Connect with us

ರಾಜಕೀಯ

ನಾನು, ನನ್ನ ಮಗ ಜೈಲಿಗೆ ಹೋಗುವಂತಹ ತಪ್ಪು ಮಾಡಿಲ್ಲ: ಹೆಚ್.ಡಿ.ರೇವಣ್ಣಗೆ ಜಿಟಿಡಿ ತಿರುಗೇಟು

Published

on

ಮೈಸೂರು: ನಾನು ಮತ್ತು ನನ್ನ ಮಗ ಜೈಲಿಗೆ ಹೋಗುವಂತಹ ಯಾವ ತಪ್ಪು ಮಾಡಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ ತಿರುಗೇಟು ನೀಡಿದರು.

ಜಿ.ಟಿ.ದೇವೇಗೌಡ ಮತ್ತು ಅವರ ಮಗನನ್ನು ಕಾಂಗ್ರೆಸ್ ಸರ್ಕಾರ ಜೈಲಿಗೆ ಕಳುಹಿಸಲು ಮುಂದಾಗಿತ್ತು ಎಂಬ ಹೆಚ್.ಡಿ.ರೇವಣ್ಣ ಹೇಳಿಕೆಗೆ ಮೈಸೂರಿನಲ್ಲಿ ಜಿಟಿಡಿ ಟಾಂಗ್ ಕೊಟ್ಟರು. ಕ್ಷೇತ್ರದ ಜನರ ಸೇವೆ ಮಾಡುವುದು ಮಾತ್ರ ನನ್ನ ತಲೆಯಲ್ಲಿ ಇರುವುದು. ಅದು ಬಿಟ್ಟರೆ ನನ್ನ ತಲೆಯಲ್ಲಿ ಬೇರೆ ಯೋಚನೆ ಇಲ್ಲ. ನನ್ನ ತಂದೆ ಪಟೇಲರು. ಅವರ ಮೇಲೆ ಒಂದೇ ಒಂದು ಪೊಲೀಸ್ ಕೇಸ್ ಇರಲಿಲ್ಲ. ನಾನು ಸಾರ್ವಜನಿಕ ಜೀವನಕ್ಕೆ ಬಂದು 54 ವರ್ಷವಾಗಿದೆ. ನನ್ನ ಮೇಲೆ ಇದುವರೆಗೆ ಒಂದೇ ಒಂದು ಕೇಸ್ ಕೂಡ ಪೊಲೀಸ್ ಠಾಣೆಯಲ್ಲಿ ಇಲ್ಲ. ನನ್ನ ಮಗನ ಮೇಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಗೃಹ ಮಂಡಳಿ ಅಧ್ಯಕ್ಷನಾಗಿದ್ದಾಗ ಜೆಡಿಎಸ್ – ಕಾಂಗ್ರೆಸ್ ಇಬ್ಬರು ಸೇರಿ ಅದರಲ್ಲಿ ಅವ್ಯವಹಾರ ಆಗಿದೆ ಎಂದು ತನಿಖೆ ಮಾಡಿಸಿದ್ದರು ಅಷ್ಟೆ. ನಾನು ಇದುವರೆಗೆ ಯಾರಿಂದಲೂ ನನ್ನ ರಕ್ಷಣೆ ಮಾಡಿ ಎಂದು ದೂರವಾಣಿ ಕರೆ ಮಾಡಿಸಿಲ್ಲ. ಕುಮಾರಸ್ವಾಮಿಯಿಂದ ನಾನು ಯಾವುದೇ ಕರೆ ಮಾಡಿಸಿ ನನ್ನ ರಕ್ಷಣೆ ಮಾಡಿಸಿಕೊಂಡಿಲ್ಲ. ನಾನು ನನ್ನ ಮಗ ಬಂಧನವಾಗುವಂತಹ ಯಾವ ಅಪರಾಧವೂ ಮಾಡಿಲ್ಲ ಟಾಂಗ್ ಕೊಟ್ಟರು.

ರೇವಣ್ಣ ಅವರೇ ನನ್ನ ಕುಟುಂಬವೇ ಬೇರೆ ನಿಮ್ಮದೇ ಬೇರೆ. ನಾನು ಬೆಳೆದಿರುವ ಪರಿಸರವೇ ಬೇರೆ. ನಾನು ನನ್ನ ಮಗ ಯಾವತ್ತೂ ಆ ರೀತಿಯ ತಪ್ಪು ಮಾಡಿಲ್ಲ. ನಾನು ನನ್ನ ಮಗ ಯಾವ ಅಪರಾಧವೂ ಮಾಡಿಲ್ಲ. ಬಂಧಿಸುವಂತಹ ಪ್ರಶ್ನೆಯೆ ಬಂದಿಲ್ಲ. ಸಿದ್ದರಾಮಯ್ಯ ಸೇರಿದಂತೆ ಯಾವ ಸಿಎಂ ಕೂಡ ನನ್ನ ಬಂಧಿಸುವಂತೆ ಹೇಳಿಲ್ಲ. ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲು ರಾಜಕೀಯ ಮಾಡಿದ್ದಾರೆ. ಆದರೆ ಬಂಧಿಸುವಂತಹ ರೀತಿ ವರ್ತಿಸಿಲ್ಲ. ರೇವಣ್ಣ ಯಾಕೆ ಈ ರೀತಿ ಹೇಳಿದ್ರು ಗೊತ್ತಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಅವರು ಸಿಗುತ್ತಾರೆ. ಅವತ್ತೇ ಅವರ ಬಳಿ ಕೇಳಿ ಹೇಳುತ್ತೇನೆ. ನನ್ನ ವಿರುದ್ಧ ಯಾರೂ ಬಂಧಿಸುವಂತಹ ಸೇಡಿನ ರಾಜಕಾರಣ ಮಾಡಿಲ್ಲ. ನಾನು ಕೂಡ ಆ ರೀತಿ ನಡೆದುಕೊಂಡಿಲ್ಲ ಎಂದು ತಿಳಿಸಿದರು.

ಬಂಧನದ ಸೇಡನ್ನು ಯಾರು ಇಟ್ಟುಕೊಂಡಿಲ್ಲ. ನನ್ನ ತಂದೆ, ನಾನು ಮತ್ತು ನನ್ನ ಮಗ ಯಾವತ್ತೂ ಜೈಲಿಗೆ ಹೋಗುವ ಸ್ಥಿತಿ ಬಂದಿಲ್ಲ. ಮುಂದೆಯೂ ಅಂತಾ ಸ್ಥಿತಿ ಬರುವುದು ಬೇಡ ಅಂತಾ ಪ್ರಾರ್ಥಿಸುತ್ತೇನೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗುವುದನ್ನು ತಪ್ಪಿಸಿದ್ದು ಹೆಚ್.ಡಿ.ರೇವಣ್ಣ. 20 ರಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಈ ಬಗ್ಗೆ ರೇವಣ್ಣ ಒಪ್ಪಿಕೊಂಡು ಕ್ಷಮೆ ಕೂಡ ಯಾಚಿಸಿದ್ದಾರೆ. ಅವರು ಡಿಸಿಎಂ ಆಗಬೇಕಿತ್ತು. ಅದು ಆಗುವುದಿಲ್ಲ ಅನ್ನೋ ಕಾರಣಕ್ಕೆ ತಪ್ಪಿಸಿದರು. ದೊಡ್ಡ ಗೌಡರ ಜೊತೆ ಮಾತನಾಡಿ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ತಪ್ಪಿಸಿದರು ಎಂದರು.

