ಚುನಾವಣೆ
ಅಮೆರಿಕ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಕಮಲಾ ಹ್ಯಾರಿಸ್ – ತಮಿಳುನಾಡಿನ ಈ ಹಳ್ಳಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ!

ತಿರುವರೂರು: ತಮಿಳುನಾಡಿನ ತಿರುವರೂರು ಜೆಲ್ಲೆಯ ತುಳಸೇಂದ್ರಪುರಂನಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪೋಸ್ಟರ್ ರಾರಾಜಿಸಲುತ್ತಿವೆ,
ಅಮೆರಿಕದ ಅಧ್ಯಕ್ರೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನುಮೋದಿಸಿದ ನಂತರ ಈ ಊರನಲ್ಲಿ ಹ್ಯಾರಿಸ್ ಪೋಸ್ಟರ್ ಬೃಹತ್ ಬ್ಯಾನರ್ ರಾರಾಜಿಸುತ್ತಿವೆ,
2020 ರಲ್ಲಿ ಕಮಲಾ ಹ್ಯಾರಿಸ್ ಮೊದಲ ಭಾರತೀಯ-ಅಮೆರಿಕ್ನ ಮತ್ತು ಮೊದಲ ಆಫ್ರಿಕನ್-ಅಮೆರಿಕನ್ ಮಹಿಳಾ ಉಪಾಧ್ಯಕ್ಷರಾದರು, ಇವರು ತಮಿಳುನಾಡಿನ ಸಾಧಕರ ಕುಟುಂಬದಿಂದ ಬಂದ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರ ಮಗಳು, ತಂದೆ ಗೋಪಾಲನ್ ಹ್ಯಾರಿಸ್ ಕ್ಯಾನ್ಸರ್ ಸಂಶೋಧಕ ಮತ್ತು ಕ್ಯಾಲಿಫೋರ್ನಿಯಾದ ನಾಗರಿಕ ಹಕ್ಕುಗಳ ಕಾರ್ಯಕರ್ತ, ಹ್ಯಾರಿಸ್ ಅವರ ತಾಯಿಯ ಚಿಕ್ಕಪ್ಪ ಗೋಪಾಲನ್ ಬಾಲಚಂದ್ರನ್ ಅವರು ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ ನಲ್ಲಿ ಮಾಜಿ ಸಲಹೆಗಾರ, ಅಜ್ಜ ಪಿ.ವಿ.ಗೋಪಾಲನ್ ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಿರಾಶ್ರಿತರ ಪುನರ್ವಸಿತಿಯಲ್ಲಿ ಕೆಲಸ ಮಾಡಿದ್ದರು, ನಂತರ ಜಾಂಬಿಯಾ ಅಧ್ಯಕ್ಷರ ಸಲಹೆಗಾರರಾದರು ಮತ್ತು ಲುಸಾಕಾದಲ್ಲಿ ವಾಸವಿದ್ದರು, ಅವರ ಪತ್ನಿ ರಾಜಮ್ ಸಾಮಾಜಿಕ ಕಾರ್ಯಕ್ಕಾಗಿ ಹೆಸರಾಗಿದ್ದರು, ಕಮಲಾ ಹ್ಯಾರಿಸ್ ಚೆನ್ನೈಗೆ ಭೇಟಿ ನೀಡುವ ಮೂಲಕ ಭಾರತದಲ್ಲಿನ ತನ್ನ ಬೇರುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ, ಅಲ್ಲಿನ ಶಾಸ್ತಾ ದೇಣಿಗೆಯನ್ನೂ ನೀಡಿದ್ದಾರೆ,