Connect with us

ದೇಶ

24 ಗಂಟೆಯಲ್ಲಿ ಮೃತ್ಯು ಮಳೆ.. ವಯನಾಡ್​ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಸುರಿದ ಮಳೆ ಎಷ್ಟು ಗೊತ್ತಾ?

Published

on

ಕೇರಳದ ವಯನಾಡ್‌ನಲ್ಲಿ ಭಯಾನಕ ಭೂಕುಸಿತ ಉಂಟಾಗಿದೆ. ಈಗಾಗಲೇ ಸಾವಿನ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಸಂತ್ರಸ್ತರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ವಯನಾಡಿನಲ್ಲಿ ಈ ರೀತಿಯ ಭೀಕರ ಭೂಕುಸಿತಕ್ಕೆ ಕಾರಣ ಅಲ್ಲಿ ಸುರಿದ ಭಯಾನಕ ಮಳೆಯೆಂದೇ ಹೇಳಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಭೀಕರ ಮಳೆ ಸುರಿದ ಪರಿಣಾಮ ಬೊಜ್ಜು ಭೂಮಿ ಕತ್ತರಿಸಿಕೊಂಡು ಬಿದ್ದಿದೆ. ಹಾಗಿದ್ರೆ ಎಲ್ಲಿ ಎಷ್ಟು ಮಳೆಯಾಗಿದೆ ಎಂಬ ವಿವರ ನೋಡ್ತಾ ಹೋದ್ರೆ ಎಂಥವರೂ ಕೂಡ ಬೆಚ್ಚಿ ಬೀಳುವುದಂತೂ ಖಚಿತ.

ಕೇರಳದ ವಯನಾಡು ಜಿಲ್ಲೆಯಲ್ಲಿ ನಿರಂತರ 24 ಗಂಟೆ ಸುರಿದ ಮಳೆ ಇಂದು ಮುಂಜಾನೆ ವೇಳೆಗೆ ಅಲ್ಪ ವಿರಾಮ ಘೋಷಿಸಿದೆ. ವಯನಾಡು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 30 ರಿಂದ 40 ಸೆಂಟಿ ಮೀಟರ್‌ನಷ್ಟು ಭಾರೀ ಮಳೆಯಾಗಿದೆ.

ಪಡಿಜರತರ ಪ್ರದೇಶದಲ್ಲಿ ಸುರಿದ ಮಳೆ 333 ಮಿಲಿ ಮೀಟರ್​ನಷ್ಟು ವೈತ್ರಿ ಪ್ರದೇಶದಲ್ಲಿ 280 ಮಿಲಿ ಮೀಟರ್​ನಷ್ಟು ಕಳೆದ 24 ಗಂಟೆಗಳಲ್ಲಿ ಸುರಿದ್ರೆ ತರೋಡಿ ಪ್ರದೇಶದಲ್ಲಿ ಸುರಿದಿದ್ದು 234 ಮಿಲಿಮೀಟರ್​ನಷ್ಟು ಮಳೆ ಕಲಪೆಟ್ಟಾ ಪ್ರದೇಶದಲ್ಲಿ 200 ಮಿಲಿ ಮೀಟರ್​ನಷ್ಟು ರೌದ್ರ ಮಳೆ ನಿರಂತರವಾಗಿ ಬಿದ್ದಿದೆ.

ನಿರಂತರ ಸುರಿದ ಮೃತ್ಯು ಮಳೆಯಿಂದಾಗಿ ಈ ರೀತಿಯಾದ ಭೀಕರ ಭೂಕುಸಿತ ಉಂಟಾಗಿದೆ. ಕೇರಳದ ವಯನಾಡ್​ನಲ್ಲಿ ಇನ್ನೂ ಕೂಡ ಯಾವುದೂ ನಿಯಂತ್ರಣಕ್ಕೆ ಬಂದಿಲ್ಲ. 250ಕ್ಕೂ ಹೆಚ್ಚು ಜನ ಇನ್ನೂ ಸಂಕಷ್ಟದಲ್ಲಿಯೇ ಸಿಲುಕಿದ್ದಾರೆ. ಜನರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈಗಾಗಲೇ 2 ಹೆಲಿಕಾಪ್ಟರ್​ಗಳನ್ನು ನಿಯೋಜನೆ ಮಾಡಲಾಗಿದೆ. ಸೇನೆಯಿಂದ 200 ಮಂದಿ ಸೈನಿಕರು ಹಾಗೂ ವೈದ್ಯರ ತಂಡವನ್ನು ನಿಯೋಜನೆ ಮಾಡಲಾಗಿದೆ. ಎನ್​ಡಿಆರ್​ಎಫ್ ತಂಡ ಈಗಾಗಲೇ ಸ್ಥಳದಲ್ಲಿ ಬೀಡು ಬಿಟ್ಟಿವೆ. ಒಟ್ಟು ನಾಲ್ಕು ಎನ್​​ಡಿಆರ್​ಎಫ್ ತಂಡವನ್ನು ಈಗಾಗಲೇ ವಯನಾಡ್​​ಗೆ ರವಾನೆ ಮಾಡಲಾಗಿದೆ.

ದೇಶ

ಬೆಂಗಳೂರಿನಲ್ಲಿ ಎಲ್‌ಪಿಜಿ ಸಂಕಷ್ಟ: ಆಟೊ ಚಾಲಕರ ಬದುಕು ಸಂಕಷ್ಟಕ್ಕೆ

Published

on

By

ಬೆಂಗಳೂರು: ನಗರದಲ್ಲಿ ಉಂಟಾಗಿರುವ ಎಲ್‌ಪಿಜಿ ಕೊರತೆಯಿಂದ ಆಟೊ ಚಾಲಕರ ಸಮಸ್ಯೆಗಳು ದಿನೇ ದಿನೇ ಗಂಭೀರವಾಗುತ್ತಿವೆ. ಗ್ಯಾಸ್‌ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಲಭ್ಯವಿರುವ ಬಂಕ್‌ಗಳ ಬಳಿ ಆಟೊ ಚಾಲಕರು ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಂಕ್‌ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ್ದು, ಉಳಿದ ಬಂಕ್‌ಗಳಲ್ಲೂ ‘ನೋ ಸ್ಟಾಕ್’ ಫಲಕಗಳು ಸಾಮಾನ್ಯ ದೃಶ್ಯವಾಗಿವೆ.

ರಾಜಾಜಿನಗರ, ಮತ್ತೀಕೆರೆ, ದಾಸರಹಳ್ಳಿ, ಗುಟ್ಟಹಳ್ಳಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಮಸ್ಯೆ ತೀವ್ರಗೊಂಡಿದೆ. ಬಂಕ್‌ಗಳ ಬಳಿ ಆಟೊಗಳು ಸಾಲುಗಟ್ಟಿ ನಿಲ್ಲುವುದರಿಂದ ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ. ಎಲ್‌ಪಿಜಿ ಕೊರತೆಯಿಂದ ಸಾವಿರಾರು ಆಟೊಗಳು ರಸ್ತೆಗಿಳಿಯಲು ಸಾಧ್ಯವಾಗದೇ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೂ ಒತ್ತಡ ಹೆಚ್ಚಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್‌ ಪೂರೈಕೆಗೆ ತೀವ್ರ ಹೊಡೆತ ಬಿದ್ದಿದ್ದು, ಆಟೊ ಚಾಲಕರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಗ್ಯಾಸ್‌ ಬೆಲೆ ಏರಿಕೆಯಿಂದಾಗಿ ಚಾಲಕರು ಕಡಿಮೆ ದೂರಕ್ಕೂ ಪ್ರಯಾಣಿಕರಿಂದ ಹೆಚ್ಚು ಬಾಡಿಗೆ ವಸೂಲು ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೂ ಹೆಚ್ಚುವರಿ ಹೊರೆ ಬೀಳುತ್ತಿದೆ.

ಗ್ಯಾಸ್‌ ಲಭ್ಯವಿರುವ ಮಾಹಿತಿ ಸಿಕ್ಕ ತಕ್ಷಣ ನೂರಾರು ಆಟೊಗಳು ಬಂಕ್‌ಗಳತ್ತ ಧಾವಿಸುತ್ತಿವೆ. ಪರಿಣಾಮ, ಕೆಲವೇ ಗಂಟೆಗಳಲ್ಲಿ ಸ್ಟಾಕ್‌ ಖಾಲಿಯಾಗುತ್ತಿದೆ. ಸಿಎನ್‌ಜಿ ಕೊರತೆಯೂ ಕಾಣಿಸಿಕೊಂಡಿರುವುದರಿಂದ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗಿದೆ.

