Connect with us

ದೇಶ

BPL CARD 13.87 ಲಕ್ಷ ಬಿಪಿಎಲ್ ಕಾರ್ಡ್ ರದ್ದು-ನಿಮ್ಮ ಕಾರ್ಡ್ ರದ್ದಾಗಿದ್ಯಾ ಹೀಗೆ ಚೆಕ್ ಮಾಡಿ

Published

on

ಬೆಂಗಳೂರು: ನಿಯಮ ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಪಡೆದಿದ್ದ ಸರಕಾರಿ ನೌಕರರು ಸೇರಿದಂತೆ ಒಟ್ಟು 13,87,639 ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ, ಈ ಬಗ್ಗೆ ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದು ನಿಯಮಾವಳಿಗೆ ವಿರುದ್ಧವಾಗಿ ಒಟ್ಟು 4,036 ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿರುವುದನ್ನು ಪತ್ತೆ ಮಾಡಲಾಗಿದೆ, ಈ ಪೈಕಿ ಈಗಾಗಲೇ 2,964 ಕುಟುಂಬಗಳ ಕಾರ್ಡ್‍ಗಳನ್ನು ರದ್ದುಪಡಿಸಲಾಗಿದೆ ಎಂದಿದ್ದಾರೆ ,
ಅನ್ನಭಾಗ್ಯ ಯೋಜನೆ ದುರ್ಬಳಕೆ ಮಾಡಿಕೊಂಡಿರುವ ಈ ಕಾರ್ಡ್‍ದಾರರಿಗೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲು ನಿರ್ಧರಿಸಲಾಗಿದೆ, ಕಳೆದ 6 ತಿಂಗಳನಿಂದ ಪಡಿತರ ಪಡೆಯದ 2.75 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‍ಗಳು, ಆದಾಯ ತೆರಿಗೆ ಪಾವತಿಸುವ 98,458 ಕುಟುಂಬಗಳು, ಆದಾಯ ಮಿತಿ ಜಾಸ್ತಿ ಇರುವ 10,09,479 ಕುಟುಂಬಗಳು ಸೇರಿ ಒಟ್ಟು 13,87,639 ಕಾರ್ಡ್‍ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ, ಈ ಪೈಕಿ 3.63 ಲಕ್ಷಕ್ಕೂ ಹೆಚ್ಚು ಕಾರ್ಡ್‍ಗಳನ್ನು ರದ್ದು ಮಾಡಲಾಗಿದೆ, 10.38 ಲಕ್ಷಕ್ಕೂ ಅಧಿಕ ಕಾರ್ಡ್ ರದ್ದುಪಡಿಸುವ ಪ್ರಕ್ರಿಯೆ ಬಾಕಿ ಉಳಿದಿವೆ.
ಈ ತೀರ್ಮಾನದಿಂದ ಒಟ್ಟು 18.70 ಲಕ್ಷಕ್ಕೂ ಹೆಚ್ಚು ಫಲಾನುಭಾವಿಗಳು ಬಿಪಿಎಲ್‍ನಿಂದ ಹೊರಗೆ ಹೋಗಲಿದ್ದಾರೆ ಎಂದು ಮುನಿಯಪ್ಪ ಹೇಳಿದ್ದಾರೆ.

ಕಾರ್ಡ್ ರದ್ದತಿ ಪರಿಶೀಲನೆ ಹೇಗೆ..?
ವಿಧಾನ 1 :
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಈ ಲಿಂಕ್ https://ahara.kar.nic.in.home ಕ್ಲಿಕ್ ಮಾಡಬೇಕು,

ವಿಧಾನ-2: ನಂತರ ಅದರಲ್ಲಿ ಇ-ರೇಷನ್ ಕಾರ್ಡ್ ನಲ್ಲಿ Show cancelled/suspended list ಮೇಲೆ ಕ್ಲಿಕ್ ಮಾಡಬೇಕು..

ದೇಶ

ವಿಜಯಪುರದ ಮಗುವಿನ ಅಪರೂಪದ ಸಾಧನೆ; ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ

Published

on

ವಿಜಯಪುರ: ಸಾಧನೆ ಮಾಡಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ವಿಜಯಪುರ ಜಿಲ್ಲೆಯ ಕೇವಲ 10 ತಿಂಗಳ ಪುಟ್ಟ ಬಾಲಕ ರಿಯಾನ್ಸ್ ಪಟ್ಟಣಶೆಟ್ಟಿ ಸಾಬೀತುಪಡಿಸಿದ್ದಾನೆ. ತನ್ನ ಅಸಾಧಾರಣ ಪ್ರತಿಭೆಯ ಮೂಲಕ **’ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’**ನಲ್ಲಿ ಸ್ಥಾನ ಪಡೆದಿರುವ ಈ ಪುಟ್ಟ ಬಾಲಕ ಇದೀಗ ರಾಜ್ಯದ ಗಮನ ಸೆಳೆದಿದ್ದಾನೆ.

ವಿಜಯಪುರ ನಗರದ ನಿವಾಸಿಗಳಾದ ಸಚಿನ್ ಪಟ್ಟಣಶೆಟ್ಟಿ ಹಾಗೂ ಸಿಂಚನಾ ದಂಪತಿಯ ಪುತ್ರನಾದ ರಿಯಾನ್ಸ್, 21 ಮೆಟ್ಟಿಲುಗಳನ್ನು ಕೇವಲ 36 ಸೆಕೆಂಡುಗಳಲ್ಲಿ ಹತ್ತುವ ಮೂಲಕ ಈ ಅಪರೂಪದ ಸಾಧನೆ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನ ಮಗು ಇಷ್ಟು ವೇಗವಾಗಿ ಮೆಟ್ಟಿಲು ಹತ್ತಿರುವುದು ಅಪರೂಪದ ಸಾಧನೆಯಾಗಿ ದಾಖಲಾಗಿದೆ.

ರಿಯಾನ್ಸ್ ಮನೆಯೊಳಗಿನ ಮೆಟ್ಟಿಲುಗಳನ್ನು ಸುಲಭವಾಗಿ ಹಾಗೂ ವೇಗವಾಗಿ ಹತ್ತುತ್ತಿರುವುದನ್ನು ಗಮನಿಸಿದ ತಾಯಿ ಸಿಂಚನಾ, ಆತನ ಸಾಮರ್ಥ್ಯವನ್ನು ಮತ್ತಷ್ಟು ಪರೀಕ್ಷಿಸಲು ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತುವಂತೆ ಪ್ರೋತ್ಸಾಹಿಸಿದರು. ಯಾವುದೇ ಭಯವಿಲ್ಲದೆ ಅವನ್ನೂ ಯಶಸ್ವಿಯಾಗಿ ಹತ್ತಿದ ಮಗುವಿನ ಪ್ರತಿಭೆಯನ್ನು ಕಂಡ ಪೋಷಕರು ಅದನ್ನು ವಿಶ್ವಕ್ಕೆ ಪರಿಚಯಿಸುವ ನಿರ್ಧಾರ ಕೈಗೊಂಡರು.

ರಿಯಾನ್ಸ್ ಮೆಟ್ಟಿಲು ಹತ್ತುವ ಸಂಪೂರ್ಣ ವಿಡಿಯೋ ಹಾಗೂ ಅಗತ್ಯ ದಾಖಲೆಗಳನ್ನು ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಲಾಯಿತು. ಸಂಸ್ಥೆಯ ಅಧಿಕಾರಿಗಳು ವಿಡಿಯೋ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಈ ಸಾಧನೆಯನ್ನು ಅಧಿಕೃತವಾಗಿ ವಿಶ್ವದಾಖಲೆಯಾಗಿ ಮಾನ್ಯ ಮಾಡಿ ಪ್ರಮಾಣಪತ್ರ ನೀಡಿದರು.

ರಿಯಾನ್ಸ್‌ನ ಈ ಸಾಧನೆ ಪಟ್ಟಣಶೆಟ್ಟಿ ಕುಟುಂಬದಲ್ಲಿ ಸಂತಸ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಪುಟ್ಟ ಬಾಲಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ವಿಶ್ವದಾಖಲೆ ನಿರ್ಮಿಸಿರುವ ರಿಯಾನ್ಸ್ ಭವಿಷ್ಯದಲ್ಲೂ ಇನ್ನಷ್ಟು ಸಾಧನೆ ಮಾಡಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

Continue Reading

ದೇಶ

ಭಾರತಕ್ಕೆ ಅಮೆರಿಕದ 500% ಸುಂಕದ ಶಾಕ್? ರಷ್ಯಾ ತೈಲ ಖರೀದಿಗೆ ಹೊಸ ಮಸೂದೆ

Published

on

ವಾಷಿಂಗ್ಟನ್: ರಷ್ಯಾದಿಂದ ತೈಲ, ನೈಸರ್ಗಿಕ ಅನಿಲ ಹಾಗೂ ಇತರ ಇಂಧನ ಉತ್ಪನ್ನಗಳನ್ನು ಖರೀದಿಸುವ ರಾಷ್ಟ್ರಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳುವ ಮಹತ್ವದ ಮಸೂದೆಗೆ ಅಮೆರಿಕದಲ್ಲಿ ವೇಗ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಒಪ್ಪಂದದ ಬಳಿಕ ನಾಲ್ವರು ಅಮೆರಿಕದ ಸೆನೆಟರ್‌ಗಳು ಈ ವಿಚಾರವನ್ನು ಘೋಷಿಸಿದ್ದು, ಮಸೂದೆ ಜಾರಿಯಾದರೆ ಭಾರತ, ಚೀನಾ ಮತ್ತು ಬ್ರೆಜಿಲ್ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಮಸೂದೆಯ ಪ್ರಕಾರ, ರಷ್ಯಾದಿಂದ ತೈಲ, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಉತ್ಪನ್ನಗಳು ಅಥವಾ ಯುರೇನಿಯಂ ಖರೀದಿಸುವ ದೇಶಗಳಿಂದ ಅಮೆರಿಕ ಆಮದು ಮಾಡಿಕೊಳ್ಳುವ ಸರಕು ಹಾಗೂ ಸೇವೆಗಳ ಮೇಲೆ ಶೇ 500ರವರೆಗೆ ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ಸಿಗಲಿದೆ. ಉಕ್ರೇನ್ ಯುದ್ಧಕ್ಕೆ ರಷ್ಯಾಗೆ ಹಣಕಾಸಿನ ಹರಿವು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.

ಈ ಮಸೂದೆಗೆ ಅಮೆರಿಕ ಸೆನೆಟ್‌ನಲ್ಲಿ ಈಗಾಗಲೇ 84 ಸೆನೆಟರ್‌ಗಳ ಬೆಂಬಲ ದೊರೆತಿದೆ. ಟ್ರಂಪ್ ಕೂಡ ಮಸೂದೆಗೆ ಬೆಂಬಲ ಸೂಚಿಸಿರುವುದಾಗಿ ಸೆನೆಟರ್ ಲಿಂಡ್ಸೆ ಗ್ರಹಾಂ ತಿಳಿಸಿದ್ದಾರೆ. ಆದರೆ, ಇದು ಇನ್ನೂ ಮತದಾನ ಮತ್ತು ಅಂತಿಮ ಅಂಗೀಕಾರದ ಹಂತದಲ್ಲಿದೆ.

ವಿಶ್ವದಲ್ಲೇ ರಷ್ಯಾದ ಕಚ್ಚಾ ತೈಲವನ್ನು ಅತಿ ಹೆಚ್ಚು ಖರೀದಿಸುವ ರಾಷ್ಟ್ರಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಒಟ್ಟು ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ಪಾಲು ಶೇ 40ರಿಂದ 53ರಷ್ಟು ಇದ್ದು, ಈ ಮಸೂದೆ ಜಾರಿಯಾದರೆ ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಆದಾಗ್ಯೂ, ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ದೇಶಕ್ಕೆ 180 ದಿನಗಳವರೆಗೆ ವಿನಾಯಿತಿ ನೀಡುವ ವಿಶೇಷಾಧಿಕಾರ ಅಮೆರಿಕ ಅಧ್ಯಕ್ಷರಿಗೆ ಮಸೂದೆಯಲ್ಲಿ ಕಲ್ಪಿಸಲಾಗಿದೆ. ಹೀಗಾಗಿ, ಭಾರತದಂತಹ ಮಿತ್ರ ರಾಷ್ಟ್ರಗಳಿಗೆ ವಿನಾಯಿತಿ ದೊರೆಯುತ್ತದೆಯೇ ಎಂಬುದು ಮುಂದಿನ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ.

ಪ್ರಸ್ತುತ ಮಸೂದೆ ಸೆನೆಟ್‌ನಲ್ಲಿ ಚರ್ಚೆಯ ಹಂತದಲ್ಲಿದ್ದು, ಅಂಗೀಕಾರವಾದರೆ ಜಾಗತಿಕ ತೈಲ ಮಾರುಕಟ್ಟೆ ಹಾಗೂ ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಮಹತ್ವದ ಪರಿಣಾಮ ಬೀರುವ ನಿರೀಕ್ಷೆಯಿದೆ.

Continue Reading

ದೇಶ

11 ವರ್ಷದ ಕಾಯುವಿಕೆಗೆ ಫಲ! ‘ಲೆನಿನ್’ ಹಿಟ್ ಬಳಿಕ ಭಾವುಕರಾದ ಅಖಿಲ್ ಅಕ್ಕಿನೇನಿ

Published

on

ಬೆಂಗಳೂರು: ಟಾಲಿವುಡ್ ಯುವ ನಟ ಅಖಿಲ್ ಅಕ್ಕಿನೇನಿ ಅಭಿನಯದ ಬಹುನಿರೀಕ್ಷಿತ ‘ಲೆನಿನ್’ ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರದ ಯಶಸ್ಸಿನ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಅಖಿಲ್ ಭಾವುಕರಾಗಿ ತಮ್ಮ ತಂದೆ, ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿತ್ರದ ಯಶಸ್ಸಿನಿಂದ ಭಾವುಕರಾದ ಅಖಿಲ್, ತಂದೆಯನ್ನು ಬಿಗಿಯಾಗಿ ಅಪ್ಪಿಕೊಂಡು ಕಣ್ಣೀರಿಟ್ಟರು. ಮಗನ ಸಿನಿ ಪಯಣದ ಏಳುಬೀಳುಗಳನ್ನು ಹತ್ತಿರದಿಂದ ಕಂಡಿದ್ದ ನಾಗಾರ್ಜುನ ಕೂಡ ಅಷ್ಟೇ ಭಾವುಕರಾಗಿ ಅಖಿಲ್ ಅವರನ್ನು ಅಪ್ಪಿಕೊಂಡ ಕ್ಷಣ ಅಭಿಮಾನಿಗಳ ಮನಸೂರೆಗೊಂಡಿದೆ. ಈ ತಂದೆ-ಮಗನ ಅಪರೂಪದ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

2015ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಖಿಲ್ ಅಕ್ಕಿನೇನಿ ಹಲವು ನಿರೀಕ್ಷೆಗಳೊಂದಿಗೆ ಸಿನಿ ಜೀವನ ಆರಂಭಿಸಿದ್ದರೂ, ದೊಡ್ಡ ಮಟ್ಟದ ಯಶಸ್ಸಿಗಾಗಿ ಸುಮಾರು 11 ವರ್ಷಗಳ ಕಾಲ ಕಾಯಬೇಕಾಯಿತು. ಅದರಲ್ಲೂ 2023ರಲ್ಲಿ ಬಿಡುಗಡೆಯಾದ ‘ಏಜೆಂಟ್’ ಚಿತ್ರದ ಸೋಲು, ಶೂಟಿಂಗ್ ವೇಳೆ ಸಂಭವಿಸಿದ ಅಪಘಾತ, ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳು ಹಾಗೂ ಮೂರು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದು ಅವರ ವೃತ್ತಿಜೀವನಕ್ಕೆ ದೊಡ್ಡ ಸವಾಲಾಗಿತ್ತು.

ನಿರ್ದೇಶಕ ಮುರಳಿ ಕಿಶೋರ್ ಅಬ್ಬುರು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಲೆನಿನ್’ ಚಿತ್ರದಲ್ಲಿ ನಾಗಾರ್ಜುನ ಸಹ-ನಿರ್ಮಾಪಕರಾಗಿದ್ದಾರೆ. ಕೌಟುಂಬಿಕ ಬಾಂಧವ್ಯ, ಸಾಹಸ, ಪ್ರೇಮಕಥೆ ಹಾಗೂ ಮಹಾಭಾರತದ ಸ್ಫೂರ್ತಿಯ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಅಖಿಲ್ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಲೆನಿನ್’ ಚಿತ್ರದ ಯಶಸ್ಸು ಅಖಿಲ್ ಅಕ್ಕಿನೇನಿ ಅವರ ಸಿನಿ ಬದುಕಿಗೆ ಹೊಸ ಚೈತನ್ಯ ತುಂಬಿದ್ದು, ಟಾಲಿವುಡ್‌ನಲ್ಲಿ ಅವರ ಭವಿಷ್ಯದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

Continue Reading

Trending