ಚುನಾವಣೆ
ಲೋಕಸಭಾ ಚುನಾವಣೆ ಟಿಕೆಟ್ ಕೊಡಿಸುವುದಾಗಿ ವಂಚನೆ-ಪ್ರಲ್ಹಾದ್ ಜೋಶಿ ಸೋದರನ ವಿರುದ್ಧ ಎಫ್ ಐ ಆರ್ !!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೋದರನ ವಿರುದ್ಧ ದೂರು ದಾಖಲಾಗಿದೆ, ಬಿಜಾಪುರ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆಂದು ಮಾಜಿ ಶಾಸಕ ದೇವಾನಂದ್ ಚೌಹ್ಹಾಣ್ ಪತ್ನಿ ಸುನಿತಾ ಚೌಹ್ಹಾಣ್ ದೂರು ದಾಖಲಿಸಿದ್ದಾರೆ.
ಬಸವೇಶ್ವರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಲ್ಹಾದ್ ಜೋಶಿ ವಿರುದ್ಧ ದೂರು ಎಫ್‍ಐಆರ್ ದಾಖಲಾಗಿದೆ,
ಪ್ರಲ್ಹಾದ್ ಜೋಶಿ ಸೋದರ ಗೋಪಾಲ್ ಜೋಶಿ, ಪುತ್ರ ಅಜಯ್ ಜೋಶಿ ಹಾಗೂ ಸಂಬಂಧಿಕರಾದ ವಿಜಯಲಕ್ಷ್ಮಿ ಅವರು ತನ್ನಿಂದ 1.75 ಕೋಟಿ ರೂ ಹಣ ಪಡೆದು ವಂಚಿಸಿದ್ದಾರೆಂದು ಸುನಿತಾ ಚೌಹ್ಹಾಣ್ ಆರೋಪಿಸಿದ್ದಾರೆ, ಅಷ್ಟೇ ಅಲ್ಲದೇ ಹಣವನ್ನು ವಾಪಸ್ ಕೇಳಿದ್ದಕ್ಕೆ ತನ್ನ ಮೇಲೆ ಜಾತಿ ನಿಂದನೆ ಮಾಡಿದ್ದಲ್ಲದೇ, ಹಲ್ಲೆ ಬೆದರಿಕೆಯನ್ನೂ ಹಾಕಿದ್ದಾರೆಂದು ಸುನಿತಾ ದೂರಿನಲ್ಲಿ ವಿವರಿಸಿದ್ದಾರೆ,