ಇನ್ಮುಂದೆ ನಾನು ರಾಜಕೀಯವಾಗಿ ಯಾರ ವಿರುದ್ಧವೂ ಮಾತನಾಡುವುದಿಲ್ಲ. ನನ್ನನ್ನು ಕಳ್ಳ ಅಂದರೂ ಸಹ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದೇ ಕೊನೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

ದೇಶ

ಕೊಲ್ಲೂರು ಮೂಕಾಂಬಿಕೆಯಲ್ಲಿ ವಿಜಯ್ ವಿಶೇಷ ಪೂಜೆ: ‘ಶತ್ರು ಸಂಹಾರ ಸಂಕಲ್ಪ’ ಭಾರೀ ಚರ್ಚೆ

Published

on

ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ದಳಪತಿ ವಿಜಯ್ ಅವರು ಕರ್ನಾಟಕದ ಪ್ರಸಿದ್ಧ ಶಕ್ತಿಪೀಠವಾದ Kollur Sri Mookambika Templeಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿರುವುದು ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ದೇವಿಯ ಸನ್ನಿಧಿಯಲ್ಲಿ ಅವರು ‘ಶತ್ರು ಸಂಹಾರ ಸಂಕಲ್ಪ’ ಮಾಡಿರುವರೆಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಧ್ಯಾಹ್ನ Mangaluru International Airportಗೆ ಆಗಮಿಸಿದ ವಿಜಯ್, ಅಲ್ಲಿಂದ ಕೊಲ್ಲೂರು ಕಡೆ ಪ್ರಯಾಣ ಬೆಳೆಸಿದರು. ಮಾರ್ಗಮಧ್ಯೆ ಅತಿಥಿ ಗೃಹದಲ್ಲಿ ತಂಗಿ ಸಾಂಪ್ರದಾಯಿಕ ಉಡುಪಿಗೆ ಬದಲಾದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಾಲಯದ ವತಿಯಿಂದ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಗೌರವಿಸಲಾಯಿತು.

ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿಜಯ್, ದೇವಿಯ ಮುಂದೆ ಭಕ್ತಿಯಿಂದ ಪ್ರಾರ್ಥನೆ ನಡೆಸಿದರು. ಈ ವೇಳೆ ‘ಶತ್ರು ಸಂಹಾರ ಸಂಕಲ್ಪ’ ನೆರವೇರಿಸಿ ರಕ್ಷಾಸೂತ್ರ ಕಟ್ಟಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ರಾಜಕೀಯವಾಗಿ ಸಕ್ರಿಯರಾಗಿರುವ ಸಂದರ್ಭದಲ್ಲಿ ಈ ವಿಶೇಷ ಪೂಜೆ ನಡೆಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದರ್ಶನದ ಬಳಿಕ ವಿಜಯ್ ತಮ್ಮೊಂದಿಗೆ ತಂದಿದ್ದ ವಿಶೇಷ ಬೆಳ್ಳಿಯ ಖಡ್ಗವನ್ನು ದೇವಿಗೆ ಸಮರ್ಪಿಸಿದ್ದಾರೆ ಎನ್ನಲಾಗಿದೆ. ಈ ಸಮರ್ಪಣೆ ಭಕ್ತಿಯ ಸಂಕೇತವಾಗಿ ಕಂಡುಬಂದರೂ, ‘ಶತ್ರು ಸಂಹಾರ ಸಂಕಲ್ಪ’ ಕುರಿತ ಚರ್ಚೆಯೇ ಹೆಚ್ಚು ಗಮನ ಸೆಳೆಯುತ್ತಿದೆ.

ರಾಜಕೀಯ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿರುವ ವಿಜಯ್ ಅವರ ಈ ಭೇಟಿ ಕೇವಲ ಧಾರ್ಮಿಕ ಕಾರ್ಯಕ್ರಮವೇ ಅಥವಾ ಅದರ ಹಿಂದೆ ರಾಜಕೀಯ ಸಂದೇಶವೂ ಇದೆಯೇ ಎಂಬ ಪ್ರಶ್ನೆಗಳು ಮೂಡಿವೆ. ಆದರೆ ಈ ಕುರಿತು ವಿಜಯ್ ಅಥವಾ ಅವರ ಕಚೇರಿಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ಇದರ ನಡುವೆಯೇ ಅಭಿಮಾನಿಗಳು ಹಾಗೂ ರಾಜಕೀಯ ವಲಯದಲ್ಲಿ ವಿವಿಧ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ.

