ಚುನಾವಣೆ

FACT CHECK ಟ್ರಂಪ್ ಭಾಷಣದ ವೇಳೆ ಜನ ಮೋದಿ ಮೋದಿ ಎಂದು ಕೂಗಿದ್ರಾ? ಇಲ್ಲಿದೆ ಅಸಲಿಯತ್ತು

ವಾಷಿಂಗ್ಟನ್: ಟ್ರಂಟ್ ಅವರ ವಿಜಯೋತ್ಸವ ಭಾಷಣದಲ್ಲಿ ಮೋದಿ, ಮೋದಿ ಎಂದು ಕೂಗಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಅದರೆ ಇದೀಗ ಆ ವಿಡಿಯೋ ಎಡಿಟ್ ಮಾಡಿರುವುದು ಎನ್ನಲಾಗಿದೆ,
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಗೆಲುವಿನ ನಂತರ ವಿಜಯದ ಭಾಷಣ ಮಾಡಿದ್ದರು, ಈ ವೇಳೆ ಜನರು ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಜಪಿಸುತ್ತಿರುವ ವಿಡಿಯೋ ವೈರೆಲ್ ಆಗಿದೆ,
ಅಮೆರಿಕವನ್ನು ಮತ್ತೆ ಆರೋಗ್ಯವಂತರನ್ನಾಗಿ ಮಾಡಿ ಎಂದು ಟ್ರಂಪ್ ಹೇಳುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ, ಅದರ ನಂತರ ಜನರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾರೆ, ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್ ಅವರೊಬ್ಬ ಮಹಾನ್ ವ್ಯಕ್ತಿ ಎಂದು ನನಗೆ ತಿಳಿದಿದೆ ಎಂದು ಹೇಳುತ್ತಾರೆ,
ಅದರೆ ಈ ವಿಡಿಯೋದ ಅಸಲಿಯತ್ತು ಇದೀಗ ಬಯಲಾಗಿದೆ, ಟ್ರಂಪ್ ಅವರ ಸಂಪೂರ್ಣ ಭಾಷಣವಿರುವ ವಿಡಿಯೋದಲ್ಲಿ ಯೂಟ್ಯೂಬ್ ವಿಡಿಯೋದಲ್ಲಿ 19 ನಿಮಿಷ 37 ಸೆಕೆಂಡ್‍ನಲ್ಲಿ ಈ ವಿಡಿಯೋವನ್ನು ಗಮನಿಸಬಹುದಾಗಿದೆ, ಅದರಲ್ಲಿ ಮೋದಿ ಘೋಷಣೆಯಿಲ್ಲ, ಬದಲಿಗೆ ಟ್ರಂಪರ ಮಿತ್ರ ರಾಬರ್ಟ್ ಎಫ್ ಕೆನಡಿ ಜೂನಿಯರ್ ಗಾಗಿ ಜನರು ಘೋಷಣೆ ಕೂಗಿದ್ದಾರೆ, ಈ ವೇಳೆ ಜನರು ಮೋದಿ ಬದಲಿಗೆ ಬಾಬಿ ಎಂಬ ಅಡ್ಡಹೆಸರನ್ನು ಕೂಗಿದ್ದಾರೆ.
ಭಾಷಣದ ವೇಳೆ ಒಮ್ಮೆಯೂ ಜನ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜಪಿಸಲಿಲ್ಲ, ಟ್ರಂಪ್ ಕೂಡ ಮೋದಿಯನ್ನು ಪ್ರಸ್ತಾಪಿಸಲಿಲ್ಲ ಎನ್ನಲಾಗಿದೆ,

Leave a Reply

Your email address will not be published. Required fields are marked *

Trending

Exit mobile version