ಕ್ರೀಡೆ
ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ರವೀಂದ್ರ ಜಡೇಜಾ.. ಭಾವುಕರಾಗಿ ಹೇಳಿದ್ದೇನು?
2024ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ.
ಇನ್ನು, ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ರವೀಂದ್ರ ಜಡೇಜಾ ಟಿ20 ಕ್ರಿಕೆಟ್ ನಿವೃತ್ತಿ ಘೋಷಿಸಿದ್ದಾರೆ. ನಿನ್ನೆಯಷ್ಟೇ ಟೀಮ್ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು. ಈಗ ಜಡೇಜಾ ಟಿ20 ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ.
ನಾನು ಸದಾ ಟೀಮ್ ಇಂಡಿಯಾ ಪರ ಇದ್ದೇನೆ. ಪ್ರತಿ ಪಂದ್ಯದಲ್ಲೂ ತಂಡಕ್ಕೆ ನನ್ನ ಕೈಯಲ್ಲಾದಷ್ಟು ಕೊಡುಗೆ ನೀಡಿದ್ದೇನೆ. ಟಿ20 ವಿಶ್ವಕಪ್ ಗೆಲ್ಲಬೇಕು ಅನ್ನೋದು ನನ್ನ ದೊಡ್ಡ ಕನಸಾಗಿತ್ತು. ಈ ಕನಸು ನನಸಾಗಿದೆ. ನನ್ನ ಕ್ರಿಕೆಟ್ ಜರ್ನಿಯಲ್ಲಿ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಧನ್ಯವಾದಗಳು. ಇದು ಟಿ20 ಕ್ರಿಕೆಟ್ಗೆ ವಿದಾಯ ಹೇಳುವ ಸಮಯ. ಏಕದಿನ ಮತ್ತು ಟೆಸ್ಟ್ ಫಾರ್ಮೇಟ್ನಲ್ಲಿ ಲಭ್ಯನಿದ್ದೇನೆ ಎಂದು ಇನ್ಸ್ಟಾ ಪೋಸ್ಟ್ ಹಾಕುವ ಮೂಲಕ ಜಡೇಜಾ ನಿವೃತ್ತಿ ಘೋಷಣೆ ಮಾಡಿ ಶಾಕ್ ಕೊಟ್ಟಿದ್ದಾರೆ.
ಕ್ರೀಡೆ
Belgavi: ಸಂಸದರು ಮತ್ತು ಮುಖಂಡರು ಸ್ನೇಹಪೂರ್ಣ ಕ್ರಿಕೆಟ್
ಬೆಳಗಾವಿ: ದೈಹಿಕ ಆರೋಗ್ಯ, ಮಾನಸಿಕ ಸ್ಥಿತಿ ಸುಧಾರಣೆ ಮತ್ತು ಶಾರೀರಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ವ್ಯಾಯಾಮ, ನಡಿಗೆ ಮತ್ತು ಕ್ರೀಡೆಗಳು ಅಗತ್ಯ ಎಂದು ಭાજપಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬೆಳಗಾವಿ ವಿಧಾನಸಭೆಯ ಚಳಿಗಾಲ ಅಧಿವೇಶನದ ನಡುವೆ, ಮಾಧ್ಯಮದವರ ಒತ್ತಾಯಕ್ಕೆ ಪ್ರತಿಯಾಗಿ, ಬೆಳಗಾವಿ KCA ಕ್ರೀಡಾಂಗಣದಲ್ಲಿ ವಿಧಾನಸಭಾ ಸದಸ್ಯರು, ಪಕ್ಷದ ಮುಖಂಡರು ಮತ್ತು ಮತ್ತಿತರರು ಸ್ನೇಹಪೂರ್ಣವಾಗಿ ಕ್ರಿಕೆಟ್ ಆಡಿದರು.