Continue Reading

ದೇಶ

ಟಿಎಂಸಿಯಲ್ಲಿ ಬಂಡಾಯ ಸ್ಫೋಟ: ‘ಅಭಿಷೇಕ್ ಬೇಕೋ ನಾವು ಬೇಕೋ?’ ದೀದಿಗೆ ಕಲ್ಯಾಣ್ ಬ್ಯಾನರ್ಜಿ ಸವಾಲು

Published

on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಬಹಿರಂಗವಾಗಿ ಸ್ಫೋಟಗೊಂಡಿವೆ. ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ದೀದಿ, ಅಭಿಷೇಕ್ ಬೇಕೋ ಅಥವಾ ನಾವು ಬೇಕೋ ಆಯ್ಕೆ ಮಾಡಿ” ಎಂದು ನೇರ ಸವಾಲು ಹಾಕಿದ್ದಾರೆ.

ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ನಕಲಿ ಸಹಿ ಸಂಗ್ರಹ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಪರ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಏಕಾಏಕಿ ಬದಲಾಯಿಸಿರುವುದು ಈ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕ್ರಮವನ್ನು ಅವಮಾನಕರ ಎಂದು ಬಣ್ಣಿಸಿರುವ ಅವರು, ಪ್ರಕರಣದ ತುರ್ತು ವಿಚಾರಣೆಗೆ ರಾತ್ರಿಯಿಡೀ ಸಿದ್ಧತೆ ನಡೆಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರೂ, ನಂತರ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಅವರ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಲ್ಯಾಣ್ ಬ್ಯಾನರ್ಜಿ, “ಅವರು ಇತರರಿಗೆ ಗೌರವ ನೀಡುವುದಿಲ್ಲ. ಎಲ್ಲರನ್ನೂ ತಮ್ಮಗಿಂತ ಕೀಳಾಗಿ ನೋಡುತ್ತಾರೆ. ಇದೇ ಕಾರಣದಿಂದ ಪಕ್ಷದ ಹಲವಾರು ನಾಯಕರು ದೂರವಾಗುತ್ತಿದ್ದಾರೆ” ಎಂದು ಹೇಳಿದ್ದಾರೆ. ಅಲ್ಲದೆ, ಈ ವಿಷಯವನ್ನು ಮಮತಾ ಬ್ಯಾನರ್ಜಿ ಅವರ ಗಮನಕ್ಕೂ ತಂದಿರುವುದಾಗಿ ತಿಳಿಸಿದ್ದಾರೆ.

ಇದಕ್ಕೂ ನಡುವೆ ಟಿಎಂಸಿಯಲ್ಲಿ ರಾಜೀನಾಮೆಗಳ ಸರಣಿ ಮುಂದುವರಿದಿದೆ. ಹಲವು ಸಂಸದರು ಹಾಗೂ ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಕೆಲವರು ಪಕ್ಷ ತೊರೆಯುವ ನಿರ್ಧಾರಕ್ಕೂ ಬಂದಿದ್ದಾರೆ ಎನ್ನಲಾಗಿದೆ. ಇತ್ತೀಚಿನ ಚುನಾವಣಾ ಸೋಲಿನ ಬಳಿಕ ಪಕ್ಷದೊಳಗಿನ ಭಿನ್ನಮತ ಮತ್ತಷ್ಟು ತೀವ್ರಗೊಂಡಿದ್ದು, ಬಂಡಾಯ ಚಟುವಟಿಕೆಗಳು ಹೆಚ್ಚಾಗಿವೆ.

ಈ ಬೆಳವಣಿಗೆಗಳು ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿದ್ದು, ಪಕ್ಷದ ಮೇಲಿನ ಹಿಡಿತ ದುರ್ಬಲವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಟಿಎಂಸಿಯ ಭವಿಷ್ಯದ ಬಗ್ಗೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

Continue Reading

ದೇಶ

‘ನನಗೆ ಡಬಲ್ ಸಮಾಧಾನ ಸಿಕ್ಕಿದೆ’: ಸಿಎಂ ಹುದ್ದೆ ಚರ್ಚೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

Published

on

ಬೆಂಗಳೂರು: ತಮ್ಮ ಹಾಗೂ ಮಾಜಿ ಮುಖ್ಯಮಂತ್ರಿ Siddaramaiah ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿಗಳನ್ನು ಸಚಿವ Satish Jarkiholi ತಳ್ಳಿಹಾಕಿದ್ದು, ಕೆಲ ಐಟಿ ಸೆಲ್‌ಗಳು ಅನಗತ್ಯವಾಗಿ ಈ ವಿಚಾರವನ್ನು ದೊಡ್ಡದಾಗಿಸಿವೆ ಎಂದು ಹೇಳಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೂ ಸಿದ್ದರಾಮಯ್ಯ ಅವರಿಗೂ ಭಿನ್ನಾಭಿಪ್ರಾಯ ಇದೆ ಎಂದು ಯಾರು ಹೇಳಿದರು? ಈ ಬಗ್ಗೆ ನಾನು ಮೊದಲಿನಿಂದಲೂ ಸ್ಪಷ್ಟಪಡಿಸುತ್ತಿದ್ದೇನೆ. ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಕೆಲವರು ಹೆಚ್ಚಿನ ಪ್ರಚಾರ ನೀಡಿ ಅನಗತ್ಯ ಚರ್ಚೆಗೆ ಕಾರಣರಾಗಿದ್ದಾರೆ” ಎಂದು ಹೇಳಿದರು.

ಅಹಿಂದ ಸಂಘಟನೆ ಕುರಿತಂತೆ ಮಾತನಾಡಿದ ಜಾರಕಿಹೊಳಿ, ಅದು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ಪಕ್ಷದ ಹೊರತಾಗಿಯೂ ಸಾಮಾಜಿಕ ಸಂಘಟನೆಯಾಗಿ ತನ್ನ ಕೆಲಸವನ್ನು ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದರು. “ಅಹಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ನಿರಂತರವಾಗಿ ಕೆಲಸ ಮಾಡುತ್ತೇನೆ” ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಅವರು, “ಅಧ್ಯಕ್ಷರಾಗಿಯೇ ಪಕ್ಷದ ಕೆಲಸ ಮಾಡಬೇಕು ಎಂಬ ನಿಯಮವಿಲ್ಲ. ಪಕ್ಷಕ್ಕಾಗಿ ದುಡಿಯುವವರಿಗೆ ಅಧಿಕಾರ ಸಿಗಲೇಬೇಕು. ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಲಸ ಮಾಡಿದವರಿಗೆ ಪಕ್ಷ ಸೂಕ್ತ ಜವಾಬ್ದಾರಿ ನೀಡಿದೆ” ಎಂದು ಹೇಳಿದರು.

2028ರ ನಾಯಕತ್ವದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, “ಇನ್ನೂ ಚುನಾವಣೆಗೆ ಸಾಕಷ್ಟು ಸಮಯವಿದೆ. ಮಗು ಹುಟ್ಟುವ ಮುನ್ನವೇ ಅದರ ಬಗ್ಗೆ ಚರ್ಚೆ ಮಾಡುವಂತಾಗಿದೆ. ನನಗೆ ಈಗಾಗಲೇ ಸಚಿವ ಸ್ಥಾನ ಸಿಕ್ಕಿದ್ದು, ಅದರಿಂದ ಸಮಾಧಾನವಾಗಿದೆ” ಎಂದರು.

ಇದೇ ವೇಳೆ ಕ್ರೀಡಾ ಖಾತೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ಅವರು, “ಕ್ರೀಡಾ ಇಲಾಖೆ ನೀಡಿದ್ದರೆ ರಾಜ್ಯವನ್ನು ಕ್ರೀಡೆಯಲ್ಲಿ ದೇಶದಲ್ಲೇ ನಂಬರ್ ಒನ್ ಮಾಡಲು ಪ್ರಯತ್ನಿಸುತ್ತಿದ್ದೆವು. ಆ ಖಾತೆಗಾಗಿ ಬೇಡಿಕೆಯನ್ನೂ ಇಟ್ಟಿದ್ದೆ” ಎಂದು ತಿಳಿಸಿದರು.

Continue Reading

Trending