ಇದರಿಂದಾಗಿ ವಿದ್ಯುತ್‌ ಚಾಲಿತ ಆಟೊಗಳ ಬಳಕೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಇವುಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಪರಿಸ್ಥಿತಿ ಮುಂದುವರಿದರೆ ಅನೇಕ ಆಟೊ ಚಾಲಕರು ವೃತ್ತಿ ತೊರೆಯುವ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.

Continue Reading

ದೇಶ

ಸುಪ್ರೀಂ ಕೋರ್ಟ್ ಆದೇಶ ಬಳಿಕ ಬೀದಿ ನಾಯಿಗಳ ಲೆಕ್ಕಾಚಾರ: ನಗರದಲ್ಲಿ ಆತಂಕ

Published

on

By

ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಬೀದಿ ನಾಯಿಗಳ ಸಮಸ್ಯೆ ಗಂಭೀರವಾಗುತ್ತಿರುವ ಹಿನ್ನೆಲೆ, Bruhat Bengaluru Mahanagara Palike ಸರ್ವೆ ಕಾರ್ಯ ಆರಂಭಿಸಿದೆ. Supreme Court of India ನೀಡಿದ ನಿರ್ದೇಶನದಂತೆ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಶಾಲೆ, ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣ, ಕ್ರೀಡಾಂಗಣ ಹಾಗೂ ಆಟದ ಮೈದಾನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 2,670 ಬೀದಿ ನಾಯಿಗಳು ಪತ್ತೆಯಾಗಿವೆ. ಕೇಂದ್ರ ವಲಯದಲ್ಲಿ 504, ಉತ್ತರ ವಲಯದಲ್ಲಿ 875, ಪಶ್ಚಿಮ ವಲಯದಲ್ಲಿ 591, ದಕ್ಷಿಣ ವಲಯದಲ್ಲಿ 331 ಹಾಗೂ ಪೂರ್ವ ವಲಯದಲ್ಲಿ 369 ನಾಯಿಗಳಿವೆ ಎಂದು ಮಾಹಿತಿ ನೀಡಲಾಗಿದೆ.

ಆದರೆ, ಈ ಅಂಕಿ-ಅಂಶಗಳ ನಿಖರತೆ ಬಗ್ಗೆ ಪ್ರಶ್ನೆಗಳು ಮೂಡಿವೆ. ಕೆಲವು ವಲಯಗಳಲ್ಲಿ ಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದ್ದು, ಕೆಲವು ಸಂಸ್ಥೆಗಳು ತಮ್ಮ ವ್ಯಾಪ್ತಿಯ ಲೆಕ್ಕ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬೀದಿ ನಾಯಿಗಳ ಸ್ಥಳಾಂತರಕ್ಕಾಗಿ ಆನೇಕಲ್ ವ್ಯಾಪ್ತಿಯ ಬಿಂಗೀಪುರದಲ್ಲಿ 5 ಎಕರೆ ಜಾಗ ಗುರುತಿಸಲಾಗಿದ್ದು, ಸುಮಾರು 500 ನಾಯಿಗಳಿಗೆ ಆಶ್ರಯ ನೀಡುವ ಸಾಮರ್ಥ್ಯದ ಶೆಲ್ಟರ್ ನಿರ್ಮಾಣಕ್ಕೆ 2 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ.

ಇದೇ ವೇಳೆ, ಉತ್ತರ ಹಾಗೂ ಪಶ್ಚಿಮ ವಲಯಗಳಲ್ಲಿ ಹೆಚ್ಚುವರಿ ಆಶ್ರಯ ತಾಣ ನಿರ್ಮಾಣದ ಕಾರ್ಯ ಕೂಡ ಪ್ರಗತಿಯಲ್ಲಿದೆ.