ಈ ಕ್ರೀಡಾ ಚಟುವಟಿಕೆ ರಂಜನೆ ಮಾತ್ರವಲ್ಲದೆ, ದೈಹಿಕ ಸುಸ್ಥಿತಿ, ಮನಸಿಗೆ ಉಲ್ಲಾಸ ಮತ್ತು ಶಕ್ತಿಯನ್ನು ಒದಗಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಆಟದಲ್ಲಿ ಪಾಲ್ಗೊಂಡವರು ತಮ್ಮ ಆನಂದ, ಒಗ್ಗಟ್ಟಿನ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಕ್ರಿಕೆಟ್ ಮಹತ್ವವನ್ನು ಒತ್ತಿಹೇಳಿದರು. ಅನೇಕ ಸದಸ್ಯರು ಶಾರೀರಿಕ ಕ್ಷಮತೆ, ತಂಡದ ಕಾರ್ಯಸಾಮರ್ಥ್ಯ ಮತ್ತು ಹೊಣೆಗಾರಿಕೆಯ ಸಂಬಂಧಿತ ಉತ್ಪಾದಕತೆ ಬಗ್ಗೆ ಚರ್ಚೆ ನಡೆಸಿದರು.
ಆಟದ ಸಂದೇಶ:
ಸ್ನೇಹಪೂರ್ಣ, ಸಂತೋಷಭರಿತ ಮತ್ತು ಆರೋಗ್ಯ–ಪ್ರೋತ್ಸಾಹಕ ಈ ಕ್ರೀಡೆ ಸದಸ್ಯರಿಗೆ ದಿನನಿತ್ಯದ ಜೀವನದಲ್ಲಿ ಕಸರತ್ತು ಮತ್ತು ಕ್ರೀಡೆಗಳನ್ನು ಭಾಗವನ್ನಾಗಿಸಿಕೊಳ್ಳುವ ಮಹತ್ವವನ್ನು ಮನಸಿಗೆ ತರುವಂತಿತ್ತು. ಇದರಿಂದ ಸಂಸದರು ಮತ್ತು ಪಾಲುಗಾರರು ತಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಪ್ರೇರಣೆ ಪಡೆದರು.
ಕ್ರೀಡೆ
ಐಪಿಎಲ್ ಬ್ರಾಂಡ್ 20% ಕುಸಿತ: ಕಾರಣವೇನು? – ಸಂಪೂರ್ಣ ವರದಿ ಇಲ್ಲಿದೆ
ನವದೆಹಲಿ, ಡಿ.11: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬ್ರಾಂಡ್ ಮೌಲ್ಯ ಈ ವರ್ಷ ಗಣನೀಯವಾಗಿ ಕುಸಿದಿದ್ದು, ತಂಡಗಳ ಮೌಲ್ಯದಲ್ಲೂ ಭಾರೀ ಇಳಿಕೆ ಕಂಡಿದೆ. 18 ವರ್ಷಗಳ ಬಳಿಕ ಮೊದಲ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವೂ ಮೌಲ್ಯ ಕುಸಿತದಿಂದ ತಪ್ಪಿಸಿಕೊಳ್ಳಲಿಲ್ಲ. ಕಳೆದ ಸಾಲಿನಿಗಿಂತ ಶೇ.10ರಷ್ಟು ಇಳಿಕೆ ಕಂಡು, ಈಗ ₹876.75 ಕೋಟಿ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ.
ತಂಡಗಳಲ್ಲಿ ಅತ್ಯಧಿಕ ಮೌಲ್ಯ ಕುಸಿತ ರಾಜಸ್ಥಾನ್ ರಾಯಲ್ಸ್‌ಗೆ ಸಂಭವಿಸಿದ್ದು, ಶೇ.35ರಷ್ಟು ಇಳಿಕೆ ದಾಖಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್ (ಶೇ.34), ಕೆಕೆಆರ್ (ಶೇ.33), ಡೆಲ್ಲಿ ಕ್ಯಾಪಿಟಲ್ಸ್ (ಶೇ.26), ಚೆನ್ನೈ (ಶೇ.24), ಮುಂಬೈ (ಶೇ.9), ಪಂಜಾಬ್ ಕಿಂಗ್ಸ್ (ಶೇ.3) ಹಾಗೂ ಲಖನೌ ಸೂಪರ್ ಜೈಂಟ್ಸ್ (ಶೇ.2) ಕೂಡ ಮೌಲ್ಯ ಇಳಿಕೆಯ ದಂಡನೆ ಅನುಭವಿಸಿವೆ. 10 ತಂಡಗಳಲ್ಲಿ ಗುಜರಾತ್ ಟೈಟಾನ್ಸ್ ಮಾತ್ರ ಶೇ.2ರಷ್ಟು ಏರಿಕೆ ದಾಖಲಿಸಿದ ಏಕೈಕ ತಂಡ.
ಒಟ್ಟಾರೆ ಐಪಿಎಲ್ ಬ್ರಾಂಡ್ ಮೌಲ್ಯವು 2024ರಿಗಿಂತ ಶೇ.20ರಷ್ಟು ಕುಸಿತವಾಗಿದೆ ಎಂದು ಬ್ರ್ಯಾಂಡ್ ಫೈನಾನ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಜಿಮೊನ್ ಫ್ರಾನ್ಸಿಸ್ ತಿಳಿಸಿದ್ದಾರೆ.
ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ ಸೀಸನ್-19ರ ಮಿನಿ ಹರಾಜಿಗಾಗಿ 350 ಆಟಗಾರರು ಸ್ಪರ್ಧಿಸುತ್ತಿದ್ದು, ಗರಿಷ್ಠ 77 ಸ್ಥಾನಗಳು ಲಭ್ಯವಿವೆ.
ಈ ನಡುವೆ, ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳ ನಿಷೇಧ ತೆರವು ಕುರಿತು ರಾಜ್ಯ ಸರ್ಕಾರ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
ಕ್ರೀಡೆ
ಕೆಎಸ್‌ಸಿಎ ಸಿಹಿ ಸುದ್ದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಆರಂಭಕ್ಕೆ ಹಸಿರು ನಿಶಾನೆ!
ಹುಬ್ಬಳ್ಳಿ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ಪುನರಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಮ್ಮತಿ ಸೂಚಿಸಿದ್ದಾರೆ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ ತಿಳಿಸಿದ್ದಾರೆ. ಬೆಳಗಾವಿಗೆ ಭೇಟಿ ನೀಡಿದಾಗ ನಾಯಕರು ಈ ಸಂಬಂಧ ಸಿಹಿ ಸುದ್ದಿ ನೀಡಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೆಂಕಟೇಶ್ ಪ್ರಸಾದ, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ಹೊರಬರುವ ಸಾಧ್ಯತೆ ಇದೆ ಎಂದರು. ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ನಡೆದ ಕಾಲ್ತುಳಿತ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರತಿಷ್ಠೆಗೆ ಹಾನಿಯಾಗಿದ್ದರೂ, ಈಗ ಮತ್ತೆ ಮೌಲ್ಯ ಮರಳಿ ಪಡೆಯಲು ಸರ್ಕಾರದ ಸಹಕಾರ ದೊರೆಯಲಿದೆ ಎಂದು ಹೇಳಿದರು.
ಬೆಳಗಾವಿ, ಹುಬ್ಬಳ್ಳಿ, ಧಾರವಾಡ ವಲಯದಲ್ಲಿನ ಕ್ರೀಡಾಂಗಣಗಳ ಅಭಿವೃದ್ಧಿಗೆ ಕೆಎಸ್‌ಸಿಎ ಹೆಚ್ಚಿನ ಒತ್ತು ನೀಡಲಿದೆ. ಕ್ರಿಕೆಟ್ ಬೆಳವಣಿಗೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ಎಂದು ಪ್ರಸಾದ್ ಸ್ಪಷ್ಟಪಡಿಸಿದರು.
-
ಬಿಬಿಎಂಪಿ7 months agoತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years agoವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years agoಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years agoಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years agoGruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು2 years agoನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು1 year agoಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years agoದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ
