ಅಪರಾಧ

ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್​ಗೆ ಟ್ವಿಸ್ಟ್​.. 5 ಕೋಟಿಗಾಗಿ ಬ್ಲ್ಯಾಕ್​ಮೇಲ್ ಆರೋಪ..!

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯ ಹಂತದಲ್ಲಿರುವಾಗಲೇ ಸೂರಜ್ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಸೂರಜ್​ನಿಂದಲೂ ಸಂತ್ರಸ್ತನಿಂದ ದೂರು ನೀಡಲಾಗಿದೆ.

ಹಾಸನದ ಅರಕಲಗೂಡಿನ ತಮ್ಮದೇ ಜೆಡಿಎಸ್ ಪಕ್ಷದ ಕಾರ್ಯಕರ್ತನಿಗೆ ಸಲಿಂಗ ಲೈಂಗಿಕ ದೌರ್ಜನ್ಯ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತ ಬೆಂಗಳೂರಿಗೆ ತೆರಳಿ ಡಿಸಿ ಹಾಗೂ ಐಜಿಪಿಗೆ ದೂರು ನೀಡಿದ್ದಾರೆ. ಜೂನ್ 16ರ ಸಂಜೆ ನನ್ನ ಮೇಲೆ ಬಲವಂತವಾಗಿ ಅಸಹಜವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ಯುವಕ ದೂರಲ್ಲಿ ಉಲ್ಲೇಖಿಸಿದ್ದಾನೆ. ಇದನ್ನು ಯಾರಿಗಾದ್ರೂ ಹೇಳಿದ್ರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾನೆ. ಜೊತೆಗೆ 2 ಕೋಟಿ ದುಡ್ಡು ಕೊಡುವ ಆಮಿಷವೊಡ್ಡಿದ್ದಾರೆಂದು ಎಂದು ಆರೋಪಿಸಿದ್ದಾರೆ.

ಸಂತ್ರಸ್ತನ ವಿರುದ್ಧ ಪ್ರತಿದೂರು
ಇದಕ್ಕೆ ಪ್ರತಿಯಾಗಿ ಸಂತ್ರಸ್ತನ ವಿರುದ್ಧವೇ ಪ್ರತಿದೂರು ದಾಖಲಾಗಿದೆ. 5 ಕೋಟಿಗೆ ಡಿಮ್ಯಾಂಡ್‌ ಮಾಡಿದ್ದಾಗಿ ಸಂತ್ರಸ್ತನ ವಿರುದ್ಧವೇ ಸೂರಜ್ ರೇವಣ್ಣ ಬ್ಲಾಕ್‌ಮೇಲ್ ದೂರು ನೀಡಿದ್ದಾರೆ. ಸೂರಜ್‌ ಪರ ಆಪ್ತ ಶಿವಕುಮಾರ್‌ನಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಸಲಿಂಗ ಕಾಮ ಆರೋಪಿಸಿ ಹಣಕ್ಕಾಗಿ ಡಿಮ್ಯಾಂಡ್‌ ಹಾಗೂ ಕುಟುಂಬದ ಮರ್ಯಾದೆ ಹಾಳು ಮಾಡಲು ಬೆದರಿಕೆ ಆರೋಪಿಸಿ ದೂರು ನೀಡಿದ್ದಾರೆ. ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಹೋಗಿದ್ದ ಸಂತ್ರಸ್ತ ಕೆಲಸ ಕೇಳಿ ವಾಪಸ್ಸಾದ ಬಳಿಕ ಬ್ಲಾಕ್ ಮೇಲ್ ಮಾಡಿದ್ದಾಗಿ ದೂರು ನೀಡಲಾಗಿದೆ. ನೀನು ಕೆಲಸ ಕೊಡಿಸಲ್ಲ, ನಿಮ್ಮ ಬಾಸೂ ಕೆಲಸ ಕೊಡಿಸ್ತಿಲ್ಲಂತ ಸೂರಜ್ ಆಪ್ತ ಶಿವಕುಮಾರ್‌ ಮೂಲಕ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿದ್ದಾರೆ. ನೀನು ನಿಮ್ಮ ಬಾಸ್​ನಿಂದ ಐದು ಕೋಟಿ ಹಣ ಕೊಡಿಸಬೇಕು. ಇಲ್ಲದಿದ್ರೆ ಲೈಂಗಿಕ ದೌರ್ಜನ್ಯ ಕೇಸ್ ಕೊಡ್ತೇನೆ. ನಿಮ್ಮ ಬಾಸ್ ಹಣ ಕೊಡದಿದ್ದರೆ ದೊಡ್ಡ ದೊಡ್ಡೋರು ಹಣ ಕೊಡಲು ರೆಡಿ ಇದ್ದಾರೆ. ನಾನು ಬೆಂಗಳೂರಿಗೆ ಹೋಗಿ ಮಾದ್ಯಮದ ಮುಂದೆ ಹೋಗ್ತೇನೆ. ಸೂರಜ್ ರೇವಣ್ಣ ಗೌರವ ಹಾಳು ಮಾಡೊದಾಗಿ ಬೆದರಿಕೆ ಹಾಕಿದ್ದಾನೆಂದು ಸಂತ್ರಸ್ತನ ವಿರುದ್ಧವೇ ಸೂರಜ್ ರೇವಣ್ಣ ಆಪ್ತ ಪ್ರತಿದೂರು ಕೊಟ್ಟಿದ್ದಾರೆ.

Trending

Exit mobile version