ದೇಶ

ಅಮೆರಿಕ ಅಧ್ಯಕ್ಷೀಯ ಚುನಾವಣೆ; ಟ್ರಂಪ್‌ಗೆ ಐತಿಹಾಸಿಕ ಗೆಲುವು

ನ್ಯೂಯಾರ್ಕ್‌: ಭಾರಿ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ನ ಡೊನಾಲ್ಡ್‌ ಟ್ರಂಪ್‌ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಲು ಸಜ್ಜಾಗಿರುವ ಟ್ರಂಪ್‌, ವಿಶ್ವದ ದೊಡ್ಡಣ್ಣ ರಾಷ್ಟ್ರದಲ್ಲಿ 2ನೇ ಬಾರಿಗೆ ಚುಕ್ಕಾಣಿ ಹಿಡಿದು ಇತಿಹಾಸ ಸೃಷ್ಟಿಸಲಿದ್ದಾರೆ.

ಈ ಚುನಾವಣೆಯಲ್ಲಿ ವಿಜೇತರನ್ನು ನಿರ್ಧರಿಸುವ ಎಲೆಕ್ಟೋರಲ್ ಕಾಲೇಜ್‌ (ಚುನಾಯಿತರ ಕೂಟ) ಸಂಖ್ಯೆಗಳಿಗೆ ಸಂಬಂಧಿಸಿದಂತೆ, ಟ್ರಂಪ್ 267 ರೊಂದಿಗೆ ಮುನ್ನಡೆಯಲ್ಲಿದ್ದು, ಪ್ರಚಂಡ ಗೆಲುವಿನ ಅಂಚಿನಲ್ಲಿದ್ದಾರೆ. ಆದರೆ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ 214 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕವೇ ಆಗಿರುವ 7 ಸ್ವಿಂಗ್‌ ರಾಜ್ಯಗಳ ಪೈಕಿ ನಾಲ್ಕರಲ್ಲಿ ಟ್ರಂಪ್‌ ಜಯಭೇರಿ ಬಾರಿಸಿದ್ದಾರೆ.

ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ, ಜಾರ್ಜಿಯಾ, ನಾರ್ತ್ ಕೆರೊಲಿನಾ, ಟೆಕ್ಸಾಸ್, ಫ್ಲೋರಿಡಾ, ಇಂಡಿಯಾನಾ, ಕೆಂಟುಕಿ ಒಳಗೊಂಡಂತೆ 30 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಡೆಮಾಕ್ರಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೇವಲ 20 ರಾಜ್ಯಗಳಲ್ಲಿ ಜಯಗಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version