Connect with us

ಅಪರಾಧ

ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ; ಎಫ್ಐಆರ್ ದಾಖಲು

ಬೆಂಗಳೂರು: ಸದ್ದುಗುಂಟೆಪಾಳ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅಂತಹದೆ ಮತ್ತೊಂದು ಪ್ರಕರಣ ವರದಿಯಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಾಗುತ್ತಿದ್ದ ಯುವತಿಯನ್ನು ಹಿಂದಿನಿಂದ ಸ್ಪರ್ಶಿಸಿ ಪರಾರಿಯಾಗಿರುವ ಘಟನೆ ಮಾರತ್ ಹಳ್ಳಿ ಠಾಣೆ ವ್ಯಾಪ್ತಿಯ ಇಕೋ ವರ್ಲ್ಡ್ ಬಳಿ ನಡೆದಿದೆ.

23 ವರ್ಷದ ಯುವತಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮಾರತ್ ಹಳ್ಳಿ ಠಾಣೆ ಪೊಲೀಸರು, ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಏಪ್ರಿಲ್ 30ರಂದು ರಾತ್ರಿ 11.30ರ ಸುಮಾರಿಗೆ ಇಕೋ ವರ್ಲ್ಡ್ ಮೈನ್ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂಭಾಗ ಸ್ಪರ್ಶಿಸಿ ಹೋಗಿದ್ದಾನೆ. ಕೆಲವೇ ನಿಮಿಷಗಳಲ್ಲಿ ಅದೇ ವ್ಯಕ್ತಿ ಪುನಃ ಹಿಂದಿನಿಂದ ಬಂದು ಮತ್ತದೇ ಅನುಚಿತ ವರ್ತನೆ ತೋರಿದ್ದಾನೆ‌. ಈ ಸಂದರ್ಭದಲ್ಲಿ ಸಮೀಪದಲ್ಲಿದ್ದ ಕೆಲವರ ಸಹಾಯ ಕೇಳಿದರೂ ಯಾರೂ ನೆರವಿಗೆ ಬರಲಿಲ್ಲ ಎಂದು ನೊಂದ ಯುವತಿ ದೂರಿನಲ್ಲಿ ವಿವರಿಸಿದ್ದಾರೆ.

ಅಪರಾಧ

“ನಾನು ಯಾರು ಗೊತ್ತಾ? ಹೆಚ್ ಎಂ ರೇವಣ್ಣ ಪುತ್ರ” – ಶಶಾಂಕ್ ಕೂಗಿದ ಘಟನೆ

ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ, ಮಾಜಿ ಸಚಿವ ಹೆಚ್ ಎಂ ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ದುರಂತ ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ ಸಂಭವಿಸಿದೆ.

ಅಪಘಾತದಲ್ಲಿ ಶಶಾಂಕ್ ಎಂಬ ರೇವಣ್ಣ ಪುತ್ರನ ಫಾರ್ಚೂನರ್ ಕಾರು, ರಾಜೇಶ್ (23) ಎಂಬ ಯುವಕ ಬೈಕಿಗೆ ಡಿಕ್ಕಿ ಹೊಡೆದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಟೋಲ್ ನೂರು ಮೀಟರ್ ದೂರದಲ್ಲಿ ಸಂಭವಿಸಿದೆ.

ಗುರುವಾರ ರಾತ್ರಿ 10:30 ರ ಸುಮಾರಿಗೆ ಅಪಘಾತ ಎಸಗಿದ ಬಳಿಕ ಶಶಾಂಕ್ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಘಟನೆ ಸ್ಥಳದಲ್ಲಿದ್ದ ಸ್ಥಳೀಯರು 5 ಕಿ.ಮೀ. ಹಿಂಬಾಲಿಸಿ, ಸನ್‌ಫ್ಲವರ್ ಫ್ಯಾಕ್ಟರಿ ಬಳಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.

ಕಾರಿನಿಂದ ಇಳಿದ ನಂತರ ಶಶಾಂಕ್ “ನಾನು ಯಾರು ಗೊತ್ತಾ? ಹೆಚ್ ಎಂ ರೇವಣ್ಣ ಪುತ್ರ” ಎಂದು ಕೂಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಂತರ ಕಾರನ್ನು ಬದಿಯಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿ ಶಶಾಂಕ್ ಪರಾರಿಯಾಗಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ, ಕಾರಿನಲ್ಲಿ ರೇವಣ್ಣ ಕುಟುಂಬಸ್ಥರೂ ಇದ್ದರು.

