ದೇಶ
ಎಕ್ಸಿಟ್ ಪೋಲ್ ನಿಂದ ಷೇರು ಮಾರುಕಟ್ಟೆ ತಲ್ಲಣ- ಮಾಧ್ಯಮಗಳ ಮೇಲೆ ಹೊಡಿದ್ದ ಪಿಐಎಲ್ ವಜಾ!

ನವದೆಹಲಿ: ಎಕ್ಸಿಟ್ ಪೋಲ್‍ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮಾಧ್ಯಮ ಸಂಸ್ಧೆಗಳ ವಿರುದ್ಧ ತನಿಖೆಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ,
ಲೋಕಸಭೆ ಚುನಾವಣೆಯ ಅಂತಿಮ ಹಂತದ ಮುಕ್ತಾಯದ ನಂತರ ತಕ್ಷಣವೇ ಎಕ್ಸಿಟ್ ಪೋಲ್‍ಗಳನ್ನು ಮಾಧ್ಯಮ ಸಂಸ್ಧೆಗಳು ಮತ್ತು ಅವರ ಸಹವರ್ತಿಗಳು, ಕಂಪನಿಗಳು ಪ್ರಸಾರ ಮಾಡಿದ್ದವು, ಈ ಬೆನ್ನಲ್ಲೇ ಜೂನ್ 4 ರಂದು ಫಲಿತಾಂಶದ ನಂತರ ಷೇರು ಮಾರುಕಟ್ಟೆ ಕುಸಿತದಿಂದಾಗಿ 31 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ ಹೊಡಿಕೆದಾರರ ಮೇಲೆ ಪ್ರಭಾವ ಬೀರಿದೆ ಎಂದು ಆರೋಪಿಸಲಾಗಿತ್ತು,
ಹೀಗಾಗಿ ಮಾಧ್ಯಮ ಸಂಸ್ಧೆಗಳು ಮತ್ತು ಅವರ ಸಹವರ್ತಿಗಳು ಕಂಪನಿಗಳ ವಿರುದ್ಧ ತನಿಖೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು, ಅದರೆ ಇದೀಗ ಈ ಸಾವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ,
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಸರ್ಕಾರವು ಈಗಾಗಲೇ ಆಯ್ಕೆಯಾಗಿದೆ, ಚುನಾವಣೆಯ ಸಮಯದಲ್ಲಿ ಏನಾಗುತ್ತದೆ ಎಂಬ ಕಥೆಯನ್ನು ಈಗ ಮುಗಿಸೋಣ, ಈಗ ನಾವು ದೇಶದಲ್ಲಿ ಆಡಳಿತವನ್ನು ಪ್ರಾರಂಭಿಸೋಣ, ಇದು ರಾಜಕೀಯ ಹಿತಾಸಕ್ತಿ ಮೊಕದ್ದಮೆಯ ಸ್ಪಷ್ಟ ಪ್ರಕರಣವಾಗಿದ, ವಜಾಗೊಳಿಸಲಾಗಿದೆ ಎಂದು ತಿಳಿಸಿದೆ,