ದೇಶ
ದಸರಾ ಉತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

ಮೈಸೂರು: ಮಹಾನವಮಿ ಹಾಗೂ ವಿಜಯ ದಶಮಿ ಅಂಗವಾಗಿ ಆಕ್ಟೋಬರ್ 3 ರಿಂದ 12 ರವರೆಗೆ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ನಡೆಯಲಿದೆ, ಅರಮನೆ ಆವರಣದಲ್ಲಿ ಹಬ್ಬದ ಅವಧಿಯಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಿಲು ಅರ್ಜಿ ಆಹ್ವಾನಿಸಿದೆ,
ಆಸಕ್ತರು ಅರ್ಜಿಗಳನ್ನು ಆಗಸ್ಟ್ 27 ರಿಂದ ಸೆಪ್ಟೆಂಬರ್ 10 ರವರೆಗೆ ಸಲ್ಲಿಸಬಹುದು, ಪ್ರತಿ ವರ್ಷದಂತೆ ಮೈಸೂರು ಅರಮೆನ ಅವರಣದಲ್ಲಿ ದಸರಾ ಆಚರಣೆ ವೇಳೆ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ,
ಕಲಾವಿದರು ಮತ್ತು ಕಲಾ ತಂಡಗಳು ನೇರವಾಗಿ ವಿನೋಬ ರಸ್ತೆಯಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯನ್ನು ಸಂಪರ್ಕಿಸಬಹುದು, ಅಥವಾ ಅಂಚೆ ಮೂಲಕ ಅದೇ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು, ಹಾಗೆಯೇ ತಮ್ಮ ಅರ್ಜಿಗಳನ್ನು ccdasara23@gmail.com ಇಮೇಲ್ ಮೂಲಕ ಗೆ ಸಲ್ಲಿಸಬಹುದು, ಇನ್ನು ಹೆಚ್ಚಿನ ವಿಚಾರಣೆಗಾಗಿ 0821-2513225, ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು,
ಸಾಂಸ್ಕøತಿಕ ಉಪಸಮಿತಿಯು ಕಾರ್ಯಕ್ರಮದಲ್ಲಿ ಮೊದಲ ಸ್ಧಾನ ಪಡೆಯಲು ಹಣಕ್ಕೆ ಬೇಡಿಕೆ ಇಡುವ ಮಧ್ಯವರ್ತಿಗಳ ಬಗ್ಗೆ ಕಲಾವಿದರಿಗೆ ಎಚ್ಚರಿಕೆ ನೀಡಿದೆ, ಯಾವುದೇ ಕಲಾವಿದರಿಗೆ ಇಂತಹ ಪರಿಸ್ಧಿತಿ ಎದುರಾದರೆ ಕೂಡಲೇ ಸಹಾಯಕ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ,