Connect with us

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ 3 ಗಂಟೆ ವ್ಯಯಿಸುತ್ತಾರಂತೆ ಭಾರತೀಯರು

Published

on

ದೇಶದಲ್ಲಿ ಇಂಟರ್​​ನೆಟ್​ ಬಳಸುವವರು ದಿನದಲ್ಲಿ ಸರಾಸರಿ 3 ತಾಸಿಗೂ ಹೆಚ್ಚು ಸಮಯವನ್ನು ಸಾಮಾಜಿಕ ಮಾಧ್ಯಮ ನೋಡುವುದರಲ್ಲಿ ಕಳೆಯುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.

ನವದೆಹಲಿಭಾರತದಲ್ಲಿನ ಇಂಟರ್​ನೆಟ್​ ಬಳಕೆದಾರರು ದಿನಕ್ಕೆ ಸರಾಸರಿ ಮೂರು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಸೋಶಿಯಲ್ ಮೀಡಿಯಾ ನೋಡುವುದರಲ್ಲಿ ಮತ್ತು 46 ನಿಮಿಷ ಆನ್ಲೈನ್ ಗೇಮಿಂಗ್​ನಲ್ಲಿ ಕಳೆಯುತ್ತಾರೆ ಎಂದು ಹೊಸ ವರದಿಯೊಂದು ಗುರುವಾರ ತಿಳಿಸಿದೆ.

ತಂತ್ರಜ್ಞಾನ ನೀತಿಯ ಥಿಂಕ್ ಟ್ಯಾಂಕ್ ಸಂಸ್ಥೆ ಎಸ್ಯಾ ಸೆಂಟರ್ (Esya Centre) ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೆ 194 ನಿಮಿಷಗಳು, ಒಟಿಟಿ (ಓವರ್-ದಿ-ಟಾಪ್) ಮತ್ತು ಆನ್ಲೈನ್ ಗೇಮಿಂಗ್​ನಲ್ಲಿ ಕ್ರಮವಾಗಿ 44 ನಿಮಿಷ ಮತ್ತು 46 ನಿಮಿಷಗಳಷ್ಟು ಸಮಯವನ್ನು ಜನ ವ್ಯಯಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಆನ್ಲೈನ್​ ಗೇಮಿಂಗ್​​ಗಾಗಿ ಬಳಕೆದಾರರು ಸರಾಸರಿ ತಿಂಗಳಿಗೆ 100 ರೂ.ಗಿಂತ ಕಡಿಮೆ ಖರ್ಚು ಮಾಡುತ್ತಾರೆ ಮತ್ತು ದಿನಕ್ಕೆ ಒಂದು ಗಂಟೆಗಿಂತ ಕಡಿಮೆ ಸಮಯ ಆನ್ಲೈನ್ ಗೇಮಿಂಗ್​​ನಲ್ಲಿ ಕಳೆಯುತ್ತಾರೆ. ಹಾಗೆಯೇ ಒಟಿಟಿಗಾಗಿ ಬಳಕೆದಾರರು ತಿಂಗಳಿಗೆ ಸರಾಸರಿ 200 ರೂಪಾಯಿ ಖರ್ಚು ಮಾಡುತ್ತಾರೆ ಮತ್ತು 400 ನಿಮಿಷ ನೋಡುವುದರಲ್ಲಿ ವ್ಯಯಿಸುತ್ತಾರೆ.

ಈ ವರದಿಯು 2,000 ಜನರನ್ನು ಸಮೀಕ್ಷೆಗೆ ಒಳಪಡಿಸಿದೆ ಮತ್ತು 143 ಮೊಬೈಲ್ ಅಪ್ಲಿಕೇಶನ್​ಗಳಾದ್ಯಂತ 20.6 ಲಕ್ಷಕ್ಕೂ ಹೆಚ್ಚು ಬಳಕೆದಾರರ ಇನ್-ಅಪ್ಲಿಕೇಶನ್ ಡೇಟಾವನ್ನು ಪರಿಶೀಲಿಸಿದೆ. “ವರದಿಯ ಸಂಶೋಧನೆಗಳು ಬಹಳ ನಿಖರವಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ. ವಿಶೇಷವಾಗಿ ಸರ್ಕಾರವು ಡಿಜಿಟಲ್ ಉದ್ಯಮಗಳಿಗೆ ಬಳಕೆದಾರ ಕೇಂದ್ರಿತ ನೀತಿಗಳನ್ನು ರೂಪಿಸುವ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ ನಮ್ಮ ವರದಿಯು ಪ್ರಾಮುಖ್ಯತೆ ಪಡೆದಿದೆ” ಎಂದು ಎಸ್ಯಾ ಕೇಂದ್ರದ ನಿರ್ದೇಶಕ ಅಮ್ಜದ್ ಅಲಿ ಖಾನ್ ಹೇಳಿದರು.

ಇದಲ್ಲದೆ, ಆನ್ಲೈನ್ ಗೇಮಿಂಗ್​​ ಭಾಗವಹಿಸುವಿಕೆ ಶುಲ್ಕದಲ್ಲಿ ಶೇಕಡಾ 30 ರಷ್ಟು ಹೆಚ್ಚಳ ಜಾರಿಯಾದಲ್ಲಿ ಶೇಕಡಾ 71 ರಷ್ಟು ಜನ ಆನ್ಲೈನ್​​ ಗೇಮಿಂಗ್​​ನಿಂದ ದೂರವಾಗಬಹುದು. ಹಾಗೆಯೇ ಒಟಿಟಿಗೆ ಶುಲ್ಕ ಹೆಚ್ಚಾದಲ್ಲಿ ಕೇವಲ ಶೇಕಡಾ 17 ರಷ್ಟು ಜನ ಒಟಿಟಿಯಿಂದ ದೂರವಾಗಬಹುದು. ಒಟಿಟಿ ನೋಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದ್ದರೂ, ಶೇಕಡಾ 28 ರಷ್ಟು ಡಿಜಿಟಲ್ ನಾಗರಿಕರು ತಮ್ಮ ಭವಿಷ್ಯದ ಉದ್ಯೋಗಾವಕಾಶಗಳಿಗೆ ಆನ್ಲೈನ್ ಗೇಮಿಂಗ್ ಬೇಕೇ ಬೇಕು ಎನ್ನುತ್ತಾರೆ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ, ಎಲ್ಲ ಬಳಕೆದಾರರು ತಿಂಗಳಿಗೊಮ್ಮೆಯಾದರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುತ್ತಾರೆ. ಅದರಂತೆ ಒಟಿಟಿ ಮತ್ತು ಆನ್ಲೈನ್ ಗೇಮಿಂಗ್​ಗೆ ಈ ಪ್ರಮಾಣ ಕ್ರಮವಾಗಿ ಶೇಕಡಾ 60 ಮತ್ತು 40 ರಷ್ಟಿದೆ. ಸುಮಾರು ಶೇಕಡಾ 89 ಬಳಕೆದಾರರು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಕ್ರಮವಾಗಿ ಶೇಕಡಾ 22 ಮತ್ತು ಶೇಕಡಾ 12 ರಷ್ಟು ಜನರು ಮಾತ್ರ ಒಟಿಟಿ ಮತ್ತು ಆನ್ಲೈನ್ ಗೇಮಿಂಗ್​ನಲ್ಲಿ ಸಕ್ರಿಯರಾಗಿರುತ್ತಾರೆ. ಸಾಮಾಜಿಕ ಮಾಧ್ಯಮ ಎಂಬುದು ಇಂಟರ್ನೆಟ್ ಆಧಾರಿತ ಸಂವಹನದ ರೂಪವಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್​​ಫಾರ್ಮ್​ಗಳು ಬಳಕೆದಾರರಿಗೆ ಸಂಭಾಷಣೆ ನಡೆಸಲು, ಮಾಹಿತಿ ಹಂಚಿಕೊಳ್ಳಲು ಮತ್ತು ವೆಬ್ ಕಂಟೆಂಟ್​​ ಸೃಷ್ಟಿಸಲು ಅವಕಾಶ ನೀಡುತ್ತವೆ.

ದೇಶ

Viral News :ಪ್ರೀತಿಗೆ ಮಿತಿ ಇಲ್ಲ: ವೃದ್ಧೆ-ಕೋತಿಯ ಅನನ್ಯ ಸಂಬಂಧ

Published

on

ರಾಮನಗರ: ಮಾನವ-ಪ್ರಾಣಿ ಬಾಂಧವ್ಯಕ್ಕೆ ಸಾಕ್ಷಿಯಾಗುವ ಮನಕಲುಕುವ ಘಟನೆ Ramanagara ಜಿಲ್ಲೆಯ ರಾಯರದೊಡ್ಡಿಯಲ್ಲಿ ನಡೆದಿದೆ. ವೃದ್ಧೆಯೊಬ್ಬರು ಮೃತಪಟ್ಟ ಬಳಿಕ ಅವರ ಪಾರ್ಥಿವ ಶರೀರದ ಬಳಿ ಕೋತಿಯೊಂದು ಕುಳಿತು ಕಣ್ಣೀರು ಸುರಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾರ್ವತಮ್ಮ (80) ಎಂಬ ವೃದ್ಧೆ ಮಾ.31ರಂದು ವಯೋಸಹಜವಾಗಿ ನಿಧನರಾಗಿದ್ದರು. ಮೂಲತಃ Channapatna ತಾಲೂಕಿನ ಬಿ.ವಿ.ಹಳ್ಳಿಯವರಾದ ಅವರು ಮಗಳ ಮನೆಯಲ್ಲಿ ವಾಸವಾಗಿದ್ದರು. ಪ್ರತಿದಿನ ಮನೆಯ ಬಳಿ ಬರುತ್ತಿದ್ದ ಕೋತಿಗೆ ಪಾರ್ವತಮ್ಮ ಪ್ರೀತಿಯಿಂದ ತಿಂಡಿ ನೀಡುತ್ತಿದ್ದರು. ಇದರಿಂದ ಇಬ್ಬರ ನಡುವೆ ಅನುರಾಗದ ಬಾಂಧವ್ಯ ಬೆಳೆದಿತ್ತು.

ವೃದ್ಧೆಯ ನಿಧನದ ಸುದ್ದಿ ತಿಳಿದಂತೆ ಸ್ಥಳಕ್ಕೆ ಬಂದ ಕೋತಿ, ಅಲ್ಲಿದ್ದವರನ್ನೆಲ್ಲ ಅಚ್ಚರಿಗೊಳಿಸುವ ರೀತಿಯಲ್ಲಿ ವರ್ತಿಸಿತು. ಪಾರ್ಥಿವ ಶರೀರದ ಬಳಿ ಕುಳಿತು ಮುಖದ ಬಳಿ ಮುಖವಿಟ್ಟು ಕಣ್ಣೀರು ಸುರಿಸಿದ ದೃಶ್ಯ ಕಂಡು ಜನರು ಭಾವುಕರಾದರು.

ಈ ಘಟನೆ ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ರಾಣಿಗಳಿಗೂ ಭಾವನೆಗಳಿವೆ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ, ಮಾನವ ಮತ್ತು ಪ್ರಾಣಿಗಳ ನಡುವೆ ಇರುವ ಪ್ರೀತಿ ಮತ್ತು ನಂಟು ಎಷ್ಟು ಗಾಢವಾಗಿರಬಹುದು ಎಂಬುದಕ್ಕೆ ಈ ಘಟನೆ ಜೀವಂತ ಉದಾಹರಣೆಯಾಗಿದೆ.

