chandrayaan 3
ಚಂದಿರನ ಮೇಲೆ ಸಲ್ಫರ್ ಪತ್ತೆ ಹಚ್ಚಿದ ಪ್ರಗ್ಯಾನ್ ರೋವರ್

- /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 27
https://hosasuddi.in/wp-content/uploads/2023/08/chandrayaan-3-1.jpg&description=ಚಂದಿರನ ಮೇಲೆ ಸಲ್ಫರ್ ಪತ್ತೆ ಹಚ್ಚಿದ ಪ್ರಗ್ಯಾನ್ ರೋವರ್', 'pinterestShare', 'width=750,height=350'); return false;" title="Pin This Post">
- Share
- Tweet /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 72
https://hosasuddi.in/wp-content/uploads/2023/08/chandrayaan-3-1.jpg&description=ಚಂದಿರನ ಮೇಲೆ ಸಲ್ಫರ್ ಪತ್ತೆ ಹಚ್ಚಿದ ಪ್ರಗ್ಯಾನ್ ರೋವರ್', 'pinterestShare', 'width=750,height=350'); return false;" title="Pin This Post">
ಬೆಂಗಳೂರು: ಚಂದ್ರನ ದಕ್ಷಿಣ ಧ್ರವದ ಮೇಲೆ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್ ರೋವರ್ ಒಂದೊಂದು ಹೊಸ ಮಾಹಿತಿಯನ್ನು ರವಾನಿಸುತ್ತಿದೆ, ಇಸ್ರೋ ಚಂದ್ರನ ಮೇಲೆ ಸಲ್ಫರ್ ಇರುವುದನ್ನು ಪತ್ತೆ ಹೆಚ್ಚಿರುವುದಾಗಿ ತಿಳಿಸಿದೆ, ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಸಲ್ಫರ್ ಇರುವುದನ್ನು ಖಚಿತಪಡಿಸಿದೆ, ಜೊತೆಗೆ ವಿಜ್ಞಾನಿಗಳ ನಿರೀಕ್ಷೆಯಂತೆ ಅಲ್ಯೂಮಿನಿಯಂ, ಐರನ್, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಹಾಗೂ ಆಕ್ಸಿಜನ ಕೂಡ ಇರುವುದನ್ನು ರೋವರ್ ಖಚಿತಪಡಿಸಿದೆ, ಹೈಡ್ರೋಜನ್ ಇರುವಿಕೆ ಬಗ್ಗೆ ಹುಡುಕಾಟ ನಡೆಸುತ್ತಿದೆ ಎಂದು ಇಸ್ರೋ ತಿಳಿಸಿದೆ,
chandrayaan 3
ನಾಳೆ ನಿದ್ರೆಯಿಂದ ಏಳಲಿದ್ದಾನೆ ರೋವರ್!

ಚಂದ್ರನಲ್ಲಿ ಶುಕ್ರವಾರ ಮತ್ತೆ ಸೂರ್ಯೋದಯವಾಗಲಿದೆ. ನಿದ್ರೆಯಲ್ಲಿರುವ ಚಂದ್ರಯಾನ -3 ಲ್ಯಾಂಡರ್ ಮತ್ತು ರೋವರ್ ಎದ್ದೇಳುತ್ತಾ ಎನ್ನುವುದರ ಚರ್ಚೆಯು ವೇಗವನ್ನು ಪಡೆಯುತ್ತಿದೆ. ಪ್ರಸ್ತುತ ಸ್ಲೀಪ್ ಮೋಡ್ನಲ್ಲಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ನಾಳೆ ಸೆಪ್ಟೆಂಬರ್ 22 ರಂದು ನಿದ್ದೆಯಿಂದ ಹೊರಬರುವ ಸಾಧ್ಯತೆಯಿದೆ.ಇಸ್ರೋ ಚಂದ್ರನ ಮೇಲೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನ ದಕ್ಷಿಣ ದ್ರುವದಲ್ಲಿ ಯಶಸ್ವಿಯಾಗಿ ಇಳಿಸಿ ಇತಿಹಾಸ ಬರೆದಿದೆ. ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದಿದ್ದ ಚಂದ್ರಯಾನ-3, 14 ದಿನಗಳ ಬಿಸಿಲಿನ ವಿವಿಧ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು. ಅದರ ದತ್ತಾಂಶಗಳನ್ನು ಇಸ್ರೋಗೆ ರವಾನೆ ಮಾಡಿ ನಿದ್ರೆಗೆ ಜಾರಿತ್ತು. ಇದೀಗ ಸೂರ್ಯೋದಯದ ನಂತರ ಮತ್ತೆ ಲ್ಯಾಂಡರ್ ಮತ್ತು ರೋವರ್ ಕಾರ್ಯನಿರ್ವಹಿಸಲಿದೆಯೇ ಎಂಬುದು ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.ಚಂದ್ರಯಾನ-3 ಅನ್ನು 14 ದಿನಗಳವರೆಗೆ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.
