ಅಪರಾಧ

ಲೈಂಗಿಕ ದೌರ್ಜನ್ಯ ಆರೋಪ-ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅರೆಸ್ಟ್..!

ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಜಾನಿ ಮಾಸ್ಟರ್ ಎಂದೇ ಖ್ಯಾತರಾಗಿರುವ ನೃತ್ಯ ನಿರ್ದೇಶಕ ಶೇಕ್ ಜಾನಿ ಬಾಷಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
21 ವರ್ಷದ ಯುವತಿ ನೃತ್ಯ ನಿದೇಶಕಿಯೂ ಆಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ, ಹೈದರಾಬಾದ್‍ನ ರಾಮದುರ್ಗಂ ಪೊಲೀಸರಿಗೆ ನೀಡಿದ ದೂರಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಜಾನಿ ಮಾಸ್ಟರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದು, ಚಿತ್ರೀಕರಣದ ಸಮಯದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ಹೇಳಿದ್ದಾರೆ,
ಚೆನ್ನೈ ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಚಿತ್ರೀಕರಣದ ಸಮಯದಲ್ಲಿ ಜಾನಿ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ನರಸಿಂಗಿಯಲ್ಲಿರುವ ತನ್ನ ನಿವಾಸದಲ್ಲಿ ಕೂಡ ತನ್ನ ಮೇಲೆ ಹಲವು ಬಾರಿ ಹಲ್ಲೆ ನಡೆದಿದ್ದಾಗಿಯೂ ಯುವತಿ ದೂರಿದ್ದಾರೆ,
ಯುವತಿ ನಾರ್ಸಿಂಗಿ ನಿವಾಸಿಯಾಗಿರುವುದರಿಂದ ಪ್ರಕರಣವನ್ನು ಅಲ್ಲಿನ ಪೊಲೀಸರಿಗೆ ವರ್ಗಾಯಿಸಲಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯಬ್ಬರು ತಿಳಿಸಿದ್ದಾರೆ,
ಪ್ರಕರಣ ಸಂಬಂಧ ಜಾನಿ ಮಾಸ್ಟರ್ ವಿರುದ್ಧ ಐಸಿಸಿ ಸೆಕ್ಷನ್ 376(ಅತ್ಯಾಚಾರ), ಕ್ರಿಮಿನಲ್ ಬೆದರಿಕೆ(506) ಮತ್ತು ಸ್ವಯಂಪ್ರೇಣೆಯಿಂದ ಗಾಯಗೊಳಿಸುವುದು (323) ಕಲಂ (2) ಮತ್ತು (ಎನ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,

Leave a Reply

Your email address will not be published. Required fields are marked *

Trending

Exit mobile version