ದೇಶ
ಅಮೆರಿಕಾದಲ್ಲಿ ಮೋದಿ ಕಾರ್ಯಕ್ರಮ: ನೋಂದಣಿ ಮಾಡಿಕೊಂಡ ಸಾವಿರಾರು ಭಾರತೀಯರು

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು 24,000 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರು ನೋಂದಾಯಿಸಿಕೊಂಡಿದ್ದಾರೆ, ಸೆಪ್ಟೆಂಬರ್ 22 ರಂದು ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ಮೋತಿ ಮತ್ತು ಯುಎಸ್ ಪ್ರೋಗ್ರೆಸ್ ಟುಗೆದರ್ ಕಾರ್ಯಕ್ರಮ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 24,000 ಕ್ಕೂ ಹೆಚ್ಚು ಭಾರತೀಯ ಡಯಾಸ್ಟೊರಾ ಸದಸ್ಯರು ನೋದಾಯಿಸಿಕೊಂಡಿದ್ದಾರೆ, ಅದರೆ ಈ ಕಾರ್ಯಕ್ರಮ ನಡೆಯುವ ಸ್ಧಳವು 15,000 ಸಾಮಥ್ರ್ಯವನ್ನು ಹೊಂದಿದೆ,
ಇಂಡೋ-ಅಮೆರಿಕ್ನ ಕಮ್ಯುನಿಟಿ ಆಫ್ ಯುಎಸ್‍ಎ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ, ಅಮೆರಿಕದಾದ್ಯಂತ 590 ಸಮುದಾಯ ಸಂಸ್ಧೆಗಳಿಂದ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ, ಕನಿಷ್ಠ 42 ರಾಜ್ಯಗಳಿಂದ ಭಾರತೀಯ ಅಮೆರಿಕನ್ನರು ಪಾಲ್ಗೊಳ್ಳುವ ನಿರೀಕ್ಷೆಯಿದೆ,
ವಿಶ್ವಸಂಸ್ಧೆ ಹೊರಡಿಸಿರುವ ಸ್ಟೀಕರ್‍ಗಳ ತಾತ್ಕಾಲಿಕ ಪಟ್ಟಿಯ ಪ್ರಕಾರ ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 26 ರಂದು ಉನ್ನತ ಮಟ್ಟದ ವಿಶ್ವಸಂಸ್ಧೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ,