ದೇಶ

RSS ಮುಖ್ಯಸ್ಧ ಮೋಹನ್ ಭಾಗವತ್ ಗೆ ಭದ್ರತೆ ಹೆಚ್ಚಿಸಿದೆ ಕೇಂದ್ರ-ಗುಪ್ತಚರ ಮಾಹಿತಿಯಿಂದ ಅಲರ್ಟ್!

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಧ ಮೋಹನ್ ಭಾಗವತ್ ಅವರ ಭದ್ರತೆಯನ್ನು Z-Plus ವರ್ಗದಿಂದ ಇನ್ನು ಹೆಚ್ಚು ದೃಢವಾದ ASL ಪ್ರೋಟೋಕಾಲ್‍ಗೆ ಹೆಚ್ಚಿಸಲಾಗಿದೆ, ಈ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡುವ ಸಮಾನ ಭದ್ಯತ್ಯೆಯನ್ನು ಮೋಹನ್ ಭಾಗವತ್ ಗೆ ಕಲ್ಪಿಸಿದಂತಾಗಿದ,
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವನೆಯಗೆ ಮುಂಚಿತವಾಗಿ ಭದ್ರತೆಯ ದೃಷ್ಟಿಯಿಂದ ನಡೆಸಿದ ಸರ್ವೇ ವರದಿಯನ್ನು ಗಮನದಲ್ಲಿಟ್ಟುಕೊಂಡು ಮೋಹನ್ ಭಾಗವತ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ, ಜಮ್ಮುವಿನ ಚುನಾವಣೆಯಲ್ಲಿ ಆರ್‍ಎಸ್‍ಎಸ್‍ಗೆ ಪ್ರಮುಖ ಪಾತ್ರವಿದೆ, ಅಲ್ಲಿ ಅದು ದೊಡ್ಡ ಬೆಂಬಲವನ್ನು ಹೊಂದಿದೆ, ಹೀಗಾಗಿ ಮುನ್ನೆಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ,
ಬಿಜೆಪಿಯೇತರ ಪಕ್ಷಗಳು ಆಳ್ವಿಕೆ ನಡೆಸುತ್ತಿರುವ ರಾಜ್ಯಗಳಿಗೆ ಭಗವತ್ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಭದ್ರತೆ ಬಿಲಿಷ್ಠವಾಗಿರಲಿಲ್ಲ ಎಂದು ತಿಳಿದುಬಂದಿದ್ದು ಹೆಚ್ಚಿನ ಬೆದರಿಕೆಗಳು ಕೂಡ ಬಂದಿವೆ ಎನ್ನಲಾಗಿದೆ, ಕೆಲವು ವರದಿಗಳ ಪ್ರಕಾರ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪುಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಬೆದರಿಕೆಗಳು ಹೆಚ್ಚಾಗಿದ್ದು, ಅಪಾಯದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ,

Leave a Reply

Your email address will not be published. Required fields are marked *

Trending

Exit mobile version