ದೇಶ
99 ಸಹೋದರರ ಹತ್ಯೆ ಮಾಡಿ ಇಲ್ಲಿ ಹಾಕಿದ್ದನಂತೆ ಚಕ್ರವರ್ತಿ ಅಶೋಕ!? ಏನು ಹೇಳುತ್ತೆ ಇತಿಹಾಸ?
ಪಾಟ್ನಾ: ಬಿಹಾರದಲ್ಲಿದೆ ಒಂದು ನಿಗೂಢವಾದ ಬಾವಿ. ಸದಾ ಜೀವಂತಿಕೆಯಿಂದ ಇರುವ ಈ ಬಾವಿಯಲ್ಲಿ ಇದುವರೆಗೆ ನೀರು ಬತ್ತಿದ್ದೇ ಇಲ್ಲವಂತೆ. ಸ್ವತಃ ಚಕ್ರವರ್ತಿ ಅಶೋಕನೂ ಈ ಬಾವಿಯ ನೀರು ಖಾಲಿ ಮಾಡಲು ವಿಫಲನಾಗಿದ್ದ ಎನ್ನುತ್ತವೆ ಇಲ್ಲಿನ ಸ್ಥಳೀಯರ ದಂತಕಥೆಗಳು. ಹಾಗಾದರೆ ಈ ಬಾವಿ ಬಿಹಾರದಲ್ಲಿ ಎಲ್ಲಿದೆ? ಏನಿದರ ವಿಶೇಷತೆ? ಇತಿಹಾಸ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ..
ಚಕ್ರವರ್ತಿ ಸಾಮ್ರಾಟ್ ಅಶೋಕನನ್ನು ಭಾರತದ ಅತ್ಯಂತ ಪ್ರಭಾವಶಾಲಿ ಆಡಳಿತಗಾರರಲ್ಲಿ ಒಬ್ಬ ಎನ್ನುತ್ತದೆ ಇತಿಹಾಸ. ಮೌರ್ಯ ರಾಜವಂಶದ ಮೂರನೇ ದೊರೆ. ಮೌರ್ಯ ರಾಜವಂಶದ ಸ್ಥಾಪಕ ಚಂದ್ರಗುಪ್ತ ಮೌರ್ಯನ ಮಗ ಬಿಂದುಸಾರನ ಮಗ. ಅಶೋಕನ ಜನ್ಮ ದಿನವನ್ನು ಬಿಹಾರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕ್ರಿಸ್ತಪೂರ್ವ 304ರಲ್ಲಿ ಜನಿಸಿ, ಕ್ರಿ.ಪೂ. 269 ರಿಂದ 232 ರವರೆಗೆ ಆಡಳಿತ ನಡೆಸಿದ ಅಶೋಕನ ಜನ್ಮದಿನವನ್ನು ಏಪ್ರಿಲ್ 14 ರಂದು ಆಚರಿಸಲು ಬಿಹಾರ ಸರ್ಕಾರ ನಿರ್ಧರಿಸಿತ್ತು. ಆದರೆ, ಅಶೋಕ ಚೈತ್ರಮಾಸದ ಅಷ್ಟಮಿಯ ದಿನ ಹುಟ್ಟಿದ ಕಾರಣ, ಬಿಹಾರದಲ್ಲಿ ಚೈತ್ರ ಅಷ್ಟಮಿಯನ್ನು ಅಶೋಕ ಅಷ್ಟಮಿ ಎಂದೂ ಕೊಂಡಾಡಲಾಗುತ್ತದೆ.
ಈ ಸಂದರ್ಭದಲ್ಲಿ ಚಕ್ರವರ್ತಿ ಅಶೋಕ ನಿರ್ಮಿಸಿದ ಎಂದು ಹೇಳುವ ಬಿಹಾರದ ಪಾಟ್ನಾದ ಕುಮ್ರಾರ್ ಪುರಾತತ್ವ ಸ್ಥಳದಲ್ಲಿರುವ ಈ ನಿಗೂಢ ಬಾವಿಯ ಬಗ್ಗೆ ತಿಳಿಯೋಣ ಬನ್ನಿ..
ಸಿಂಹಳೀಯ ಸಾಹಿತ್ಯದಲ್ಲಿರುವ ಇತಿಹಾಸ ಏನು ಹೇಳುತ್ತೆ?: ಈಟಿವಿ ಭಾರತ ಜೊತೆಗೆ ಮಾತನಾಡಿದ ಇತಿಹಾಸಕಾರ ಪ್ರೊ.ಆದಿತ್ಯ ನಾರಾಯಣ್ ಝಾ, “ಕ್ರಿಸ್ತಪೂರ್ವ 269ರಲ್ಲಿ ತಂದೆ ಬಿಂದುಸಾರನ ಮರಣಾನಂತರ ಉತ್ತರಾಧಿಕಾರಿಯಾಗಿ ಪಟ್ಟವೇರಿದ ಅಶೋಕ ನಂತರ ರಾಜನಾಗಿ ಆಳ್ವಿಕೆ ನಡೆಸುತ್ತಾನೆ. ಉತ್ತರಾಧಿಕಾರಿಯಾಗಿ ಸಿಂಹಾಸನವೇರಿದ 8 ವರ್ಷಗಳವರೆಗೆ ಅಶೋಕ ಅತ್ಯಂತ ಕ್ರೂರ ಆಡಳಿತಗಾರನಾಗಿದ್ದನು. ಅದಕ್ಕಾಗಿಯೇ ಕೆಲವು ಐತಿಹಾಸಿಕ ಮೂಲಗಳಲ್ಲಿ ಅವನನ್ನು ಚಂದಾಶೋಕ ಅಥವಾ ಕಾಮಶೋಕ ಎಂದೂ ಕರೆಯಲಾಗುತ್ತದೆ. ಈ ವಿವರಣೆಗಳು ಯಾವುದೇ ಭಾರತೀಯ ಸಾಹಿತ್ಯದಲ್ಲಿ ಕಂಡು ಬರುವುದಿಲ್ಲ. ಈ ಎಲ್ಲ ವಿಷಯಗಳು ಶ್ರೀಲಂಕಾದಲ್ಲಿ ಬರೆದ ಬೌಧ ಸಾಹಿತ್ಯದಲ್ಲಿವೆ. ಸಿಂಹಳೀಯ ಸಾಹಿತ್ಯದ ದೀಪವಂಶ ಮತ್ತು ಮಹಾವಂಶದಲ್ಲಿ ಅಶೋಕನ ಬಗ್ಗೆ ಈ ರೀತಿಯ ವಿವರಣೆಗಳನ್ನು ಬರೆಯಲಾಗಿದೆ” ಎನ್ನುತ್ತಾರೆ ಅವರು. ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಈ ನಿಗೂಢ ಬಾವಿಯನ್ನು ಚಕ್ರವರ್ತಿ ಅಶೋಕನ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ದಂತಕಥೆಗಳು ಉಲ್ಲೇಖಿಸುತ್ತವೆ. ನಂತರದಲ್ಲಿ ಈ ಬಾವಿಯನ್ನು ಪಾಟ್ನಾದ ಆಗಮ ಕುವಾನ್ (ಎಂದರೆ ಎಂದೂ ಬತ್ತದ ಬಾವಿ – ಆಳವರಿಯಲಾಗದ ಬಾವಿ) ಎಂದು ಗುರುತಿಸಲಾಯಿತು. ಈ ಆಗಮ ಕುವಾನ್ ಬಗ್ಗೆ ಅನೇಕ ರೀತಿಯ ಕಥೆಗಳು ಜನರಲ್ಲಿ ಪ್ರಚಲಿತದಲ್ಲಿವೆ. ಈ ಬಾವಿಯನ್ನು ಆಳವಾದ ಬಾವಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದ್ದು, ಇದರ ಆಳ 105 ಅಡಿ ಎಂದು ಹೇಳಲಾಗುತ್ತದೆ.
ಎಂದೂ ಬತ್ತದ ಬಾವಿ: ಅಶೋಕ ತನ್ನ ಆಳ್ವಿಕೆ ಅವಧಿಯಲ್ಲಿ ಈ ಬಾವಿಯನ್ನು ಕೊರೆಯಿಸಿದ್ದನು ಎಂದು ಪ್ರತೀತಿ ಇದೆ. ಇದರ ನೀರು ಎಂದೂ ಬತ್ತುವುದಿಲ್ಲ. ದೇಶದಲ್ಲಿ ಅನೇಕ ಕ್ಷಾಮಗಳು ಬಂದು ಹೋಗಿವೆ. ಆದರೆ ಆ ಕಾಲದಲ್ಲೂ ಈ ಬಾವಿಯ ನೀರುವ ಬತ್ತಿರಲಿಲ್ಲ. ಸ್ವತಃ ಅಶೋಕನೂ ಈ ಬಾವಿಯ ನೀರು ಖಾಲಿ ಮಾಡುವಲ್ಲಿ ವಿಫಲನಾಗಿದ್ದನು ಎಂದು ಹೇಳಲಾಗುತ್ತದೆ. ಈ ಬಾವಿಯನ್ನು ಬ್ರಿಟಿಷ್ ಪರಿಶೋಧಕ ಲಾರೆನ್ಸ್ ವಾಡೆಲ್ ಕಂಡು ಹಿಡಿದನು.
ಅಶೋಕನ ಕಾಲದ ಬಾವಿಯ ಇತಿಹಾಸ: ಚಕ್ರವರ್ತಿ ಅಶೋಕನ ಆರಂಭದ ಆಳ್ವಿಕೆ ಹಾಗೂ ಆತನ ಪಟ್ಟಾಭಿಷೇಕಕ್ಕೂ ಮೊದಲು ಕ್ರೂರ ಆಡಳಿತ ನಡೆಸಿದ್ದ ಎಂಬ ಇತಿಹಾಸ ಇದೆ. ಈ ಅವಧಿಯಲ್ಲಿ ತನ್ನ 99 ಸಹೋದರರು ಮತ್ತು ಸಂಬಂಧಿಕರನ್ನು ಕೊಂದು ಅವರ ದೇಹಗಳನ್ನು ಈ ಬಾವಿಗೆ ಎಸೆದಿದ್ದನು ಎನ್ನುವ ಜಾನಪದ ಇತಿಹಾಸ ಇಲ್ಲಿ ಜನಪ್ರಿಯವಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಐತಿಹಾಸಿಕ ಪುರಾವೆಗಳು ಇನ್ನೂ ಕಂಡು ಬಂದಿಲ್ಲ. ಆದರೆ ಸಿಂಹಳೀಯ ಸಾಹಿತ್ಯದಲ್ಲಿರುವ ಇತಿಹಾಸದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಚಕ್ರವರ್ತಿ ಅಶೋಕನ ಮರಣದ ಸುಮಾರು 400 ವರ್ಷಗಳ ನಂತರ ಇತಿಹಾಸದಲ್ಲಿ ಆಗಮ ಕುವಾನ್ ಬಗ್ಗೆ ಬರೆದ ಸಾಹಿತ್ಯದಲ್ಲಿ ಕಂಡು ಬರುತ್ತವೆ. ಅಶೋಕನ ಅವಧಿಯಲ್ಲಿ ಬರೆದ ಐತಿಹಾಸಿಕ ಪುಸ್ತಕಗಳಲ್ಲಿ ಅಥವಾ ಅವನ ಮರಣದ ಕೆಲವು ದಿನಗಳ ನಂತರದಲ್ಲಿ ಬರೆದಂತಹ ಸಾಹಿತ್ಯಗಳಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎನ್ನುತ್ತಾರೆ ಪ್ರೊ.ಆದಿತ್ಯ ನಾರಾಯಣ್ ಝಾ.
ಕಳಿಂಗ ಯುದ್ಧದ ನಂತರ ಮನ ಪರಿವರ್ತನೆ: ಕ್ರಿ.ಪೂ 261ರಲ್ಲಿ ಕಳಿಂಗ ಯುದ್ಧ ನಡೆದಿತ್ತು. ಆ ಬಹುದೊಡ್ಡ ಯುದ್ಧದಲ್ಲಿ ಲಕ್ಷಾಂತರ ಸಾಮಾನ್ಯ ಜನರು ಪ್ರಾಣ ಕಳೆದುಕೊಂಡಿದ್ದರು. ಕಳಿಂಗ ಯುದ್ಧ ಕೇವಲ ಎರಡು ರಾಜ್ಯಗಳ ನಡುವಿನ ಯುದ್ಧವಾಗಿರದೇ, ಮೊದಲ ನರಮೇಧವಾಗಿತ್ತು. ಈ ಯುದ್ಧದ ಬಳಿಕ ಅಶೋಕನ ಮನಸ್ಸು ಪರಿವರ್ತನೆಯಾಯಿತು. ನಂತರ ಈತ ಅನುಸರಿಸಿದ ಧಮ್ಮನೀತಿ ಭಾರತದಲ್ಲಿ ಮಾತ್ರವಲ್ಲದೇ, ಭಾರತದ ಹೊರಗೂ ಶಾಂತಿಯ ಸಂದೇಶವನ್ನು ಸಾರಿತ್ತು. ಆದ್ದರಿಂದಲೇ ಈತನನ್ನು ಇತಿಹಾಸದ ಪುಟಗಳಲ್ಲಿ ಸನ್ಯಾಸಿ ರಾಜ ಎಂದು ಕರೆಯಲಾಗುತ್ತದೆ.
ಕಳಿಂಗ ಯುದ್ಧಕ್ಕೂ ಮುನ್ನ ಶೈವ ಸಿದ್ಧಾಂತವನ್ನು ಪಾಲಿಸುತ್ತಿದ್ದ. ಆದರೆ ಕಳಿಂಗ ಯುದ್ಧಾ ನಂತರ ಶಾಂತಿಯ ಸಂಕೇತವಾದ ಬೌದ್ಧ ಧರ್ಮವನ್ನು ಅಳವಡಿಸಿಕೊಂಡನು. ಇದಾದ ಬಳಿಕ ಅಹಿಂಸಾ ಮಾರ್ಗದಲ್ಲಿ ಸಾಗಿ ಇಡೀ ಜಗತ್ತಿಗೆ ಅಹಿಂಸೆಯ ಸಂದೇಶವನ್ನು ಸಾರಿದ್ದನು. ನಂತರ ಯುದ್ಧಗಳನ್ನು ತ್ಯಜಿಸುವುದಾಗಿ ಘೋಷಿಸಿದ್ದನು. ಮಾತ್ರವಲ್ಲದೇ ಆತನ ನಂತರದ ಮೌರ್ಯ ಪೀಳಿಗೆ ಕೂಡ ಎಂದಿಗೂ ಯುದ್ಧ ಮಾಡುವುದಿಲ್ಲ. ಧಮ್ಮನೀತಿಯನ್ನು ಪಾಲಿಸುತ್ತಾರೆ ಎನ್ನುವ ವಾಗ್ಧಾನವನ್ನು ಮಾಡಿದ್ದನು. ಕಳಿಂಗ ಯುದ್ಧದ ನಂತರವೂ ಚಕ್ರವರ್ತಿ ಅಶೋಕ ರಾಜ್ಯಾಡಳಿತ ನಡೆಸಿದ್ದನು. ರಾಜನಾಗಿದ್ದರೂ, ಸಕಲ ವೈಯಕ್ತಿಕ ಭೋಗಗಳನ್ನು ತ್ಯಜಿಸಿ, ಸನ್ಯಾಸಿ ರಾಜನಾಗಿ ಅಂದರೆ ಏನೂ ಇಲ್ಲದ ರಾಜನಾಗಿ, ಹಳದಿ ಬಟ್ಟೆ ಧರಿಸಿ ಬೌದ್ಧ ಯೋಗಿಯಾಗಿದ್ದ. ಉಳಿದ ಅಧಿಕಾರಾವಧಿಯಲ್ಲಿ ದೇಶದ ಇತರ ಭಾಗಗಳಲ್ಲಿ ಧಾರ್ಮಿಕ ಸಾಮರಸ್ಯವನ್ನು ಸ್ಥಾಪಿಸುವ ಕೆಲಸ ಮಾಡಿದ್ದ ಎನ್ನುತ್ತಾರೆ ಆದಿತ್ಯ ನಾರಾಯಣ್.
ಈ ನಿಗೂಢ ಬಾವಿ ಬಗೆಗಿದೆ ಧಾರ್ಮಿಕ ನಂಬಿಕೆ: ಈ ಬಾವಿ ಮಾತಾ ಶೀತಲ ದೇವಾಲಯದ ಅಂಗಳದಲ್ಲಿದೆ. ಇದು ಪಾಟ್ನಾದ ಅತ್ಯಂತ ಹಳೆಯ ದೇವಾಲಯ. ಇಲ್ಲಿಗೆ ಭಕ್ತಿಯಿಂದ ಬರುವ ಭಕ್ತರು ಯಾವುದೇ ಇಷ್ಟಾರ್ಥ ಇದ್ದರೂ ಈಡೇರುತ್ತವೆ ಎಂದು ಹೇಳಲಾಗುತ್ತದೆ. ಈ ಬಾವಿಯ ನೀರನ್ನು ಶೀತಲ ಮಾತೆಯ ಪೂಜೆಗೆ ಬಳಸಲಾಗುತ್ತದೆ. ಈ ಬಾವಿಗೆ ನೈವೇದ್ಯ ಸಲ್ಲಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ. ಜೊತೆಗೆ ಬಾವಿಯ ನೀರು ದೇಹದ ಪ್ರತಿಯೊಂದು ಕಾಯಿಲೆಯನ್ನು ಗುಣಪಡಿಸುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.
ದೇಶ
ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ಹಿನ್ನಡೆ: ದೆಹಲಿ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ಬಾಲಿವುಡ್ ನಟ ಹಾಗೂ ಹಾಸ್ಯ ಕಲಾವಿದ ರಾಜ್‌ಪಾಲ್ ಯಾದವ್ (Rajpal Yadav) ವಿರುದ್ಧದ ಚೆಕ್ ಬೌನ್ಸ್ (Cheque Bounce Case) ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮಾಧ್ಯಮ ವರದಿಗಳ ಪ್ರಕಾರ, ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಿರುವ ನ್ಯಾಯಾಲಯವು ಅವರಿಗೆ ಮೂರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ವರದಿಗಳ ಪ್ರಕಾರ, ರಾಜ್‌ಪಾಲ್ ಯಾದವ್ ವಿರುದ್ಧ ದಾಖಲಾಗಿದ್ದ ಏಳು ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪ್ರತಿ ಪ್ರಕರಣಕ್ಕೂ ₹1.05 ಕೋಟಿ ದಂಡದಂತೆ ಒಟ್ಟು ₹7.35 ಕೋಟಿ ಪಾವತಿಸಲು ಸೂಚಿಸಲಾಗಿದೆ. ಜೊತೆಗೆ ದೂರುದಾರರಿಗೆ ₹1,04,75,000 ಪರಿಹಾರ ನೀಡುವಂತೆ ಹಾಗೂ ಪ್ರತಿ ಪ್ರಕರಣಕ್ಕೆ ₹25,000 ರಾಜ್ಯಕ್ಕೆ ದಂಡ ಪಾವತಿಸುವಂತೆ ಆದೇಶಿಸಿರುವುದಾಗಿ ವರದಿಯಾಗಿದೆ.
ಈ ಪ್ರಕರಣದ ಹಿನ್ನೆಲೆ 2010ರಲ್ಲಿ ನಿರ್ಮಾಣಗೊಂಡ ‘ಅತಾ ಪತಾ ಲಾಪತಾ’ ಸಿನಿಮಾಗೆ ಸಂಬಂಧಿಸಿದೆ. ಈ ಚಿತ್ರ ನಿರ್ಮಾಣ ಮತ್ತು ನಿರ್ದೇಶನಕ್ಕಾಗಿ ರಾಜ್‌ಪಾಲ್ ಯಾದವ್ ಮುರಳಿ ಪ್ರಾಜೆಕ್ಟ್ಸ್ ಸಂಸ್ಥೆಯಿಂದ ₹5 ಕೋಟಿ ಸಾಲ ಪಡೆದಿದ್ದರು ಎಂದು ಹೇಳಲಾಗಿದೆ. ಸಿನಿಮಾ ವಾಣಿಜ್ಯವಾಗಿ ಯಶಸ್ಸು ಕಾಣದ ಕಾರಣ ಸಾಲ ಮರುಪಾವತಿಯಲ್ಲಿ ವಿಳಂಬವಾಗಿದ್ದು, ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು.
ಈ ಹಿಂದೆ ಸಂಬಂಧಿಕರ ಮದುವೆ ಹಿನ್ನೆಲೆಯಲ್ಲಿ ರಾಜ್‌ಪಾಲ್ ಯಾದವ್ ಅವರಿಗೆ ತಾತ್ಕಾಲಿಕ ಜಾಮೀನು ದೊರೆತಿತ್ತು. ಇತ್ತೀಚೆಗೆ ಬಿಡುಗಡೆಯಾದ ‘ವೆಲ್ಕಮ್ ಟು ಜಂಗಲ್’ ಚಿತ್ರದಲ್ಲಿಯೂ ಅವರು ಅಭಿನಯಿಸಿದ್ದರು.
ಗಮನಿಸಿ: ಈ ಸುದ್ದಿ ವಿವಿಧ ಮಾಧ್ಯಮ ವರದಿಗಳ ಆಧಾರಿತವಾಗಿದೆ. ಪ್ರಕರಣದ ಕುರಿತು ಸಂಬಂಧಿತ ನ್ಯಾಯಾಲಯದ ಅಧಿಕೃತ ಆದೇಶ ಹಾಗೂ ದಾಖಲೆಗಳ ಆಧಾರದ ಮೇಲೆ ಮುಂದಿನ ಮಾಹಿತಿ ಪ್ರಕಟವಾಗುವ ಸಾಧ್ಯತೆ ಇದೆ.
ದೇಶ
ಮೈಸೂರು ದಸರಾ ದಿನಾಂಕ ಘೋಷಣೆ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) 2026 ಉತ್ಸವದ ದಿನಾಂಕವನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದಸರಾ ಉತ್ಸವದ ಸಿದ್ಧತೆಗಳು ಹಾಗೂ ಕಾರ್ಯಕ್ರಮಗಳ ವೇಳಾಪಟ್ಟಿಗೆ ಅನುಮೋದನೆ ನೀಡಲಾಗಿದೆ.
ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ಅಕ್ಟೋಬರ್ 11ರಂದು ಮೈಸೂರು ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಇದೇ ದಿನದಿಂದ ನವರಾತ್ರಿ (Navaratri) ಆಚರಣೆ ಆರಂಭವಾಗಲಿದೆ. ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲಾ ಕಾರ್ಯಕ್ರಮಗಳು ನಡೆಯಲಿವೆ.
ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ **ಜಂಬೂಸವಾರಿ (Jumboo Savari)**ಯನ್ನು ಅಕ್ಟೋಬರ್ 21ರಂದು ವಿಜಯದಶಮಿ ದಿನ ಅದ್ದೂರಿಯಾಗಿ ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಸಂಪ್ರದಾಯದಂತೆ ಅಲಂಕೃತ ಅಂಬಾರಿಯಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಗಲಿದ್ದು, ಸಾವಿರಾರು ಭಕ್ತರು ಹಾಗೂ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಈ ಐತಿಹಾಸಿಕ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಸಭೆಯಲ್ಲಿ ಭದ್ರತೆ, ಸಂಚಾರ ವ್ಯವಸ್ಥೆ, ಪ್ರವಾಸೋದ್ಯಮ, ಸ್ವಚ್ಛತೆ, ವಿದ್ಯುತ್, ಕುಡಿಯುವ ನೀರು ಹಾಗೂ ಸಾರ್ವಜನಿಕ ಸೌಲಭ್ಯಗಳ ಕುರಿತು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಮೈಸೂರು ದಸರಾ ಕರ್ನಾಟಕದ ಅತ್ಯಂತ ದೊಡ್ಡ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದ್ದು, ರಾಜ್ಯದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮಹತ್ವದ ವೇದಿಕೆಯಾಗಿದೆ. ಈ ಬಾರಿ ಉತ್ಸವವನ್ನು ಇನ್ನಷ್ಟು ವೈಭವದಿಂದ ಆಯೋಜಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ.
ದೇಶ
ತಮಿಳುನಾಡು ಸರ್ಕಾರದ ಹೊಸ ಆದೇಶ: ಸರ್ಕಾರಿ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆ ಸಂಪೂರ್ಣ ನಿಷೇಧ
ಚೆನ್ನೈ: ತಮಿಳುನಾಡು (Tamil Nadu) ಸರ್ಕಾರವು ಸರ್ಕಾರಿ ಶಾಲೆಗಳ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ರಾಜ್ಯದ ಸರ್ಕಾರಿ ಶಾಲೆಗಳು (Government Schools) ಹಾಗೂ ತರಗತಿ ಕೊಠಡಿಗಳಲ್ಲಿ (Classrooms) ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಖಾಸಗಿ ವ್ಯಕ್ತಿಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ತಮಿಳುನಾಡು ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ (Raj Mohan) ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನಪ್ರತಿನಿಧಿಗಳಿಗೆ ಮಾತ್ರ ಶಾಲಾ ಆವರಣ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಉಳಿದ ಯಾವುದೇ ರಾಜಕೀಯ ಚಟುವಟಿಕೆ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಆವರಣವನ್ನು ಬಳಸಲು ಅವಕಾಶ ಇರುವುದಿಲ್ಲ.
ಹೊಸ ನಿಯಮಗಳ ಅನ್ವಯ, ಶಾಲಾ ತರಗತಿ ಕೊಠಡಿಗಳನ್ನು ಯಾವುದೇ ರಾಜಕೀಯ ನಾಯಕರು ಅಥವಾ ನಿರ್ದಿಷ್ಟ ವ್ಯಕ್ತಿಗಳ ಸನ್ಮಾನ, ಹೊಗಳಿಕೆ, ಪ್ರಶಂಸಾ ಕಾರ್ಯಕ್ರಮಗಳು ಅಥವಾ ಹುಟ್ಟುಹಬ್ಬದ ಆಚರಣೆಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಸಂಪೂರ್ಣವಾಗಿ ವಿದ್ಯಾರ್ಥಿಗಳ ಕಲಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂಬುದನ್ನು ಸರ್ಕಾರ ಪುನರುಚ್ಚರಿಸಿದೆ.
