ಕ್ರೀಡೆ
ಪಿಕಲ್ ಬಾಲ್ ಚಾಂಪಿನ್ ಶಿಪ್ ಗೆ ಕರ್ನಾಟಕ ತಂಡ

ಬೆಂಗಳೂರು: 8ನೇ ರಾಷ್ಟ್ರಮಟ್ಟದ ಪಿಕಲ್ ಬಾಲ್ ಚಾಂಪಿಯನ್‍ಶಿಪ್ ಹರಿಯಾಣದ ಪಾಣಿಪತ್‍ನಲ್ಲಿ ಅಕ್ಟೋಬರ್ 4 ರಿಂದ 6 ರ ವರೆಗೆ ಆಲ್ ಇಂಡಿಯಾ ಪಿಕಲ್ ಬಾಲ್ ಅಸೋಸಿಯೇಷನ್ ಹಾಗೂ ಪಿಕಲ್ ಬಾಲ್ ಅಸೋಸಿಯೇಷನ್ ಆಫ್ ಹರಿಯಾಣ ಆಶ್ರಯದಲ್ಲಿ ನಡೆಯಲಿದೆ,
ರಾಷ್ಟ್ರಮಟ್ಟದ ಪಿಕಲ್ ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 21 ರಾಜ್ಯಗಳ 500 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಕರ್ನಾಟಕ ತಂಡ ಈಗಾಗಲೇ ಹರಿಯಾಣಕ್ಕೆ ತೆರಳಿದೆ,
ಕರ್ನಾಟಕ ತಂಡದಲ್ಲಿ ನಿರೂಪ ರಾಜ್, ಪೂರ್ಣಿಮಾ, ರಾಘು ಗೌಡ, ಕಿರಣ್ ಕುಮಾರ್, ಲೋಕೇಶ್ ಆರ್, ಕಾವ್ಯ ಜಿ, ಶರ್ಮದ ಬಾಲು, ನಾಗೇಂದ್ರ ನವೀನ್ ಕುಮಾರ್, ವಿಜಯ್ ಕುಮಾರ್, ಗೌತಮ್ ಆರ್ ಆಕಾಶ್ ಎಸ್, ಸ್ವಾತಿ ಅಗರ್ವಾಲ್, ಕವಿತಾ ಕಿರಣ್ ಕುಮಾರ್, ಆದಿತ್ಯ ಪ್ರದೀಪ್, ಇಶಾನ್ ರಿಷಬ್ ಸ್ಧಾನ ಪಡೆದಿದ್ದಾರೆ, ಕರ್ನಾಟಕ ರಾಜ್ಯ ಪಿಕಲ್ ಅಸೋಸಿಯೇಷನ್ ಸಂಸ್ಧಾಪಕ ಪ್ರಧಾನ ಕಾರ್ಯದರ್ಶಿ ರಜತ್ ಕಂಕರ್ ಅವರು ಮಾತನಾಡುತ್ತ ನಮ್ಮ ತಂಡದಲ್ಲಿ ಅನುಭವಿ ಆಟಗಾರರೇ ಹೆಚ್ಚಾಗಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ,