ಚುನಾವಣೆ

ಬೆಂಗಳೂರುಲ್ಲಿ ಎಷ್ಟು ಮತಗಟ್ಟೆಗಳು ಎಲ್ಲೆಲ್ಲಿ ಇಲ್ಲಿದೆ ಮಾಹಿತಿ

ಬೆಂಗಳೂರು: ನಾಳೆ ಏ.26ರಂದು ಬೆಂಗಳೂರು ಸೇರಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು ಮತಗಟ್ಟೆಗಳಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿವೆ,
ಬೆಂಗಳೂರು ನಗರದಲ್ಲಿ ಒಟ್ಟೂ ಮೂರು ಲೋಕಸಭಾ ಕ್ಷೇತ್ರಗಳಿದ್ದು ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳಲ್ಲಿ ಸ್ಪರ್ಧಿಗಳ ಮಧ್ಯೆ ಬಾರಿ ಪೈಪೋಟಿ ನಡೆದಿದೆ, ಇನ್ನು ಪ್ರತಿ ಕ್ಷೇತ್ರಗಳಲ್ಲೂ ಸಖಿ ಮತಗಟ್ಟೆ ಯುವ ಮತಗಟ್ಟೆ ವಿಶೇಷ ಚೇತನರ ಮತಗಟ್ಟೆಗಳಿದ್ದು ಅವುಗಳ ವಿವರ ಇಲ್ಲಿದೆ ನೋಡಿ
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 7 ನಗರಗಳು ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿನ 7 ನಗರಗಳು ಹಾಗೇ ಉತ್ತರ ಕ್ಷೇತ್ರದಲ್ಲಿ 7 ನಗರಗಳು ಬರಲಿದ್ದು ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ತಲಾ 35 ಸಖಿ ಮತಗಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು, ತಲಾ 7 ಮತಗಟ್ಟೆಗಳನ್ನು ವಿಶೇಷ ಚೇತನ ಮತದಾರರಿಗೆ ಮೀಸಲಿಡಲಾಗಿದೆ, ಹಾಗೇ ತಲಾ 7 ಯುವ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ವಿವಿಧ ಥೀಮ್‌ಗಳಲ್ಲಿ 7 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದ, ನೀರಿನ ಸಂರಕ್ಷಣೆ, ಬೆಂಗಳೂರು ಕರಗ ಯಕ್ಷಗಾನ ಥೀಮ್, ಸಾಂಸ್ಕೃತಿಕ ಥೀಮ್, ಆಯುರ್ವೇದಿಕ್ ಥೀಮ್, ಅರಣ್ಯ ಥೀಮ್‌ಗಳ ಮತಗಟ್ಟೆಗಳನ್ನು ಈ ಬಾರಿ ನೋಡಬಹುದಾಗಿದೆ,

Leave a Reply

Your email address will not be published. Required fields are marked *

Trending

Exit mobile version