s t somashekhar
ಲಿಂಗಧೀರನಹಳ್ಳಿ ತ್ಯಾಜ್ಯ ಘಟಕ ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

- /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 27
https://hosasuddi.in/wp-content/uploads/2023/08/photo-1000x582.jpg&description=ಲಿಂಗಧೀರನಹಳ್ಳಿ ತ್ಯಾಜ್ಯ ಘಟಕ ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್', 'pinterestShare', 'width=750,height=350'); return false;" title="Pin This Post">
- Share
- Tweet /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 72
https://hosasuddi.in/wp-content/uploads/2023/08/photo-1000x582.jpg&description=ಲಿಂಗಧೀರನಹಳ್ಳಿ ತ್ಯಾಜ್ಯ ಘಟಕ ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್', 'pinterestShare', 'width=750,height=350'); return false;" title="Pin This Post">
ಲಿಂಗಧೀರನಹಳ್ಳಿ ತ್ಯಾಜ್ಯ ಘಟಕವನ್ನು ಏಕಾ ಏಕಿ ಮತ್ತೊಂದೆಡೆಗೆ ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿ ಅವಲೋಕನ ಮಾಡಿ ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಯಶವಂತಪುರ ಕ್ಷೇತ್ರದ ತಿಗಳರಪಾಳ್ಯದ ಚೇಂಜ್ ಮೇರ‍್ಸ್ ಆಫ್ ಕನಕಪುರ ರಸ್ತೆ ಮತ್ತು ಶೋಭಾ ಫಾರೆಸ್ಟ್ ವ್ಯೂ ಅಪರ‍್ಟ್ಮೆಂಟ್ ನಿವಾಸಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು
ಲಿಂಗಧೀರನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಳಾಂತರ, ಮಲ್ಲಸಂದ್ರ ಗ್ರಾಮದ ನಿವೇಶನಗಳ ಖಾತೆ ಸಮಸ್ಯೆ ಸೇರಿದಂತೆ ನಾಗರಿಕರಿಂದ ಬಂದ ೨೪ ಕ್ಕೂ ಹೆಚ್ಚು ಪ್ರಮುಖ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಶಾಸಕ ಸೋಮಶೇಖರ್ ಎರಡು ಮೂರು ಬಾರಿ ಭೇಟಿ ಮಾಡಿ ಕ್ಷೇತ್ರದ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಕರೆದುಕೊಂಡು ಬಂದಿದ್ದೇನೆ ಎಂದರು. ನಮ್ಮ ರ‍್ಕಾರದ ಮುಂದೆ ಮೂರು ಸವಾಲುಗಳಿವೆ. ಫೆರಿಫೆರಲ್ ರಸ್ತೆ, ಮೆಟ್ರೋ ವಿಸ್ತರಣೆ, ಹೊಸ ಬಡಾವಣೆಗೆ ಮೂಲಸೌರ‍್ಯ, ಸಂಚಾರ ದಟ್ಟಣೆ ನಿಯಂತ್ರಣ ಪ್ರಮುಖ ಆದ್ಯತೆಯಾಗಿದೆ ಎಂದರು.
ಬೆಂಗಳೂರು ಯೋಜನಾ ಬದ್ಧವಾಗಿ ನರ‍್ಮಾಣವಾದ ನಗರವಲ್ಲ. ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ಒಂದೇ ದಿನದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸುರಂಗ ಮರ‍್ಗದ ರಸ್ತೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ೫೦ ಸಾವಿರ ಕೋಟಿ ರೂ. ಅಗತ್ಯತೆ ಇದೆ. ಬಿಬಿಎಂಪಿಗೆ ತೆರಿಗೆ ಮೂಲಕ ಬರುತ್ತಿರುವ ಆದಾಯ ಕೇವಲ ೩ ಸಾವಿರ ಕೋಟಿ ಮಾತ್ರ. ತೆರಿಗೆ ವಂಚನೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿಗಾಗಿ ಸಿಎಂ, ಡಿಸಿಎಂ ಭೇಟಿ; ವೈಯಕ್ತಿಯ ಲಾಲಸೆಗಲ್ಲ
ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ,ನಾಲ್ಕು ರ‍್ಷದ ಶ್ರಮದ ಫಲವಾಗಿ ಮಲ್ಲಸಂದ್ರ ಹಳ್ಳಿ ೧೧೧ನೇ ಹಳ್ಳಿಯಾಗಿ ಬಿಬಿಎಂಪಿಗೆ ಸರ‍್ಪಡೆಯಾಗಿದೆ. ಗ್ರಾಮಕ್ಕೆ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಅಗತ್ಯವಾದ ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಹಾಲಿಡೇ ವಿಲೇಜ್ ರಸ್ತೆ ಅಗಲೀಕರಣ, ಕಾವೇರಿ ನೀರು ಪೂರೈಕೆ, ಒಳಚರಂಡಿ ಕಾಮಗಾರಿ, ಲಿಂಗಧೀರನಹಳ್ಳಿ ತ್ಯಾಜ್ಯ ಘಟಕದ ಬಗ್ಗೆಯೂ ರ‍್ಕಾರದ ಗಮನ ಸೆಳೆಯಲಾಗಿದೆ ಎಂದರು. ಹೆಮ್ಮಿಗೆಪುರ, ಹೇರೋಹಳ್ಳಿ ವರ‍್ಡ್ ಗಳಲ್ಲಿ ತಲಾ ಒಂದು ಡಯಾಲಿಸಿಸ್ ಕೇಂದ್ರ ನರ‍್ಮಾಣವಾಗಿದ್ದು ರ‍್ಕಾರ ಅದನ್ನು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಯಾರು ಏನೇ ಆರೋಪ ಮಾಡಿದರೂ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ನೂರು ಸಲ ಬೇಕಾದರೂ ಭೇಟಿ ಮಾಡುತ್ತೇನೆ ಹೊರತು ವೈಯಕ್ತಿಕ ಲಾಲಸೆಗಲ್ಲ ಎಂದು ಸ್ಪಷ್ಟ ಪಡಿಸಿದರು.
ನೆಲಮಂಗಲ ಶಾಸಕ ಶ್ರೀನಿವಾಸ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ರಾಜರಾಜೇಶ್ವರಿನಗರ ವಲಯ ಅಯುಕ್ಷ ರೆಡ್ಡಿ ಶಂಕರಬಾಬು,ಜಂಟಿ ಆಯುಕ್ತ ನಾಗರಾಜು ಸೇರಿದಂತೆ ಬೆಸ್ಕಾಂ,ಬಿಬಿಎಂಪಿ,ಜಲಮಂಡಳಿ,ಬಿಡಿಎ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
s t somashekhar
ನನ್ನನ್ನು ಹೆದರಿಸುವುದಕ್ಕೆ ಯಾವ ಮಗನೂ ಹುಟ್ಟಿಲ್ಲ ಶಾಸಕ ಎಸ್ ಟಿ ಸೋಮಶೇಖರ್

ಬೆಂಗಳೂರು: ನನ್ನನ್ನು ಹೆದರಿಸುವುದಕ್ಕೆ ಯಾವ ಮಗನೂ ಹುಟ್ಟಿಲ್ಲ ಎಂದು ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು, ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದ್ದರು ಈ ಕುರಿತು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್ ಆಶೋಕ್ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ, ಈ ಬಗ್ಗೆ ಅವರು ಮಾತನಾಡುತ್ತ ನಾನು ಇವರಂತೆ ಇಲ್ಲೀಗಲ್ ಇಲ್ಲ, ನೇರವಾಗಿಯೇ ಇದ್ದೇನೆ, ತಾಕತ್ತು ಇದ್ದರೆ ನನನ್ನು ಹೆದರಿಸಲಿ, ಏನ್ ಮಾಡ್ತಾರೆ ನೋಡೋಣ, ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರಲ್ಲವೇ ಇವರು ನನ್ನ ಎದುರಿಗೆ ಬಂದು ಮಾಡಲಿ, ಒಬ್ಬೊಬ್ಬರದ್ದು ಒಂದೋದೇ ಒಂದೊAದೇ ವಿಷಯವನ್ನು ಹೊರೆಗೆ ತೆಗೆಯುತ್ತೇನೆ ಎಂದು ಕಿಡಿಕಾರಿದುರ, ಬಿ ಎಸ್ ಯಡಿಯೂರಪ್ಪ ಅವರು ಸಿಎಂ ಆದಾಗ ಅವರನ್ನು ಕೆಳಗೆ ಇಳಿಸುತ್ತೇನೆ ಅಂತ ಯಾರು ಹೇಳಿದರು ಅವೆಲ್ಲವನ್ನು ಸಾಕ್ಷಿ ಸಮೇತ ನಾನು ಹೇಳಬೇಕಾಗುತ್ತದೆ, ಹೌದು ನಾನು ಅಡ್ಡ ಮತದಾನ ಮಾಡಿದ್ದೇನೆ ಏನ್ ಇವಾಗ, 20 ವರ್ಷದಿಂದ ನಾನು ರಾಜಕೀಯದಲ್ಲಿ ಇದ್ದೇನೆ, ನಾನು ಈ ರೀತಿ ರಾಜಕೀಯ ಮಾಡಿಲ್ಲ, ಇವಾಗ ಇವರು ಮಾಡಿದರೆ, ನಾನು ಎಲ್ಲವನ್ನೂ ತೆರದಿಡಬೇಕಾಗುತ್ತದೆ, ಬಿಜೆಪಿಯವರು ಏನು ಬೇಕಿದ್ದರೂ ಕ್ರಮ ಕೈಗೊಳ್ಳಲು ಸ್ವತಂತ್ರರಿದ್ದಾರೆ, ನನ್ನನ್ನು ಅನರ್ಹ ಮಾಡಬಹುದು, ಪಕ್ಷದಿಂದ ಕಿತ್ತಾಕಬಹುದು ಎಂದರು, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು, ಕಳೆದ ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷದ ಸ್ಧಳೀಯ ಮುಖಂಡರು ಒಗಟ್ಟಾಗಿ ನನ್ನ ವಿರುದ್ಧವೇ ಕೆಲಸ ಮಾಡಿದರು,
s t somashekhar
ಬಿಎಲ್ ಸಂತೋಷ್ ಸಭೆಯಿಂದಲೂ ದೂರ ಎಸ್ ಟಿ ಎಸ್, ಹೆಬ್ಬಾರ್

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆಗಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ನೇತೃತ್ವದಲ್ಲಿ ಗುರುವಾರ ಆಯೋಜಿಸಲಾದ ಮಹತ್ವದ ಸಂಘಟನಾತ್ಮಕ ಸಭೆಯಿಂದಲೂ ಹಲವು ನಾಯಕರು ಅಂತರ ಕಾಪಾಡಿಕೊಳ್ಳುವ ಮೂಲಕ ಸ್ಪಷ್ಟ ಬಂಡಾಯವನ್ನು ಸಾರಿದ್ದಾರೆ. ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ , ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ನವಲಗುಂದ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಸಭೆಗೆ ಬಂದಿಲ್ಲ. ಅದಕ್ಕಿಂತಲೂ ಅಚ್ಚರಿ ಮೂಡಿಸಿದ್ದು ಮಾಜಿ ಸಚಿವ ವಿ. ಸೋಮಣ್ಣ ಅವರ ಅನುಪಸ್ಥಿತಿ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಬಿಎಲ್ ಸಂತೋಷ್ ನೇತೃತ್ವದಲ್ಲಿ ಸಂಘಟನಾತ್ಮಕ ಸಭೆಗೆ ರಾಜ್ಯದ ಎಲ್ಲ ಕಡೆಗಳಿಂದ ಪ್ರಮುಖ ನಾಯಕರು ಆಗಮಿಸಿದ್ದಾರೆ. ಶಾಸಕರು, ಎಂಎಲ್ಸಿಗಳು ಮಾಜಿ ಶಾಸಕರು ಈ ಸಭೆಗೆ ಆಹ್ವಾನಿತರಾಗಿದ್ದಾರೆ. ಬೆಳಗಾವಿಯಿಂದ ರಮೇಶ್ ಜಾರಕಿಹೊಳಿ ಟೀಮ್ ಸೇರಿದಂತೆ ಎಲ್ಲರೂ ಬಂದಿದ್ದರು. ಕೆಲವು ಪ್ರಮುಖ ನಾಯಕರು ಬಂದಿಲ್ಲವಾದರೂ ಅವರು ತಮ್ಮ ಗೈರುಹಾಜರಿಗೆ ಕಾರಣಗಳನ್ನು ನೀಡಿದ್ದಾರೆ.
ಕಟೀಲ್, ಬೊಮ್ಮಾಯಿ ಕೂಡಾ ಬಂದಿಲ್ಲ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಣ್ಣಿನ ಆಪರೇಷನ್ ಆಗಿದ್ದು ಈ ಕಾರಣಕ್ಕಾಗಿ ಅವರು ಬಂದಿಲ್ಲ. ದಕ್ಷಿಣ ಕನ್ನಡದಲ್ಲಿ ನಾರಾಯಣಗುರು ಜಯಂತಿ ಇರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗೈರುಹಾಜರಾಗಿದ್ದಾರೆ. ಶಿವಮೊಗ್ಗದಿಂದ ಮೊದಲ ವಿಮಾನ ಹಾರಾಟ ಉದ್ಘಾಟನೆಯಾಗಲಿರುವುದರಿಂದ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ, ಬಿವೈ ರಾಘವೇಂದ್ರ ಸೇರಿದಂತೆ ಶಿವಮೊಗ್ಗ ಜನಪ್ರತಿನಿಧಿಗಳು ಸಭೆಗೆ ಬಂದಿಲ್ಲ.
ಸೋಮಶೇಖರ್, ಹೆಬ್ಬಾರ್ ನಿರೀಕ್ಷಿತ
ಶಾಸಕ ಸೋಮಶೇಖರ್ ಅವರು ಕಳೆದ ಹಲವು ವಾರಗಳಿಂದ ಬಿಜೆಪಿಯ ಯಾವ ಸಭೆಗಲ್ಲೂ ಭಾಗಿಯಾಗುತ್ತಿಲ್ಲ. ಅವರು ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗಲೂ ಹೋಗಿರಲಿಲ್ಲ. ಹೀಗಾಗಿ ಅವರು ಬಿಜೆಪಿಯಿಂದ ಮಾನಸಿಕವಾಗಿ ದೂರವಾಗಿರುವುದು ಸ್ಪಷ್ಟವಾಗಿದೆ. ಇದೇ ವೇಳೆ ಶಿವರಾಮ್ ಹೆಬ್ಬಾರ್ ಅವರು ಕೂಡಾ ಬಿಜೆಪಿಗಿಂತ ಕಾಂಗ್ರೆಸ್ ನಾಯಕರ ಜತೆಗೇ ಒಡನಾಟ ಹೆಚ್ಚಿಸಿಕೊಂಡಿದ್ದಾರೆ. ಮೋದಿ ಅವರು ಆಗಮಿಸಿದ ದಿನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಮಾತುಕತೆಗೆ ತೆರಳಿದ್ದರು. ಶಂಕರ ಪಾಟೀಲ್ ಮುನೇನಕೊಪ್ಪ ಅವರು ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲದಂತೆ ಮಾತನಾಡುತ್ತಿದ್ದಾರೆ. ಆದರೆ, ಈ ಸಭೆಗೆ ಬಾರದೆ ಇರುವುದು ಅವರು ಬಿಜೆಪಿಯಿಂದ ಹೊರಹೋಗುವ ಸಾಧ್ಯತೆ ಕಂಡುಬರುತ್ತಿದೆ.
ಅಚ್ಚರಿ ಮೂಡಿಸಿದ ವಿ. ಸೋಮಣ್ಣ
ಬಿಜೆಪಿ ನಾಯಕತ್ವವನ್ನು ತಮ್ಮ ಹೇಳಿಕೆಗಳಿಂದ ಆಗಾಗ ಇರಸುಮುರಸಿಗೆ ಸಿಲುಕಿಸುವ ಮಾಜಿ ಸಚಿವ ವಿ. ಸೋಮಣ್ಣ ಅವರು ಸಭೆಗೆ ಗೈರುಹಾಜರಾಗಿರುವುದು ಅಚ್ಚರಿ ಮೂಡಿಸಿದೆ. ಅವರಿಗೆ ಪಕ್ಷದ ನಡೆಗಳು, ನಾಯಕರ ನಿಲುವುಗಳ ಬಗ್ಗೆ ತೀವ್ರವಾದ ಅಸಮಾಧಾನ ಇರುವುದನ್ನು ಅವರು ಸ್ಪಷ್ಟವಾಗಿಯೇ ಹೇಳಿದ್ದಾರೆ. ಆದರೆ ಪಕ್ಷ ಬಿಡುವವರ ಲಿಸ್ಟ್ನಲ್ಲಿ ಅವರಿಲ್ಲ. ಆದರೂ ಸಭೆಗೆ ಬಂದಿಲ್ಲ ಎನ್ನುವುದು ಪಕ್ಷದಲ್ಲಿ ಅಚ್ಚರಿ ಮೂಡಿಸಿದೆ.
ರೇಣುಕಾಚಾರ್ಯ ಬರಲ್ಲ ಎಂದು ಮೊದಲೇ ಹೇಳಿದ್ದರು.
ಹೊನ್ನಾಳಿಯ ಮಾಜಿ ಶಾಸಕ ಮತ್ತು ಇತ್ತೀಚೆಗಷ್ಟೇ ಕರ್ನಾಟಕ ಬಿಜೆಪಿ ಮುಕ್ತವಾಗುವ ಹಾದಿಯಲ್ಲಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದ ಎಂ.ಪಿ. ರೇಣುಕಾಚಾರ್ಯ ಅವರೂ ಸಭೆಗೆ ಬಂದಿಲ್ಲ. ತಾನು ಯಾಕೆ ಸಭೆಯಲ್ಲಿ ಭಾಗವಹಿಸಿಲ್ಲ ಎನ್ನುವುದನ್ನು ಅವರೇ ಸ್ಪಷ್ಟವಾಗಿ ಹೇಳಿದ್ದಾರೆ.
ನನಗೆ ಪಕ್ಷದ ವತಿಯಿಂದ ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ನಾನು ಹೋಗಿಲ್ಲ. ಆ ನೋಟಿಸ್ ವಾಪಸ್ಸು ಪಡೆಯಬೇಕು. ಅಲ್ಲಿವರೆಗೆ ಹೋಗುವುದಿಲ್ಲ. ನಾನು ಏನ್ ಹೇಳಬೇಕೊ ಅದನ್ನ ಹೇಳಿದ್ದೇನೆ. ಇದರಿಂದ ನನಗೆ ವೈಯುಕ್ತಿಕವಾಗಿ ಯಾವುದೇ ಲಾಭನೂ ಇಲ್ಲ, ನಷ್ಟವೂ ಇಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತರ ಅಪೇಕ್ಷೆಯಂತೆ ಇರುವುದನ್ನು ನೇರವಾಗಿ ಹೇಳಿದ್ದೀನಿ. ಯಡಿಯೂರಪ್ಪ ಅವರಂತ ನಾಯಕರನ್ನ ಕಡೆಗಣಿಸಿದ್ದಾರೆ. ಇದು ಬಿಜೆಪಿಗೆ ಶಾಪವಾಗಿದೆ” ಎಂದು ಅವರು ಬೆಂಗಳೂರಿನಲ್ಲಿ ಗುರುವಾರ ಹೇಳಿದರು.
ಪಕ್ಷದಲ್ಲಿ ವರ್ಚಸ್ಸು ಇರೋವವರನ್ನು ಬೆಳೆಯುವುದಕ್ಕೆ ಬಿಡುತ್ತಿಲ್ಲ. ವಿಜಯೇಂದ್ರ ಅಂತವರನ್ನು ಮೂಲೆಗುಂಪು ಮಾಡ್ತಿದ್ದಾರೆ. ನಾನು ನೇರವಾಗಿ ಮಾತನಾಡಿದ್ದೇನೆ. ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ನಾನು ಪಕ್ಷ, ಮೋದಿ, ನಡ್ಡಾ ಅಮಿತ್ ಶಾ ವಿರುದ್ದ ಮಾತಾಡಿಲ್ಲ. ನಾನು ಮಾತಾಡಿರೋದು ಕೆಲ ವ್ಯಕ್ತಿಗಳ ವಿರುದ್ಧ. ಅವರ ದೌರ್ಬಲ್ಯವನ್ನು ನೇರವಾಗಿ ಖಂಡಿಸಿದ್ದೇನೆ” ಎಂದು ಹೇಳಿದ್ದಾರೆ. ಹಾಗಂತ ನಾನೇನೂ ಪಕ್ಷ ಬಿಡುವುದಿಲ್ಲ ಎಂದಿದ್ದಾರೆ ರೇಣುಕಾಚಾರ್ಯ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