ಬೆಂಗಳೂರು
ರಾಮೇಶ್ವರಂ ಕೆಫೆ ಬ್ಲ್ಯಾಸ್ಟ್ ಗೆ ಪಾಕ್ ಲಿಂಕ್..!

ಬೆಂಗಳೂರು: ದೇಶವನ್ನೇ ಬೆಚ್ಚಿ ಬೀಳಿಸಿದದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ, ಸ್ಫೋಟಕ್ಕೂ ಪಾಕಿಸ್ತಾನಕ್ಕೂ ನಂಟಿರುವ ವಿಚಾರ ಈಗ ಚಾರ್ಚ್ ಶೀಟ್ ನಲ್ಲಿ ಬಯಲಾಗಿದೆ,
ಬ್ಲ್ಯಾಸ್ಟ್ ಸಂಬಂಧ ಈ ಹಿಂದೆಯೇ ಜಾರ್ಜ್‍ಶೀಟ್ ಸಲ್ಲಿಸಿದ್ದ ಎನ್‍ಐಎ ಇದೀಗ ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ, ಸ್ಫೋಟಕ್ಕೂ ಪಾಕಿಸ್ತಾನಕ್ಕೂ ನಂಟಿರುವ ವಿಚಾರ ಈಗ ಬಯಲಾಗಿದೆ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಪಾಕ್ತಿಸ್ತಾನದ ನಂಟಿದ್ದು ಪಾಕ್ ಮೂಲದ ಶಂಕಿತ ಉಗ್ರ ಎ6 ಫೈಸಲ್ ಸದ್ಯ ಪಾಕಿಸ್ತಾನದಲ್ಲಿದ್ದಾನೆ ಎನ್ನಲಾಗಿದೆ, ಮಂಗಳೂರು ಕುಕ್ಕರ್ ಸ್ಫೋಟದ ಬಳಿಕ ತಾಹಾ ಮತ್ತು ಶಾಜಿಬ್ ನಾಪತ್ತೆಯಾಗಿದ್ದರು, ಕೆಲಕಾಲದ ಬಳಿಕ ಮತ್ತೆ ವಾಪಾಸ್ ಬೆಂಗಳೂರಿಗೆ ಬಂದಿದ್ದರು, ಆಗ ಮುಜಾಮಿಲ್ ಷರೀಫ್ ಜೊತೆಗೆ ಪರಿಚಯವಾಗಿತ್ತು, ಮುಜಾಮಿಲ್ ಮೆಜೆಸ್ಟಿಕ್ ಬಳಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಇದೇ ಮುಜಾಮಿಲ್ ಷರೀಫ್ ನ ತಾಹಾ ಮತ್ತು ಶಾಜಿಬ್ ಮನಪರಿವರ್ತಿಸಿ ಐಸಿಸ್ ಗೆ ಸೇರ್ಪೆಡೆ ಮಾಡಿದ್ದರು, ಮೊದಲ ಹಂತದಲ್ಲಿ ಕೆಲವು ದುಷ್ಕøತ್ಯ ನಡೆಸಲು ಮುಜಾಮಿಲ್ ಗೆ ತಾಹಾ ಮತ್ತು ಶಾಜಿಬ್ ಟಾಸ್ಕ್ ನೀಡಿದ್ದರು,
ಫೆಬ್ರವರಿ 20 ರಂದು ಶಾಜಿಬ್ ಚೆನ್ನೈನಿಂದ ಬೆಂಗಳೂರಿಗೆ ಬಂದು ಕೆಆರ್ ಪುರಂ ಟಿನ್ ಫ್ಯಾಕ್ಟರಿ ಬಳಿ ಇಳಿದು, ಕುಂದಲಹಳ್ಳಿಗೆ ಬಂದು ರಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್ ಇಟ್ಟಿದ್ದರ ಬಗ್ಗೆ ಎನ್‍ಐಎ ಎಳೆ ಎಳೆಯಾಗಿ ಚಾರ್ಚ್ ಶೀಟ್ ನಲ್ಲಿ ಮಾಹಿತಿ ನೀಡಲಾಗಿದೆ,