ಬೆಂಗಳೂರು
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ 5 ದಿನ ಸಂಚಾರ ಬಂದ್!

ಬೆಂಗಳೂರು: ನಗರದ ಜನರ ನೆಚ್ಚಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಕೆಲ ದಿನಗಳ ಕಾಲ ಸೇವೆಯನ್ನು ಸಂಪೂರ್ಣ ಸ್ಧಗಿತು ಹಾಗೂ ಕೆಲ ದಿನಗಳು ಸೇವೆಯಲ್ಲಿ ವ್ಯತ್ಯಯವಾಗುವುದಾಗಿ ನಮ್ಮ ಮೆಟ್ರೋ ಮಾಹಿತಿ ನೀಡಿದೆ,
ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗರ ನಿಯಮಿತ ವಿಸ್ತರಿಸಿದ ಹಸಿರು ಮಾರ್ಗದ ನಾಗಸಂದ್ರದಿಂದ ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತು ಪರೀಕ್ಷೆಗಳನ್ನು ಮುಂದುವರಿಸಲು ಕೆಲವು ದಿನಗಳಂದು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಯಲ್ಲಿ ಬದಲಾವಣೆಯಾಗಲಿದೆ ಎಂದು ತಿಳಿಸಿದೆ,
ಆಗಸ್ಟ್ 20,23, 30 ರಂದು ಹಾಗೂ ಸೆಪ್ಟೆಂಬರ್ 6 ಮತ್ತು 11 ರಂದು ಇಡೀ ದಿನ ರೈಲು ಸೇವೆಗಳನ್ನು ಸ್ಧಗಿತಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ,
ಇದರೊಂದಿಗೆ ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ ಆಗಸ್ಟ್ 24 ರಂದು ಕೊನೆಯ ರೈಲು ಸೇವೆ ರಾತ್ರಿ 11:05 ರ ಬದಲಾಗಿ 10:00 ಗಂಟೆಗೆ ಇರಲಿದೆ, ಆಗಸ್ಟ್ 25 ರಂದು ಮೊದಲ ರೈಲು ಸೇವೆ ಬೆಳಗ್ಗೆ 5:00 ಗಂಟೆಗೆ ಬದಲಾಗಿ 6:00 ಗಂಟೆಗೆ ಪ್ರಾರಂಭವಾಗಲಿದೆ,
ಇನ್ನು ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಧೆ ವರೆಗೆ ಆಗಸ್ಟ್ 24 ರಂದು ಕೊನೆಯ ರೈಲು ಸೇವೆ 11:12 ಕ್ಕೆ ಪ್ರಾರಂಭವಾಗಲಿದೆ, 25 ರಂದು ಮೊದಲ ರೈಲು ಸೇವೆ ಬೆಳಗ್ಗೆ 5:00 ಕ್ಕೆ ಪ್ರಾರಂಭವಾಗಲಿದೆ,
ಉಳಿದಂತೆ ನೇರಳೆ ಮಾರ್ಗದ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ನಮ್ಮ ಮೆಟ್ರೋ ಮಾಹಿತಿ ನೀಡಿದೆ,