ಹಿಟ್ ಅಂಡ್ ರನ್ ಪ್ರಕರಣ:
ತಡರಾತ್ರಿ ಫಾರ್ಚೂನರ್ ಕಾರು ಕುದೂರು ಪೊಲೀಸ್ ಠಾಣೆಗೆ ತರಲಾಗಿದ್ದು, ಪ್ರಕರಣದ ತನಿಖೆ ಪ್ರಾರಂಭವಾಗಿದೆ. ಘಟನೆ ಸಾರ್ವಜನಿಕ ಹಾಗೂ ರಾಜಕೀಯ ಗಮನ ಸೆಳೆದಿದೆ, ಮತ್ತು ಪೊಲೀಸರು ಶಶಾಂಕ್ ವಿರುದ್ಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Continue Reading

ಅಪರಾಧ

ಆಂಧ್ರಪ್ರದೇಶದಲ್ಲಿ ಭೀಕರ ಬಸ್ ಅಪಘಾತ — ಸಿಎಂ ಚಂದ್ರಬಾಬು ಸಂತಾಪ

ಅಲ್ಲೂರಿ, ಆಂಧ್ರಪ್ರದೇಶ: ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯ ಚಿಂತೂರು–ಮರೆಡುಮಿಲ್ಲಿ ಘಾಟ್ ರಸ್ತೆಯ ರಾಜುಗರಿಮೆಟ್ಟ ತಿರುವಿನಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿ 8 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಚಿತ್ತೂರು ಜಿಲ್ಲೆಯ ಖಾಸಗಿ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದ ಪರಿಣಾಮ ದುರಂತ ಸಂಭವಿಸಿದೆ.

ಬಸ್‌ನಲ್ಲಿ ಒಟ್ಟು 35 ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಚಾಲಕರು ಇದ್ದರು. ಭದ್ರಾಚಲಂ ರಾಮ ದೇವಾಲಯದ ದರ್ಶನ ಮುಗಿಸಿ ಅನ್ನಾವರಂ ಕಡೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬಸ್ ಉರುಳುತ್ತಿದ್ದ ದೃಶ್ಯವನ್ನು ನೋಡಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ನೆರವಾದರು. ಗಾಯಾಳುಗಳನ್ನು ಚಿಂತೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಕೆಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಿಂದಾಗಿ ಚಿಂತೂರು–ಮರೆಡುಮಿಲ್ಲಿ ಘಾಟ್ ರಸ್ತೆಯಲ್ಲಿ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಬಸ್ ಸಂಪೂರ್ಣ ನಾಶವಾಗಿದ್ದು, ಪ್ರಯಾಣಿಕರು ಕೆಲ ಸಮಯ ಸಹಾಯಕ್ಕಾಗಿ ಕಿರುಚಾಡಿರುವುದು ಮನಕಲಕುವಂತಾಗಿತ್ತು.

ದುಃಖ ವ್ಯಕ್ತಪಡಿಸಿದ ಸಿಎಂ ಚಂದ್ರಬಾಬು: ದಾರುಣ ದುರಂತದ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನೈಡು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳಿಗೆ ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

ಸಚಿವ ಲೋಕೇಶ್ ಪ್ರತಿಕ್ರಿಯೆ: ಸಚಿವ ನಾರಾ ಲೋಕೇಶ್ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿ, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.

ಗೃಹ ಸಚಿವೆ ಅನಿತಾ ಆಘಾತ: ಗೃಹ ಸಚಿವೆ ಅನಿತಾ ಕೂಡ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿ, ಅಪಘಾತದ ಕಾರಣ ಕುರಿತು ಪೊಲೀಸರಿಂದ ಸಂಪೂರ್ಣ ವರದಿ ಕೇಳಿದ್ದಾರೆ. ಪ್ರಸ್ತುತ ಸ್ಥಳದಲ್ಲಿ 3 ಆಂಬ್ಯುಲೆನ್ಸ್‌ಗಳು ಹಾಗೂ 5 ಪೊಲೀಸ್ ವಾಹನಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

Continue Reading

ಅಪರಾಧ

ಮಧ್ಯಪ್ರದೇಶದಲ್ಲಿ ‘ಕಳ್ಳರ ಪಾಠಶಾಲೆ’ ಬೆಳಕಿಗೆ

ದಾವಣಗೆರೆ/ಮಧ್ಯಪ್ರದೇಶ: ಮಧ್ಯಪ್ರದೇಶದ ರಾಜಗಡ್ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ನಿಜಕ್ಕೂ ಚಿತ್ರದಲ್ಲಿ ಕಂಡಂತೆ ‘ಕಳ್ಳರ ಪಾಠಶಾಲೆಗಳು’ ಕಾರ್ಯನಿರ್ವಹಿಸುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಗುಲ್‌ಖೇಡಾ, ಹುಲ್‌ಖೇಡಾ ಮತ್ತು ಕಡಿಯಾ ಸಾಂಸಿ ಗ್ರಾಮಗಳಲ್ಲಿ ಅಕ್ಷರಶಃ ಕಳ್ಳತನದ ತರಬೇತಿ ಕೇಂದ್ರಗಳು ಇದ್ದು, ₹2 ಲಕ್ಷ ಶುಲ್ಕ ಪಾವತಿಸಿದರೆ ಪಿಕ್‌ಪಾಕೆಟ್, ದರೋಡೆ ಹಾಗೂ ಜನಸಂದಣಿಯಲ್ಲಿ ಕಳವು ಮಾಡುವ ಎಲ್ಲಾ ತಂತ್ರಗಳು ಕಲಿಸಲಾಗುತ್ತವೆ ಎಂದು ಮೂಲಗಳು ಹೇಳಿವೆ.

ಈ ತರಬೇತಿಯಲ್ಲಿ ಕೇವಲ ಕಳವು ಮಾತ್ರವಲ್ಲ, ಪೊಲೀಸರಿಂದ ತಪ್ಪಿಸಿಕೊಳ್ಳುವ ಮಾರ್ಗಗಳು, ವೇಷಾಂತರ ತಂತ್ರಗಳು ಹಾಗೂ ಪರಾರಿಯಾಗುವ ಯೋಜನೆಗಳನ್ನೂ ನೀಡಲಾಗುತ್ತದೆ. ಅತ್ಯಂತ ಆಘಾತಕಾರಿ ಸಂಗತಿ ಏನೆಂದರೆ, ಅಪ್ರಾಪ್ತ ಮಕ್ಕಳಿಗೂ ಇಲ್ಲಿ ಅಪರಾಧ ತರಬೇತಿ ನೀಡಲಾಗುತ್ತಿದೆ. 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಬಳಸಿಕೊಳ್ಳುವುದಕ್ಕೆ ಕಾರಣ—ಅವರಿಗೆ ಪ್ರಕರಣಗಳಲ್ಲಿ ಶಿಕ್ಷೆ ಕಡಿಮೆ, ಜಾಮೀನು ಸುಲಭವಾಗುತ್ತದೆ ಮತ್ತು ಮಕ್ಕಳ ನ್ಯಾಯಾಂಗದಲ್ಲಿ ಬೇಗ ಬಿಡುಗಡೆಯಾಗಬಹುದು. ಈ ಕಾನೂನು ಅಂತರವನ್ನೇ ಗ್ಯಾಂಗ್‌ಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಈ ಗ್ಯಾಂಗ್‌ಗಳು ದೇಶಾದ್ಯಂತ 400ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿವೆ. ಇತ್ತೀಚೆಗಷ್ಟೇ, ನವೆಂಬರ್ 14 ರಂದು ದಾವಣಗೆರೆಯ ಅಪೂರ್ವಾ ರೆಸಾರ್ಟ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬ್ಯಾಂಡ್ ಬಾಜಾ ಗ್ಯಾಂಗ್‌ನ ಇಬ್ಬರು ಕಳ್ಳರು ₹67.48 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಕೊಂಡು ಪರಾರಿಯಾಗಿದ್ದರು.

ದಾವಣಗೆರೆ ಪೊಲೀಸರು ಸುಮಾರು 1500 ಕಿಮೀ ದೂರದ ಮಧ್ಯಪ್ರದೇಶದ ಪಚೋರಿ ನಗರಕ್ಕೆ ಮಾರು ವೇಷದಲ್ಲಿ ತೆರಳಿ, 15 ದಿನಗಳ ಶೋಧಕಾರ್ಯ ನಡೆಸಿ, ₹51.49 ಲಕ್ಷ ಮೌಲ್ಯದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಕರಣ್ ವರ್ಮಾ ಮತ್ತು ವಿನಿತ್ ಸಿಸೋಡಿಯಾ ಪರಾರಿಯಾಗಿದ್ದು, ಅವರಿಗಾಗಿ 250ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳ ವಿಶ್ಲೇಷಣೆ, ಟೋಲ್‌ಪ್ಲಾಜಾ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

Continue Reading

Trending