Connect with us

ಸಿನಿಮಾ

ಪ್ರಭಾಸ್ ಅಭಿನಯದ‌ ಸಲಾರ್ ಚಿತ್ರ ರಿಲೀಸ್‌ ಮುಂದುಡಿಕೆ! ಹಣವಾಪಸ್….

Published

on

ಸಲಾರ್ ಪ್ರಭಾಸ್ ಅಭಿನಯದ ಮತ್ತೊಂದು ಅದ್ಧೂರಿ ಆಕ್ಷನ್ ಚಿತ್ರ. ಈ ಚಿತ್ರವನ್ನು ಕೆಜಿಫ್ ನಿರ್ದೆಶಕ ಪ್ರಶಾಂತ್ ನೀಲ್ ನಿರ್ದೆಶಿಸಿದ್ದಾರೆ. ಭಾರೀ ನಿರೀಕ್ಷೆಗಳ ನಡುವೆ ಬರುತ್ತಿರುವ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಚಿತ್ರ ಸೆಪ್ಟೆಂಬರ್ 28 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಆದರೆ, ಈ ಸಿನಿಮಾದ ಗ್ರಾಫಿಕ್ಸ್ ರ‍್ಕ್ ಕಂಪ್ಲೀಟ್ ಆಗದ ಕಾರಣ ಸಿನಿಮಾವನ್ನು ಮುಂದೂಡಲಾಗುತ್ತಿದೆಯಂತೆ.ಈ ಹಿನ್ನಲೆಯಲ್ಲಿ ಸಿನಿಮಾ ರಿಲೀಸ್ ಡಿಸೆಂಬರ್ ಗೆ ಮುಂದೂಡಲಾಗಿದೆ. ಡಿಸೆಂಬರ್ ನಲ್ಲಿ ಈ ಸಿನಿಮಾ ಬರಲಿದೆ ಎಂಬ ಮಾತು ಕೇಳಿಬರುತ್ತಿದೆ.

ಡಿಸೆಂಬರ್‌ನಲ್ಲಿ ಸಿನಿಮಾ ಬಂದರೆ ಟಾಲಿವುಡ್‌ನಲ್ಲಿ ದೊಡ್ಡ ಸಿನಿಮಾಗಳಿಲ್ಲದ ಕಾರಣ ಆರಾಮವಾಗಿ ರಿಲೀಸ್ ನಡೆಯಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಆದರೆ ಸಂಕ್ರಾಂತಿಗೆ ಬಂದರೆ 5 ಸಿನಿಮಾಗಳು ಈ ಸಲಾರ್ ಕೂಡಾ ಅದೇ ಸಮಯಕ್ಕೆ ರಿಲೀಸ್ ಆದರೆ ಟಫ್ ಫೈಟ್ ಇರುತ್ತದೆ. ಸಲಾರ್ ಚಿತ್ರ ರಿಲೀಸ್ ಮುಂದೂಡಿಕೆ ಆದರೆ ಟೈಗರ್ ನಾಗೇಶ್ವರ ರಾವ್ ಸಿನಿಮಾ ಪ್ರಿಪೋನ್ ಆಗಲಿದೆಯಂತೆ. ಸಲಾರ್ ಜಾಗಕ್ಕೆ ಬರಲಿದೆ. ಆದರೆ ಸಲಾರ್ ಚಿತ್ರತಂಡ ಇದುವರೆಗೂ ತಮ್ಮ ಸಿನಿಮಾವನ್ನು ಮುಂದೂಡುವುದಾಗಿ ಅಧಿಕೃತವಾಗಿ ಘೋಷಿಸಿಲ್ಲ. ಈ ಸಿನಿಮಾದ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ವಿಷಯ ಏನಪ್ಪಾ ಅಂದರೆ ಸಲಾರ್​ಗೆ ಬುಕ್ಕಿಂಗ್ ಓಪನ್ ಮಾಡಿದಾಗ ಯಾವ ಸಿನಿಮಾಗೂ ಸಿಗದ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಸಲಾರ್ ಮುಂದೂಡುತ್ತಿರುವುದರಿಂದ  ಬುಕ್ ಮಾಡಿದವರಿಗೆ ಹಣ ವಾಪಸ್ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಇದು ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಅಭೂತಪೂರ್ವ  ಬ್ಯುಸಿನೆಸ್ ಮಾಡುತ್ತಿದೆಯಂತೆ. ಈ ಚಿತ್ರದ ಬಗ್ಗೆ, ನಿರ್ಮಪಕರು ತೆಲುಗು ರಾಜ್ಯಗಳ ಹಕ್ಕುಗಳಿಗಾಗಿ 200 ಕೋಟಿಗೂ ಹೆಚ್ಚು ಕೋಟ್ ಮಾಡಿದ್ದಾರೆ. ಈ ಚಿತ್ರದ ಹಕ್ಕುಗಳಿಗಾಗಿ ದಿಲ್ ರಾಜು ಮತ್ತು ಅಲ್ಲು ಅರವಿಂದ್ ಜೊತೆಗೆ ಪೀಪಲ್ ಮೀಡಿಯಾ ಕೂಡ ಪೈಪೋಟಿ ನಡೆಸುತ್ತಿದೆ. ಆದರೆ ದಿಲ್ ರಾಜು ಈ ಹಕ್ಕುಗಳನ್ನು ಪಡೆದುಕೊಂಡಿದ್ದಾರಂತೆ. ಈ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಸ್ಟಾರ್ ಮಾ ಭಾರೀ ಮೊತ್ತ ನೀಡಿ ಖರೀದಿಸಿದೆಯಂತೆ. ಕೆಜಿಫ್ ಚಿತ್ರಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಂಸ್ ನರ‍್ಮಾಣ ಮಾಡಿದ್ದು, ದೇಶಾದ್ಯಂತ ಪ್ರಭಾಸ್ ಅಭಿಮಾನಿಗಳು ‘ಸಾಲಾರ್’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

Continue Reading

ದೇಶ

4 ಗಂಟೆಗೂ ಬೋರ್ ಇಲ್ಲ: ಕೊಹ್ಲಿ ರಿವ್ಯೂ ವೈರಲ್

Published

on

By

ಬೆಂಗಳೂರು, ಎ.7: ನಿರ್ದೇಶಕ Aditya Dhar ಅವರ ಭರ್ಜರಿ ಸಿನಿಮಾ Dhurandhar-2 ಇದೀಗ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ನಿರ್ಮಿಸುತ್ತಿದೆ. ನಟ Ranveer Singh ಅಭಿನಯದ ಈ ಚಿತ್ರ ಈಗಾಗಲೇ ಭಾರತದಲ್ಲಿ ₹985 ಕೋಟಿಗೂ ಅಧಿಕ ಗಳಿಕೆ ಮಾಡಿ, ಸಾವಿರ ಕೋಟಿ ಕ್ಲಬ್ ಸೇರುವತ್ತ ದೌಡಾಯಿಸುತ್ತಿದೆ.

ಚಿತ್ರದ ಯಶಸ್ಸಿಗೆ ಮತ್ತಷ್ಟು ಬಲ ನೀಡುವಂತೆ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ Virat Kohli ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯೆ ನೀಡಿದ ಕೊಹ್ಲಿ, “ಭಾರತದಲ್ಲಿ ಇಂತಹ ಸಿನಿಮೀಯ ಅನುಭವವನ್ನು ನಾನು ನೋಡಿಲ್ಲ. ನಾಲ್ಕು ಗಂಟೆಗಳ ಕಾಲ ಒಂದೇ ಕ್ಷಣವೂ ಬೋರ್ ಆಗಲಿಲ್ಲ. ನಿರ್ದೇಶಕ ಆದಿತ್ಯ ಧರ್ ಅವರ ಪ್ರತಿಭೆ ಅದ್ಭುತ. ಆದರೆ ರಣವೀರ್ ಸಿಂಗ್ ಅಭಿನಯ ಈ ಚಿತ್ರದಲ್ಲಿ ಹೊಸ ಮಟ್ಟ ತಲುಪಿದೆ” ಎಂದು ಪ್ರಶಂಸಿಸಿದ್ದಾರೆ.

Dhurandhar-2 ಮೊದಲ ದಿನವೇ ₹102 ಕೋಟಿ ಗಳಿಸಿ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಎರಡನೇ ದಿನ ₹80.72 ಕೋಟಿ ಸಂಗ್ರಹಿಸಿದೆ. ಬಿಡುಗಡೆಗೂ ಮುನ್ನವೇ ಪ್ರೀಮಿಯರ್ ಶೋಗಳಲ್ಲಿ ₹43 ಕೋಟಿ ಗಳಿಕೆ ಕಂಡಿದ್ದು, ತಾಂತ್ರಿಕ ಸಮಸ್ಯೆಗಳಿದ್ದರೂ ಅಭಿಮಾನಿಗಳ ಸ್ಪಂದನೆ ಕಡಿಮೆಯಾಗಲಿಲ್ಲ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ 15 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿರುವುದು ಚಿತ್ರದ ಜನಪ್ರಿಯತೆಯನ್ನು ತೋರಿಸುತ್ತದೆ.

ಚಿತ್ರದಲ್ಲಿ R. Madhavan, Arjun Rampal, Sanjay Dutt, Sara Arjun ಮತ್ತು Rakesh Bedi ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆಯುತ್ತಿದೆ.

Continue Reading

ದೇಶ

ರಾಜಮೌಳಿ ಚಿತ್ರದಲ್ಲಿ ಜೂ. ಎನ್‌ಟಿಆರ್ ಪುತ್ರ ಎಂಟ್ರಿ? ‘ವಾರಣಾಸಿ’ ಬಗ್ಗೆ ಭಾರೀ ಚರ್ಚೆ

Published

on

ನವದೆಹಲಿ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ S. S. Rajamouli ಅವರ ಸಿನಿಮಾಗಳು ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿವೆ. ಅವರ ಹೊಸ ಸಿನಿಮಾ ‘ವಾರಣಾಸಿ’ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ಇದಕ್ಕೆ ಸಂಬಂಧಿಸಿದ ಹೊಸ ಸುದ್ದಿಯೊಂದು ಸಿನಿ ವಲಯದಲ್ಲಿ ಸದ್ದು ಮಾಡುತ್ತಿದೆ.

ಸ್ಟಾರ್ ನಟ Jr. NTR ಅವರ ಪುತ್ರ ಭಾರ್ಗವ್ ರಾಮ್ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ನಟಿಸುತ್ತಿರುವ Mahesh Babu ಅವರ ಬಾಲ್ಯದ ಪಾತ್ರದಲ್ಲಿ ಭಾರ್ಗವ್ ರಾಮ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ರಾಜಮೌಳಿ ಅವರ ಸಿನಿಮಾಗಳಲ್ಲಿ ನಾಯಕನ ಬಾಲ್ಯದ ಕಥೆಗೆ ವಿಶೇಷ ಮಹತ್ವವಿರುತ್ತದೆ. ಇದೇ ಶೈಲಿಯನ್ನು ‘ವಾರಣಾಸಿ’ ಸಿನಿಮಾದಲ್ಲಿಯೂ ಮುಂದುವರಿಸಲಾಗುತ್ತಿದ್ದು, ಫ್ಲ್ಯಾಶ್‌ಬ್ಯಾಕ್ ಸನ್ನಿವೇಶದಲ್ಲಿ ಬಾಲ್ಯದ ಪಾತ್ರ ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿದುಬಂದಿದೆ.

ಹೆಚ್ಚಿನ ಆಸಕ್ತಿಯ ಸಂಗತಿ ಎಂದರೆ, Jr. NTR ಕೂಡ ಬಾಲನಟನಾಗಿಯೇ ತಮ್ಮ ಸಿನಿ ಜೀವನವನ್ನು ಆರಂಭಿಸಿದ್ದರು. ‘ರಾಮಾಯಣಂ’ ಚಿತ್ರದಲ್ಲಿ ಅಭಿನಯಿಸಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಈಗ ಅವರ ಪುತ್ರವೂ ಅದೇ ಹಾದಿಯಲ್ಲಿ ಸಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಈ ಸಿನಿಮಾದಲ್ಲಿ ನಟಿಸಲು ಅನೇಕ ದೊಡ್ಡ ನಟರು ಆಸಕ್ತಿ ತೋರಿಸುತ್ತಿದ್ದು, ಸಂಭಾವನೆ ಇಲ್ಲದಿದ್ದರೂ ಪಾತ್ರಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ರಾಜಮೌಳಿ ನಿರ್ದೇಶನ ಮತ್ತು ಮಹೇಶ್ ಬಾಬು ನಟನೆಯ ಸಂಯೋಜನೆಯಿಂದ ‘ವಾರಣಾಸಿ’ ಈಗಾಗಲೇ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಒಟ್ಟಾರೆ, ಭಾರ್ಗವ್ ರಾಮ್ ಅವರ ಎಂಟ್ರಿ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಾರದಿದ್ದರೂ, ಈ ಸುದ್ದಿ ಜೂ. ಎನ್‌ಟಿಆರ್ ಅಭಿಮಾನಿಗಳಿಗೆ ಸಂತಸದ ಅಲೆ ಮೂಡಿಸಿದೆ.

Continue Reading

ದೇಶ

‘ಬಡೇ ಸಾಬ್’ ಪಾತ್ರದ ಹಿಂದಿನ ಸತ್ಯ: ದಾವೂದ್ ಕುರಿತ ಚರ್ಚೆ

Published

on

ಬೆಂಗಳೂರು: ಭಾರತದ ಮೋಸ್ಟ್ ವಾಂಟೆಡ್ ಅಪರಾಧಿ Dawood Ibrahim ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಬಿಡುಗಡೆಯಾದ Dhurandhar 2 ಚಿತ್ರದ ಭಾರೀ ಯಶಸ್ಸಿನ ಬೆನ್ನಲ್ಲೇ ದಾವೂದ್ ಇಬ್ರಾಹಿಂ ಕುರಿತ ಚರ್ಚೆ ಮತ್ತೆ ಜೋರಾಗಿದೆ.

1990ರ ದಶಕದ 1993 Bombay bombings ದಾಳಿಗಳ ಮಾಸ್ಟರ್ ಮೈಂಡ್ ಆಗಿದ್ದ ದಾವೂದ್, ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿದನು. ಅಂದಿನಿಂದಲೇ ತನ್ನ ‘ಡಿ-ಗ್ಯಾಂಗ್’ ಕಾರ್ಯಾಚರಣೆಗಳನ್ನು ಅಲ್ಲಿಂದಲೇ ನಿರ್ವಹಿಸುತ್ತಿದ್ದಾನೆ ಎಂಬ ಆರೋಪಗಳಿವೆ.

ಸದ್ಯದ ಮಾಹಿತಿಗಳ ಪ್ರಕಾರ, ದಾವೂದ್ ಪಾಕಿಸ್ತಾನದ Karachi ನಗರದಲ್ಲಿನ ಕ್ಲಿಫ್ಟನ್ ಪ್ರದೇಶದ 13ನೇ ರಸ್ತೆಯ ‘ವೈಟ್ ಹೌಸ್’ ಎಂಬ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾನೆ ಎನ್ನಲಾಗುತ್ತಿದೆ. ಈ ಪ್ರದೇಶವು ಪಾಕಿಸ್ತಾನದ ಅತ್ಯಂತ ಭದ್ರತಾ ವ್ಯವಸ್ಥೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ.

ಇನ್ನೂ ಕೆಲವು ವರದಿಗಳ ಪ್ರಕಾರ, ಕರಾಚಿಯ ಡಿಫೆನ್ಸ್ ಹೌಸಿಂಗ್ ಏರಿಯಾ (DHA) ಹಾಗೂ ಖಯ್ಯುಮಾಬಾದ್ ಪ್ರದೇಶದಲ್ಲಿಯೂ ದಾವೂದ್ ನಿವಾಸ ಹೊಂದಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಭಾರತೀಯ ಗುಪ್ತಚರ ಸಂಸ್ಥೆಗಳಿಗೂ ಇದೇ ರೀತಿಯ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.

‘ಧುರಂಧರ್ 2’ ಸಿನಿಮಾದಲ್ಲಿ ‘ಬಡೇ ಸಾಬ್’ ಎಂಬ ಪಾತ್ರದ ಮೂಲಕ ದಾವೂದ್ ಇಬ್ರಾಹಿಂನಂತೆ ಕಾಣುವ ಪಾತ್ರವನ್ನು ಚಿತ್ರಿಸಲಾಗಿದೆ. ನೈಜ ಘಟನೆಗಳನ್ನು ಆಧರಿಸಿದ ಕಥಾಹಂದರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಈ ಪಾತ್ರ ಭಾರೀ ಚರ್ಚೆಗೆ ಕಾರಣವಾಗಿದೆ.

ಆದಾಗ್ಯೂ, ದಾವೂದ್ ಇಬ್ರಾಹಿಂ ನಿಖರವಾಗಿ ಎಲ್ಲಿದ್ದಾನೆ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೆ ಸಿನಿಮಾ ಮತ್ತು ಗುಪ್ತಚರ ಮಾಹಿತಿಗಳ ಹಿನ್ನೆಲೆ, ದಾವೂದ್ ಕುರಿತ ಚರ್ಚೆ ಮತ್ತೆ ಜಾಗತಿಕ ಮಟ್ಟದಲ್ಲಿ ತೀವ್ರವಾಗಿದೆ

Continue Reading

Trending