Connect with us

ಸಿನಿಮಾ

ಅಬ್ಬಬ್ಬಾ!; ‘ಕಲ್ಕಿ’ ಕಲೆಕ್ಷನ್​​​ ₹180 ಕೋಟಿ: ಕೆಜಿಎಫ್​ 2, ಜವಾನ್ ಸೇರಿ ಹಿಟ್ ಸಿನಿಮಾಗಳ​ ದಾಖಲೆಗಳೆಲ್ಲಾ ಉಡೀಸ್ – Kalki 2898 AD Collection

Published

on

ನಾಗ್ ಅಶ್ವಿನ್ ನಿರ್ದೇಶನದ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ಕಲ್ಕಿ 2898 ಎಡಿ’ ಚಿತ್ರ ಕಳೆದ ದಿನ (ಗುರುವಾರ, ಜೂನ್ 27) ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿ ಧೂಳೆಬ್ಬಿಸಿದೆ. ಬಹುತೇಕ ಮೆಚ್ಚುಗೆ ಸ್ವೀಕರಿಸಿದ ಈ ಚಿತ್ರ, ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ಕಂಡಿದೆ. ಭಾರತದಲ್ಲೇ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡುವಲ್ಲಿ ಯಶ ಕಂಡ ಚಿತ್ರತಂಡವೀಗ ಯಶಸ್ಸಿನಲೆಯಲ್ಲಿ ತೇಲುತ್ತಿದೆ.

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್, ಇಂಡಿಯನ್​ ಸೂಪರ್ ಸ್ಟಾರ್ ಅಮಿತಾಭ್​ ಬಚ್ಚನ್​​, ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ, ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್​ ಸೇರಿದಂತೆ ಬಹುತಾರಾಗಣದ ಬಿಗ್​ ಪ್ರಾಜೆಕ್ಟ್​​​ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತಿದೊಡ್ಡ ಓಪನರ್ ಆಗಿ ದಾಖಲೆ ಬರೆದಿದೆ.

ಸೂಪರ್ ಹಿಟ್ ಸಿನಿಮಾಗಳ ದಾಖಲೆ ಬ್ರೇಕ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ನಾಗ್ ಅಶ್ವಿನ್ ಆ್ಯಕ್ಷನ್​ ಕಟ್ ಹೇಳಿರುವ ಕಲ್ಕಿ 2898 ಎಡಿ ಚಿತ್ರ ತೆರೆಕಂಡ ಮೊದಲ ದಿನ ಭಾರತದಲ್ಲಿ ಎಲ್ಲಾ ಭಾಷೆ ಸೇರಿ ಸರಿ ಸುಮಾರು 118 ಕೋಟಿ ರೂ. ಕಲೆಕ್ಷನ್​ ಮಾಡಿದೆ ಎಂದು ಅಂದಾಜಿಸಲಾಗಿದೆ. ಮೈಥೋ ಸೈನ್ಸ್ ಫಿಕ್ಷನ್​​ ಪ್ರಪಂಚದಾದ್ಯಂತ ಬರೋಬ್ಬರಿ 180 ಕೋಟಿ ರೂ. ಸಂಗ್ರಹಿಸಿದೆ. ಪ್ರಭಾಸ್​​ ಮುಖ್ಯಭೂಮಿಕೆಯ ಈ ಚಿತ್ರ ತನ್ನ ಮೊದಲ ದಿನದ ಅಂಕಿ ಅಂಶಗಳೊಂದಿಗೆ ಕೆಜಿಎಫ್ 2 (159 ಕೋಟಿ ರೂ.), ಸಲಾರ್ (158 ಕೋಟಿ ರೂ.), ಲಿಯೋ (142.75 ಕೋಟಿ ರೂ.), ಸಾಹೋ (130 ಕೋಟಿ ರೂ.) ಮತ್ತು ಜವಾನ್ (129 ಕೋಟಿ ರೂ.) ಎಂಬ ಸೂಪರ್ ಹಿಟ್ ಚಿತ್ರಗಳ ಜಾಗತಿಕ ಆರಂಭಿಕ ದಾಖಲೆಗಳನ್ನು ಪುಡಿಗಟ್ಟಿದೆ.

ಅತಿ ಹೆಚ್ಚು ಕಲೆಕ್ಷನ್​ ಮಾಡಿದ 3ನೇ ಚಿತ್ರವಿದು: ಅದಾಗ್ಯೂ, 2022ರ ಬ್ಲಾಕ್​ಬಸ್ಟರ್ ಸಿನಿಮಾ ‘ಆರ್​ಆರ್​ಆರ್​​’ಭಾರತೀಯ ಚಿತ್ರರಂಗದಲ್ಲೇ ತೆರೆಕಂಡ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ವಿಶ್ವ ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಸದ್ದು ಮಾಡಿದ ಈ ಚಿತ್ರ ತನ್ನ ಮೊದಲ ದಿನ 223 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ‘ಆರ್​ಆರ್​ಆರ್​​’ ನಂತರದ ಸ್ಥಾನವನ್ನು ಪ್ರಬಾಸ್​ ಅವರದ್ದೇ ಆದ ಬಾಹುಬಲಿ 2 ಹೊಂದಿದೆ. ಈ ಸೂಪರ್ ಹಿಟ್ ಸಿನಿಮಾ ಬಿಡುಗಡೆ ಆದ ದಿನ 217 ಕೋಟಿ ರೂ. ಕಲೆಕ್ಷನ್​​ ಮಾಡಿತ್ತು.

ಅನೇಕರು ‘ಕಲ್ಕಿ 2898 ಎಡಿ’ ತನ್ನ ಮೊದಲ ದಿನ 200 ಕೋಟಿ ರೂ. ಗಳಿಸಲಿದೆ ಎಂದು ಅಂದಾಜಿಸಿದ್ದರು. ಈ ಚಿತ್ರ 200 ಕೋಟಿ ರೂಪಾಯಿಗಳ ಗಡಿ ದಾಟುವಲ್ಲಿ ಹಿನ್ನೆಡೆ ಕಂಡಿದೆ. ಅದಾಗ್ಯೂ ಸದ್ಯದ ಅಂಕಿ-ಅಂಶ (180 ಕೋಟಿ ರೂ.) ಕಡಿಮೆಯೇನಿಲ್ಲ. ಭಾರತೀಯ ಚಿತ್ರರಂಗದಲ್ಲೇ ಹೆಚ್ಚು ಕಲೆಕ್ಷನ್​​ ಮಾಡಿದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನ್ನೂ ಶನಿವಾರ ಮತ್ತು ಭಾನುವಾರದ ಕಲೆಕ್ಷನ್​ ಮೇಲೆ ಎಲ್ಲರ ಗಮನವಿದೆ. ಮೊದಲ ದಿನದ ಕಲೆಕ್ಷನ್​ ಮತ್ತು ಡಿಜಿಟಲ್​​ ರೈಟ್ಸ್ ಮಾರಾಟದಿಂದಲೇ ಚಿತ್ರದ ಬಹುತೇಕ ಬಂಡವಾಳ ವಾಪಸ್​ ಬಂದಂತಾಗಿದೆ. ಭಾನುವಾರದವರೆಗಿನ ಗಳಿಕೆ ಚಿತ್ರದ ಸೋಲು-ಗೆಲುವನ್ನು ನಿರ್ಧರಿಸಲಿದೆ. ಚಿತ್ರ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದು ವರದಿಯಾಗಿದೆ.

ದೇಶ

ರಾಜಮೌಳಿ ಚಿತ್ರದಲ್ಲಿ ಜೂ. ಎನ್‌ಟಿಆರ್ ಪುತ್ರ ಎಂಟ್ರಿ? ‘ವಾರಣಾಸಿ’ ಬಗ್ಗೆ ಭಾರೀ ಚರ್ಚೆ

Published

on

ನವದೆಹಲಿ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ S. S. Rajamouli ಅವರ ಸಿನಿಮಾಗಳು ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿವೆ. ಅವರ ಹೊಸ ಸಿನಿಮಾ ‘ವಾರಣಾಸಿ’ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ಇದಕ್ಕೆ ಸಂಬಂಧಿಸಿದ ಹೊಸ ಸುದ್ದಿಯೊಂದು ಸಿನಿ ವಲಯದಲ್ಲಿ ಸದ್ದು ಮಾಡುತ್ತಿದೆ.

ಸ್ಟಾರ್ ನಟ Jr. NTR ಅವರ ಪುತ್ರ ಭಾರ್ಗವ್ ರಾಮ್ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ನಟಿಸುತ್ತಿರುವ Mahesh Babu ಅವರ ಬಾಲ್ಯದ ಪಾತ್ರದಲ್ಲಿ ಭಾರ್ಗವ್ ರಾಮ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ರಾಜಮೌಳಿ ಅವರ ಸಿನಿಮಾಗಳಲ್ಲಿ ನಾಯಕನ ಬಾಲ್ಯದ ಕಥೆಗೆ ವಿಶೇಷ ಮಹತ್ವವಿರುತ್ತದೆ. ಇದೇ ಶೈಲಿಯನ್ನು ‘ವಾರಣಾಸಿ’ ಸಿನಿಮಾದಲ್ಲಿಯೂ ಮುಂದುವರಿಸಲಾಗುತ್ತಿದ್ದು, ಫ್ಲ್ಯಾಶ್‌ಬ್ಯಾಕ್ ಸನ್ನಿವೇಶದಲ್ಲಿ ಬಾಲ್ಯದ ಪಾತ್ರ ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿದುಬಂದಿದೆ.

ಹೆಚ್ಚಿನ ಆಸಕ್ತಿಯ ಸಂಗತಿ ಎಂದರೆ, Jr. NTR ಕೂಡ ಬಾಲನಟನಾಗಿಯೇ ತಮ್ಮ ಸಿನಿ ಜೀವನವನ್ನು ಆರಂಭಿಸಿದ್ದರು. ‘ರಾಮಾಯಣಂ’ ಚಿತ್ರದಲ್ಲಿ ಅಭಿನಯಿಸಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಈಗ ಅವರ ಪುತ್ರವೂ ಅದೇ ಹಾದಿಯಲ್ಲಿ ಸಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಈ ಸಿನಿಮಾದಲ್ಲಿ ನಟಿಸಲು ಅನೇಕ ದೊಡ್ಡ ನಟರು ಆಸಕ್ತಿ ತೋರಿಸುತ್ತಿದ್ದು, ಸಂಭಾವನೆ ಇಲ್ಲದಿದ್ದರೂ ಪಾತ್ರಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ರಾಜಮೌಳಿ ನಿರ್ದೇಶನ ಮತ್ತು ಮಹೇಶ್ ಬಾಬು ನಟನೆಯ ಸಂಯೋಜನೆಯಿಂದ ‘ವಾರಣಾಸಿ’ ಈಗಾಗಲೇ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಒಟ್ಟಾರೆ, ಭಾರ್ಗವ್ ರಾಮ್ ಅವರ ಎಂಟ್ರಿ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಾರದಿದ್ದರೂ, ಈ ಸುದ್ದಿ ಜೂ. ಎನ್‌ಟಿಆರ್ ಅಭಿಮಾನಿಗಳಿಗೆ ಸಂತಸದ ಅಲೆ ಮೂಡಿಸಿದೆ.

Continue Reading

ದೇಶ

‘ಬಡೇ ಸಾಬ್’ ಪಾತ್ರದ ಹಿಂದಿನ ಸತ್ಯ: ದಾವೂದ್ ಕುರಿತ ಚರ್ಚೆ

Published

on

ಬೆಂಗಳೂರು: ಭಾರತದ ಮೋಸ್ಟ್ ವಾಂಟೆಡ್ ಅಪರಾಧಿ Dawood Ibrahim ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಬಿಡುಗಡೆಯಾದ Dhurandhar 2 ಚಿತ್ರದ ಭಾರೀ ಯಶಸ್ಸಿನ ಬೆನ್ನಲ್ಲೇ ದಾವೂದ್ ಇಬ್ರಾಹಿಂ ಕುರಿತ ಚರ್ಚೆ ಮತ್ತೆ ಜೋರಾಗಿದೆ.

1990ರ ದಶಕದ 1993 Bombay bombings ದಾಳಿಗಳ ಮಾಸ್ಟರ್ ಮೈಂಡ್ ಆಗಿದ್ದ ದಾವೂದ್, ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿದನು. ಅಂದಿನಿಂದಲೇ ತನ್ನ ‘ಡಿ-ಗ್ಯಾಂಗ್’ ಕಾರ್ಯಾಚರಣೆಗಳನ್ನು ಅಲ್ಲಿಂದಲೇ ನಿರ್ವಹಿಸುತ್ತಿದ್ದಾನೆ ಎಂಬ ಆರೋಪಗಳಿವೆ.

ಸದ್ಯದ ಮಾಹಿತಿಗಳ ಪ್ರಕಾರ, ದಾವೂದ್ ಪಾಕಿಸ್ತಾನದ Karachi ನಗರದಲ್ಲಿನ ಕ್ಲಿಫ್ಟನ್ ಪ್ರದೇಶದ 13ನೇ ರಸ್ತೆಯ ‘ವೈಟ್ ಹೌಸ್’ ಎಂಬ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾನೆ ಎನ್ನಲಾಗುತ್ತಿದೆ. ಈ ಪ್ರದೇಶವು ಪಾಕಿಸ್ತಾನದ ಅತ್ಯಂತ ಭದ್ರತಾ ವ್ಯವಸ್ಥೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ.

ಇನ್ನೂ ಕೆಲವು ವರದಿಗಳ ಪ್ರಕಾರ, ಕರಾಚಿಯ ಡಿಫೆನ್ಸ್ ಹೌಸಿಂಗ್ ಏರಿಯಾ (DHA) ಹಾಗೂ ಖಯ್ಯುಮಾಬಾದ್ ಪ್ರದೇಶದಲ್ಲಿಯೂ ದಾವೂದ್ ನಿವಾಸ ಹೊಂದಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಭಾರತೀಯ ಗುಪ್ತಚರ ಸಂಸ್ಥೆಗಳಿಗೂ ಇದೇ ರೀತಿಯ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.

‘ಧುರಂಧರ್ 2’ ಸಿನಿಮಾದಲ್ಲಿ ‘ಬಡೇ ಸಾಬ್’ ಎಂಬ ಪಾತ್ರದ ಮೂಲಕ ದಾವೂದ್ ಇಬ್ರಾಹಿಂನಂತೆ ಕಾಣುವ ಪಾತ್ರವನ್ನು ಚಿತ್ರಿಸಲಾಗಿದೆ. ನೈಜ ಘಟನೆಗಳನ್ನು ಆಧರಿಸಿದ ಕಥಾಹಂದರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಈ ಪಾತ್ರ ಭಾರೀ ಚರ್ಚೆಗೆ ಕಾರಣವಾಗಿದೆ.

ಆದಾಗ್ಯೂ, ದಾವೂದ್ ಇಬ್ರಾಹಿಂ ನಿಖರವಾಗಿ ಎಲ್ಲಿದ್ದಾನೆ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೆ ಸಿನಿಮಾ ಮತ್ತು ಗುಪ್ತಚರ ಮಾಹಿತಿಗಳ ಹಿನ್ನೆಲೆ, ದಾವೂದ್ ಕುರಿತ ಚರ್ಚೆ ಮತ್ತೆ ಜಾಗತಿಕ ಮಟ್ಟದಲ್ಲಿ ತೀವ್ರವಾಗಿದೆ

Continue Reading

ದೇಶ

ಲಾಸ್ ಏಂಜಲೀಸ್‌ನಲ್ಲಿ ‘ರಾಮಾಯಣ’ ಟೀಸರ್ ಸದ್ದು: ರಣಬೀರ್ ಲುಕ್‌ಗೆ ಭಾರೀ ಚಪ್ಪಾಳೆ

Published

on

Continue Reading

Trending