PM Modi
ಸರ್ಕಾರದಿಂದ ಮೇಡ್ ಇನ್ ಇಂಡಿಯಾಕ್ಕೆ ಹೆಚ್ಚಿನ ಉತ್ತೇಜನ : ಮೋದಿ

ಬೆಂಗಳೂರು: ಮೇಡ್ ಇನ್ ಇಂಡಿಯಾ ಲ್ಯಾಪಟಾಪ್ ಉತ್ಪಾದನೆ, ಉದ್ಯೋಗಗಳಿಗೆ ಉತ್ತೇಜನ ನೀಡುವ ಕಂಪ್ಯೂಟರ್‍ಗಳ ಖರೀದಿಗೆ ಗಮನ ಹರಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು, ಮೊಬೈಲ್ ಫೋನ್‍ಗಳ ಅತೀ ದೊಡ್ಡ ದೇಶ ನಮ್ಮದು, ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸಲು ಕೆಲಸ ಮಾಡಲಾಗುತ್ತಿದೆ,
ಮೇಡ್ ಇನ್ ಇಂಡಿಯಾದಲ್ಲಿ ಲ್ಯಾಪಟಾಟ್, ಮೊಬೈಲ್, ಮತ್ತು ಕಂಪ್ಯೂಟರ್‍ಗಳನ್ನು ರಚಿಸಲಾಗುತ್ತಿದೆ, ಇದು ಸಾಕಷ್ಟು ಉದ್ಯೋಗಾವಕಾಶಗಳನ್ನು ಜನರಿಗೆ ಒದಗಿಸುತ್ತಿದೆ, ಬಾಹ್ಯಾಕಾಶದಿಂದ ಸ್ವಾರ್ಟ್‍ಅಪ್‍ಗಳವರೆಗೆ ಯಾವುದೇ ಆರ್ಥಿಕತೆಗೆ ಎಲ್ಲಾ ಕ್ಷೇತ್ರಗಳು ಬೆಳೆಯಲು ಇದು ಅವಶ್ಯಕವಾಗಿದೆ,
ಚಂದ್ರಯಾನ ಮಿಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಈ ಬಾರಿ ರಾಷ್ಟ್ರವು ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ತುಂಬಿರುವ ಸಮಯದಲ್ಲಿ ರೋಜ್‍ಗಾರ್ ಮೇಳವನ್ನು ಆಯೋಜಿಸಿದೆ, ನಮ್ಮ ಚಂದ್ರಯಾನ್ ಮತ್ತು ಅದರ ರೋವರ್ ಪ್ರಗ್ಯಾನ್ ಚಂದ್ರನಿಂದ ಐತಿಹಾಸಿಕ ಫೋಟೋಗಳನ್ನು ನಿರಂತರವಾಗಿ ಕಳುಹಿಸುತ್ತಿದೆ ಎಂದರು,
2030ರ ವರೆಗೆ ಪ್ರವಾಸೋದ್ಯಮ ಕ್ಷೇತ್ರದಿಂದ 20 ಲಕ್ಷ ಕೋಟಿ ಆದಾಯವನ್ನು ಗಳಿಸಲಾಗುವುದು ಮತ್ತು ಹೆಚ್ಚಿನ ಉದ್ಯೋಗವಕಾಶಗಳು ತೆರೆಯಲ್ಪಡುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ,
ಕರ್ಮ ಯೋಗಿಗಳಿಗಾಗಿ ಸಾಕಷ್ಟು ಸರ್ಟಿಫೀಕೇಟ್ ಕೋರ್ಸ್ ಲಭ್ಯವಿದೆ, ರೋಜಗಾರ್ ಮೇಳದಲ್ಲಿ ಆಯ್ಕೆಯಾದ ಎಲ್ಲರೂ ಇದರಲ್ಲಿ ನೊಂದಾಯಿಸಿಕೊಳ್ಳಿ, ಹೆಚ್ಚು ಕೋರ್ಸ್‍ಗಳನ್ನು ಮಾಡಿ ಸರ್ಟಿಫೀಕೇಟ್ ಪಡೆಯಿರಿ, ಇದರೊಂದಿಗೆ ದೈಹಿಕ ಸಾಮಥ್ಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ, ಯೋಗ ನಿತ್ಯ ಜೋವನದಲ್ಲಿ ಅಳವಡಿಸಿಕೊಳ್ಳಿ ಯೋಗ ಕೇವಲ ವ್ಯಾಯಾಮ ಅಲ್ಲ, ಆರೋಗ್ಯಯುತವಾದ ಮನಸ್ಸಿಗಾಗಿಯೂ ಇದು ಮುಖ್ಯ, ನಿಮ್ಮೆಲ್ಲರ ಪೂರ್ತಿ ಶಕ್ತಿ ಸಾಮಥ್ರ್ಯವನ್ನು ದೇಶಕ್ಕಾಗಿ ಸಮರ್ಪಣೆಗೊಳಿಸಿ ಎಂದರು,
PM Modi
ತೆಲಂಗಾಣದಲ್ಲಿ 56,000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಆದಿಲಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಸುಮಾರು 56,000 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತೆಲಂಗಾಣದ ಅಭಿವೃದ್ಧಿಯ ಕನಸನ್ನು ನನಸಾಗಿಸಲು ಕೇಂದ್ರ ಎಲ್ಲಾ ಬೆಂಬಲವನ್ನು ನೀಡುತ್ತಿದೆ ಎಂದು ಹೇಳಿದರು. ವಿದ್ಯುತ್, ರೈಲು ಮತ್ತು ರಸ್ತೆಗಳಿಗೆ ಸಂಬಂಧಿಸಿದ ಹೊಸ ಅಭಿವೃದ್ಧಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತಿವೆ ಎಂದರು. ಇದೇ ವೇಳೆ ಇಂಡಿಯಾ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದಲ್ಲಿ ಆಳವಾಗಿ ಮುಳುಗಿರುವ ಇಂಡಿಯಾ ಮೈತ್ರಿಕೂಟದ ನಾಯಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ನಾನು ಅವರ ‘ಪರಿವಾರವಾದ’ವನ್ನು ಪ್ರಶ್ನಿಸಿದಾಗ, ಅವರು ಮೋದಿಗೆ ಕುಟುಂಬವಿಲ್ಲ ಎಂದು ಹೇಳಲು ಪ್ರಾರಂಭಿಸಿದ್ದಾರೆ” ಎಂದು ಪ್ರಧಾನಿ ತಿರುಗೇಟು ನೀಡಿದರು. “ನನ್ನ ಜೀವನ ಒಂದು ತೆರೆದ ಪುಸ್ತಕ. ದೇಶದ 140 ಕೋಟಿ ಜನ ನನ್ನ ಕುಟುಂಬ ಇದ್ದಂತೆ. ಇಂದು ದೇಶದ ಕೋಟಿ ಹೆಣ್ಣುಮಕ್ಕಳು, ತಾಯಂದಿರು ಮತ್ತು ಸಹೋದರಿಯರು ಮೋದಿಯವರ ಕುಟುಂಬ. ದೇಶದ ಪ್ರತಿಯೊಬ್ಬ ಬಡವರೂ ನನ್ನ ಕುಟುಂಬ, ಯಾರೂ ಇಲ್ಲದವರು ಸಹ ಮೋದಿ ನನ್ನವರು ಎಂದು ಹೇಳುತ್ತಾರೆ ಮತ್ತು ಮೋದಿ ಅವರಿಗೂ ಸೇರಿದ್ದಾರೆ. ‘ನೇನೆ ಮೋದಿ ಕುಟುಂಬ’ (ನಾನು ಮೋದಿ ಕುಟುಂಬ) ಎಂದು ಹೇಳುತ್ತಾರೆ ಎಂದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಪ್ರಧಾನಿಯವರು ದೊಡ್ಡಣ್ಣನಿದ್ದಂತೆ. ದೊಡ್ಡ ಸಹೋದರನ ಸಹಾಯದಿಂದ ಮಾತ್ರ ರಾಜ್ಯಗಳು ಮತ್ತಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯ” ಎಂದು ಅವರು ಹೇಳಿದರು. ಪ್ರಧಾನಿಯವರ ಬೆಂಬಲದಿಂದ ಮಾತ್ರ ತೆಲಂಗಾಣ ಗುಜರಾತ್‌ನಂತೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮುಖ್ಯಮಂತ್ರಿಗಳು ಹೇಳಿದರು.
PM Modi
ರಾಮಮಂದಿರ ಪ್ರಾಣಪ್ರತಿಷ್ಠೆಗೆ ಶಾಲಾ ಕಾಲೇಜಿಗೆ ರಜೆ, ಮದ್ಯ ಮಾರಾಟ ನಿಷೇಧ; ಸಿಎಂ ಯೋಗಿ ಘೋಷಣೆ!
