ಕ್ರೀಡೆ
ಶ್ರೇಯಾಂಕ ಪಾಟೀಲ್ಗೆ ಸ್ಮೃತಿ ಮಂದಾನ ಹಿಗ್ಗಾಮುಗ್ಗಾ ಕ್ಲಾಸ್; ಆರ್ಸಿಬಿಯಲ್ಲಿ ಅಂದು ಆಗಿದ್ದೇನು..?

22 ವರ್ಷದ ಕರುನಾಡ ಕುವರಿ ಶ್ರೇಯಾಂಕ ಪಾಟೀಲ್ ಮಹಿಳಾ ಆರ್ಸಿಬಿ ತಂಡದ ಸೆನ್ಸೇಷನ್. ಶ್ರೇಯಾಂಕ ಅಂದ್ರೆ ಫ್ಯಾನ್ಸ್ ಮುಗಿಬೀಳ್ತಾರೆ. ಇದೇ ಫ್ಯಾನ್ಸ್ ಕಾರಣಕ್ಕೆ ಶ್ರೇಯಾಂಕ, ಕ್ಯಾಪ್ಟನ್ ಸ್ಮೃತಿ ಮಂದಾನರಿಂದ ಒಮ್ಮೆ ಹಿಗ್ಗಾಮುಗ್ಗಾ ಬೈಸಿಕೊಂಡಿದ್ರು. ಅಷ್ಟಕ್ಕೂ ಸ್ಮೃತಿ ಮಂದಾನ, ಕನ್ನಡತಿ ಮೇಲೆ ಕೋಪಗೊಂಡಿದಾದ್ರೂ ಏಕೆ ಅನ್ನೋ ಇಂಟ್ರೆಸ್ಟಿಂಗ್ ಕಹಾನಿ ಹೀಗಿದೆ..
ಶ್ರೇಯಾಂಕ ಪಾಟೀಲ್..! ಆಡಿದ್ದು ಎರಡೇ ಎರಡು ವುಮೆನ್ಸ್ ಪ್ರೀಮಿಯರ್ ಲೀಗ್. ಆಗಲೇ ಆರ್ಸಿಬಿ ತಂಡದ ಈ ಕಿಲಾಡಿ ಆಟಗಾರ್ತಿ ಎಲ್ಲರ ಮನೆ ಮಾತಾಗಿದ್ದಾರೆ. ಇವರ ಸ್ಪಿನ್ ಚಮತ್ಕಾರ, ಚುರುಕಿನ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ಗೆ ಫಿದಾ ಆಗದೋರಿಲ್ಲ. ಆಟದಷ್ಟೇ ಇವರ ಮಾತು ಹಾಗೂ ಡ್ಯಾನ್ಸ್ ಕೂಡ ನೋಡೋಕೆ ಚೆಂದ. ಹೀಗಾಗಿ ಫ್ಯಾನ್ಸ್ ಮುಗಿ ಬೀಳ್ತಾರೆ. ಹಿಂದೊಮ್ಮೆ ಫ್ಯಾನ್ಸ್ ಖುಷಿ ಪಡಿಸೋಕೆ ಹೋಗಿ ಈ ಸ್ಟಾರ್ ಆರ್ಸಿಬಿ ಆಟಗಾರ್ತಿ ಒಮ್ಮೆ ಕ್ಯಾಪ್ಟನ್ ಸ್ಮೃತಿ ಮಂದಾನರಿಂದ ಸರಿಯಾಗಿ ಬೈಸಿಕೊಂಡಿದ್ದರು.
ಒಮ್ಮೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ವೇಳೆ ನಡೆದ ಘಟನೆಯಿದು. ಮೈದಾನದ ಸುತ್ತ ಇದ್ದ ಫ್ಯಾನ್ಸ್ ಆರ್ಸಿಬಿ ಚಿಯರ್ ಮಾಡ್ತಿದ್ರು. ಬೌಂಡರಿ ಲೈನ್ ಬಳಿ ಫೀಲ್ಡ್ ಮಾಡ್ತಿದ್ದ ಕನ್ನಡದ ಹುಡುಗಿಯ ಶ್ರೇಯಾಂಕ ಹೆಸರನ್ನ ಕೂಗ್ತಾ ಇದ್ರು. ಹೀಗಾಗಿ ದೀಪಿಕಾ ಪಡುಕೋಣೆ ಸ್ಟೈಲ್ನಲ್ಲಿ ಶ್ರೇಯಾಂಕ ಫ್ಯಾನ್ಸ್ ಕಡೆ ಕೈಬೀಸುತ್ತಾ ನಿಂತಿದ್ರಂತೆ.
ಇದೇ ವೇಳೆ ಕ್ಯಾಪ್ಟನ್ ಮಂದಾನ, ಶ್ರೇಯಾಂಕ ಪಾಟೀಲ್ ರನ್ನ ಫೀಲ್ಡ್ ಪ್ಲೇಸ್ಮೆಂಟ್ ಬದಲಾಯಿಸಲು ಜೋರಾಗಿ ಕರೆದ್ರಂತೆ. ಅಭಿಮಾನಿಗಳ ಅಭಿಮಾನದಲ್ಲಿ ಬೆರೆತು ಹೋಗಿದ್ದ ಶ್ರೇಯಾಂಕಾಗೆ ನಾಯಕಿ ಹೇಳಿದ್ದು ಕಿವಿಗೆ ಬೀಳಲಿಲ್ಲ. ಇದ್ರಿಂದ ಸಿಟ್ಟಿಗೆದ್ದ ಸ್ಮೃತಿ ಮಂದಾನ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ರಂತೆ. ಅದಾದ ಮುಂದಿನ ಪಂದ್ಯದಲ್ಲಿ ಪ್ರೇಕ್ಷಕರ ಕಡೆ ನೋಡುವುದನ್ನ ಬಿಟ್ಟು, ಆಟದ ಕಡೆ ಗಮನ ಕೊಟ್ರಂತೆ. ಈ ವಿಚಾರವನ್ನ ಆರ್ಸಿಬಿ ನಾಯಕಿ ಸ್ಮೃತಿ ಮಂದಾನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.