ಬೆಂಗಳೂರು
Breaking News ಅಂಬರೀಷ್ ಕುಟುಂಬದಲ್ಲಿ ಪುತ್ರೋತ್ಸವ – ಮನೆಗೆ ಜ್ಯೂ ರೆಬಲ್ ಸ್ಟಾರ್ ಎಂಟ್ರಿ!

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಮಾಜಿ ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಷ್ ಅವರು ಗಂಡು ಮಗುವಿನ ತಂದೆಯಾಗಿದ್ದಾರೆ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವಿವಾ ಮಗುವಿಗೆ ಜನ್ಮ ನೀಡಿದ್ದಾರೆ.
ಕಳೆದ ವರ್ಷ ಅಭಿಷೇಕ್ ಮತ್ತು ಅವಿವಾ ನಡುವೆ ವಿವಾಹ ನಡೆದಿತ್ತು, ಇಂದು ಬೆಳಗ್ಗೆ 8.30 ಕ್ಕೆ ಅವಿವಾ ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಕ್ಷೇಮವಾಗಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ, ಮಾಜಿ ಸಂಸದೆ ಸುಮಲತಾ ತಮ್ಮ ಮೊಮ್ಮಗನನ್ನು ಎತ್ತಿ ಮುದ್ದಾಡುತ್ತಿರುವ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ,
ಕಳೆದ ಜೂ.5 ರಂದು ಅಭಿಷೇಕ್ ಮತ್ತು ಅವಿವಾರ ವಿವಾಹ ಅದ್ದೂರಿಯಾಗಿ ನಡೆದಿತ್ತು, ಚಿತ್ರರಂಗದ ಗಣ್ಯರು ಮಾತ್ರವಲ್ಲದೇ ರಾಜಕೀಯ ವಲಯದೂ ಗಣ್ಯರು ಸಹ ಪಾಲ್ಗೊಂಡಿದ್ದ ಈ ವಿವಾಹವು ಅರಮನೆಯ ಮೈದಾನದಲ್ಲಿ ನಡೆದಿತ್ತು, ರಾಜ್ಯದ ಖ್ಯಾತ ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದ ಅವಿವಾ ಮತ್ತು ಅಭಿಷೇಕ್ ಅವರದು ಪ್ರೇಮವಿವಾಹವಾಗಿತ್ತು,
ಕಳೆದ ತಿಂಗಳು ಅಭಿಷೇಕ್ ಅಂಬರೀಷ್ ತಮ್ಮ ಪತ್ನಿಯ ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಗುವಿನ ನಿರೀಕ್ಷೆಯಲ್ಲಿರುವ ಸುಳಿವು ನೀಡಿದ್ದರು,