ರಾಮಮಂದಿರ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಈ ದಿನ ಉತ್ತರ ಪ್ರದೇಶ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇಷ್ಟೇ ಅಲ್ಲ ಈ ದಿನ ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಕುರಿತು ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ಲಖನೌ ರಾಮ ಮಂದಿರ ಲೋಕಾರ್ಪಣೆಗೆ ತಯಾರಿ ನಡೆಯುತ್ತಿದೆ. ಜನವರಿ 22 ರಂದು ರಾಮಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ಐತಿಹಾಸಿಕ ದಿನಕ್ಕಾಗಿ ವಿಶ್ವವೇ ಕಾಯುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆದಿನ ಉತ್ತರ ಪ್ರದೇಶದ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇಷ್ಟೇ ಅಲ್ಲ ಪ್ರಾಣ ಪ್ರತಿಷ್ಠೆ ದಿನ ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಮಹತ್ವದ ಆದೇಶವನ್ನು ಸಿಎಂ ಯೋಗಿ ಆದಿತ್ಯನಾಥ್ ಹೊರಡಿಸಿದ್ದಾರೆ. ಇದೇ ವೇಳೆ ಪ್ರಾಣಪ್ರತಿಷ್ಠೆಯ ಐತಿಹಾಸಿಕ ದಿನ ಶಾಂತಿಯುತವಾಗಿ ಸಂಭ್ರಮಿಸಲು ಮನವಿ ಮಾಡಿದ್ದಾರೆ. 500 ವರ್ಷಗಳ ಹೋರಾಟದ ಬಳಿಕ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಈ ಐತಿಹಾಸಿಕ ದಿನ ನಮ್ಮೆಲ್ಲರಿಗೂ ಅತ್ಯಂತ ಮಹತ್ವ ಹಾಗೂ ಸಂಭ್ರಮದ ದಿನವಾಗಿದೆ. ಈ ದಿನವನ್ನು ಆಚರಿಸಲು ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಿ ಎಂದು ಯೋಗಿ ಆದಿತ್ಯನಾಥ್, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಶ್ರೀರಾಮ ಪ್ರಾಣಪ್ರತಿಷ್ಠೆ ಅತ್ಯಂತ ಪವಿತ್ರವಾಗಿದೆ. ಹೀಗಾಗಿ ಈ ದಿನ ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲು ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರು ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ಸಂಭ್ರಮಿಸಲು ಕೆಲ ಸೂಚನೆ ನೀಡಲಾಗಿದೆ. ಶಾಂತಿಯುತವಾಗಿ ಸಂಭ್ರಮ ಆಚರಿಸಿ, ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮನೆಯಲ್ಲೇ ದೀಪ ಬೆಳಗಿ ರಾಮನ ಭವ್ಯ ಮಂದಿರದ ಲೋಕಾರ್ಪಣೆ ಹಾಗೂ ಪ್ರಾಣಪತಿಷ್ಠೆಯಲ್ಲಿ ಪಾಲ್ಗೊಳ್ಳಿ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಶಾಂತಿಯುತವಾಗಿ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸಂಭ್ರಮದಲ್ಲಿ ಪಾಲ್ಗೊಳ್ಳಲು ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಟೆಯನ್ನು ಪ್ರಧಾನಿ ನರೇಂದ್ರ ಮೋದಿ ನೇರವೇರಿಸಲಿದ್ದಾರೆ. ಜನವರಿ 22ರ 12.30ರ ಶುಭಮುಹೂರ್ತದಲ್ಲಿ ಪ್ರಾಣಪ್ರತಿಷ್ಠೆ ನಡೆಯಲಿದೆ. ಜನವರಿ 16ರಿಂದ ರಾಮನಗರಿಯಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದೆ. ಈಗಾಗಲೇ ಮನೆ ಮನೆಗೆ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಮಾಡಲಾಗುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಆಹ್ವಾನ ನೀಡಲಾಗುತ್ತಿದೆ. ಬರೋಬ್ಬರಿ 7 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಈಗಾಗಲೇ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಪ್ರತಿಯೊಬ್ಬ ಗಣ್ಯರಿಗೂ ಮುಖತಃ ಭೇಟಿ ಮಾಡಿ ಆಹ್ವಾನ ಪತ್ರಿಕೆಗಳನ್ನು ನೀಡಲಾಗುವುದು. ದೇವಾಲಯ ಟ್ರಸ್ಟ್‌ನ ಪ್ರತಿನಿಧಿಗಳು ಹಾಗೂ ಸ್ವಯಂಸೇವಕರು ಗಣ್ಯರನ್ನು ಭೇಟಿ ಮಾಡಿ ಆಹ್ವಾನ ನೀಡಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕಾರಿಗಳು ಹೇಳಿದ್ದಾರೆ.
PM Modi
ವಿಶ್ವ ಹವಾಮಾನ ಶೃಂಗಸಭೆ: ದುಬೈನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ.
ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ದುಬೈನಲ್ಲಿರುವ ಭಾರತೀಯ ವಲಸಿಗರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಜನರು ಮೋದಿ-ಮೋದಿ ಮತ್ತು ಈ ಬಾರಿ ಮೋದಿ ಸರ್ಕಾರ ಎಂಬ ಘೋಷಣೆಗಳನ್ನು ಕೂಗಿದರು. ಜತೆಗೆ 400ಕ್ಕೂ ಅಧಿಕ ಸೀಟುಗಳಿಂದ ಗೆಲ್ಲುವಂತೆ ಶುಭ ಹಾರೈಸಿದರು.ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ದುಬೈನಲ್ಲಿರುವ ಭಾರತೀಯ ವಲಸಿಗರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಜನರು ಮೋದಿ-ಮೋದಿ ಮತ್ತು ಈ ಬಾರಿ ಮೋದಿ ಸರ್ಕಾರ ಎಂಬ ಘೋಷಣೆಗಳನ್ನು ಕೂಗಿದರು. ಜತೆಗೆ 400ಕ್ಕೂ ಅಧಿಕ ಸೀಟುಗಳಿಂದ ಗೆಲ್ಲುವಂತೆ ಶುಭ ಹಾರೈಸಿದರು.ಎಎನ್ಐ ಹಂಚಿಕೊಂಡಿರುವ ವಿಡಿಯೋದಲ್ಲಿ, ಮೋದಿ, ಮೋದಿ, ಅಬ್ಕಿ ಬಾರ್ ಮೋದಿ ಸರ್ಕಾರ್ ಮತ್ತು ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಅನಿವಾಸಿ ಭಾರತೀಯರೊಬ್ಬರು ಪ್ರಧಾನಿ ಮೋದಿಯವರನ್ನು ಭೇಟಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿ, ನಾನು 20 ವರ್ಷಗಳಿಂದ ಯುಎಇಯಲ್ಲಿ ವಾಸಿಸುತ್ತಿದ್ದೇನೆ, ಆದರೆ ಇಂದು ನನ್ನವರೊಬ್ಬರು ಈ ದೇಶಕ್ಕೆ ಬಂದಂತೆ ಭಾಸವಾಗುತ್ತಿದೆ ಎಂದಿದ್ದಾರೆ.ಮೋದಿ ಭಾರತದ ವಜ್ರ, ಪ್ರಧಾನಿ ಮೋದಿಯನ್ನು ಇಲ್ಲಿ ನೋಡಲು ನಮಗೆ ತುಂಬಾ ಸಂತೋಷವಾಗಿದೆ. ಜಗತ್ತಿಗೆ ಪ್ರಧಾನಿ ಮೋದಿಯಂತಹ ನಾಯಕನ ಅಗತ್ಯವಿದೆ ಎಂದರು.ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಲ್ಲದೆ, ಮೋದಿ ಇತರೆ ಮೂರು ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಲಿದ್ದಾರೆ. ದುಬೈನಲ್ಲಿರುವ ಭಾರತೀಯ ಸಮುದಾಯದ ಆತ್ಮೀಯ ಸ್ವಾಗತದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಅವರ ಬೆಂಬಲ ಮತ್ತು ಉತ್ಸಾಹವು ನಮ್ಮ ರೋಮಾಂಚಕ ಸಂಸ್ಕೃತಿ ಮತ್ತು ಬಲವಾದ ಸಂಬಂಧಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ಕ್ರೀಡೆ2 months ago
ಇಂದು ಐಪಿಎಲ್ ಫೈನಲ್- ಆರ್ಸಿಬಿಗೆ ಶುಭಕೋರಿದ ಎಸ್ಟಿಎಸ್!