ಬೆಂಗಳೂರು

ಬಿಯರ್ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್!

ಬೆಂಗಳೂರು: ಕರ್ನಾಟಕದ ಮದ್ಯಪಾನ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ ತಟ್ಟಿದೆ, ಬಿಯರ್ ಬೆಲೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ,
ಭಾರತೀಯ ಬ್ರೂವರ್ಸ್ ಅಸೋಸಿಯೇಷನ್ (ಬಿಎಐ) ಔಷಚಾರಿಕವಾಗಿ ಕರ್ನಾಟಕ ಸರ್ಕಾರಕ್ಕೆ ಆಲ್ಕೋಹಾಲ್ ಅಂಶ ವರ್ಗೀಕರಣದ ಆಧಾರದ ಮೇಲೆ ಸುಂಕ ಹೆಚ್ಚಳವನ್ನು ಪ್ರಸ್ತಾಪಿಸುವ ತನ್ನ ಕರಡು ನಿಯಮಗಳನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದೆ, ರಾಜ್ಯದಲ್ಲಿ ಸ್ಟ್ರಾಂಗ್ ಬಿಯರ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ,
ಕರಡು ಅಧಿಸೂಚನೆಯ ಪ್ರಕಾರ ಹೆಚ್ಚಿನ ಆಲ್ಕೋಹಾಲ್ ಹೊಂದಿರುವ ಬಿಯರ್‍ಗಳ ಮೇಲೆ 10% ರಿಂದ 20% ರಷ್ಟು ಬೆಲೆ ಹೆಚ್ಚಳಕ್ಕೆ ಪ್ರಸ್ತಾಪ ಮಾಡಲಾಗಿದೆ, ಗ್ರಾಹಕರಿಗೆ ಬಿಯರ್‍ಗಳಲ್ಲಿ ಸಕ್ಕರೆ ಅಂಶದ ಪ್ರಮಾಣವನ್ನು ಘೋಷಿಸುವಂತೆ ಸರ್ಕಾರವು ರಾಜ್ಯದ ಬಿಯರ್ ತಯಾರಕರನ್ನುಸೂಚಿಸಿದೆ, ಅದರೆ ಬಿಎಐ ಈ ಕ್ರಮವನ್ನು ವಿರೋಧಿಸಿದೆ,
ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಮದ್ಯದ ಬೆಲೆ ಹೊಂದಿರುವ ಕರ್ನಾಟಕ ಕಳೆದ 2 ವರ್ಷಗಳಲ್ಲಿ 2 ಬಾರಿ ಮದ್ಯದ ಬೆಲೆಯನ್ನು ಪರಿಷ್ಕರಿಸಿದೆ, ಇದೀಗ ಮೂರನೇ ಬಾರಿಗೆ ಬೆಲೆ ಹೆಚ್ಚಳ ಮಾಡಲು ಮುಂದಾಗಿರುವುದರಿಂದ ಮದ್ಯಪ್ರಿಯರಿಗೆ ಶಾಕ್ ತಟ್ಟಿದೆ,

Leave a Reply

Your email address will not be published. Required fields are marked *

Trending

Exit mobile version