ರಾಜಕೀಯ
ನನ್ನ ಕಂಡ್ರೆ ಅವರಿಗೆ ಹೊಟ್ಟೆ ಉರಿ, ಅದಕ್ಕೆ ಮುಡಾ…ಮುಡಾ ಅಂತಾರೆ-ಸಿಎಂ
ಮೈಸೂರು: ಮುಡಾ..ಮುಡಾ ಹಗರಣ ಎಂದು ಸುಳ್ಳು ಆರೋಪ ಮಾಡುವ ಕುಮಾರಸ್ವಾಮಿ ಯಡಿಯೂರಪ್ಪ, ಅಶೋಕ್, ವಿಜೇಯೇಂದ್ರ ಪ್ರಹ್ಲಾದ್ ಜೋಶಿಗೆ ನನ್ನ ಕಂಡರೆ ಹೊಟ್ಟೆ ಕಿಚ್ಚು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು,
ಸ್ವಕ್ಷೇತ್ರ ವರುಣಾದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಇಂದು ಶಂಕುಸ್ಧಾಪನೆ ನೆರವೇರಿಸಿ ಮಾತನಾಡಿದ ಸಿಎಂ ಮುಡಾ ಹಗರಣ ಅಂತಾ ಆರೋಪ ಮಾಡುತ್ತಿದ್ದಾರೆ, ನನ್ನ ಭಾಮೈದ ತೆಗೆದುಕೊಂಡ ಜಮೀನನ್ನು ತನ್ನ ತೆಂಗಿಗೆ ಕೊಟ್ಟಿದ್ದಾನೆ, ಅದಕ್ಕೆ ಸೈಟ್ ಬಂದಿದ್ದವು, ಅದನ್ನೇ ದೊಡ್ಡ ವಿವಾದ ಮಾಡಿದರು, ಅದಕ್ಕೇ ಬೇಡವೇ ಬೇಡ ಎಂದು ಮುಡಾಗೆ ಸೈಟ್ ವಾಪಸ್ ಕೊಟ್ಟಿದ್ದೇವೆ, ನಾನು ಒಬ್ಬ ಸಿಎಂ ಆಗಿ ಈಗ ಮೈಸೂರಿನಲ್ಲಿ ಮನೆ ಕಟ್ಟುತ್ತಿದ್ದೇನೆ, ಈವರೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ, 40 ವರ್ಷಗಳಿಂದ ನನಗೆ ಸ್ವಂತ ಮನೆಯೂ ಇಲ್ಲ ಎಂದರು,
ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಿಂದ ಯಾವ ಕಾರಣಕ್ಕೂ ಧೃತಿಗೆಡಲ್ಲ, ಯಾರಿಗೂ ಜಗ್ಗಲ್ಲ- ಬಗ್ಗುವುದೂ ಇಲ್ಲ ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ವಿಪಕ್ಷದವರು ವಿರುದ್ಧ ಸಿಎಂ ಹರಿಹಾಯ್ದರು..
ದೇಶ
“ಕೊಟ್ಟ ಮಾತು ಉಳಿಸಿಕೊಳ್ಳಿ”; DCM D K Shivkumar ಸಿಂಹಗರ್ಜನೆ
ನವದೆಹಲಿ: ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಕರ್ನಾಟಕ ಕಾಂಗ್ರೆಸ್‌ನ ಹೈವೋಲ್ಟೇಜ್ ಸಭೆ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಉಪ ಮುಖ್ಯಮಂತ್ರಿ D. K. Shivakumar ಹೈಕಮಾಂಡ್ ನಾಯಕರ ಎದುರೇ ಖಡಕ್ ನಿಲುವು ತಾಳಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಸರ್ಕಾರ ರಚನೆಯ ವೇಳೆ ನಡೆದಿದ್ದ ಅಧಿಕಾರ ಹಂಚಿಕೆ ಒಪ್ಪಂದವನ್ನು ಜಾರಿಗೆ ತರಬೇಕು ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದು, ಈ ಸಂಬಂಧ ಮೂರು ಮಹತ್ವದ ಷರತ್ತುಗಳನ್ನು ಕಾಂಗ್ರೆಸ್ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.
ಮೊದಲ ಷರತ್ತಾಗಿ, “ಸರ್ಕಾರ ರಚನೆಯಾಗುವಾಗ ನಡೆದ ಮಾತುಕತೆಯಂತೆ ಅಧಿಕಾರ ಹಂಚಿಕೆ ಜಾರಿಯಾಗಬೇಕು. ಮುಖ್ಯಮಂತ್ರಿ Siddaramaiah ಹಾಗೂ ಹೈಕಮಾಂಡ್ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಕಾಲಮಿತಿ ಮುಗಿದಿರುವುದರಿಂದ ಇದೀಗ ನಾಯಕತ್ವ ಬದಲಾವಣೆ ಆಗಲೇಬೇಕು” ಎಂದು ಡಿಕೆಶಿ ಹೇಳಿದ್ದಾರೆ ಎನ್ನಲಾಗಿದೆ.
ಎರಡನೇ ಷರತ್ತಿನಲ್ಲಿ, ಒಂದು ವೇಳೆ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಲು ತೀರ್ಮಾನಿಸಿದ್ದರೆ, ಅದನ್ನು ಹೈಕಮಾಂಡ್ ಹಾಗೂ ಸಿಎಂ ಜಂಟಿಯಾಗಿ ಬಹಿರಂಗವಾಗಿ ಘೋಷಿಸಬೇಕು. ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲ ಹಾಗೂ ಊಹಾಪೋಹಗಳಿಗೆ ತೆರೆ ಎಳೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೂರನೇ ಮತ್ತು ಅತ್ಯಂತ ಸ್ಫೋಟಕ ಷರತ್ತಾಗಿ, “ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ, ಉಪ ಮುಖ್ಯಮಂತ್ರಿ ಹುದ್ದೆಯೂ ಬೇಡ. ಎರಡಕ್ಕೂ ರಾಜೀನಾಮೆ ನೀಡಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ” ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಧರ್ಮಸಂಕಟ ಉಂಟುಮಾಡಿದ್ದು, ದೆಹಲಿಯ ಸಭೆಯಲ್ಲಿ ಕೈಗೊಳ್ಳುವ ಅಂತಿಮ ನಿರ್ಧಾರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ Mallikarjun Kharge, Rahul Gandhi ಹಾಗೂ ಹಿರಿಯ ನಾಯಕರು ಭಾಗವಹಿಸಿದ್ದಾರೆ.
ದೇಶ
2028ರವರೆಗೆ ಸಿದ್ದರಾಮಯ್ಯ ಮುಂದುವರಿಕೆ? ಡಿಕೆಶಿಗೆ ಭವಿಷ್ಯದ ಭರವಸೆ
ನವದೆಹಲಿ: ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿ ‘ಇಂದಿರಾ ಭವನ’ದಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಹೈವೋಲ್ಟೇಜ್ ಸಭೆಯಲ್ಲಿ ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಯಾವುದೇ ತಕ್ಷಣದ ನಾಯಕತ್ವ ಬದಲಾವಣೆ ಇಲ್ಲದೆ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿವೆ.
ಕಾಂಗ್ರೆಸ್ ನಾಯಕ Rahul Gandhi ನೇತೃತ್ವದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಒಗ್ಗಟ್ಟನ್ನು ಕಾಪಾಡಿಕೊಳ್ಳುವ ಬಗ್ಗೆ ಪ್ರಮುಖ ಚರ್ಚೆ ನಡೆದಿದೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ಪಕ್ಷದ ಮುಖ್ಯ ಗುರಿ ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ. ಜೊತೆಗೆ ಯಾವುದೇ ರೀತಿಯ ಬಣ ರಾಜಕೀಯ ಅಥವಾ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸಹಿಸುವುದಿಲ್ಲ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಸಭೆಯಲ್ಲಿ ಮುಖ್ಯಮಂತ್ರಿ Siddaramaiah ಹಾಗೂ ಉಪ ಮುಖ್ಯಮಂತ್ರಿ D. K. Shivakumar ನಡುವಿನ ನಾಯಕತ್ವ ಸಮೀಕರಣದ ಕುರಿತೂ ಚರ್ಚೆ ನಡೆದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, 2028ರ ವಿಧಾನಸಭಾ ಚುನಾವಣೆಯ ಬಳಿಕ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎಂದು ಹೇಳಲಾಗುತ್ತಿದೆ.
ಅವರೆಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಸರ್ಕಾರ ಮುಂದುವರಿಯಲಿದ್ದು, ಪಕ್ಷವನ್ನು ತಳಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿದೆ. ಇದೇ ವೇಳೆ ಬಹುಕಾಲದಿಂದ ಚರ್ಚೆಯಲ್ಲಿರುವ ಸಚಿವ ಸಂಪುಟ ಪುನರ್‌ರಚನೆ ಕುರಿತು ಕೂಡ ಸಮಾಲೋಚನೆ ನಡೆದಿದ್ದು, ನಿಷ್ಠಾವಂತ ನಾಯಕರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ.
ಈ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಜಿಬಿಎ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಲಾಗಿದೆ. ಇಬ್ಬರೂ ನಾಯಕರು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು ಎಂದು ರಾಹುಲ್ ಗಾಂಧಿ ಸಂದೇಶ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ Mallikarjun Kharge ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ಪ್ರಶ್ನೆಗೆ ಕೂಡ ತೆರೆ ಬಿದ್ದಿದ್ದು, ಅವರು ರಾಜ್ಯ ರಾಜಕೀಯಕ್ಕೆ ಮರಳುವುದಿಲ್ಲ ಎಂಬ ಸಂದೇಶ ಸಭೆಯಲ್ಲಿ ಸ್ಪಷ್ಟವಾಗಿದೆ.
