ದೇಶ

ಆರ್‍ಎಸ್‍ಎಸ್ ಅತಿದೊಡ್ಡ ಭಯೋತ್ಪಾದಕ ಸಂಘಟನೆ-ಮದರಸಾ ಪಠ್ಯದಲ್ಲಿ ಬೋಧನೆ!

ಪ್ರಯಾಗರಾಜ್: ಆರ್‍ಎಸ್‍ಎಸ್ ದೇಶದ ಅತಿದೊಡ್ಡ ಭಯೋತ್ಪಾದಕ ಸಂಘಟನೆ ಎಂದು ಮದರಸಾಗಳಲ್ಲಿ ಬೋಧಿಸುತ್ತಿರುವ ವಿಷಯ ಎಂದು ಬೆಳಕಿಗೆ ಬಂದಿದೆ, ನಕಲಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಚರಣೆ ನಡೆಸಿದಾಗ ಈ ಉಲ್ಲೇಖವಿರುವ ಪಠ್ಯಪುಸ್ತಕಗಳು ದೊರೆಕಿವೆ
ಅದರೆ ಇದು ಆರ್‍ಎಸ್‍ಎಸ್ ವಿರೋಧಿ ಭಾವನೆಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ, ಆಗಸ್ಟ್ 28 ರಂದು ಇಲ್ಲಿನ ಅತರ್ಸುಯಿಯಾ ಪ್ರದೇಶದ ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾದಲ್ಲಿ ನಡೆದ ದಾಳಿಯಲ್ಲಿ ನಕಲಿ ನೋಟುಗಳ ಜೊತೆಗೆ ಈ ಪುಸ್ತಕ ದೊರೆತಿದೆ ಎಂದು ಪ್ರಯಾಗರಾಜ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ,
ಇದು ಉರ್ದು ಭಾಷೆಯಿಂದ ಕೊಡಿದ್ದು ಇದನ್ನು ಹಿಂದಿಗೆ ಭಾಷಾಂತರಿಸಿದ ನಂತರ ಅದನ್ನು ಎಸ್‍ಎಂ ಮುಷರಫ್ ಅವರ ಆರ್‍ಎಸ್‍ಎಸ್ ದಿ ಬಿಗಿಸ್ಟ್ ಟೆರರಿಸ್ಟ್ ಆರ್ಗನೈಸೇಶನ್ ಇನ್ ದಿ ಕಂಟ್ರಿ ಪುಸ್ತಕ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ,
ಮದರಸಾದ ಧರ್ಮಗುರು ಮೊಹಮ್ಮದ್ ತಫ್ಸೀರುಲ್ ಆರಿಫೀನ್ ಈ ಪುಸ್ತಕವನ್ನು ಮಕ್ಕಳ ಮನಸ್ಸಿನಲ್ಲಿ ಆರ್‍ಎಸ್‍ಎಸ್ ವಿರೋಧಿ ಭಾವನೆಗಳನ್ನು ಮೂಡಿಸಲು ಬಳಸುತ್ತಿದ್ದಾರೆ ಎಂದು ಶಂಕಿಸಿದ್ದಾರೆ
ಈ ಪ್ರಕರಣದಲ್ಲಿ ನಕಲಿ ಕರನ್ಸಿ ಗ್ಯಾಂಗ್ ಅನ್ನು ಹೊಡೆದು ನಾಲ್ವರು ಶಂಕಿತರನ್ನು ಬಂಧಿಸಿ ಒಟ್ಟು 1,300 ನಕಲಿ 100 ರೂಪಾಯಿ ನೋಟುಗಳನ್ನು, 234 ಮುದ್ರಿತ ಪುಟಗಳು, ಒಂದು ಲ್ಯಾಪ್‍ಟಾಪ್, ಒಂದು ಕಲರ್ ಪ್ರಂಟರ್, ಎರಡು ಬಂಡಲ್ ಬೌಂಡ್ ಪೇಪರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ…

Leave a Reply

Your email address will not be published. Required fields are marked *

Trending

Exit mobile version