ಆರೋಗ್ಯ
ಆರೋಗ್ಯ ಸಂಜೀವಿನಿ : ತುಳಸಿ
ಆರೋಗ್ಯ ಸಂಜೀವಿನಿ : ತುಳಸಿ
ಆಯುರ್ವೇದ ಗುಣಗಳಿಂದ ತುಂಬಿರುವ ತುಳಸಿಯು ಭಾರತದ ಬಹುತೇಕ ಮನೆಗಳಲ್ಲಿ ಕಂಡುಬರುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು ಶೀತ ಮತ್ತು ಕೆಮ್ಮಿನಿಂದ ಹಿಡಿದು ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತದೆ.
ತುಳಸಿ ಮಾತ್ರವಲ್ಲ ಅದರ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತುಳಸಿ ಬೀಜಗಳು ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿವೆ. ಇದು ಅನೇಕ ರೋಗಗಳಿಂದ ಪರಿಹಾರವನ್ನು ನೀಡುತ್ತದೆ. ಹಾಗಾದರೆ ತುಳಸಿ ಬೀಜಗಳ ಪ್ರಯೋಜನಗಳನ್ನು ತಿಳಿಯೋಣ.
ತುಳಸಿ ಬೀಜಗಳ ಅದ್ಭುತ ಪ್ರಯೋಜನಗಳು:-
ಮಾನಸಿಕ ಒತ್ತಡ ನಿವಾರಣೆ
ತುಳಸಿ ಬೀಜಗಳ ಆರೋಗ್ಯಕರ ಪ್ರಯೋಜನಗಳು ಕೆಲವು ಜನರಿಗೆ ಮಾತ್ರ ತಿಳಿದಿದೆ. ಆದರಿದು ಅನೇಕ ಆರೋಗ್ಯ ಪ್ರಯೋಜನಗಳುನ್ನು ಹೊಂದಿದೆ. ಇದು ಉದ್ವೇಗವನ್ನು ನಿವಾರಿಸಲು ಸಹಾಯ ಮಾಡುತ್ತವೆ. ಆತಂಕ ಅಥವಾ ಮಾನಸಿಕ ಒತ್ತಡದಿಂದ ದಣಿದ ಅಥವಾ ತೊಂದರೆಗೊಳಗಾದವರಿಗೆ ತುಳಸಿ ಬೀಜಗಳು ತುಂಬಾ ಪ್ರಯೋಜನಕಾರಿ. ಖಿನ್ನತೆ ಅಥವಾ ಒತ್ತಡದಿಂದ ಹೊರಬರಲು ಬಯಸುವವರಿಗೆ ತುಳಸಿ ಬೀಜಗಳು ಉತ್ತಮ ಆಯ್ಕೆಯಾಗಿದೆ.
ತೂಕವನ್ನು ಕಡಿಮೆ ಮಾಡಲು ಸಹಾಯ
ಕೆಲವು ಜನರು ಸಾಮಾನ್ಯವಾಗಿ ಕೆಟ್ಟ ಆಹಾರ ಪದ್ಧತಿಗಳಿಂದ ತೂಕವನ್ನು ಹೆಚ್ಚಿಸಿಕೊಂಡಿರುತ್ತಾರೆ. ಇದರಿಂದಾಗಿ ಅವರಲ್ಲಿ ತುಂಬಾ ಅಸಮಾಧಾನವಿರುತ್ತದೆ. ತುಳಸಿ ಬೀಜಗಳು ಇದಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತವೆ. ಇದರಲ್ಲಿರುವ ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳು ತೂಕವನ್ನು ನಿಯಂತ್ರಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿದಂತೆ ಮಾಡುತ್ತವೆ.
ಜೀರ್ಣಕ್ರಿಯೆ ಸುಧಾರಣೆ
ಬೇಸಿಗೆ ಕಾಲದಲ್ಲಿ ಕೆಲವರಿಗೆ ಮಲಬದ್ಧತೆ, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆ ಇರುತ್ತದೆ. ನೀವು ಅದನ್ನು ತೊಡೆದುಹಾಕಲು ಬಯಸಿದರೆ, ತುಳಸಿ ಬೀಜಗಳನ್ನು ಸೇವಿಸಬಹುದು. ಇದು ತುಂಬಾ ಪ್ರಯೋಜನಕಾರಿಯಾಗಿದೆ. ತುಳಸಿ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ
ಸರಿಯಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ. ಇದು ಅನೇಕ ರೋಗಗಳು ಮತ್ತು ಸೋಂಕುಗಳ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ತುಳಸಿ ಬೀಜಗಳ ಕಷಾಯವು ತುಂಬಾ ಪ್ರಯೋಜನಕಾರಿಯಾಗಿದೆ.
ಸಕ್ಕರೆ ಮಟ್ಟ ನಿಯಂತ್ರಣ
ವಿವಿಧ ಅಧ್ಯಯನಗಳ ಪ್ರಕಾರ, ತುಳಸಿ ಬೀಜಗಳಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಂದು ಟೀಸ್ಪೂನ್ ತುಳಸಿ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ನೆನೆಸಿದ ಬೀಜಗಳನ್ನು ಬೆಳಿಗ್ಗೆ ಒಂದು ಲೋಟ ಹಾಲಿಗೆ ಸೇರಿಸಿ ಕುಡಿದರಿ. ಇದನ್ನು ಪ್ರತಿದಿನ ಕುಡಿಯುವುದರಿಂದ ನಿಮ್ಮ ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುತ್ತದೆ.
.ಬಾಯಿಯ ಆರೋಗ್ಯ
ತುಳಸಿ ಬೀಜಗಳು ಉರಿಯೂತದ ಗುಣಗಳನ್ನು ಹೊಂದಿದ್ದು, ಬಾಯಿ ಹುಣ್ಣಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ. ಇವು ಆಂಟಿಮೈಕ್ರೊಬಿಯಲ್, ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳನ್ನು ಹೊಂದಿದ್ದು, ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ
ತುಳಸಿ ಬೀಜಗಳು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆಯುರ್ವೇದದಲ್ಲಿ ಅಧಿಕ ರಕ್ತದೊತ್ತಡಕ್ಕೆ ಪರಿಹಾರವಾಗಿ ತುಳಸಿ ಬೀಜಗಳನ್ನು ಬಳಸಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಎರಡೂ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆದರೆ ತುಳಿಸಿ ಬೀಜಗಳು ಹೆಚ್ಚಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಒಟ್ಟಿನಲ್ಲಿ ಹೃದಯದ ಆರೋಗ್ಯ ಕಾಪಾಡುವಲ್ಲಿ ತುಳಸಿ ಬೀಜಗಳು ಪ್ರಮುಖ ಪಾತ್ರವಹಿಸತ್ತವೆ.
. ಜ್ವರವನ್ನು ತಗ್ಗಿಸಲು ಬಳಕೆ
ನೆಗಡಿ, ಅಸ್ತಮಾ ಮತ್ತು ಕೆಮ್ಮಿದ್ದಾಗ ತುಳಸಿ ಬೀಜಗಳನ್ನು ಮನೆಮದ್ದಾಗಿ ನೀಡುವುದು ಹಿಂದಿನಿಂದಲೂ ರೂಢಿಯಲ್ಲಿದೆ. ಅವು ಆಂಟಿಸ್ಪಾಸ್ಮೋಡಿಕ್ ಗುಣಗಳನ್ನು ಹೊಂದಿದ್ದು, ನೆಗಡಿ ಮತ್ತು ಕೆಮ್ಮನ್ನು ಸುಧಾರಣೆಗೆ ತರಲು ಸಹಾಯ ಮಾಡುತ್ತದೆ. ಜ್ವರವನ್ನು ತಗ್ಗಿಸಲು ನೀವು ತುಳಸಿ ಬೀಜಗಳನ್ನು ಬಳಸಬಹುದು.
ಆರೋಗ್ಯ
ಮೂತ್ರಪಿಂಡದ ಕಲ್ಲು: ಮೂತ್ರಕೋಶದಲ್ಲಿ ಸಿಲುಕಿದರೆ ಏನಾಗುತ್ತದೆ?
