ರಾಜಕೀಯ

ಕನ್ನಡ ರಾಜ್ಯೋತ್ಸವದಲ್ಲಿ ಪಂಜುರ್ಲಿ ದೈವಗಳು-ರೊಚ್ಚಿಗೆದ್ದ ಕರಾವಳಿ ಜನ..!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಕಾಂತಾರ ಸಿನಿಮಾವು ತುಳುನಾಡಿನ ದೈವಾರಾಧನೆಯನ್ನು ದೇಶ ವಿದೇಶದ ಜನರಿಗೆ ತಲುಪಿಸಿದೆ, ಆ ಬಳಿಕ ಇದೇ ರೀತಿ ದೈವಗಳ ವೇಷ ಧರಿಸಿ ಅಣಕವಾಡಿದ ಪ್ರಸಂಗ ಹಲವು ಬಾರಿ ನಡೆದಿದೆ, ಈ ಬಗ್ಗೆ ಕರಾವಳಿ ಮಂದಿ ಸಾಕಷ್ಟು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಇದೀಗ ಅಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ,
ನ.30 ರಂದು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಕಾಂತಾರ ಚಿತ್ರದ ರೀತಿಯಲ್ಲಿ ಪಂಜುರ್ಲಿ ದೈವಗಳನ್ನು ಸೃಷ್ಟಿಸಲಾಗಿದೆ, ಅಲ್ಲದೇ ಈ ದೈವಗಳು ಸಚಿವ ಜಮೀರ್ ಅಹ್ಮದ್ ಅವರನ್ನು ಅಪ್ಪಿಕೊಂಡು ಕೈಹಿಡಿದು ಮುಂದೆ ಸಾಗಿವೆ, ಈ ವೇಳೆ ಕಾಂತಾರ ಚಿತ್ರದಲ್ಲಿ ಬಳಿಸಿದ್ದ ಸಂಗೀತವನ್ನು ಕೂಡ ಜೋಡಿಸಲಾಗಿತ್ತು, ಬಳಿಕ ಈ ಇಬ್ಬರು ಪಾತ್ರಧಾರಿಗಳು ಜಮೀರ್ ಅವರನ್ನು ಕೈಹಿಡಿದು ಮೇಲಕ್ಕೆತ್ತಿ ತಮ್ಮ ನಾಯಕ ಎಂದು ತೋರಿಸಿದ್ದಾರೆ,
ಇದರ ಸಂಪೂರ್ಣ ವೀಡಿಯೋವನ್ನು ಜಮೀರ್ ಅಹ್ಮದ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಈ ವಿಡಿಯೋವನ್ನು ಕರಾವಳಿಗರು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಪೇಜ್ ಗಳಲ್ಲಿ ಹಂಚಿಕೊಂಡಿದ್ದು, ಈ ರೀತಿ ಮಾಡಿದ್ದು ಎಷ್ಟು ಸರಿ, ಇದು ದೈವಾರಾಧನೆಯ ಅಣಕ ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ ,
ದೈವಗಳ ವೇಷ ಧರಿಸಿ ಕುಣಿಯುವುದು, ಅದೇ ರೀತಿ ಅನುಕರಿಸುತ್ತಿರುವುದು ತುಳುನಾಡಿನ ಜನರ ಭಾವನೆಗಳಿಗೆ ಪೆಟ್ಟು ಬಿದ್ದಿದ್ದು, ಈ ಬಗ್ಗೆ ತಕ್ಷಣ ಗಂಭೀರ ಕ್ರಮ ಕೈಗೊಳ್ಳು ಅವಶ್ಯಕತೆ ಇದೆ, ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ತುಳುನಾಡಿನ ಸಂಸ್ಕøತಿ ಉಳಿಸುವುದಕ್ಕಾಗಿ ಮಂಡಳಿ ರಚಿಸಬೇಕಾಗಿದ್ದು, ಆ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ, ಅಲ್ಲದೇ ದೈವಾರಾಧನೆ ಕಲೆಯ ರಕ್ಷಣೆಗಾಗಿ ಪ್ರತ್ಯೇಕ ಕಾಯ್ದೆ ತರುವಂತೆ ಇದೀಗ ಕರಾವಳಿ ಮಂದಿ ಆಗ್ರಹಿಸುತ್ತಿದ್ದಾರೆ…

Leave a Reply

Your email address will not be published. Required fields are marked *

Trending

Exit mobile version