ದೇಶ
Pushpa 2: ಅಲ್ಲು ಅರ್ಜುನ್, ಶ್ರೀಲೀಲಾ ಐಟಂ ಹಾಡಿನ ಪ್ರೋಮೋ ರಿಲೀಸ್

ಕನ್ನಡತಿ ಶ್ರೀಲೀಲಾ (Sreeleela) ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರ ಐಟಂ ಸಾಂಗ್ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಅದಕ್ಕೂ ಮುನ್ನ ‘ಪುಷ್ಪ 2’ (Pushpa 2) ಹಾಡಿನ ಪ್ರೋಮೋವೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ.
ನ.24ರಂದು ಸಂಜೆ 7:02ಕ್ಕೆ ಶ್ರೀಲೀಲಾ ಸ್ಪೆಷಲ್ ಸಾಂಗ್ ರಿಲೀಸ್ ಮಾಡೋದಾಗಿ ಈಗಾಗಲೇ ಚಿತ್ರತಂಡ ತಿಳಿಸಿದೆ. ಸದ್ಯ ಹಾಡಿನ ಸಣ್ಣ ತುಣುಕೊಂದು ರಿಲೀಸ್ ಮಾಡಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದೆ ಚಿತ್ರತಂಡ. ‘ಕಿಸ್ ಕಿಸ್ ಕಿಸ್ಸಿಕ್’ ಎಂಬ ಹಾಡಿನ ತುಣುಕು ಇದೀಗ ಪಡ್ಡೆಹುಡುಗರಿಗೆ ಕಿಕ್ ಕೊಟ್ಟಿದೆ. ಫುಲ್ ಸಾಂಗ್ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.
ಅಂದಹಾಗೆ, ‘ಪುಷ್ಪ 2’ (Pushpa 2) ಸಿನಿಮಾ ಇದೇ ಡಿ.5ಕ್ಕೆ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