ದೇಶ
ದೆಹಲಿಯಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ; ಕನ್ನಡ ಭವನದಲ್ಲಿ ಸಚಿವರ ಉಪಹಾರ ಸಭೆ
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ Siddaramaiah ಅವರು ಇಂದು ಬೆಳಗ್ಗೆ ರಾಜಧಾನಿಯ ಕನ್ನಡ ಭವನದಲ್ಲಿ ರಾಜ್ಯದ ಪ್ರಮುಖ ಸಚಿವರು ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ಉಪಹಾರ ಸೇವನೆ ಮಾಡುವ ಮೂಲಕ ಪರೋಕ್ಷವಾಗಿ ತಮ್ಮ ರಾಜಕೀಯ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಈ ಉಪಹಾರ ಸಭೆಯಲ್ಲಿ ಗೃಹ ಸಚಿವ G. Parameshwara, ಸಚಿವರಾದ Satish Jarkiholi, H. C. Mahadevappa, Bairathi Suresh, K. J. George, M. B. Patil ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಜೊತೆಗೆ ಹಿರಿಯ ಕಾಂಗ್ರೆಸ್ ಮುಖಂಡ B. K. Hariprasad ಹಾಗೂ ಕಾನೂನು ಸಲಹೆಗಾರ ಪೊನ್ನಣ್ಣ ಸಹ ಉಪಸ್ಥಿತರಿದ್ದರು.
ಈ ವೇಳೆ ರಾಜ್ಯ ಕಾಂಗ್ರೆಸ್‌ನ ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಹಾಗೂ ಸಚಿವ ಸಂಪುಟ ಪುನರ್‌ರಚನೆ ಕುರಿತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ. ಹೈಕಮಾಂಡ್ ಭೇಟಿಗೂ ಮುನ್ನ ರಾಜ್ಯದ ಪ್ರಭಾವಿ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.
ಇದೇ ವೇಳೆ ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿ ‘ಇಂದಿರಾ ಭವನ’ದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಸಭೆ ಆರಂಭಿಸಿದೆ. ಉಪ ಮುಖ್ಯಮಂತ್ರಿ D. K. Shivakumar ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದಾರೆ.
ಎಐಸಿಸಿ ಅಧ್ಯಕ್ಷ Mallikarjun Kharge, ಲೋಕಸಭೆ ವಿರೋಧ ಪಕ್ಷದ ನಾಯಕ Rahul Gandhi, ಎಐಸಿಸಿ ಪ್ರಧಾನ ಕಾರ್ಯದರ್ಶಿ K. C. Venugopal ಹಾಗೂ ರಾಜ್ಯ ಉಸ್ತುವಾರಿ Randeep Singh Surjewala ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಇದರ ಜೊತೆಗೆ ಜೂನ್ 18ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
-
ದೇಶ4 hours agoದೆಹಲಿಯಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ; ಕನ್ನಡ ಭವನದಲ್ಲಿ ಸಚಿವರ ಉಪಹಾರ ಸಭೆ
-
ದೇಶ5 hours ago‘ಕಾಕ್ರೋಚ್ ಜನತಾ ಪಾರ್ಟಿ’ಗೆ ಅಧಿಕೃತ ರೂಪ? ಚುನಾವಣಾ ಆಯೋಗಕ್ಕೆ ಅರ್ಜಿ
-
ದೇಶ5 hours agoಡಿಕೆಶಿಗೆ ಹೊಸ ಸವಾಲಾ? ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾರಕಿಹೊಳಿ ಲಾಬಿ
-
ದೇಶ1 hour agoಹಕಿಂಪೂರ್ ಗಡಿಯಲ್ಲಿ ಭಾರಿ ಜನಸಮೂಹ; BSF ಅನುಮತಿಗಾಗಿ ಕಾದಿರುವ ಬಾಂಗ್ಲಾ ನಿವಾಸಿಗಳು
-
ದೇಶ4 hours agoಇಂದಿರಾ ಭವನದಲ್ಲಿ ಮೂರು ಸುತ್ತಿನ ಸಭೆ; ಕರ್ನಾಟಕ ಸಿಎಂ ಬದಲಾವಣೆ ಚರ್ಚೆ ತೀವ್ರ
-
ಆರೋಗ್ಯ4 hours agoWHO ಎಚ್ಚರಿಕೆ ಬಳಿಕ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮ; ವಿಜಯವಾಡದಲ್ಲಿ ಕ್ಯಾಂಪ್
-
ದೇಶ4 hours agoಸಿದ್ದರಾಮಯ್ಯ ರಾಜೀನಾಮೆ ಊಹಾಪೋಹಕ್ಕೆ ಹೊಸ ತಿರುವು; ಡಿಕೆಶಿಗೆ ಮತ್ತೆ ನಿರಾಸೆಯೇ?
-
ದೇಶ1 hour ago“ಗೋಹತ್ಯೆ ನಿಲ್ಲಿಸಿ, ಗೋವಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿ”; ಇಕ್ಬಾಲ್ ಅನ್ಸಾರಿ ಮನವಿ