ಒಟ್ಟಿನಲ್ಲಿ, ಬೀದಿ ನಾಯಿಗಳ ಸಮಸ್ಯೆ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದ್ದರೂ, ಅಂಕಿ-ಅಂಶಗಳ ಸ್ಪಷ್ಟತೆ ಹಾಗೂ ಅನುಷ್ಠಾನದ ಪರಿಣಾಮಕಾರಿತ್ವ ಬಗ್ಗೆ ಇನ್ನೂ ಅನುಮಾನಗಳು ಉಳಿದಿವೆ.

Continue Reading

ದೇಶ

ಇರಾನ್‌ಗೆ ಟ್ರಂಪ್ ಮತ್ತೊಂದು ಗಡುವು: 24 ಗಂಟೆ ವಿಸ್ತರಣೆ ಘೋಷಣೆ

Published

on

By

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ನೀಡಿದ್ದ ಗಡುವನ್ನು ಮತ್ತೊಂದು 24 ಗಂಟೆಗಳಷ್ಟು ವಿಸ್ತರಿಸಿದಂತೆ ಸೂಚನೆ ನೀಡಿದ್ದು, ಮಧ್ಯಪ್ರಾಚ್ಯ ಉದ್ವಿಗ್ನತೆಗೆ ಹೊಸ ತಿರುವು ದೊರಕಿದೆ.

ಹಾರ್ಮುಜ್ ಜಲಸಂಧಿಯನ್ನು ತಕ್ಷಣ ಮುಕ್ತಗೊಳಿಸಿ ಶಾಂತಿ ಒಪ್ಪಂದಕ್ಕೆ ಬರಬೇಕೆಂದು ಗಡವು ನೀಡಿದ್ದ ಟ್ರಂಪ್, ಈಗ ಹೊಸ ಸಮಯವನ್ನು ಘೋಷಿಸಿದ್ದಾರೆ. ತಮ್ಮ Truth Social ಖಾತೆಯಲ್ಲಿ “ಮಂಗಳವಾರ ರಾತ್ರಿ 8:00 (Eastern Time)” ಎಂದು ಪೋಸ್ಟ್ ಮಾಡಿದ್ದು, ಇದು ಜಿಎಂಟಿ ಪ್ರಕಾರ ಬುಧವಾರ ಮಧ್ಯರಾತ್ರಿ ಮತ್ತು ಭಾರತೀಯ ಸಮಯದ ಪ್ರಕಾರ ಬೆಳಗ್ಗೆ 5:30 ಆಗುತ್ತದೆ.

ಈ ಹಿಂದೆ 48 ಗಂಟೆಗಳ ಗಡುವು ನೀಡಿದ್ದ ಟ್ರಂಪ್, “ಒಪ್ಪಂದವಾಗದಿದ್ದರೆ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದರು. ಈಗ ಹೆಚ್ಚುವರಿ ಸಮಯ ನೀಡಿರುವುದು, ಮಾತುಕತೆಗೆ ಅವಕಾಶ ನೀಡಿದಂತಾಗಿದೆ.

ಹಾರ್ಮುಜ್ ಜಲಸಂಧಿ ವಿವಾದ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಫೆಬ್ರವರಿ 28ರಿಂದ ಅಮೆರಿಕಾ-ಇಸ್ರೇಲ್ ದಾಳಿ ಆರಂಭವಾದ ನಂತರ, ಇರಾನ್ ಈ ಪ್ರಮುಖ ತೈಲ ಸಾಗಣೆ ಮಾರ್ಗವನ್ನು ಬಂದ್ ಮಾಡಿದೆ.

ಇದರ ಮಧ್ಯೆ, ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, “ಒಪ್ಪಂದಕ್ಕೆ ಉತ್ತಮ ಅವಕಾಶ ಇದೆ. ಆದರೆ ಮಾತುಕತೆ ವಿಫಲವಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.

ಇರಾನ್ ಇದಕ್ಕೆ ಪ್ರತಿಕ್ರಿಯಿಸಿ, ಅಮೆರಿಕದ ಬೆದರಿಕೆಯನ್ನು “ಯುದ್ಧ ಅಪರಾಧ” ಎಂದು ಕರೆದಿದೆ.

ಒಟ್ಟಿನಲ್ಲಿ, ಗಡುವು ವಿಸ್ತರಣೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿದರೂ, ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿಯೇ ಉಳಿದಿದೆ.

Continue Reading

Trending