ರಾಜ್ಯ
ನಿರಂತರ ಮಳೆಯಿಂದಾಗಿ ರಾಷ್ಟ್ರಕೂಟರ ಕೋಟೆ ಕುಸಿತ

ಕಲಬುರಿಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದ ರಾಷ್ಟ್ರಕೂಟರ ಕೋಟೆ ಧರೆಗುರುಳಿದೆ, ನಿನ್ನೆ ರಾತ್ರಿಯಿಂದ ಮಳೆ ಸುರಿದು ತೇವಗೊಂಡ ಹಿನ್ನಲೆ ಕೋಟೆಯ ಗೂಡೆ ಕುಸಿದಿದೆ ಎನ್ನಲಾಗಿದೆ,
ತಾಲ್ಲೂಕಿನಾದ್ಯಂತ ಕಳೆದರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆಯ ಗೋಡೆಗಳಲ್ಲಿ ನೀರು ಇಳಿಯುತ್ತಲೇ ಇದ್ದು, ಮಳೆಗೆ ಕೋಟೆ ಗೋಡೆಗಳ ತೇವಗೊಂಡು ಏಕಾಏಕಿ ಕುಸಿದಿದೆ,
ಕೋಟೆ ಕುಸಿತದಿಂದಾಗಿ ಪಕ್ಕದಲ್ಲಿದ್ದ ನಿವಾಸಿಗಳು ಆತಂಕಗೊಂಡಿದ್ದಾರೆ, ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ ಮನೆಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಧಳೀಯರು ತಿಳಿಸಿದ್ದಾರೆ,
ರಾಜ ಅಮೋಘವರ್ಷ ನೃಪತುಂಗನ ರಾಜಧಾನಿಯಾಗಿದ್ದ ಮಳಖೇಡ ಗ್ರಾಮದ ಈ ಕೋಟೆ 9 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಎನ್ನುತ್ತೆ ಇತಿಹಾಸ, ಇನ್ನು 2018 ರಲ್ಲಿ ಅಂದಾಜು 6 ಕೋಟಿ ವೆಚ್ಚದಲ್ಲಿ ಕೋಟೆ ಜೀರ್ಣೋದ್ದಾರಗೊಂಡಿತ್ತು.