ಬೆಂಗಳೂರು: ಮೂತ್ರಪಿಂಡದ ಕಲ್ಲು (Kidney Stone) ಮೂತ್ರಕೋಶಕ್ಕೆ ತಲುಪಿದ ಬಳಿಕ ಸುಲಭವಾಗಿ ಹೊರಹೋಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಕೆಲವೊಮ್ಮೆ ಈ ಕಲ್ಲುಗಳು ಮೂತ್ರಕೋಶದಲ್ಲೇ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ 4–5 ಮಿಮೀ ಗಾತ್ರದ ಕಲ್ಲುಗಳು ಸಹಜವಾಗಿ ಮೂತ್ರದ ಮೂಲಕ ಹೊರಹೋಗುತ್ತವೆ. ಆದರೆ 7 ಮಿಮೀಗಿಂತ ದೊಡ್ಡದಾದ ಅಥವಾ ಅಸಮ ಆಕಾರ ಹೊಂದಿರುವ ಕಲ್ಲುಗಳು ಮೂತ್ರನಾಳದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ಕೆಳ ಹೊಟ್ಟೆ ನೋವು, ಮೂತ್ರ ವಿಸರ್ಜನೆ ವೇಳೆ ಉರಿ, ಮೂತ್ರದಲ್ಲಿ ರಕ್ತ ಹಾಗೂ ದುರ್ವಾಸನೆ ಕಾಣಿಸಬಹುದು.
ಮೂತ್ರಕೋಶ ಸರಿಯಾಗಿ ಖಾಲಿಯಾಗದಿರುವುದು ಕೂಡ ಪ್ರಮುಖ ಕಾರಣ. ಮೂತ್ರದ ಹರಿವು ಕಡಿಮೆಯಾಗುವ ಸ್ಥಿತಿ ಅಥವಾ ವೃದ್ಧರಾದ ಪುರುಷರಲ್ಲಿ ಕಾಣಿಸುವ ಪ್ರಾಸ್ಟೇಟ್ ವಿಸ್ತರಣೆ (BPH) ಸಮಸ್ಯೆಯಿಂದ ಕಲ್ಲುಗಳು ಸಿಲುಕಿಕೊಳ್ಳಬಹುದು. ಜೊತೆಗೆ ಮಧುಮೇಹ ಅಥವಾ ನರ ಸಮಸ್ಯೆಗಳೂ ಪರಿಣಾಮ ಬೀರುತ್ತವೆ.
ಕಲ್ಲುಗಳು ಹೆಚ್ಚು ಕಾಲ ಸಿಲುಕಿಕೊಂಡಿದ್ದರೆ ಸೋಂಕು (UTI), ಮೂತ್ರ ಧಾರಣ ತೊಂದರೆ ಹಾಗೂ ಮೂತ್ರಕೋಶದ ಉರಿಯೂತದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಜ್ವರ, ತೀವ್ರ ನೋವು, ಮೂತ್ರವಿಸರ್ಜನೆ ಅಸಾಧ್ಯತೆ ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ.
ತಜ್ಞರ ಪ್ರಕಾರ, ಸಾಕಷ್ಟು ನೀರು ಕುಡಿಯುವುದು, ಮೂತ್ರಕೋಶವನ್ನು ಸಂಪೂರ್ಣ ಖಾಲಿ ಮಾಡುವುದು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು. “ಡಬಲ್ ವಾಯ್ಡ್” ಎಂಬ ವಿಧಾನವು ಮೂತ್ರಕೋಶ ಸಂಪೂರ್ಣ ಖಾಲಿಯಾಗಲು ಸಹಕಾರಿಯಾಗುತ್ತದೆ.
ಒಟ್ಟಿನಲ್ಲಿ, ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ನಿರ್ಲಕ್ಷಿಸದೇ ಆರಂಭಿಕ ಲಕ್ಷಣಗಳಲ್ಲೇ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ.
Note: This information is provided by Dr. Venkatswamy and the Hosasuddi.in health team. Before publishing, Hosasuddi.in follows medical guidelines and expert advice.