Continue Reading

ದೇಶ

ಪ್ರಕೃತಿಯ ಮಧ್ಯೆ ಓದು: IIT ಕ್ಯಾಂಪಸ್‌ನ ಅದ್ಭುತ ದೃಶ್ಯ

Published

on

ಚೆನ್ನೈ, ಮಾ. 29: ಓದು ಮುಗಿಸಿ ಕಾಲೇಜು ಬಿಟ್ಟು ಹೊರಡುವ ಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಗೂ ಭಾವನಾತ್ಮಕವಾಗಿರುತ್ತದೆ. ಆದರೆ IIT Madras ವಿದ್ಯಾರ್ಥಿನಿಯೊಬ್ಬಳಿಗೆ ಇದು ಇನ್ನೂ ವಿಶೇಷ ಅನುಭವವಾಗಿದೆ. ಪ್ರಾಣಿಗಳೊಂದಿಗೆ ಬೆಳೆಸಿದ ಸ್ನೇಹವೇ ಆಕೆಯ ಬೀಳ್ಕೊಡುಗೆ ಕ್ಷಣವನ್ನು ನೆನಪಿನೀಯವಾಗಿಸಿದೆ.

ಎಂಬಿಎ ವಿದ್ಯಾರ್ಥಿನಿ ಪಲ್ಲವಿ, ಕಾಲೇಜು ಕ್ಯಾಂಪಸ್‌ನಲ್ಲಿ ಮುಕ್ತವಾಗಿ ಸಂಚರಿಸುವ ಜಿಂಕೆಗಳೊಂದಿಗೆ ಸ್ನೇಹ ಬೆಳೆಸಿದ್ದಾಳೆ. ಇತ್ತೀಚೆಗೆ ಆಕೆ ಸಾಮಾಜಿಕ ಜಾಲತಾಣ Instagramನಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಪಲ್ಲವಿ ಜಿಂಕೆಯನ್ನು ಮುದ್ದಿಸುವುದು, ಅದರೊಂದಿಗೆ ಆಟವಾಡುವ ದೃಶ್ಯಗಳು ಮನಸೂರೆಗೊಂಡಿವೆ.

“ಎಂಬಿಎ ಓದಲು ಬಂದೆ… ಜಿಂಕೆ ಸ್ನೇಹ ಮಾಡಿ ಹೊರಟೆ” ಎಂಬ ಶೀರ್ಷಿಕೆಯೊಂದಿಗೆ ಆಕೆ ವಿಡಿಯೋ ಹಂಚಿಕೊಂಡಿದ್ದು, ಇದು ನೆಟ್ಟಿಗರ ಮನ ಗೆದ್ದಿದೆ. ಜಿಂಕೆ ಕೂಡ ಯಾವುದೇ ಭಯವಿಲ್ಲದೆ ಆಕೆಯೊಂದಿಗೆ ಆತ್ಮೀಯವಾಗಿ ವರ್ತಿಸಿರುವುದು ವಿಶೇಷವಾಗಿದೆ.

ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು “ಮುದ್ದಾದ ಕ್ಷಣ”, “ಅದ್ಭುತ ಅನುಭವ” ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು “ಜಿಂಕೆಯೊಂದಿಗೆ ಎಂಬಿಎ ಪೂರ್ಣಗೊಳಿಸಿದ್ದೀರಾ?” ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.

Guindy National Park ಸಮೀಪದಲ್ಲಿರುವ ಐಐಟಿ ಮದ್ರಾಸ್ ಕ್ಯಾಂಪಸ್ ಪ್ರಕೃತಿ ಸೌಂದರ್ಯಕ್ಕಾಗಿ ಪ್ರಸಿದ್ಧವಾಗಿದೆ. ಇಲ್ಲಿ ಚುಕ್ಕೆ ಜಿಂಕೆಗಳು ಮತ್ತು ಕೃಷ್ಣಮೃಗಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಹತ್ತಿರ ಸಂಪರ್ಕ ಸಾಧಿಸುವ ಅಪರೂಪದ ಅವಕಾಶವನ್ನು ಪಡೆಯುತ್ತಾರೆ.