ಇದಲ್ಲದೆ, ಸರ್ಕಾರಿ ಶಾಲೆಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ರಾಜಕೀಯ ತಟಸ್ಥತೆಯನ್ನು ಕಾಯ್ದುಕೊಂಡು, ಶಿಕ್ಷಣ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ಒಳಗೊಂಡಿರಬೇಕು ಎಂದು ಸೂಚಿಸಲಾಗಿದೆ. ಈ ಆದೇಶದ ಅನುಷ್ಠಾನಕ್ಕಾಗಿ ಪಾಲಿಸಬೇಕಾದ ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಸರ್ಕಾರದ ಈ ಕ್ರಮವು ಶಾಲಾ ಆವರಣದಲ್ಲಿ ರಾಜಕೀಯ ಪ್ರಭಾವವನ್ನು ತಡೆಯುವ ಜೊತೆಗೆ, ವಿದ್ಯಾರ್ಥಿಗಳಿಗೆ ಶಾಂತ ಹಾಗೂ ತಟಸ್ಥ ಶೈಕ್ಷಣಿಕ ವಾತಾವರಣ ಒದಗಿಸುವ ಉದ್ದೇಶ ಹೊಂದಿದೆ.
-
ದೇಶ12 hours agoGBA ELECTION : ಪಾಲಿಕೆ ಚುನಾವಣೆಗೆ ಮತ್ತೊಂದು ಟ್ವಿಸ್ಟ್! ಆಗಸ್ಟ್ 31 ಗಡುವು ಮೀರುವ ಸಾಧ್ಯತೆ
-
ದೇಶ9 hours ago7 ದಿನದಲ್ಲಿ ವಾಹನ ತೆರವುಗೊಳಿಸಿ, ಇಲ್ಲದಿದ್ದರೆ ಹರಾಜು! ಬೆಂಗಳೂರು ಪೊಲೀಸರ ಖಡಕ್ ಎಚ್ಚರಿಕೆ
-
ಕ್ರೀಡೆ13 hours agoಚೆನ್ನೈನಲ್ಲಿ BBL 2026-27 KICK OFF : ಮೆಲ್ಬೋರ್ನ್ ರೆನೆಗೇಡ್ಸ್ vs ಪರ್ತ್ ಸ್ಕಾರ್ಚರ್ಸ್
-
ದೇಶ7 hours agoತಮಿಳುನಾಡು ಸರ್ಕಾರದ ಹೊಸ ಆದೇಶ: ಸರ್ಕಾರಿ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆ ಸಂಪೂರ್ಣ ನಿಷೇಧ
-
ಆರೋಗ್ಯ11 hours agoಮೆಡಿಕಲ್ ಶಾಪ್ಗಳಿಗೆ ಹೊಸ ಮಾರ್ಗಸೂಚಿ: ಔಷಧ ಮಾರಾಟದ ದಾಖಲೆ 3 ವರ್ಷ ಕಡ್ಡಾಯ
-
ಅಪರಾಧ13 hours agoಅಪರಾಧಿಗಳಿಗೆ ನಡುಕ ಹುಟ್ಟಿಸಿದ ಬೆಂಗಳೂರು ಪೊಲೀಸರ ತಡರಾತ್ರಿ ಸ್ಪೆಷಲ್ ಆಪರೇಷನ್
-
ದೇಶ7 hours agoಮೈಸೂರು ದಸರಾ ದಿನಾಂಕ ಘೋಷಣೆ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ
-
ಕ್ರೀಡೆ9 hours agoಇಂಗ್ಲೆಂಡ್ ವಿರುದ್ಧದ ಸೋಲು ಬೆನ್ನಲ್ಲೇ ಗಂಭೀರ್ ಭವಿಷ್ಯ ಪ್ರಶ್ನೆ; ಲಕ್ಷ್ಮಣ್ ಹೆಸರು ಮುನ್ನೆಲೆಗೆ?