ಆರೋಗ್ಯ
ಮಧುಮೇಹ-ಬೊಜ್ಜಿಗೆ GLP-1 ಔಷಧ: ಪ್ರಯೋಜನದ ಜೊತೆ ಅಪಾಯವೂ!
ನವದೆಹಲಿ: ಟೈಪ್ 2 ಮಧುಮೇಹ ಮತ್ತು ಸ್ಥೂಲಕಾಯತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ GLP-1 ಔಷಧಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಎಚ್ಚರಿಕೆ ನೀಡಿದೆ. ಈ ಔಷಧಗಳು ಪರಿಣಾಮಕಾರಿ ಆಗಿದ್ದರೂ, ಅವುಗಳನ್ನು ವೈದ್ಯರ ಸಲಹೆಯಿಲ್ಲದೆ ಬಳಸುವುದು ಅಪಾಯಕಾರಿ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಆರೋಗ್ಯ ಇಲಾಖೆ ಹೇಳುವಂತೆ, GLP-1 ಔಷಧಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ತೂಕ ಇಳಿಕೆಗೆ ಸಹಕಾರಿ. ಆದರೆ ವಾಕರಿಕೆ, ವಾಂತಿ ಮುಂತಾದ ಸಾಮಾನ್ಯ ಅಡ್ಡಪರಿಣಾಮಗಳಿಂದ ಹಿಡಿದು ಮೂತ್ರಪಿಂಡ ಹಾನಿ, ಮೇದೋಜ್ಜೀರಕ ಗ್ರಂಥಿಯ ಉರಿಯೂತ, ಕರುಳಿನ ಅಡಚಣೆಗಳಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು.
Type 2 Diabetes ಮತ್ತು Obesity ಹೊಂದಿರುವವರು ಈ ಔಷಧಗಳನ್ನು ಕಡ್ಡಾಯವಾಗಿ ನೋಂದಾಯಿತ ವೈದ್ಯರ ಮೇಲ್ವಿಚಾರಣೆಯಲ್ಲೇ ಬಳಸಬೇಕು ಎಂದು ಸೂಚಿಸಲಾಗಿದೆ. ಅನಧಿಕೃತ ಮಾರಾಟ ಮತ್ತು ಮೇಲ್ವಿಚಾರಣೆಯಿಲ್ಲದ ಬಳಕೆಯನ್ನು ತಡೆಯಲು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿಸಲಾಗಿದೆ.
ಸಚಿವಾಲಯದ ಪ್ರಕಾರ, ಹೆಚ್ಚಿನ ತೂಕ, ವ್ಯಾಯಾಮದ ಕೊರತೆ ಮತ್ತು ಹೆಚ್ಚು ಸಕ್ಕರೆ ಸೇವನೆ ಟೈಪ್ 2 ಮಧುಮೇಹದ ಪ್ರಮುಖ ಕಾರಣಗಳಾಗಿವೆ. ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಈ ರೋಗವನ್ನು ತಡೆಗಟ್ಟಬಹುದು.
ಆರೋಗ್ಯ
ಜಂಕ್ ಫುಡ್ ಬೇಡ! ಹಣ್ಣುಗಳಿಂದ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಿ
ಬೆಂಗಳೂರು: ಇಂದಿನ ಜೀವನಶೈಲಿಯಲ್ಲಿ ತೂಕ ಇಳಿಸುವುದು ಎಷ್ಟು ಕಷ್ಟವೋ, ಅತಿಯಾಗಿ ಸಪೂರ ಮೈಕಟ್ಟು ಹೊಂದಿರುವವರಿಗೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ಸವಾಲಾಗಿದೆ. ತೂಕ ಹೆಚ್ಚಿಸುವುದು ಎಂದರೆ ಕೇವಲ ಕೊಬ್ಬು ಹೆಚ್ಚಿಸುವುದಲ್ಲ; ಬದಲಾಗಿ ದೇಹದಲ್ಲಿ ಸದೃಢ ಸ್ನಾಯುಗಳ (ಮಸಲ್ಸ್) ವೃದ್ಧಿ ಮುಖ್ಯ.
ಜಂಕ್ ಫುಡ್‌ಗಳಿಗೆ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉತ್ತಮ ವಿಧಾನವಾಗಿದೆ. ಕೆಲವು ಹಣ್ಣುಗಳು ದೇಹಕ್ಕೆ ಅಗತ್ಯ ಕ್ಯಾಲರಿ, ಪೋಷಕಾಂಶಗಳನ್ನು ನೀಡುವುದರ ಮೂಲಕ ತೂಕ ಹೆಚ್ಚಿಸಲು ಸಹಾಯ ಮಾಡುತ್ತವೆ.
ಬಾಳೆಹಣ್ಣು (Banana): ಕಾರ್ಬೋಹೈಡ್ರೇಟ್ ಮತ್ತು ಕ್ಯಾಲರಿಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ತೂಕ ಹೆಚ್ಚಿಸಲು ಪರಿಣಾಮಕಾರಿ. ದಿನಕ್ಕೆ 2–3 ಬಾಳೆಹಣ್ಣು ತಿನ್ನುವುದು ಅಥವಾ ಹಾಲಿನೊಂದಿಗೆ ಬನಾನಾ ಶೇಕ್ ಸೇವಿಸುವುದು ವೇಗವಾಗಿ ಫಲ ನೀಡುತ್ತದೆ.
ಅವಕಾಡೋ (Avocado): ಆರೋಗ್ಯಕರ ಕೊಬ್ಬಿನ ಮೂಲವಾಗಿರುವ ಈ ಹಣ್ಣು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ತೂಕವನ್ನು ಸಮತೋಲನದಿಂದ ಹೆಚ್ಚಿಸುತ್ತದೆ.
ಮಾವಿನ ಹಣ್ಣು (Mango): ನೈಸರ್ಗಿಕ ಸಕ್ಕರೆ ಮತ್ತು ಹೆಚ್ಚಿನ ಕ್ಯಾಲರಿಗಳಿಂದ ಕೂಡಿದ ಮಾವಿನ ಹಣ್ಣು ತೂಕ ಹೆಚ್ಚಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.
ಒಣಹಣ್ಣುಗಳು (Dry Fruits): ಅಂಜೂರ, ಖರ್ಜೂರ, ಒಣ ದ್ರಾಕ್ಷಿ ಮುಂತಾದವು ತೂಕ ಹೆಚ್ಚಿಸಲು ಅತ್ಯುತ್ತಮ. ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸಿದರೆ ಹೆಚ್ಚು ಲಾಭಕರ.
ಇದಲ್ಲದೆ ಸಪೋಟ, ಹಲಸಿನ ಹಣ್ಣುಗಳೂ ಸಹ ಸಹಾಯಕ. ಆದರೆ ಕೇವಲ ಆಹಾರ ಸೇವನೆ ಸಾಕಾಗುವುದಿಲ್ಲ; ಲಘು ವ್ಯಾಯಾಮ ಮತ್ತು ಯೋಗಾಭ್ಯಾಸದಿಂದ ಆಹಾರ ಸ್ನಾಯುವಾಗಿ ಪರಿವರ್ತನೆಗೊಳ್ಳಲು ಸಹಾಯವಾಗುತ್ತದೆ.
ನಿಯಮಿತ ಆಹಾರ ಮತ್ತು ತಾಳ್ಮೆಯೊಂದಿಗೆ ಈ ಕ್ರಮ ಪಾಲಿಸಿದರೆ ಆರೋಗ್ಯಕರ ತೂಕ ಹೆಚ್ಚಿಸಿಕೊಳ್ಳುವುದು ಸಾಧ್ಯ. ಈ ಮಾಹಿತಿಯನ್ನು ಆರೋಗ್ಯ ತಜ್ಞರು ಹಂಚಿಕೊಂಡಿದ್ದು, ಅದರ ಆಧಾರದ ಮೇಲೆ ಹೊಸ ಸುದ್ದಿ (Hosasuddi) ತಂಡವು ಈ ಲೇಖನವನ್ನು ಪ್ರಕಟಿಸಿದೆ.
