ಬೆಂಗಳೂರು
ಇದು ನನ್ನ ಕೊನೆಯ ನಿರೂಪಣೆ, ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು: ಸುದೀಪ್ ಭಾವುಕ ಪೋಸ್ಟ್
ಬೆಂಗಳೂರು: ಬಿಗ್ ಬಾಸ್ (Bigg Boss) ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು ಎಂದು ಕಿಚ್ಚ ಸುದೀಪ್ (Sudeep) ಹೇಳಿದ್ದಾರೆ. ಮುಂದಿನ ಭಾನುವಾರ ಬಿಗ್ಬಾಸ್ 11 (BBK11) ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಸುದೀಪ್ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಸುದೀಪ್ ಹೇಳಿದ್ದೇನು?
ಕಳೆದ 11 ಸೀಸನ್ಗಳಿಂದ ನಾನು ಬಿಗ್ಬಾಸ್ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫೈನಲ್ ನನ್ನ ಕೊನೆಯ ನಿರೂಪಣೆ. ನಿಮ್ಮನ್ನು ಮನರಂಜಿಸಲು ನಾನು ಪ್ರಯತ್ನಿಸುತ್ತೇನೆ.
ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು. ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದೇನೆ ಎಂಬ ಸಂತೋಷ ನನಗಿದೆ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಶೋ ನಡೆಯುವ ಮೊದಲು ದೊಡ್ಮನೆ ಆಟ ಸೀಸನ್ 11 ನಡೆಸಿಕೊಡುವುದಿಲ್ಲ ಎಂದು ನೇರವಾಗಿ ತಿಳಿಸಿದ್ದರು. ಆದರೆ ವಾಹಿನಿ ಮತ್ತು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಶೋ ನಡೆಸಲು ಒಪ್ಪಿಗೆ ನೀಡಿದ್ದರು.
ಮ್ಯಾಕ್ಸ್ ಸಿನಿಮಾದ ಸಂದರ್ಶನದಲ್ಲಿ ಮಾತನಾಡಿದ ಸುದೀಪ್, ಎಷ್ಟು ಮಾಡುವುದು? ಎಲ್ಲರನ್ನೂ ರಿಪೇರಿ ಮಾಡುತ್ತಾ ಕುಳಿತುಕೊಳ್ಳಲು ನಾನು ಬಂದಿದ್ದೀನಾ? ಬೇರೆ ಕೆಲಸಗಳು ಇರುತ್ತವೆ. ತುಂಬ ಶ್ರಮ ಬೇಕು. ಅದು ಯಾರಿಗೂ ಅರ್ಥ ಆಗುತ್ತಿಲ್ಲ ಎಂದಿದ್ದರು.
ಕಳೆದ ಬಿಗ್ ಬಾಸ್ ಸೀಸನ್ ನಡೆಯುವಾಗ ನನ್ನ ಸಿನಿಮಾದ ಶೂಟಿಂಗ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿತ್ತು. ಚೆನ್ನೈನಿಂದ ಅಲ್ಲಿಗೆ ಹೋಗಲು ಒಂದೂವರೆ ಗಂಟೆ ಬೇಕು. ಬೆಂಗಳೂರಿನಿಂದ ನಾನು ಅಲ್ಲಿಗೆ ಹೋಗಿ, ಅಲ್ಲಿ ಶೂಟಿಂಗ್ ಮಾಡಿ, ಮಧ್ಯರಾತ್ರಿ ಶೂಟಿಂಗ್ ಮುಗಿಸಿ, ಖಾಸಗಿ ವಿಮಾನದಲ್ಲಿ ವಾಪಸ್ ಬೆಂಗಳೂರಿಗೆ ಬಂದು ಬಿಗ್ ಬಾಸ್ ಎಪಿಸೋಡ್ ನೋಡಿ, ವೀಕೆಂಡ್ ಸಂಚಿಕೆ ಶೂಟ್ ಮಾಡಬೇಕು. ಇದರಿಂದ ನನಗೆ ತುಂಬ ಸುಸ್ತಾಗುತ್ತಿತ್ತು ಎಂದು ತಿಳಿಸಿದ್ದರು.