Continue Reading

ದೇಶ

Viral News : ಮೂಗಿನಿಂದಲೇ ಮದ್ಯ ಕುಡಿದ ಭೂಪ – ನೆಟ್ಟಿಗರ ಹುಬ್ಬೇರಿಸಿದ ದೃಶ್ಯ

Published

on

Viral Video: ಹಲವು ರಾಜ್ಯಗಳು ಮದ್ಯ ಮಾರಾಟದಿಂದಲೇ ಹೆಚ್ಚಿನ ಆದಾಯ ಗಳಿಸುತ್ತವೆ ಎಂಬುದು ಗೊತ್ತಿರುವ ಸಂಗತಿ. ಮದ್ಯದ ಮೇಲೆ ವಿಧಿಸುವ ತೆರಿಗೆ ಸರ್ಕಾರಗಳಿಗೆ ದೊಡ್ಡ ಮಟ್ಟದ ಆದಾಯ ತರುತ್ತದೆ. ಕುಡಿತಕ್ಕೆ ಅಂಟಿಕೊಂಡಿರುವ ಕೆಲವರು ದಿನವೂ ಮದ್ಯಪಾನ ಮಾಡದೆ ಇರಲಾರರು.

ವಿಭಿನ್ನ ಕುಡಿಯುವ ಶೈಲಿ – ಈತನದು ಮತ್ತೇ ವಿಭಿನ್ನ!

ಪ್ರತಿಯೊಬ್ಬರಿಗೂ ತಮ್ಮದೇ ಆದ ಕುಡಿಯುವ ಶೈಲಿ ಇರುತ್ತದೆ. ಕೆಲವರು ಗ್ಲಾಸ್‌ನಲ್ಲಿ ಸುರಿದು ಕುಡಿಯುತ್ತಾರೆ, ಇನ್ನೂ ಕೆಲವರು ಬಾಟಲಿಯಿಂದಲೇ ನೇರವಾಗಿ ಸೇವಿಸುತ್ತಾರೆ. ಆದರೆ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೂಗಿನಿಂದಲೇ ಬಿಯರ್ ಕುಡಿಯುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಹೇಗೆ ಕುಡಿದ? ನೆಟ್ಟಿಗರ ಅಚ್ಚರಿ

ವಿಡಿಯೋದಲ್ಲಿ ಕಾಣುವ ವ್ಯಕ್ತಿ ಮೊದಲಿಗೆ ದೊಡ್ಡ ಬಿಯರ್ ಗ್ಲಾಸ್ ಹಿಡಿದು, ಅದನ್ನು ಎರಡು-ಮೂರು ಬಾರಿ ತಿರುಗಿಸಿ ಬಳಿಕ ಗ್ಲಾಸ್‌ನಲ್ಲಿದ್ದ ಬಿಯರ್ ಅನ್ನು ಮೂಗಿಗೆ ತಂದು ಒಂದೇ ಸಲ ಕುಡಿದು ಮುಗಿಸುತ್ತಾನೆ. ಈ ದೃಶ್ಯ ನೋಡುಗರಿಗೆ ಅಚ್ಚರಿ ಮೂಡಿಸಿದೆ.

ಕಮೆಂಟ್‌ಗಳ ಸುರಿಮಳೆ

ಈ ವಿಚಿತ್ರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್‌ಗಳ ಸುರಿಮಳೆ ಹರಿಸಿದ್ದಾರೆ. “ಹೇಗೆ ಸಾಧ್ಯ?” “ಆ ರೀತಿ ಕುಡಿದು ಜೀವಂತವಾಗಿದ್ದಾನೆಯೇ?” ಎಂಬ ಪ್ರಶ್ನೆಗಳು ಹೆಚ್ಚಾಗಿವೆ.

ಆರೋಗ್ಯ ತಜ್ಞರ ಎಚ್ಚರಿಕೆ

ಇಂತಹ ಅಪಾಯಕಾರಿ ಕೃತ್ಯಗಳನ್ನು ಅನುಸರಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಎಲ್ಲ ದೃಶ್ಯಗಳನ್ನು ಅನುಕರಿಸುವುದು ಸೂಕ್ತವಲ್ಲ ಎಂಬ ಸಂದೇಶವೂ ಹರಿದಾಡುತ್ತಿದೆ.

Continue Reading

Trending