Connect with us

ದೇಶ

 99 ಸಹೋದರರ ಹತ್ಯೆ ಮಾಡಿ ಇಲ್ಲಿ ಹಾಕಿದ್ದನಂತೆ ಚಕ್ರವರ್ತಿ ಅಶೋಕ!? ಏನು ಹೇಳುತ್ತೆ ಇತಿಹಾಸ? 

Published

on

ಪಾಟ್ನಾ: ಬಿಹಾರದಲ್ಲಿದೆ ಒಂದು ನಿಗೂಢವಾದ ಬಾವಿ. ಸದಾ ಜೀವಂತಿಕೆಯಿಂದ ಇರುವ ಈ ಬಾವಿಯಲ್ಲಿ ಇದುವರೆಗೆ ನೀರು ಬತ್ತಿದ್ದೇ ಇಲ್ಲವಂತೆ. ಸ್ವತಃ ಚಕ್ರವರ್ತಿ ಅಶೋಕನೂ ಈ ಬಾವಿಯ ನೀರು ಖಾಲಿ ಮಾಡಲು ವಿಫಲನಾಗಿದ್ದ ಎನ್ನುತ್ತವೆ ಇಲ್ಲಿನ ಸ್ಥಳೀಯರ ದಂತಕಥೆಗಳು. ಹಾಗಾದರೆ ಈ ಬಾವಿ ಬಿಹಾರದಲ್ಲಿ ಎಲ್ಲಿದೆ? ಏನಿದರ ವಿಶೇಷತೆ? ಇತಿಹಾಸ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ..

ಚಕ್ರವರ್ತಿ ಸಾಮ್ರಾಟ್​ ಅಶೋಕನನ್ನು ಭಾರತದ ಅತ್ಯಂತ ಪ್ರಭಾವಶಾಲಿ ಆಡಳಿತಗಾರರಲ್ಲಿ ಒಬ್ಬ ಎನ್ನುತ್ತದೆ ಇತಿಹಾಸ. ಮೌರ್ಯ ರಾಜವಂಶದ ಮೂರನೇ ದೊರೆ. ಮೌರ್ಯ ರಾಜವಂಶದ ಸ್ಥಾಪಕ ಚಂದ್ರಗುಪ್ತ ಮೌರ್ಯನ ಮಗ ಬಿಂದುಸಾರನ ಮಗ. ಅಶೋಕನ ಜನ್ಮ ದಿನವನ್ನು ಬಿಹಾರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕ್ರಿಸ್ತಪೂರ್ವ 304ರಲ್ಲಿ ಜನಿಸಿ, ಕ್ರಿ.ಪೂ. 269 ರಿಂದ 232 ರವರೆಗೆ ಆಡಳಿತ ನಡೆಸಿದ ಅಶೋಕನ ಜನ್ಮದಿನವನ್ನು ಏಪ್ರಿಲ್​ 14 ರಂದು ಆಚರಿಸಲು ಬಿಹಾರ ಸರ್ಕಾರ ನಿರ್ಧರಿಸಿತ್ತು. ಆದರೆ, ಅಶೋಕ ಚೈತ್ರಮಾಸದ ಅಷ್ಟಮಿಯ ದಿನ ಹುಟ್ಟಿದ ಕಾರಣ, ಬಿಹಾರದಲ್ಲಿ ಚೈತ್ರ ಅಷ್ಟಮಿಯನ್ನು ಅಶೋಕ ಅಷ್ಟಮಿ ಎಂದೂ ಕೊಂಡಾಡಲಾಗುತ್ತದೆ.

ಈ ಸಂದರ್ಭದಲ್ಲಿ ಚಕ್ರವರ್ತಿ ಅಶೋಕ ನಿರ್ಮಿಸಿದ ಎಂದು ಹೇಳುವ ಬಿಹಾರದ ಪಾಟ್ನಾದ ಕುಮ್ರಾರ್ ಪುರಾತತ್ವ ಸ್ಥಳದಲ್ಲಿರುವ ಈ ನಿಗೂಢ ಬಾವಿಯ ಬಗ್ಗೆ ತಿಳಿಯೋಣ ಬನ್ನಿ..

ಸಿಂಹಳೀಯ ಸಾಹಿತ್ಯದಲ್ಲಿರುವ ಇತಿಹಾಸ ಏನು ಹೇಳುತ್ತೆ?: ಈಟಿವಿ ಭಾರತ ಜೊತೆಗೆ ಮಾತನಾಡಿದ ಇತಿಹಾಸಕಾರ ಪ್ರೊ.ಆದಿತ್ಯ ನಾರಾಯಣ್​ ಝಾ, “ಕ್ರಿಸ್ತಪೂರ್ವ 269ರಲ್ಲಿ ತಂದೆ ಬಿಂದುಸಾರನ ಮರಣಾನಂತರ ಉತ್ತರಾಧಿಕಾರಿಯಾಗಿ ಪಟ್ಟವೇರಿದ ಅಶೋಕ ನಂತರ ರಾಜನಾಗಿ ಆಳ್ವಿಕೆ ನಡೆಸುತ್ತಾನೆ. ಉತ್ತರಾಧಿಕಾರಿಯಾಗಿ ಸಿಂಹಾಸನವೇರಿದ 8 ವರ್ಷಗಳವರೆಗೆ ಅಶೋಕ ಅತ್ಯಂತ ಕ್ರೂರ ಆಡಳಿತಗಾರನಾಗಿದ್ದನು. ಅದಕ್ಕಾಗಿಯೇ ಕೆಲವು ಐತಿಹಾಸಿಕ ಮೂಲಗಳಲ್ಲಿ ಅವನನ್ನು ಚಂದಾಶೋಕ ಅಥವಾ ಕಾಮಶೋಕ ಎಂದೂ ಕರೆಯಲಾಗುತ್ತದೆ. ಈ ವಿವರಣೆಗಳು ಯಾವುದೇ ಭಾರತೀಯ ಸಾಹಿತ್ಯದಲ್ಲಿ ಕಂಡು ಬರುವುದಿಲ್ಲ. ಈ ಎಲ್ಲ ವಿಷಯಗಳು ಶ್ರೀಲಂಕಾದಲ್ಲಿ ಬರೆದ ಬೌಧ ಸಾಹಿತ್ಯದಲ್ಲಿವೆ. ಸಿಂಹಳೀಯ ಸಾಹಿತ್ಯದ ದೀಪವಂಶ ಮತ್ತು ಮಹಾವಂಶದಲ್ಲಿ ಅಶೋಕನ ಬಗ್ಗೆ ಈ ರೀತಿಯ ವಿವರಣೆಗಳನ್ನು ಬರೆಯಲಾಗಿದೆ” ಎನ್ನುತ್ತಾರೆ ಅವರು. ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಈ ನಿಗೂಢ ಬಾವಿಯನ್ನು ಚಕ್ರವರ್ತಿ ಅಶೋಕನ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ದಂತಕಥೆಗಳು ಉಲ್ಲೇಖಿಸುತ್ತವೆ. ನಂತರದಲ್ಲಿ ಈ ಬಾವಿಯನ್ನು ಪಾಟ್ನಾದ ಆಗಮ ಕುವಾನ್​ (ಎಂದರೆ ಎಂದೂ ಬತ್ತದ ಬಾವಿ – ಆಳವರಿಯಲಾಗದ ಬಾವಿ) ಎಂದು ಗುರುತಿಸಲಾಯಿತು. ಈ ಆಗಮ ಕುವಾನ್​ ಬಗ್ಗೆ ಅನೇಕ ರೀತಿಯ ಕಥೆಗಳು ಜನರಲ್ಲಿ ಪ್ರಚಲಿತದಲ್ಲಿವೆ. ಈ ಬಾವಿಯನ್ನು ಆಳವಾದ ಬಾವಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದ್ದು, ಇದರ ಆಳ 105 ಅಡಿ ಎಂದು ಹೇಳಲಾಗುತ್ತದೆ.

ಎಂದೂ ಬತ್ತದ ಬಾವಿ: ಅಶೋಕ ತನ್ನ ಆಳ್ವಿಕೆ ಅವಧಿಯಲ್ಲಿ ಈ ಬಾವಿಯನ್ನು ಕೊರೆಯಿಸಿದ್ದನು ಎಂದು ಪ್ರತೀತಿ ಇದೆ. ಇದರ ನೀರು ಎಂದೂ ಬತ್ತುವುದಿಲ್ಲ. ದೇಶದಲ್ಲಿ ಅನೇಕ ಕ್ಷಾಮಗಳು ಬಂದು ಹೋಗಿವೆ. ಆದರೆ ಆ ಕಾಲದಲ್ಲೂ ಈ ಬಾವಿಯ ನೀರುವ ಬತ್ತಿರಲಿಲ್ಲ. ಸ್ವತಃ ಅಶೋಕನೂ ಈ ಬಾವಿಯ ನೀರು ಖಾಲಿ ಮಾಡುವಲ್ಲಿ ವಿಫಲನಾಗಿದ್ದನು ಎಂದು ಹೇಳಲಾಗುತ್ತದೆ. ಈ ಬಾವಿಯನ್ನು ಬ್ರಿಟಿಷ್​ ಪರಿಶೋಧಕ ಲಾರೆನ್ಸ್​ ವಾಡೆಲ್​ ಕಂಡು ಹಿಡಿದನು.

ಅಶೋಕನ ಕಾಲದ ಬಾವಿಯ ಇತಿಹಾಸ: ಚಕ್ರವರ್ತಿ ಅಶೋಕನ ಆರಂಭದ ಆಳ್ವಿಕೆ ಹಾಗೂ ಆತನ ಪಟ್ಟಾಭಿಷೇಕಕ್ಕೂ ಮೊದಲು ಕ್ರೂರ ಆಡಳಿತ ನಡೆಸಿದ್ದ ಎಂಬ ಇತಿಹಾಸ ಇದೆ. ಈ ಅವಧಿಯಲ್ಲಿ ತನ್ನ 99 ಸಹೋದರರು ಮತ್ತು ಸಂಬಂಧಿಕರನ್ನು ಕೊಂದು ಅವರ ದೇಹಗಳನ್ನು ಈ ಬಾವಿಗೆ ಎಸೆದಿದ್ದನು ಎನ್ನುವ ಜಾನಪದ ಇತಿಹಾಸ ಇಲ್ಲಿ ಜನಪ್ರಿಯವಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಐತಿಹಾಸಿಕ ಪುರಾವೆಗಳು ಇನ್ನೂ ಕಂಡು ಬಂದಿಲ್ಲ. ಆದರೆ ಸಿಂಹಳೀಯ ಸಾಹಿತ್ಯದಲ್ಲಿರುವ ಇತಿಹಾಸದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಚಕ್ರವರ್ತಿ ಅಶೋಕನ ಮರಣದ ಸುಮಾರು 400 ವರ್ಷಗಳ ನಂತರ ಇತಿಹಾಸದಲ್ಲಿ ಆಗಮ ಕುವಾನ್​ ಬಗ್ಗೆ ಬರೆದ ಸಾಹಿತ್ಯದಲ್ಲಿ ಕಂಡು ಬರುತ್ತವೆ. ಅಶೋಕನ ಅವಧಿಯಲ್ಲಿ ಬರೆದ ಐತಿಹಾಸಿಕ ಪುಸ್ತಕಗಳಲ್ಲಿ ಅಥವಾ ಅವನ ಮರಣದ ಕೆಲವು ದಿನಗಳ ನಂತರದಲ್ಲಿ ಬರೆದಂತಹ ಸಾಹಿತ್ಯಗಳಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎನ್ನುತ್ತಾರೆ ಪ್ರೊ.ಆದಿತ್ಯ ನಾರಾಯಣ್​ ಝಾ.

ಕಳಿಂಗ ಯುದ್ಧದ ನಂತರ ಮನ ಪರಿವರ್ತನೆ: ಕ್ರಿ.ಪೂ 261ರಲ್ಲಿ ಕಳಿಂಗ ಯುದ್ಧ ನಡೆದಿತ್ತು. ಆ ಬಹುದೊಡ್ಡ ಯುದ್ಧದಲ್ಲಿ ಲಕ್ಷಾಂತರ ಸಾಮಾನ್ಯ ಜನರು ಪ್ರಾಣ ಕಳೆದುಕೊಂಡಿದ್ದರು. ಕಳಿಂಗ ಯುದ್ಧ ಕೇವಲ ಎರಡು ರಾಜ್ಯಗಳ ನಡುವಿನ ಯುದ್ಧವಾಗಿರದೇ, ಮೊದಲ ನರಮೇಧವಾಗಿತ್ತು. ಈ ಯುದ್ಧದ ಬಳಿಕ ಅಶೋಕನ ಮನಸ್ಸು ಪರಿವರ್ತನೆಯಾಯಿತು. ನಂತರ ಈತ ಅನುಸರಿಸಿದ ಧಮ್ಮನೀತಿ ಭಾರತದಲ್ಲಿ ಮಾತ್ರವಲ್ಲದೇ, ಭಾರತದ ಹೊರಗೂ ಶಾಂತಿಯ ಸಂದೇಶವನ್ನು ಸಾರಿತ್ತು. ಆದ್ದರಿಂದಲೇ ಈತನನ್ನು ಇತಿಹಾಸದ ಪುಟಗಳಲ್ಲಿ ಸನ್ಯಾಸಿ ರಾಜ ಎಂದು ಕರೆಯಲಾಗುತ್ತದೆ.

ಕಳಿಂಗ ಯುದ್ಧಕ್ಕೂ ಮುನ್ನ ಶೈವ ಸಿದ್ಧಾಂತವನ್ನು ಪಾಲಿಸುತ್ತಿದ್ದ. ಆದರೆ ಕಳಿಂಗ ಯುದ್ಧಾ ನಂತರ ಶಾಂತಿಯ ಸಂಕೇತವಾದ ಬೌದ್ಧ ಧರ್ಮವನ್ನು ಅಳವಡಿಸಿಕೊಂಡನು. ಇದಾದ ಬಳಿಕ ಅಹಿಂಸಾ ಮಾರ್ಗದಲ್ಲಿ ಸಾಗಿ ಇಡೀ ಜಗತ್ತಿಗೆ ಅಹಿಂಸೆಯ ಸಂದೇಶವನ್ನು ಸಾರಿದ್ದನು. ನಂತರ ಯುದ್ಧಗಳನ್ನು ತ್ಯಜಿಸುವುದಾಗಿ ಘೋಷಿಸಿದ್ದನು. ಮಾತ್ರವಲ್ಲದೇ ಆತನ ನಂತರದ ಮೌರ್ಯ ಪೀಳಿಗೆ ಕೂಡ ಎಂದಿಗೂ ಯುದ್ಧ ಮಾಡುವುದಿಲ್ಲ. ಧಮ್ಮನೀತಿಯನ್ನು ಪಾಲಿಸುತ್ತಾರೆ ಎನ್ನುವ ವಾಗ್ಧಾನವನ್ನು ಮಾಡಿದ್ದನು. ಕಳಿಂಗ ಯುದ್ಧದ ನಂತರವೂ ಚಕ್ರವರ್ತಿ ಅಶೋಕ ರಾಜ್ಯಾಡಳಿತ ನಡೆಸಿದ್ದನು. ರಾಜನಾಗಿದ್ದರೂ, ಸಕಲ ವೈಯಕ್ತಿಕ ಭೋಗಗಳನ್ನು ತ್ಯಜಿಸಿ, ಸನ್ಯಾಸಿ ರಾಜನಾಗಿ ಅಂದರೆ ಏನೂ ಇಲ್ಲದ ರಾಜನಾಗಿ, ಹಳದಿ ಬಟ್ಟೆ ಧರಿಸಿ ಬೌದ್ಧ ಯೋಗಿಯಾಗಿದ್ದ. ಉಳಿದ ಅಧಿಕಾರಾವಧಿಯಲ್ಲಿ ದೇಶದ ಇತರ ಭಾಗಗಳಲ್ಲಿ ಧಾರ್ಮಿಕ ಸಾಮರಸ್ಯವನ್ನು ಸ್ಥಾಪಿಸುವ ಕೆಲಸ ಮಾಡಿದ್ದ ಎನ್ನುತ್ತಾರೆ ಆದಿತ್ಯ ನಾರಾಯಣ್​.

ಈ ನಿಗೂಢ ಬಾವಿ ಬಗೆಗಿದೆ ಧಾರ್ಮಿಕ ನಂಬಿಕೆ: ಈ ಬಾವಿ ಮಾತಾ ಶೀತಲ ದೇವಾಲಯದ ಅಂಗಳದಲ್ಲಿದೆ. ಇದು ಪಾಟ್ನಾದ ಅತ್ಯಂತ ಹಳೆಯ ದೇವಾಲಯ. ಇಲ್ಲಿಗೆ ಭಕ್ತಿಯಿಂದ ಬರುವ ಭಕ್ತರು ಯಾವುದೇ ಇಷ್ಟಾರ್ಥ ಇದ್ದರೂ ಈಡೇರುತ್ತವೆ ಎಂದು ಹೇಳಲಾಗುತ್ತದೆ. ಈ ಬಾವಿಯ ನೀರನ್ನು ಶೀತಲ ಮಾತೆಯ ಪೂಜೆಗೆ ಬಳಸಲಾಗುತ್ತದೆ. ಈ ಬಾವಿಗೆ ನೈವೇದ್ಯ ಸಲ್ಲಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ. ಜೊತೆಗೆ ಬಾವಿಯ ನೀರು ದೇಹದ ಪ್ರತಿಯೊಂದು ಕಾಯಿಲೆಯನ್ನು ಗುಣಪಡಿಸುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ದೇಶ

12 ವರ್ಷಗಳ ಆಡಳಿತದಲ್ಲಿ ಭಾರತಕ್ಕೆ ಜಾಗತಿಕ ಗುರುತು: ಮೋದಿ ಪರಿಣಾಮ

Published

on

ನವದೆಹಲಿ: ಪ್ರಧಾನಿ Narendra Modi ಅವರ 12 ವರ್ಷಗಳ ಆಡಳಿತಾವಧಿಯನ್ನು ಆಧುನಿಕ ಭಾರತದ ಅಭಿವೃದ್ಧಿ ಮತ್ತು ಪರಿವರ್ತನೆಯ ಪ್ರಮುಖ ಘಟ್ಟವೆಂದು ಬಿಜೆಪಿ ವಲಯ ಹಾಗೂ ಬೆಂಬಲಿಗರು ವರ್ಣಿಸಿದ್ದಾರೆ. ಈ ಅವಧಿಯಲ್ಲಿ ಭಾರತವು ಆರ್ಥಿಕತೆ, ಮೂಲಸೌಕರ್ಯ, ರಕ್ಷಣಾ, ತಂತ್ರಜ್ಞಾನ ಹಾಗೂ ಡಿಜಿಟಲ್ ಕ್ಷೇತ್ರಗಳಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ ಎಂದು ಹೇಳಲಾಗಿದೆ.

ಆರ್ಥಿಕ ಕ್ಷೇತ್ರದಲ್ಲಿ ದೇಶದ ನೈಜ ಜಿಡಿಪಿ ಹಾಗೂ ನಾಮಮಾತ್ರ ಜಿಡಿಪಿ ಗಣನೀಯವಾಗಿ ಏರಿಕೆಯಾಗಿದೆ. ಸೇವಾ ವಲಯ ಮತ್ತು MSME ಕ್ಷೇತ್ರಗಳು ದೇಶದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿವೆ. GST ಜಾರಿಗೆ ನಂತರ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿದ್ದು, ಆದಾಯದಲ್ಲಿಯೂ ಏರಿಕೆ ಕಂಡುಬಂದಿದೆ.

ಮೂಲಸೌಕರ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಮೆಟ್ರೋ ಜಾಲ ವೃದ್ಧಿ, ರೈಲು ವಿದ್ಯುದ್ದೀಕರಣ ಮತ್ತು ಗ್ರಾಮೀಣ ವಿದ್ಯುತ್ ಯೋಜನೆಗಳು ದೇಶದ ಚಿತ್ರಣವನ್ನು ಬದಲಿಸಿದ ಪ್ರಮುಖ ಅಂಶಗಳಾಗಿವೆ. ಜೊತೆಗೆ “ಡಿಜಿಟಲ್ ಇಂಡಿಯಾ” ಯೋಜನೆಯಡಿ UPI, ಆಧಾರ್, DigiLocker ಸೇರಿದಂತೆ ಹಲವು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಜನಜೀವನವನ್ನು ಸುಲಭಗೊಳಿಸಿವೆ.

ರಕ್ಷಣಾ ಕ್ಷೇತ್ರದಲ್ಲೂ ಭಾರತವು ಸ್ವಾವಲಂಬನೆ ಕಡೆಗೆ ದೊಡ್ಡ ಹೆಜ್ಜೆ ಇಟ್ಟಿದ್ದು, ದೇಶೀಯ ಉತ್ಪಾದನೆ ಹಾಗೂ ರಫ್ತು ಎರಡೂ ಹೆಚ್ಚಾಗಿದೆ. ಸೌರಶಕ್ತಿ ಕ್ಷೇತ್ರದಲ್ಲಿ ಭಾರತವು ಜಾಗತಿಕವಾಗಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.

ಕೋವಿಡ್ ಸಂದರ್ಭದಲ್ಲಿನ ಲಸಿಕಾ ಅಭಿಯಾನ ಹಾಗೂ ವಿದೇಶಿ ಸಹಾಯ ಕಾರ್ಯಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿವೆ ಎಂದು ಬಿಜೆಪಿ ಬೆಂಬಲಿತ ಮೂಲಗಳು ಹೇಳಿವೆ.

ಇದೇ ವೇಳೆ, Bharatiya Janata Party ದೇಶದಾದ್ಯಂತ ಈ ಸಾಧನೆಗಳನ್ನು ಜನರಿಗೆ ತಲುಪಿಸಲು ವಿಶೇಷ ಅಭಿಯಾನ ನಡೆಸುತ್ತಿದೆ. ವಿರೋಧ ಪಕ್ಷಗಳು ಸರ್ಕಾರದ ನೀತಿಗಳ ಕುರಿತು ಟೀಕೆ ಮಾಡುತ್ತಿವೆ.

ಒಟ್ಟಾರೆ, ಮೋದಿ ಆಡಳಿತವು ಭಾರತವನ್ನು ಆಧುನಿಕ, ಡಿಜಿಟಲ್ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ರಾಷ್ಟ್ರವಾಗಿ ರೂಪಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Continue Reading

ದೇಶ

ಖ್ಯಾತ ನಿರ್ದೇಶಕ ಭಾರತಿರಾಜ ಇನ್ನಿಲ್ಲ: ತಮಿಳು ಚಿತ್ರರಂಗಕ್ಕೆ ದೊಡ್ಡ ನಷ್ಟ

Published

on

ಚೆನ್ನೈ: ತಮಿಳು ಚಿತ್ರರಂಗದ ದಿಗ್ಗಜ, ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಹಾಗೂ ನಟ Bharathiraja ಇಂದು (ಜೂನ್ 10) ವಿಧಿವಶರಾಗಿದ್ದಾರೆ. ಅವರು ತಮ್ಮ 84ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದು, ಚಿತ್ರರಂಗದಲ್ಲಿ ಶೋಕದ ಛಾಯೆ ಆವರಿಸಿದೆ.

ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ನಿಧನರಾಗಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಗ್ರಾಮೀಣ ಬದುಕಿನ ನೈಜ ಚಿತ್ರಣವನ್ನು ತೆರೆಗೆ ತಂದ ನಿರ್ದೇಶಕರಾಗಿ ಭಾರತಿರಾಜ ಅವರು ವಿಶಿಷ್ಟ ಸ್ಥಾನ ಪಡೆದಿದ್ದರು. ಅವರ ನಿರ್ದೇಶನದ ಅನೇಕ ಚಿತ್ರಗಳು ತಮಿಳು ಸಿನೆಮಾಗೆ ಹೊಸ ದಿಕ್ಕು ನೀಡಿದವು. ಕಥನಶೈಲಿ ಮತ್ತು ಸಾಮಾಜಿಕ ವಿಷಯಗಳ ಪ್ರಾತಿನಿಧ್ಯಕ್ಕಾಗಿ ಅವರು ಚಿತ್ರರಂಗದಲ್ಲಿ ಪ್ರಖ್ಯಾತರಾಗಿದ್ದರು.

ತಮಿಳು ಚಿತ್ರರಂಗದ ಜೊತೆಗೆ ಭಾರತೀಯ ಚಿತ್ರರಂಗದ ಮೇಲೂ ಅವರ ಪ್ರಭಾವ ಅಪಾರವಾಗಿತ್ತು. ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಅವರ ಕೆಲಸಕ್ಕೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ದೊರೆತಿದ್ದವು.

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. Tamil film industry ವಲಯದಲ್ಲಿ ಈ ಸುದ್ದಿ ಆಘಾತ ಮೂಡಿಸಿದೆ.

ಭಾರತಿರಾಜ ಅವರ ಅಂತಿಮ ವಿಧಿವಿಧಾನಗಳು ಚೆನ್ನೈನಲ್ಲಿ ನಡೆಯಲಿವೆ ಎಂದು ನಿರೀಕ್ಷಿಸಲಾಗಿದೆ. ಅವರ ಅಗಲಿಕೆ ತಮಿಳು ಚಿತ್ರರಂಗಕ್ಕೆ ಅಪಾರ ನಷ್ಟವೆಂದು ಚಿತ್ರರಂಗದವರು ಹೇಳಿದ್ದಾರೆ.

Continue Reading

ಕ್ರೀಡೆ

ಫಿಫಾ ವಿಶ್ವಕಪ್ 2026 ಆರಂಭ: ಜಗತ್ತೆಲ್ಲಾ ಫುಟ್‌ಬಾಲ್ ಜ್ವರದಲ್ಲಿ

Published

on

ಜಗತ್ತಿನಾದ್ಯಂತ ಕೋಟ್ಯಂತರ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದ FIFA World Cup 2026 ಕೊನೆಗೂ ಆರಂಭವಾಗುತ್ತಿದೆ. ಜೂನ್ 11ರಿಂದ ಅಧಿಕೃತವಾಗಿ ಆರಂಭವಾಗಲಿರುವ ಈ ಮಹಾಕ್ರೀಡಾಕೂಟವು ಇಡೀ ವಿಶ್ವವನ್ನು ಫುಟ್‌ಬಾಲ್ ಜ್ವರದಲ್ಲಿ ಮುಳುಗಿಸಲಿದೆ.

ಈ ಬಾರಿ ಉತ್ತರ ಅಮೆರಿಕದ ಅಮೆರಿಕಾ, ಕೆನಡಾ ಮತ್ತು ಮೆಕ್ಸಿಕೋ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿರುವುದು ವಿಶೇಷವಾಗಿದೆ. ಫಿಫಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೂರು ರಾಷ್ಟ್ರಗಳು ಒಟ್ಟಾಗಿ ವಿಶ್ವಕಪ್ ಆಯೋಜಿಸುತ್ತಿದ್ದು, ಇದು 23ನೇ ಆವೃತ್ತಿಯ ಟೂರ್ನಿಯಾಗಲಿದೆ.

ಈ ವಿಶ್ವಕಪ್‌ನಲ್ಲಿ ಪ್ರಮುಖ ಬದಲಾವಣೆಗಳೂ ನಡೆದಿವೆ. ಮೊದಲ ಬಾರಿ 32 ತಂಡಗಳ ಬದಲು ಒಟ್ಟು 48 ತಂಡಗಳು ಭಾಗವಹಿಸುತ್ತಿದ್ದು, ಪಂದ್ಯಗಳ ಸಂಖ್ಯೆ 64ರಿಂದ 104ಕ್ಕೆ ಏರಿಕೆಯಾಗಿದೆ. ಒಟ್ಟು 39 ದಿನಗಳ ಕಾಲ ನಡೆಯುವ ಈ ಟೂರ್ನಿ ಜುಲೈ 19ರಂದು ನ್ಯೂಯಾರ್ಕ್–ನ್ಯೂಜೆರ್ಸಿಯಲ್ಲಿ ನಡೆಯುವ ಫೈನಲ್ ಪಂದ್ಯದಿಂದ ಅಂತ್ಯಗೊಳ್ಳಲಿದೆ.

ಹೊಸ ಮಾದರಿಯಲ್ಲಿ 48 ತಂಡಗಳನ್ನು 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಟಾಪ್ ಎರಡು ತಂಡಗಳು ಹಾಗೂ ಅತ್ಯುತ್ತಮ ಮೂರನೇ ಸ್ಥಾನ ಪಡೆದ ತಂಡಗಳು ಸೇರಿ ಒಟ್ಟು 32 ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಲಿವೆ. ನಂತರ ರೌಂಡ್ ಆಫ್ 32 ರಿಂದ ನೇರ ಎಲಿಮಿನೇಷನ್ ಹಂತ ಆರಂಭವಾಗಲಿದೆ.

ತಂತ್ರಜ್ಞಾನ ಬಳಕೆಯನ್ನೂ ಹೆಚ್ಚಿಸಲಾಗಿದ್ದು ವಿಡಿಯೋ ಅಸಿಸ್ಟೆಂಟ್ ರೆಫರಿ (VAR)ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಜೊತೆಗೆ ಮೈದಾನದಲ್ಲಿ ಸಂವಹನ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ನಿಯಮಗಳನ್ನೂ ಜಾರಿಗೆ ತರಲಾಗಿದೆ.

ಭಾರತೀಯ ಅಭಿಮಾನಿಗಳಿಗೆ ಪಂದ್ಯಗಳು ತಡರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಪ್ರಸಾರವಾಗಲಿವೆ. ಮೆಕ್ಸಿಕೋ ನಗರದ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಈ ವಿಶ್ವಕಪ್ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೋ ಅವರ ಕೊನೆಯ ವಿಶ್ವಕಪ್ ಆಗಬಹುದು ಎಂಬ ಊಹೆಗಳು ಕೂಡ ಅಭಿಮಾನಿಗಳ ಕುತೂಹಲ ಹೆಚ್ಚಿಸಿವೆ. ಬ್ರೆಜಿಲ್, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಬಲಿಷ್ಠ ತಂಡಗಳ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.

Continue Reading

Trending