ನಾನು ಬೆಂಗಳೂರಿನಲ್ಲಿ ಇದ್ದರೆ ಯಾವುದೇ ಸಮಸ್ಯೆ ಇಲ್ಲ. ಬೇರೆ ಕಡೆ ಸಿನಿಮಾ ಶೂಟಿಂಗ್ ಇದ್ದಾಗ ಈ ಶೋ ಮಾಡಲು ಕಷ್ಟ ಆಗುತ್ತದೆ. ನಾನು ಎಲ್ಲಿಯೇ ಇದ್ದರೂ ಗುರುವಾರ ಶೂಟಿಂಗ್ ಮುಗಿಸಿಕೊಂಡು ಶುಕ್ರವಾರ ಓಡಿಬರಬೇಕು. ಸಿನಿಮಾದಲ್ಲಿ ಸಾವಿರ ಜನರು ಶೂಟಿಂಗ್ ಮಾಡುತ್ತಿರುತ್ತಾರೆ. ಆದರೆ ಬಿಗ್ ಬಾಸ್ ಸಲುವಾಗಿ ಶುಕ್ರವಾರ, ಶನಿವಾರ ಬ್ರೇಕ್ ಆಗುತ್ತದೆ. ಸಿನಿಮಾಗಳು ಇಲ್ಲದಿದ್ದಾಗ ಇದು ಓಕೆ. ಸಿನಿಮಾ ಶೂಟಿಂಗ್ ಇದ್ದರೆ ತಡ ಆಗುತ್ತದೆ. ಇಷ್ಟು ವರ್ಷ ಖುಷಿಯಿಂದಲೇ ಮಾಡಿದ್ದೇನೆ. ಈಗ ಬೇರೆ ಯಾರಾದರೂ ಮಾಡಲಿ ಎಂದು ಹೇಳಿದ್ದರು.
ಅಪರಾಧ
“ನಾನು ಯಾರು ಗೊತ್ತಾ? ಹೆಚ್ ಎಂ ರೇವಣ್ಣ ಪುತ್ರ” – ಶಶಾಂಕ್ ಕೂಗಿದ ಘಟನೆ
ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ, ಮಾಜಿ ಸಚಿವ ಹೆಚ್ ಎಂ ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ದುರಂತ ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ ಸಂಭವಿಸಿದೆ.
ಅಪಘಾತದಲ್ಲಿ ಶಶಾಂಕ್ ಎಂಬ ರೇವಣ್ಣ ಪುತ್ರನ ಫಾರ್ಚೂನರ್ ಕಾರು, ರಾಜೇಶ್ (23) ಎಂಬ ಯುವಕ ಬೈಕಿಗೆ ಡಿಕ್ಕಿ ಹೊಡೆದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಟೋಲ್ ನೂರು ಮೀಟರ್ ದೂರದಲ್ಲಿ ಸಂಭವಿಸಿದೆ.
ಗುರುವಾರ ರಾತ್ರಿ 10:30 ರ ಸುಮಾರಿಗೆ ಅಪಘಾತ ಎಸಗಿದ ಬಳಿಕ ಶಶಾಂಕ್ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಘಟನೆ ಸ್ಥಳದಲ್ಲಿದ್ದ ಸ್ಥಳೀಯರು 5 ಕಿ.ಮೀ. ಹಿಂಬಾಲಿಸಿ, ಸನ್ಫ್ಲವರ್ ಫ್ಯಾಕ್ಟರಿ ಬಳಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.
ಕಾರಿನಿಂದ ಇಳಿದ ನಂತರ ಶಶಾಂಕ್ “ನಾನು ಯಾರು ಗೊತ್ತಾ? ಹೆಚ್ ಎಂ ರೇವಣ್ಣ ಪುತ್ರ” ಎಂದು ಕೂಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಂತರ ಕಾರನ್ನು ಬದಿಯಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿ ಶಶಾಂಕ್ ಪರಾರಿಯಾಗಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ, ಕಾರಿನಲ್ಲಿ ರೇವಣ್ಣ ಕುಟುಂಬಸ್ಥರೂ ಇದ್ದರು.
ಹಿಟ್ ಅಂಡ್ ರನ್ ಪ್ರಕರಣ:
ತಡರಾತ್ರಿ ಫಾರ್ಚೂನರ್ ಕಾರು ಕುದೂರು ಪೊಲೀಸ್ ಠಾಣೆಗೆ ತರಲಾಗಿದ್ದು, ಪ್ರಕರಣದ ತನಿಖೆ ಪ್ರಾರಂಭವಾಗಿದೆ. ಘಟನೆ ಸಾರ್ವಜನಿಕ ಹಾಗೂ ರಾಜಕೀಯ ಗಮನ ಸೆಳೆದಿದೆ, ಮತ್ತು ಪೊಲೀಸರು ಶಶಾಂಕ್ ವಿರುದ್ಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ದೇಶ
ಜನತೆಗೆ ವಿಶೇಷ ಸುದ್ದಿ – ರಾಜ್ಯ ಸರ್ಕಾರದ ಸೌಲಭ್ಯ
ಬೆಂಗಳೂರು, ಡಿಸೆಂಬರ್ 12, 2025: ಕರ್ನಾಟಕ ಸಾರಿಗೆ ಇಲಾಖೆ ಜನತೆಗೆ ದೊಡ್ಡ ಗುಡ್ ನ್ಯೂಸ್ ನೀಡಿದೆ. 1991-92 ರಿಂದ 2019-20ರವರೆಗೆ ದಾಖಲಾದ ಎಲ್ಲಾ ಬಾಕಿ ಟ್ರಾಫಿಕ್ ದಂಡಗಳಿಗೆ 50% ರಿಯಾಯಿತಿ ಘೋಷಿಸಲಾಗಿದೆ.
ಈ ವಿಶೇಷ ಒನ್-ಟೈಮ್ ಸೆಟಲ್ಮೆಂಟ್ ಯೋಜನೆ ನವೆಂಬರ್ 21, 2025 ರಿಂದ ಡಿಸೆಂಬರ್ 12, 2025 (ಇಂದು ಕೊನೆಯ ದಿನ) ವರೆಗೆ ಮಾತ್ರ ಅನ್ವಯವಾಗಲಿದೆ. ಈ ಅವಧಿಯಲ್ಲಿ ದಂಡದ ಅರ್ಧ ಮೊತ್ತ ಪಾವತಿಸಿದರೆ ಉಳಿದ 50% ಸರ್ಕಾರ ಮನ್ನಾ ಮಾಡಲಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಸಾರ್ವಜನಿಕರು ಈ ಸೌಲಭ್ಯವನ್ನು ಕಡ್ಡಾಯವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಯಾವೆಲ್ಲ ಪ್ರಕರಣಗಳಿಗೆ ರಿಯಾಯಿತಿ ಅನ್ವಯಿಸುತ್ತದೆ:
- 1991-92 ರಿಂದ 2019-20 ರವರೆಗೆ ದಾಖಲಾದ ಎಲ್ಲಾ DSA (Departmental Action) ಪ್ರಕರಣಗಳು
- ಹೆಲ್ಮೆಟ್ ಇಲ್ಲದೇ ಓಡುವುದು, ಸೀಟ್ ಬೆಲ್ಟ್ ಬಳಸದಿರುವುದು
- ಸಿಗ್ನಲ್ ಜಿಗಿಯುವುದು, ಓವರ್ ಸ್ಪೀಡ್, ತಪ್ಪು ಪಾರ್ಕಿಂಗ್
- ದಾಖಲೆ ಇಲ್ಲದೇ ವಾಹನ ಚಲಾಯಿಸುವುದು ಮತ್ತು ಇತರ ಎಲ್ಲಾ ಟ್ರಾಫಿಕ್ ಉಲ್ಲಂಘನೆಗಳು
ದಂಡ ಪಾವತಿಸುವ ವಿಧಾನ:
1. ಆನ್ಲೈನ್ ಮೂಲಕ:
- ಕೆಳಗಿನ ಅಧಿಕೃತ ಆಪ್ಗಳಲ್ಲಿ ಒಂದನ್ನು ಡೌನ್ಲೋಡ್ ಮಾಡಿ:
- ಕರ್ನಾಟಕ ರಾಜ್ಯ ಪೊಲೀಸ್ ಆಪ್
- ಕರ್ನಾಟಕ ಒನ್ ಆಪ್
- ASTM (BTP ಟ್ರಾಫಿಕ್ ಉಲ್ಲಂಘನೆ ವ್ಯವಸ್ಥೆ) ಆಪ್
- ಹಂತಗಳು:
- ಆಪ್ ತೆರೆಯಿರಿ – “Traffic Fine” ಅಥವಾ “Pay Fine” ಆಯ್ಕೆ ಮಾಡಿ
- ವಾಹನ ಸಂಖ್ಯೆ (KA-XX-XX-XXXX) ನಮೂದಿಸಿ
- ಬಾಕಿ ಪ್ರಕರಣಗಳ ಪಟ್ಟಿ ಬರುತ್ತದೆ – 50% ರಿಯಾಯಿತಿ ತೋರಿಸುತ್ತದೆ
- UPI / ಕಾರ್ಡ್ / ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ
- ರಶೀದಿ ಡೌನ್ಲೋಡ್ ಮಾಡಿ – ಪ್ರಕರಣ ಕ್ಲೋಸ್
2. ಆಫ್ಲೈನ್ ಮೂಲಕ:
- ನಿಮ್ಮ ಜಿಲ್ಲೆಯ ಅಥವಾ ತಾಲೂಕಿನ:
- ಹಿರಿಯ ಪ್ರಾದೇಶಿಕ ಸಾರಿಗೆ ಕಚೇರಿ (Sr. RTO)
- ಪ್ರಾದೇಶಿಕ ಸಾರಿಗೆ ಕಚೇರಿ (RTO)
- ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ (ARTO) ಅಥವಾ ಹತ್ತಿರದ ಸಂಚಾರ ಪೊಲೀಸ್ ಠಾಣೆ
- ವಾಹನ ದಾಖಲೆಗಳೊಂದಿಗೆ ಅರ್ಧ ದಂಡ ಪಾವತಿಸಿ
ಗಮನಿಸಿ:
- ಈ ಯೋಜನೆ ಡಿಸೆಂಬರ್ 12, 2025, ಸಂಜೆ 11:59ಕ್ಕೆ ಮುಕ್ತಾಯವಾಗಲಿದೆ.
- ಈ ದಿನದ ನಂತರ ದಂಡವನ್ನು ಪೂರ್ಣ ಮೊತ್ತ + ಬಡ್ಡಿ ಪಾವತಿಸಬೇಕಾಗುತ್ತದೆ.
ದೇಶ
Bengaluru News ಟ್ರಾಫಿಕ್ ಪೊಲೀಸ್ ಬದಲು GBA ಟೋಯಿಂಗ್ — ಬೆಂಗಳೂರಿನಲ್ಲಿ ಹೊಸ ವ್ಯವಸ್ಥೆ
ಬೆಂಗಳೂರು: ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತೆ ಟೋಯಿಂಗ್ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಒಂದು ಟೋಯಿಂಗ್ ವಾಹನ ಖರೀದಿ ಆಗಿದ್ದು, ಉಳಿದ ನಾಲ್ಕು ಪಾಲಿಕೆಗಳಿಗೂ ಶೀಘ್ರದಲ್ಲೇ ಟೋಯಿಂಗ್ ವಾಹನಗಳು ಬರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ, ಗ್ಯಾರೇಜ್ ಸಮಸ್ಯೆ ಮತ್ತು ಅಕ್ರಮ ಪಾರ್ಕಿಂಗ್ಗಳು ದಿನೇದಿನೇ ಹೆಚ್ಚುತ್ತಿವೆ. ವಿಶೇಷವಾಗಿ ಬೀದಿ ಬದಿ ಹಾಗೂ ಮನೆ ಮುಂಭಾಗದ ಫುಟ್ಪಾತ್ಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಸಾಮಾನ್ಯವಾಗಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು GBA ಟ್ರಾಫಿಕ್ ಪೊಲೀಸರ ಸಹಕಾರದೊಂದಿಗೆ ಟೋಯಿಂಗ್ ಪುನರಾರಂಭ ಮಾಡಲು ಯೋಜಿಸಿದೆ.
ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರ ಮಾತುಗಳ ಪ್ರಕಾರ, ಅಕ್ರಮವಾಗಿ ಪಾರ್ಕ್ ಮಾಡಿದ ವಾಹನಗಳನ್ನು ಟೋಯಿಂಗ್ ಮಾಡಿದ ನಂತರ, ಮೋಟಾರು ವಾಹನ ನಿಯಮ ಪ್ರಕಾರ ದಂಡ ಹಾಕುವುದಷ್ಟೇ ಅಲ್ಲ, ಫುಟ್ಪಾತ್ ಜಾಗ ಕಬಳಿಸಿದಕ್ಕಾಗಿ GBA ವಿಶೇಷ ದಂಡವನ್ನು ಕೂಡ ವಿಧಿಸಲಿದೆ. ಈ ಮೂಲಕ ಪಾದಚಾರಿ ಹಕ್ಕುಗಳನ್ನು ಮತ್ತು ಸಾರ್ವಜನಿಕ ಜಾಗ ಉಪಯೋಗವನ್ನು ರಕ್ಷಿಸುವ ಗುರಿ ಹೊಂದಲಾಗಿದೆ.
GBA ವ್ಯಾಪ್ತಿಯಲ್ಲಿ ಐದು ಪಾಲಿಕೆಗಳು ಸೇರಲಿದ್ದು, ಪ್ರತಿ ಪಾಲಿಕೆಗೂ ವಿಶೇಷ ಟೋಯಿಂಗ್ ವಾಹನವನ್ನು ಒದಗಿಸಿ, ಒಂದು ತಿಂಗಳೊಳಗೆ ಟೆಂಡರ್ ಮೂಲಕ ಕಾರ್ಯಾಚರಣೆ ಪ್ರಾರಂಭಿಸಲು ಸಿದ್ಧತೆ ನಡೆದಿದೆ. ಇದರೊಂದಿಗೆ, ನಗರದಲ್ಲಿ ಎಲ್ಲಿ ತಾನೆ ಪಾರ್ಕ್ ಮಾಡುವ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸುವುದೂ ಉದ್ದೇಶವಾಗಿದೆ.
ಇದೇ ವೇಳೆ ಟ್ರಾಫಿಕ್ ಪೊಲೀಸರ ಬದಲಾಗಿ GBA ಸ್ವತಂತ್ರವಾಗಿ ಟೋಯಿಂಗ್ ನಡೆಸಲು ಮುಂದಾಗಿರುವುದು ನಗರದ ಜನರಲ್ಲಿ ಕುತೂಹಲ ಹುಟ್ಟಿಸಿದೆ. ಹೊಸ ವ್ಯವಸ್ಥೆಯಿಂದ ಸಂಚಾರದ ಸಮಸ್ಯೆ ಎಷ್ಟು ಮಟ್ಟಿಗೆ ಪರಿಹಾರವಾಗುತ್ತದೆ ಎಂಬುದು ಗಮನ ಸೆಳೆಯುತ್ತಿದೆ.
-
ಬಿಬಿಎಂಪಿ7 months agoತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years agoವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years agoಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years agoಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years agoGruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು2 years agoನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು1 year agoಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years agoದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ
