ಆರೋಗ್ಯ
Skipping Health Benefits : ಅಧಿಕ ತೂಕ ಹೊಂದಿದ್ದವರು ತೂಕ ಇಳಿಸಿಕೊಳ್ಳಲು ಇಷ್ಟ ಪಡುತ್ತಿದ್ದಾರೆ. ಇಂತವರಿಗೆ ಸ್ಕಿಪ್ಪಿಂಗ್ ಉತ್ತಮ ಮಾರ್ಗವಾಗಿದೆ. ನಿತ್ಯ ಸ್ಕಿಪ್ಪಿಂಗ್ ವ್ಯಾಯಾಮ ಮಾಡುವುದರಿಂದ ಎಷ್ಟು ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣಾ ಬನ್ನಿ..
Skipping Health Benefits : ಅನೇಕರು ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆದಿಂದ ಬಳಲುತ್ತಿದ್ದಾರೆ.
ತೂಕ ಇಳಿಸಿಕೊಳ್ಳಲು ಹಲವು ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ, ತೂಕವನ್ನು ವೇಗವಾಗಿ ಇಳಿಸಲು ಉತ್ತಮ ವ್ಯಾಯಾಮ ಯಾವುದು ಎಂಬುದು ಅನೇಕರಿಗೆ ತಿಳಿದಿಲ್ಲ. ಪ್ರತಿಯೊಂದು ರೀತಿಯ ವ್ಯಾಯಾಮವು ಪ್ರತಿ ವ್ಯಕ್ತಿಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ‘ಸ್ಕಿಪ್ಪಿಂಗ್’ ಎಂಬುದು ದೇಹದ ಎಲ್ಲ ಪ್ರಕಾರಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ವ್ಯಾಯಾಮವಾಗಿದೆ.
ಕೆಲವರು ತೂಕವನ್ನು ಕಳೆದುಕೊಳ್ಳುವ ಸಂಬಂಧ ವ್ಯಾಯಾಮದ ಜೊತೆಗೆ ಡಯಟ್ ಪದ್ಧತಿಯನ್ನು ಅನುಸರಿಸುತ್ತಾರೆ. ಸ್ಕಿಪ್ಪಿಂಗ್ ಎಲ್ಲರೂ ಅನುಸರಿಸುವ ವ್ಯಾಯಾಮದ ಅತ್ಯುತ್ತಮ ರೂಪವಾಗಿದೆ. ಸ್ಕಿಪ್ಪಿಂಗ್ಗಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಜಿಮ್‌ಗೆ ಹೋಗುವವರಿಗೆ ಇದು ಬಹಳ ಉಪಯುಕ್ತ. ಈ ವ್ಯಾಯಾಮಕ್ಕೆ ಕೇವಲ ಒಂದು ಹಗ್ಗ ಮತ್ತು ಒಂದು ಜೋಡಿ ಶೂ ಇದ್ರೆ ಸಾಕು. ಆದರೆ ನಿತ್ಯ ಸ್ಕಿಪ್ಪಿಂಗ್ ಮಾಡುವುದರಿಂದ ನಮ್ಮ ದೇಹದ ಅಂಗಾಂಗಗಳ ಕಾರ್ಯನಿರ್ವಹಣೆ ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು.
ಖಂಡಗಳ ಶಕ್ತಿ ಹೆಚ್ಚಳ.. (Skipping Muscle Benefits): ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ದೇಹಕ್ಕೆ ಒಳ್ಳೆಯದು. ಇದರಿಂದಾಗಿ ದೇಹದಲ್ಲಿ ಕ್ಯಾಲೊರಿಗಳನ್ನು ಬರ್ನ್ ಆಗುತ್ತವೆ. ಅಷ್ಟೇ ಅಲ್ಲ ಖಂಡಗಳು ಅಥವಾ ಸ್ನಾಯುಗಳು ಬಲಗೊಳ್ಳುತ್ತವೆ. ಕೈಗಳು ಮತ್ತು ಕಾಲುಗಳು ಜೊತೆಗೆ ವರ್ಕೌಟ್ ಆಗುವುದರಿಂದ ದೇಹ ಸಹ ಫಿಟ್ ಆಗಿರುತ್ತದೆ.
ಹಾರ್ಟ್ ಫಿಟ್ (Skipping Health Benefits..) : ಸ್ಕಿಪ್ಪಿಂಗ್ನಿಂದ ದೇಹದ ತೂಕ ಕಡಿಮೆ ಆಗುವುದರ ಜೊತೆ ಹೃದಯ ಸ್ನಾಯುಗಳನ್ನು ಬಲಗೊಳ್ಳುತ್ತವೆ. ಸ್ಕಿಪ್ಪಿಂಗ್ ವೇಳೆ ನಾವು ಜಂಪ್ ಮಾಡುವುದರಿಂದ ಹೃದಯ ಬಡಿತ ಮತ್ತು ಉಸಿರಾಟದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹೃದಯ ಮತ್ತು ಶ್ವಾಸಕೋಶದ ಕಾರ್ಯ ಸುಧಾರಣೆಗೊಳ್ಳುತ್ತದೆ. ಅಷ್ಟೇ ಅಲ್ಲ ದೇಹದ ಎಲ್ಲ ಭಾಗಗಳಿಗೂ ರಕ್ತ ಮತ್ತು ಆಮ್ಲಜನಕ ಪೂರೈಕೆ ಸರಳವಾಗಿ ಮತ್ತು ಅಡತಡೆವಿಲ್ಲದೆ ಸರಾಗವಾಗಿ ನಡೆಯುತ್ತದೆ.
ಬಾಡಿ ಬ್ಯಾಲೆನ್ಸ್ ಹೆಚ್ಚು ಮಾಡಲು ಸಹಾಯ (Body Balance rise from Skipping) : ಸ್ಕಿಪ್ಪಿಂಗ್ ದೇಹದ ಎಲ್ಲ ಭಾಗಗಳು ಚಲಿಸುವಂತಾಗುತ್ತದೆ. ಇದು ಕಾಲುಗಳು, ತೋಳುಗಳು ಮತ್ತು ಇತರ ಅಂಗಗಳ ನಡುವಿನ ಸಮನ್ವಯವನ್ನು ಸುಧಾರಿಸುತ್ತದೆ. ಇದು ದೇಹದ ಬ್ಯಾಲೆನ್ಸ್ ಅನ್ನು ಹೆಚ್ಚಿಸುತ್ತದೆ.
ತೂಕ ಇಳಿಕೆ.. (Skipping Weight Loss): ಸ್ಕಿಪ್ಪಿಂಗ್ ಮಾಡುವುದರಿಂದ ದೇಹದ ಭಾಗಗಳ ಚಲನವಲನಗಳು ವೇಗ ಪಡೆಯುತ್ತವೆ. ಪರಿಣಾಮ ನಮ್ಮ ದೇಹದಲ್ಲಿರುವ ಹೆಚ್ಚು ಕ್ಯಾಲೊರಿಗಳನ್ನು ಸುಟ್ಟು ಹಾಕುತ್ತದೆ. ಇದರಿಂದಾಗಿ ದೇಹದ ತೂಕ ಕಡಿಮೆ ಆಗುತ್ತದೆ. ಸ್ಕಿಪ್ಪಿಂಗ್ ಮಾಡುವುದರಿಂದ ಭುಜಗಳ ಮೇಲೆ ಮತ್ತು ಮುಂಡದ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ದೇಹದ ಭಾಗಗಳಲ್ಲಿ ಹೆಚ್ಚುವರಿ ಕೊಬ್ಬನ್ನು ಕರಿಗಿಸಿ ಆರೋಗ್ಯವಂತನಾಗಿ ಮಾಡುತ್ತದೆ.
ಒತ್ತಡದಿಂದ ರಿಲೀಫ್.. (Stress Free From Skipping) : ಯಾವುದೇ ರೀತಿಯ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಡೋಪಮೈನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಸ್ಕಿಪ್ಪಿಂಗ್ ಮಾಡುವ ಮೂಲಕ ಹೆಚ್ಚು ಬಿಡುಗಡೆ ಮಾಡುತ್ತದೆ. ಇವುಗಳ ಬಿಡುಗಡೆಯಿಂದ ನಮ್ಮ Stress ಅಥವಾ ಒತ್ತಡ ಕಡಿಮೆಯಾಗುತ್ತದೆ.
ಮೂಳೆ ಗಟ್ಟಿಯಾಗುವುದು.. (Skipping For Bone Health): ಸ್ಕಿಪ್ಪಿಂಗ್ ಮಾಡವಾಗ ನಾವು ಮೇಲಕ್ಕೆ ಮತ್ತು ಕೆಳಕ್ಕೆ ಜಿಗಿಯುತ್ತೇವೆ. ಇದರಿಂದಾಗಿ ನಮ್ಮ ಮೂಳೆಗಳ ಮೇಲೆ ಒತ್ತಡ ಬೀಳುತ್ತದೆ. ಆದರೆ ಇದು ದೀರ್ಘಾವಧಿಯಲ್ಲಿ ಮೂಳೆಗಳನ್ನು ಗಟ್ಟಿಗೊಳಿಸುತ್ತವೆ. ಒಟ್ನಲ್ಲಿ ಸ್ಕಿಪ್ಪಿಂಗ್ ಮಾಡುವುದರಿಂದ ದೇಹಕ್ಕೆ ಹೆಚ್ಚು ಅನುಕೂಲವಾಗಿದೆ. ಆದ್ರೆ ಸ್ಕಿಪ್ಪಿಂಗ್ ಮಾಡುವಾಗ ಎಚ್ಚರ ವಹಿಸುವುದು ಸೂಕ್ತ.. ಸ್ವಲ್ಪ ಎಡವಿದರೂ ಕಾಲು ಮುರಿತಗೊಳ್ಳುವುದು. ಹೀಗಾಗಿ ಸ್ಕಿಪ್ಪಿಂಗ್ ಮಾಡುವಾಗ ಎಚ್ಚರ ವಹಿಸುವುದು ಒಳ್ಳೆಯದು.
ಆರೋಗ್ಯ
ಮೂತ್ರಪಿಂಡದ ಕಲ್ಲು: ಮೂತ್ರಕೋಶದಲ್ಲಿ ಸಿಲುಕಿದರೆ ಏನಾಗುತ್ತದೆ?
ಬೆಂಗಳೂರು: ಮೂತ್ರಪಿಂಡದ ಕಲ್ಲು (Kidney Stone) ಮೂತ್ರಕೋಶಕ್ಕೆ ತಲುಪಿದ ಬಳಿಕ ಸುಲಭವಾಗಿ ಹೊರಹೋಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಕೆಲವೊಮ್ಮೆ ಈ ಕಲ್ಲುಗಳು ಮೂತ್ರಕೋಶದಲ್ಲೇ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ 4–5 ಮಿಮೀ ಗಾತ್ರದ ಕಲ್ಲುಗಳು ಸಹಜವಾಗಿ ಮೂತ್ರದ ಮೂಲಕ ಹೊರಹೋಗುತ್ತವೆ. ಆದರೆ 7 ಮಿಮೀಗಿಂತ ದೊಡ್ಡದಾದ ಅಥವಾ ಅಸಮ ಆಕಾರ ಹೊಂದಿರುವ ಕಲ್ಲುಗಳು ಮೂತ್ರನಾಳದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ಕೆಳ ಹೊಟ್ಟೆ ನೋವು, ಮೂತ್ರ ವಿಸರ್ಜನೆ ವೇಳೆ ಉರಿ, ಮೂತ್ರದಲ್ಲಿ ರಕ್ತ ಹಾಗೂ ದುರ್ವಾಸನೆ ಕಾಣಿಸಬಹುದು.
ಮೂತ್ರಕೋಶ ಸರಿಯಾಗಿ ಖಾಲಿಯಾಗದಿರುವುದು ಕೂಡ ಪ್ರಮುಖ ಕಾರಣ. ಮೂತ್ರದ ಹರಿವು ಕಡಿಮೆಯಾಗುವ ಸ್ಥಿತಿ ಅಥವಾ ವೃದ್ಧರಾದ ಪುರುಷರಲ್ಲಿ ಕಾಣಿಸುವ ಪ್ರಾಸ್ಟೇಟ್ ವಿಸ್ತರಣೆ (BPH) ಸಮಸ್ಯೆಯಿಂದ ಕಲ್ಲುಗಳು ಸಿಲುಕಿಕೊಳ್ಳಬಹುದು. ಜೊತೆಗೆ ಮಧುಮೇಹ ಅಥವಾ ನರ ಸಮಸ್ಯೆಗಳೂ ಪರಿಣಾಮ ಬೀರುತ್ತವೆ.
ಕಲ್ಲುಗಳು ಹೆಚ್ಚು ಕಾಲ ಸಿಲುಕಿಕೊಂಡಿದ್ದರೆ ಸೋಂಕು (UTI), ಮೂತ್ರ ಧಾರಣ ತೊಂದರೆ ಹಾಗೂ ಮೂತ್ರಕೋಶದ ಉರಿಯೂತದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಜ್ವರ, ತೀವ್ರ ನೋವು, ಮೂತ್ರವಿಸರ್ಜನೆ ಅಸಾಧ್ಯತೆ ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ.
ತಜ್ಞರ ಪ್ರಕಾರ, ಸಾಕಷ್ಟು ನೀರು ಕುಡಿಯುವುದು, ಮೂತ್ರಕೋಶವನ್ನು ಸಂಪೂರ್ಣ ಖಾಲಿ ಮಾಡುವುದು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು. “ಡಬಲ್ ವಾಯ್ಡ್” ಎಂಬ ವಿಧಾನವು ಮೂತ್ರಕೋಶ ಸಂಪೂರ್ಣ ಖಾಲಿಯಾಗಲು ಸಹಕಾರಿಯಾಗುತ್ತದೆ.
ಒಟ್ಟಿನಲ್ಲಿ, ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ನಿರ್ಲಕ್ಷಿಸದೇ ಆರಂಭಿಕ ಲಕ್ಷಣಗಳಲ್ಲೇ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ.
Note: This information is provided by Dr. Venkatswamy and the Hosasuddi.in health team. Before publishing, Hosasuddi.in follows medical guidelines and expert advice.
ಆರೋಗ್ಯ
ಮಧುಮೇಹ-ಬೊಜ್ಜಿಗೆ GLP-1 ಔಷಧ: ಪ್ರಯೋಜನದ ಜೊತೆ ಅಪಾಯವೂ!
ನವದೆಹಲಿ: ಟೈಪ್ 2 ಮಧುಮೇಹ ಮತ್ತು ಸ್ಥೂಲಕಾಯತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ GLP-1 ಔಷಧಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಎಚ್ಚರಿಕೆ ನೀಡಿದೆ. ಈ ಔಷಧಗಳು ಪರಿಣಾಮಕಾರಿ ಆಗಿದ್ದರೂ, ಅವುಗಳನ್ನು ವೈದ್ಯರ ಸಲಹೆಯಿಲ್ಲದೆ ಬಳಸುವುದು ಅಪಾಯಕಾರಿ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಆರೋಗ್ಯ ಇಲಾಖೆ ಹೇಳುವಂತೆ, GLP-1 ಔಷಧಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ತೂಕ ಇಳಿಕೆಗೆ ಸಹಕಾರಿ. ಆದರೆ ವಾಕರಿಕೆ, ವಾಂತಿ ಮುಂತಾದ ಸಾಮಾನ್ಯ ಅಡ್ಡಪರಿಣಾಮಗಳಿಂದ ಹಿಡಿದು ಮೂತ್ರಪಿಂಡ ಹಾನಿ, ಮೇದೋಜ್ಜೀರಕ ಗ್ರಂಥಿಯ ಉರಿಯೂತ, ಕರುಳಿನ ಅಡಚಣೆಗಳಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು.
Type 2 Diabetes ಮತ್ತು Obesity ಹೊಂದಿರುವವರು ಈ ಔಷಧಗಳನ್ನು ಕಡ್ಡಾಯವಾಗಿ ನೋಂದಾಯಿತ ವೈದ್ಯರ ಮೇಲ್ವಿಚಾರಣೆಯಲ್ಲೇ ಬಳಸಬೇಕು ಎಂದು ಸೂಚಿಸಲಾಗಿದೆ. ಅನಧಿಕೃತ ಮಾರಾಟ ಮತ್ತು ಮೇಲ್ವಿಚಾರಣೆಯಿಲ್ಲದ ಬಳಕೆಯನ್ನು ತಡೆಯಲು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿಸಲಾಗಿದೆ.
ಸಚಿವಾಲಯದ ಪ್ರಕಾರ, ಹೆಚ್ಚಿನ ತೂಕ, ವ್ಯಾಯಾಮದ ಕೊರತೆ ಮತ್ತು ಹೆಚ್ಚು ಸಕ್ಕರೆ ಸೇವನೆ ಟೈಪ್ 2 ಮಧುಮೇಹದ ಪ್ರಮುಖ ಕಾರಣಗಳಾಗಿವೆ. ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಈ ರೋಗವನ್ನು ತಡೆಗಟ್ಟಬಹುದು.
ಆರೋಗ್ಯ
ಜಂಕ್ ಫುಡ್ ಬೇಡ! ಹಣ್ಣುಗಳಿಂದ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಿ
ಬೆಂಗಳೂರು: ಇಂದಿನ ಜೀವನಶೈಲಿಯಲ್ಲಿ ತೂಕ ಇಳಿಸುವುದು ಎಷ್ಟು ಕಷ್ಟವೋ, ಅತಿಯಾಗಿ ಸಪೂರ ಮೈಕಟ್ಟು ಹೊಂದಿರುವವರಿಗೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ಸವಾಲಾಗಿದೆ. ತೂಕ ಹೆಚ್ಚಿಸುವುದು ಎಂದರೆ ಕೇವಲ ಕೊಬ್ಬು ಹೆಚ್ಚಿಸುವುದಲ್ಲ; ಬದಲಾಗಿ ದೇಹದಲ್ಲಿ ಸದೃಢ ಸ್ನಾಯುಗಳ (ಮಸಲ್ಸ್) ವೃದ್ಧಿ ಮುಖ್ಯ.
ಜಂಕ್ ಫುಡ್‌ಗಳಿಗೆ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉತ್ತಮ ವಿಧಾನವಾಗಿದೆ. ಕೆಲವು ಹಣ್ಣುಗಳು ದೇಹಕ್ಕೆ ಅಗತ್ಯ ಕ್ಯಾಲರಿ, ಪೋಷಕಾಂಶಗಳನ್ನು ನೀಡುವುದರ ಮೂಲಕ ತೂಕ ಹೆಚ್ಚಿಸಲು ಸಹಾಯ ಮಾಡುತ್ತವೆ.
ಬಾಳೆಹಣ್ಣು (Banana): ಕಾರ್ಬೋಹೈಡ್ರೇಟ್ ಮತ್ತು ಕ್ಯಾಲರಿಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ತೂಕ ಹೆಚ್ಚಿಸಲು ಪರಿಣಾಮಕಾರಿ. ದಿನಕ್ಕೆ 2–3 ಬಾಳೆಹಣ್ಣು ತಿನ್ನುವುದು ಅಥವಾ ಹಾಲಿನೊಂದಿಗೆ ಬನಾನಾ ಶೇಕ್ ಸೇವಿಸುವುದು ವೇಗವಾಗಿ ಫಲ ನೀಡುತ್ತದೆ.
ಅವಕಾಡೋ (Avocado): ಆರೋಗ್ಯಕರ ಕೊಬ್ಬಿನ ಮೂಲವಾಗಿರುವ ಈ ಹಣ್ಣು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ತೂಕವನ್ನು ಸಮತೋಲನದಿಂದ ಹೆಚ್ಚಿಸುತ್ತದೆ.
ಮಾವಿನ ಹಣ್ಣು (Mango): ನೈಸರ್ಗಿಕ ಸಕ್ಕರೆ ಮತ್ತು ಹೆಚ್ಚಿನ ಕ್ಯಾಲರಿಗಳಿಂದ ಕೂಡಿದ ಮಾವಿನ ಹಣ್ಣು ತೂಕ ಹೆಚ್ಚಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.
ಒಣಹಣ್ಣುಗಳು (Dry Fruits): ಅಂಜೂರ, ಖರ್ಜೂರ, ಒಣ ದ್ರಾಕ್ಷಿ ಮುಂತಾದವು ತೂಕ ಹೆಚ್ಚಿಸಲು ಅತ್ಯುತ್ತಮ. ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸಿದರೆ ಹೆಚ್ಚು ಲಾಭಕರ.
ಇದಲ್ಲದೆ ಸಪೋಟ, ಹಲಸಿನ ಹಣ್ಣುಗಳೂ ಸಹ ಸಹಾಯಕ. ಆದರೆ ಕೇವಲ ಆಹಾರ ಸೇವನೆ ಸಾಕಾಗುವುದಿಲ್ಲ; ಲಘು ವ್ಯಾಯಾಮ ಮತ್ತು ಯೋಗಾಭ್ಯಾಸದಿಂದ ಆಹಾರ ಸ್ನಾಯುವಾಗಿ ಪರಿವರ್ತನೆಗೊಳ್ಳಲು ಸಹಾಯವಾಗುತ್ತದೆ.
ನಿಯಮಿತ ಆಹಾರ ಮತ್ತು ತಾಳ್ಮೆಯೊಂದಿಗೆ ಈ ಕ್ರಮ ಪಾಲಿಸಿದರೆ ಆರೋಗ್ಯಕರ ತೂಕ ಹೆಚ್ಚಿಸಿಕೊಳ್ಳುವುದು ಸಾಧ್ಯ. ಈ ಮಾಹಿತಿಯನ್ನು ಆರೋಗ್ಯ ತಜ್ಞರು ಹಂಚಿಕೊಂಡಿದ್ದು, ಅದರ ಆಧಾರದ ಮೇಲೆ ಹೊಸ ಸುದ್ದಿ (Hosasuddi) ತಂಡವು ಈ ಲೇಖನವನ್ನು ಪ್ರಕಟಿಸಿದೆ.
-
ದೇಶ8 hours agoಹಳೆಯ ವಾಹನಗಳಿಗೆ HSRP ಕಡ್ಡಾಯವೇ? ಸಾರಿಗೆ ಇಲಾಖೆಯ ಸ್ಪಷ್ಟನೆ ಏನು ಗೊತ್ತಾ?
-
ಚುನಾವಣೆ19 hours ago“ನಾಲ್ಕು ಮದುವೆಗೆ ಬ್ರೇಕ್” – ಶಾ ಘೋಷಣೆ ಸಂಚಲನ
-
ದೇಶ15 hours agoಪ್ರಚಾರ ವೇಳೆ ಕಾರು ತಡೆದು ಹಲ್ಲೆ: ತರೂರ್ ಬೆಂಗಾವಲು ಮೇಲೆ ದಾಂಧಲೆ
-
ದೇಶ14 hours agoಜಮೀರ್ ಅಹ್ಮದ್ಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ!
-
ಆರೋಗ್ಯ13 hours agoಮೂತ್ರಪಿಂಡದ ಕಲ್ಲು: ಮೂತ್ರಕೋಶದಲ್ಲಿ ಸಿಲುಕಿದರೆ ಏನಾಗುತ್ತದೆ?
-
ದೇಶ10 hours agoಕಾಂಗ್ರೆಸ್ ಒಳಜಗಳ ಬಯಲು: ರಾಹುಲ್ ನಿಲುವಿಗೆ ಹಿರಿಯರ ವಿರೋಧ
-
ಚುನಾವಣೆ8 hours agoTN 2026 ಟೀಸರ್ಗೆ ರಾಜಕೀಯ ಕಿಚ್ಚು! ವಿಜಯ್ ಟಾರ್ಗೆಟ್ ಆರೋಪ – ತಮಿಳುನಾಡಿನಲ್ಲಿ ಬಿಗುವಿನ ವಾತಾವರಣ
-
ದೇಶ10 hours agoಇರಾನ್-ಅಮೆರಿಕಾ ಮಾತುಕತೆ ವಿಫಲ: ಪಾಕಿಸ್ತಾನಕ್ಕೆ ಮುಖಭಂಗ!
