ರಾಜಕೀಯ
ಬಿಜೆಪಿ ರೆಬೆಲ್ ಟೀಮ್ ನಿಯಂತ್ರಣಕ್ಕೆ ಯತ್ನ-ಬಿವೈವಿ ಧಿಡೀರ್ ಸಭೆ!

ಮೈಸೂರು: ಉಪಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿ ಸಮನ್ವಯತೆಯ ಕೊರತೆಯಿಂದ ಬಳಲುತ್ತಿದೆ, ವಕ್ಫ್ ಆಸ್ತಿ ವಿಚಾರವಾಗಿ ಶಾಸಕ ಯತ್ನಾಳ್ ನೇತೃತ್ವದ ರೆಬಲ್ ಟೀಂ ಹೋರಾಟವನ್ನು ನಡೆಸುತ್ತಲೇ ಇದೆ, ಇದರಿಂದ ಸಿಟ್ಟಾದ ಬಿಜೆಪಿ ರಾಜ್ಯಾಧ್ಯಕ್ಷ ದಿಢೀರ್ ಸಭೆಯನ್ನು ಕರೆದಿದ್ದಾರೆ,
ಮೈಸೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಬಿಜೆಪಿ ನಾಯಕರಾದ ರೇಣುಕಾಚಾರ್ಯ, ಬಿಸಿ ಪಾಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೇರಿದಂತೆ 30 ಜನ ರೆಬಲ್ ಟೀಂ ಅನ್ನು ಕಟ್ಟಿ ಹಾಕಲು ಸಭೆ ನಡೆಸಿದ್ದಾರೆ,
ವಿಜಯೇಂದ್ರ ವಿರುದ್ಧ ನಿಂತ ಯತ್ನಾಳ್ ರೆಬಲ್ ಟೀಂ ವಿರುದ್ಧ ಸ್ವಪಕ್ಷೀಯರೇ ಆಕ್ರೋಶ ಹೊರಹಾಕಿದ್ದು, ಪದೇ ಪದೇ ವಿಜಯೇಂದ್ರರನ್ನು ಹಿಯಾಳಿಸುವುದು ಮೊದಲು ಬಿಡಿ ಎಂದು ಕಿಡಿಕಾರಿದರು, ಮೈಸೂರಿನಲ್ಲಿ ಒಬ್ಬ ನಾಯಕ ನಮ್ಮ ಪರವಾಗಿ ಇರಬಹುದಷ್ಟೆ, ಅದು ಬಿಟ್ಟು ಉಳಿದವರಾರು ಕೂಡ ನಮ್ಮ ಪರ ನಿಲ್ಲುವುದಿಲ್ಲ ಎಂದು ವಿಜಯೇಂದ್ರ ಹೇಳಿದರು,