡುಕ ಹುಟ್ಟಿಸಿದ ಬೆಂಗಳೂರು ಪೊಲೀಸರ ತಡರಾತ್ರಿ ಸ್ಪೆಷಲ್ ಆಪರೇಷನ್
-
ದೇಶ4 hours agoತಮಿಳುನಾಡು ಸರ್ಕಾರದ ಹೊಸ ಆದೇಶ: ಸರ್ಕಾರಿ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆ ಸಂಪೂರ್ಣ ನಿಷೇಧ
-
ದೇಶ3 hours agoಮೈಸೂರು ದಸರಾ ದಿನಾಂಕ ಘೋಷಣೆ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ
-
ಕ್ರೀಡೆ6 hours agoಇಂಗ್ಲೆಂಡ್ ವಿರುದ್ಧದ ಸೋಲು ಬೆನ್ನಲ್ಲೇ ಗಂಭೀರ್ ಭವಿಷ್ಯ ಪ್ರಶ್ನೆ; ಲಕ್ಷ್ಮಣ್ ಹೆಸರು ಮುನ್ನೆಲೆಗೆ?
