Connect with us

ದೇಶ

ಅಲ್ಲಪ್ಪ ಸಿದ್ದರಾಮಯ್ಯ ಮುಂದಿನ 10 ತಿಂಗಳು CM ಆಗಿ ಮುಂದುವರಿ ನೋಡೋಣ -ಕುಮಾರಸ್ವಾಮಿ ಚಾಲೆಂಜ್..!

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡ್ತಿರುವ ಮೈತ್ರಿ ನಾಯಕರು ತಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಜಂಟಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್​​​ನ ಏಕಶಕ್ತಿಯ ದಮನಕ್ಕೆ ರಣಕಹಳೆ ಮೊಳಗಿಸಿರುವ ಮೈತ್ರಿ, ‘ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ’ಗೆ ಚಾಲನೆ ನೀಡಿದೆ.

ಚಾಲನೆ ಬಳಿಕ ಮಾತನಾಡಿರುವ ಕೇಂದ್ರ ಸಚಿವ ಹೆಚ್.​ಡಿ.ಕುಮಾರಸ್ವಾಮಿ.. ಈ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ನಡೆಸ್ತಿರೋದು ಸಿದ್ದರಾಮಯ್ಯ ಮಾತ್ರವಲ್ಲ. ಇಡೀ ಸರ್ಕಾರವನ್ನೇ ಕಿತ್ತು ಒಗೆಯಬೇಕು. ನಾವು ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿದ್ದೇವೆ‌. ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ಹೋರಾಟ ಮಾಡ್ತಿದ್ದೇವೆ. ಕ್ರಿಯಾಶೀಲ ಯುವಕ ವಿಜಯೇಂದ್ರ ನೇತೃತ್ವದಲ್ಲಿ, ರಾಧಾಮೋಹನ್ ಅಗರ್‌ವಾಲ್ ಸೂಚನೆ ಮೇರೆಗೆ ಪಾದಯಾತ್ರೆ ಮಾಡ್ತಿದ್ದೇವೆ ಎಂದರು.

ಕೇಂದ್ರಕ್ಕೆ ದಾಖಲೆ ಕೊಟ್ಟಿದ್ದೇನೆ
ನಮ್ಮ ಪ್ರತಿಭಟನೆಗೆ ಪರ್ಯಾಯವಾಗಿ ಅವರು (ಕಾಂಗ್ರೆಸ್) ನಿನ್ನೆಯಿಂದ ಹೋರಾಟ ಮಾಡ್ತಿದ್ದಾರೆ. ನನ್ನ ವಿರುದ್ಧ ವೈಯುಕ್ತಿಕವಾಗಿ ಮಾತನ್ನಾಡಿರುವ ವಿಚಾರಕ್ಕೆ ನಾನು ಅಲ್ಲಿಯೇ ಉತ್ತರಿಸುತ್ತೇನೆ. ಬಿಡದಿ, ರಾಮನಗರದಲ್ಲೇ ಉತ್ತರಿಸುತ್ತೇನೆ. ನಾನು ಜೈಲಿಗೆ ಹೋಗಲು ಸಿದ್ಧ ಅಂದಿದ್ದಾರೆ. ಹಣ, ಆಸ್ತಿ ಬಗ್ಗೆ ಮಾತನ್ನಾಡಿದ್ದಾರೆ. ನಾನು ಅವರ ಮಾಡಿರುವ ಅಕ್ರಮಗಳ ಅನೇಕ‌ ದಾಖಲಾತಿಗಳನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದೇನೆ ಎಂದಿದ್ದಾರೆ.

ನಕಪುರದಲ್ಲಿ ಒಂದು ಬ್ಲಾಕ್ ಅಂಡ್ ವೈಟ್ ಟಿವಿ ಇಟ್ಟುಕೊಂಡು ಸಂಪಾದನೆ ಮಾಡಿದ್ದು ಅಲ್ವಾ? ಅಂದು ರಾಮಕೃಷ್ಣ ಹೆಗಡೆ ಕಾಲದಲ್ಲಿ ರಘುಪತಿ ಭಟ್ ಮೂಲಕ ಹಣ ಸಂಪಾದನೆ ಮಾಡಿದ್ದಾರೆ. ನಾವು 2006ರಲ್ಲಿ ಮಾಡಿದ್ದ ಸಮ್ಮಿಶ್ರ ಸರ್ಕಾರ ಸರಿಯಾಗಿದ್ರೆ 2008ರಲ್ಲಿ ನೀವು ಅಧಿಕಾರಕ್ಕೆ ಬರುತ್ತಿರಲಿಲ್ಲ. ಅಂದು ಬೇರೆ ವ್ಯವಸ್ಥೆ ಇತ್ತು. ನಾವು ಮಾಡಿದ ಯಡವಟ್ಟಿನಿಂದ ಅಂದು ಅಧಿಕಾರಕ್ಕೆ ಬಂದ್ರಿ. 2018ರಲ್ಲಿ ನೀವು ನಮ್ಮ ಮನೆಗೆ ಬಂದ್ರಿ. ನಾನು ಅರ್ಜಿ‌ ಹಿಡಿದುಕೊಂಡು ಬಂದಿರಲಿಲ್ಲ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ನೀವಲ್ಲ. ಅವರನ್ನು ಕೆಳಗೆ ಇಳಿಸಿದ್ದು ಏಕೆ? ಅಂದು ನಾವು ಮಾಡಿದ ಸರ್ಕಾರದಿಂದ ಎರಡು ಪಕ್ಷಗಳು ಬೆಳೆದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಸಹಕರಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಮಾಡಿ ಬಿಜೆಪಿ ಕೂಡ ಬೆಳೆದಿದೆ. ಅಲ್ಲಪ್ಪ ಸಿದ್ದರಾಮಯ್ಯರ ನಾನೇ 10 ವರ್ಷ ಸಿಎಂ ಅಂತೀರಲ್ಲ. ಮುಂದಿನ 10 ತಿಂಗಳು ಮುಂದುವರಿ ನೋಡೋಣ ಎಂದು ಚಾಲೆಂಜ್ ಹಾಕಿದ್ದಾರೆ.

ದೇಶ

ಪಿಎಂ ಮೋದಿ ಆಗಸ್ಟ್ 10ರಂದು ಬೆಂಗಳೂರಿಗೆ: ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ

ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದ (Yellow Line) ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Modi) ಆಗಸ್ಟ್ 10ರಂದು ಬೆಂಗಳೂರಿಗೆ ಬರುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿಯವರು ಆಗಸ್ಟ್ 10ರಂದು ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟನೆ ಮಾಡುವ ಉದ್ದೇಶದಿಂದ ಬರುತ್ತಿದ್ದಾರೆ. ಅವರ ಭೇಟಿಗೆ ಸಿದ್ಧತೆಗಳು ನಡೆಯುತ್ತಿವೆ. ಟೈಮ್ ಟು ಟೈಮ್ ಕಾರ್ಯಕ್ರಮಗಳ ಬಗ್ಗೆ ಇನ್ನೂ ವಿವರ ಬಾಕಿಯಿದೆ,” ಎಂದು ಹೇಳಿದರು.

ವೈಭವದಿಂದ ಕಾರ್ಯಕ್ರಮ?
ಆದರೆ, ಮೂಲ ಯೋಜನೆಗೆ ಬದಲಾವಣೆ ಆಗಿದೆ. ಈಗ ಪ್ರಧಾನಿಯವರು ಕೇವಲ ಹಳದಿ ಮಾರ್ಗದ ಮೆಟ್ರೋ ಮತ್ತು ವಂದೇ ಭಾರತ್ ರೈಲು ಉದ್ಘಾಟನೆಗೆ ಮಾತ್ರ ಭಾಗಿಯಾಗಲಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಮಾವೇಶ ಮತ್ತು ರೋಡ್ ಶೋ ಕಾರ್ಯಾಚರಣೆಗಳು ರದ್ದುಪಡಿಸಲಾಗಿದೆ.

ಇದರ ಪರಿಣಾಮವಾಗಿ, ಒಂದು ವರ್ಷದಿಂದ ಮೋದಿಯವರ ಆಗಮನದ ನಿರೀಕ್ಷೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ನಿರಾಸೆಗೊಳಗಾಗಿದ್ದಾರೆ ಎಂದು ವರದಿಯಾಗಿದೆ.

Continue Reading

ದೇಶ

ಭಾರತ vs ಅಮೆರಿಕ: ರಷ್ಯಾದ ತೈಲದ ಬಗ್ಗೆ ಉದ್ವಿಗ್ನತೆ, ಸೇನೆಯಿಂದ ತಿರುಗೇಟು

ಬೆಂಗಳೂರು: ರಷ್ಯಾದಿಂದ ಕಚ್ಚಾ ತೈಲ ಖರೀದಿಯ ಕುರಿತು ಭಾರತ-ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತಾಗಿದೆ. ಭಾರತ ರಷ್ಯಾದಿಂದ ತೈಲ ಆಮದು ಮಾಡುತ್ತಿರುವುದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಭಾರತೀಯ ಸೇನೆ ಅಮೆರಿಕದ ದ್ವೇಧಾಚರಣೆ ವಿರುದ್ಧ ತಿರುಗೇಟು ನೀಡಿದೆ.

ಸೋಷಿಯಲ್ ಮೀಡಿಯಾದಲ್ಲಿ “ಈ ದಿನ ಆ ವರ್ಷ – ಯುದ್ಧದ ನಿರ್ಮಾಣ – 05 ಆಗಸ್ಟ್ 1971” ಎಂಬ ಶೀರ್ಷಿಕೆಯಡಿ ಸೇನೆಯು 1971ರ ಯುದ್ಧದ ಕಾಲದ ಪತ್ರಿಕಾ ಕಟಿಂಗ್‌ ಹಂಚಿಕೊಂಡಿದೆ. 1954ರಿಂದ 1971ರವರೆಗೆ ಅಮೆರಿಕ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸಿದ ಬಗ್ಗೆ ಪೇಪರ್ ಕಟಿಂಗ್‌ ಉಲ್ಲೇಖಿಸುತ್ತಾ, “ಅಮೆರಿಕ ಪಾಕ್ ಪರ ಕೆಲಸ ಮಾಡಿತ್ತಲ್ಲವೆ?” ಎಂದು ಪ್ರಶ್ನಿಸಿದೆ.

ಇದು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಭಾರತ ಹಣ ಒದಗಿಸುತ್ತಿದೆ ಎಂಬ ಅಮೆರಿಕದ ಆರೋಪಕ್ಕೆ ಪ್ರತಿಕ್ರಿಯೆಯಾಗಿದೆ. ಭಾರತವು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಟೀಕೆಗಳನ್ನು ‘ಅಸಮರ್ಥನೀಯ ಹಾಗೂ ಅಸಮಂಜಸ’ವೆಂದು ತಿರಸ್ಕರಿಸಿದೆ. ಭಾರತ ತನ್ನ ತೈಲ ನೀತಿಯನ್ನು ಆರ್ಥಿಕ ಶಕ್ತಿಯ ದೃಷ್ಟಿಯಿಂದ ಮುಂದುವರಿಸುತ್ತಿದೆ.

Continue Reading

ದೇಶ

ಸೇನೆ ಕುರಿತ ಹೇಳಿಕೆ: ಸುಪ್ರೀಂ ಕೋರ್ಟ್ ಟೀಕೆಗೆ ಪ್ರಿಯಾಂಕಾ ಗಾಂಧಿಯಿಂದ ಕಠಿಣ ಪ್ರತಿಕ್ರಿಯೆ

ನವದೆಹಲಿ: ಭಾರತೀಯ ಸೇನೆ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೀಗ ಅವರ ಸಹೋದರಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಗಾಂಧಿಯ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ಟೀಕೆಗೆ ಪ್ರತಿಕ್ರಿಯಿಸಿ ಪ್ರಿಯಾಂಕಾ ಗಾಂಧಿ,

“ಯಾರು ನಿಜವಾದ ಭಾರತೀಯರು ಎಂಬುದನ್ನು ನಿರ್ಧರಿಸಲು ನ್ಯಾಯಾಧೀಶರು ಯೋಗ್ಯರಲ್ಲ. ರಾಹುಲ್ ಗಾಂಧಿಗೆ ಭಾರತೀಯ ಸೇನೆಯ ಬಗ್ಗೆ ಅಪಾರ ಗೌರವವಿದೆ. ಅವರು ಎಂದಿಗೂ ಸೇನೆಯ ವಿರುದ್ಧ ಕೆಟ್ಟ ಮಾತುಗಳನ್ನು ಮಾತನಾಡಲ್ಲ,” ಎಂದು ತಿಳಿಸಿದ್ದಾರೆ.

ಗಲ್ವಾನ್ ಕಣಿವೆ ಸಂಘರ್ಷ ಕುರಿತು ಮಾತನಾಡಿದ ವೇಳೆ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ‘ಅನುಚಿತ’ ಎಂದು ಖಂಡಿಸಿದ್ದು, “ನಿಜವಾದ ಭಾರತೀಯರು ಈ ರೀತಿ ಮಾತನಾಡುವುದಿಲ್ಲ” ಎಂದು ಹೇಳಿದ್ದಾರೆ. ಇದನ್ನು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದು, “ವಿರೋಧ ಪಕ್ಷದ ನಾಯಕರಾಗಿ ಸರ್ಕಾರವನ್ನು ಪ್ರಶ್ನಿಸುವುದು ರಾಹುಲ್ ಅವರ ಕರ್ತವ್ಯ. ನ್ಯಾಯಮೂರ್ತಿಗಳು ಇಂತಹ ಹೇಳಿಕೆ ನೀಡುವುದು ಸರಿಯಲ್ಲ,” ಎಂದಿದ್ದಾರೆ.

ಅದೇ ರೀತಿ, ಪ್ರಿಯಾಂಕಾ ಗಾಂಧಿ ಸರ್ಕಾರದ ನಡೆಗೆ ಶಂಕೆ ವ್ಯಕ್ತಪಡಿಸಿ,

“ರಾಹುಲ್ ಗಾಂಧಿಯ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರಗಳಿಲ್ಲ. ಅವರು ಚರ್ಚೆಗೆ ತಯಾರಿಲ್ಲ. ಸಂಸತ್ತನ್ನು ಸರಿಯಾಗಿ ನಡೆಸಲಾಗುತ್ತಿಲ್ಲ. ಇದನ್ನೆಲ್ಲಾ ಮರೆಮಾಚಲು ಈ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

Continue Reading

Trending