ಇದರ ಜೀವಿತಾವಧಿ ಕೇವಲ 14 ದಿನಗಳು ಮಾತ್ರ. ರಾತ್ರಿಯಲ್ಲಿ ಚಂದ್ರನ ತಾಪಮಾನವು ಮೈನಸ್ 250 ಡಿಗ್ರಿಗಳಿಗೆ ಇಳಿಯುತ್ತದೆ.ಅಂತಹ ತಾಪಮಾನದಲ್ಲಿ ಕೆಲವು ಎಲೆಕ್ಟ್ರಾನಿಕ್ ಡಿವೈಸ್ಗಳು ಕೆಲಸ ಮಾಡುವುದು ತುಂಬಾ ಕಷ್ಟ. ಆದ್ದರಿಂದ ನಾವು 14 ದಿನಗಳ ನಂತರ ಚಂದ್ರಯಾನ -3 ಕೆಲಸ ಮಾಡುವುದಿಲ್ಲ ಎಂದು ಭಾವಿಸುತ್ತೇವೆ.ಕೆಲವು ವಿಜ್ಞಾನಿಗಳು ಅದು ಮತ್ತೆ ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ. ನಿಜವಾಗಿಯೂ ಕೆಲಸ ಮಾಡಿದರೆ, ಅದು ಆಶೀರ್ವಾದ ಎನ್ನಬಹುದು ಎಂದು ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಚಂದ್ರಯಾನ-3 ರ 14 ದಿನಗಳ ಕಾರ್ಯಾಚರಣೆಯಲ್ಲಿ, ಪರೀಕ್ಷೆಗಳಿಗೆ ಸಂಬಂಧಿಸಿದ ಸಂಪೂರ್ಣ ಡೇಟಾವನ್ನು ಕಳುಹಿಸಿದೆ. ಒಂದು ವೇಳೆ ಇದರ ಉಪಕರಣಗಳು ಮತ್ತೆ ಕೆಲಸ ಮಾಡಿದರೆ ಇಲ್ಲಿಯವರೆಗೆ ಮಾಡಿದ ಪ್ರಯೋಗಗಳನ್ನು ಪುನರಾವರ್ತಿಸುತ್ತವೆ ಎನ್ನಲಾಗುತ್ತಿದೆ.
” ಚಂದ್ರಯಾನ 3ರಲ್ಲಿರುವ ಪರಿಕರಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿವೆ. ಆದರೆ ಅದು ಮತ್ತೆ ಕಾರ್ಯನಿರ್ವಹಿಸುವ ಸಾಧ್ಯತೆಯಿಲ್ಲ ಎಂದು ಖಗೋಳಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಸಾಧನಗಳು ಕಾರ್ಯನಿರ್ವಹಿಸುತ್ತವೆ ಎಂಬ ಭರವಸೆ ಇನ್ನೂ ಇದೆ ಎಂದು ಹೇಳಿದ್ದಾರೆ.’ನಮಗೆ ಒಳ್ಳೆಯ ಸುದ್ದಿ ಬರುವ ಸಾಧ್ಯತೆಯೂ ಇದೆ. ರೋವರ್ ಮತ್ತು ಲ್ಯಾಂಡರ್ ಪ್ರದೇಶದ ಮೇಲೆ ಸೂರ್ಯ ಈಗಾಗಲೇ ಉದಯಿಸಿದೆ. ಸೌರ ಫಲಕಗಳು ಸೂರ್ಯೋದಯವನ್ನು ಎದುರಿಸುವಂತೆ ರೋವರ್ ಅನ್ನು ಇರಿಸಲಾಗಿದೆ. ಈಗಾಗಲೇ, ಲ್ಯಾಂಡರ್ ಮತ್ತು ರೋವರ್ ತಮ್ಮ ಜವಾಬ್ದಾರಿಯನ್ನು ಪೂರೈಸಿವೆ. ಎಲ್ಲಾ ಸಾಧನಗಳು ಸರಿಯಾಗಿ ಕಾರ್ಯನಿರ್ವಹಿಸಿವೆ. ಇಸ್ರೋ ಈಗಾಗಲೇ ಅಪಾರ ಪ್ರಮಾಣದ ದತ್ತಾಂಶವನ್ನು ಪಡೆದುಕೊಂಡಿದೆ’.
chandrayaan 3
ಆ.23ರಂದು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವಾಗಿ ಘೋಷಣೆ, ಪ್ರತಿವರ್ಷ ಆಚರಣೆ

ನವದೆಹಲಿ : ಆಗಸ್ಟ್ 23ನ್ನ ‘ರಾಷ್ಟ್ರೀಯ ಬಾಹ್ಯಾಕಾಶ ದಿನ‘ ಎಂದು ಕೇಂದ್ರ ಸಚಿವ ಸಂಪುಟ ಮಂಗಳವಾರ ಘೋಷಿಸಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಇಳಿದಿದೆ.
ಚಂದ್ರಯಾನ -3 ಮಿಷನ್ ಗಾಗಿ ಕೆಲಸ ಮಾಡಿದ ಇಸ್ರೋ ವಿಜ್ಞಾನಿಗಳ ಐತಿಹಾಸಿಕ ಯಶಸ್ಸನ್ನ ಕ್ಯಾಬಿನೆಟ್ ಶ್ಲಾಘಿಸಿತು.
ಇದು ಜಾಗತಿಕ ವೇದಿಕೆಯಲ್ಲಿ ನಮ್ಮ ಶಕ್ತಿಯ ಸಂಕೇತವಾಗಿದೆ. ಆಗಸ್ಟ್ 23ನ್ನ ‘ರಾಷ್ಟ್ರೀಯ ವಿಜ್ಞಾನ ದಿನ’ ಎಂದು ಆಚರಿಸುವ ಕ್ರಮವನ್ನ ಕ್ಯಾಬಿನೆಟ್ ಸ್ವಾಗತಿಸುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕ್ಯಾಬಿನೆಟ್ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆಗಸ್ಟ್ 26 ರಂದು ಬೆಂಗಳೂರಿನ ಇಸ್ರೋ ಕಮಾಂಡ್ ಸೆಂಟರ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ದರು. “ಇಂದಿನ ಯುಗದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ದೇಶವು ಇತಿಹಾಸವನ್ನ ಪಟ್ಟಿ ಮಾಡುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ನಮ್ಮ ಯುವ ಪೀಳಿಗೆಯನ್ನ ಪ್ರೋತ್ಸಾಹಿಸಲು, ನಮ್ಮ ಚಂದ್ರಯಾನ -3 ಲ್ಯಾಂಡರ್ ಚಂದ್ರನನ್ನ ಸ್ಪರ್ಶಿಸಿದ ದಿನವಾದ ಆಗಸ್ಟ್ 23ನ್ನ ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲು ನಾವು ನಿರ್ಧರಿಸಿದ್ದೇವೆ” ಎಂದು ಪ್ರಧಾನಿ ಹೇಳಿದರು.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