Connect with us

ದೇಶ

ಪಾಕ್​ ಶೆಲ್ ದಾಳಿ: ಸರ್ಕಾರಿ ಹಿರಿಯ ಅಧಿಕಾರಿ ಸೇರಿ ಐವರು ಸಾವು, ಹಲವರಿಗೆ ಗಾಯ

ಭಾರತ, ಪಾಕಿಸ್ತಾನ ನಡುವೆ ಸಶಸ್ತ್ರ ಸಂಘರ್ಷ ಉಂಟಾಗಿದೆ. ಪಾಕಿಸ್ತಾನದಿಂದ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಡ್ರೋನ್ ದಾಳಿ ಮುಂದುವರಿದಿದೆ. ಇತ್ತ ಪಾಕ್​ಗೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದೆ.

ಜಮ್ಮು, ಶ್ರೀನಗರ, ಅವಂತಿಪೋರಾ, ಸಾಂಬಾ ಮತ್ತು ಪಠಾಣ್‌ಕೋಟ್‌ಗಳಲ್ಲಿ ಪಾಕ್​ ಇಂದು ಸಂಜೆ ಡ್ರೋನ್‌ ದಾಳಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಪಠಾಣ್‌ಕೋಟ್‌ನಲ್ಲಿ ಬ್ಲಾಕೌಟ್ ಸಮಯದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ. ಚಂಡೀಗಢ, ರೂಪನಗರ, ಪಠಾಣ್‌ಕೋಟ್ ಮತ್ತು ಬ್ಲಾಕೌಟ್ ಜಾರಿಗೊಳಿಸಲಾದ ಇತರ ಜಿಲ್ಲೆಗಳಲ್ಲಿ ಸೈರನ್‌ಗಳು ಕೇಳಿಬರುತ್ತಿವೆ ಎಂದು ಎಂದು ತಿಳಿದುಬಂದಿದೆ.

ಎಲ್‌ಒಸಿಯಲ್ಲಿ ಪೂಂಚ್ ಮತ್ತು ತಂಗ್‌ಧರ್ ಸೆಕ್ಟರ್‌ಗಳಲ್ಲಿ ಭಾರೀ ಗುಂಡಿನ ದಾಳಿ: ಪೂಂಚ್ ಸೆಕ್ಟರ್‌ನ ದಿಗ್ವಾರ್ ಪ್ರದೇಶದಲ್ಲಿ ಮತ್ತು ಕುಪ್ವಾರಾ ಜಿಲ್ಲೆಯ ತಂಗ್‌ಧರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಭಾರೀ ಶೆಲ್ ಮತ್ತು ಗುಂಡಿನ ದಾಳಿ ಪ್ರಾರಂಭವಾಗಿದೆ. ಶೆಲ್ ದಾಳಿ ಪ್ರಾರಂಭವಾದ ತಕ್ಷಣ, ಇಲ್ಲಿನ ಜನರು ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಭಾರತೀಯ ಸೇನೆಯು ಸಹ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಹೆಚ್ಚಿನ ಜನರನ್ನು ಈಗಾಗಲೇ ಈ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ, ಆದರೆ ಹಿಂದೆ ಉಳಿದವರು ಬಂಕರ್‌ಗಳಲ್ಲಿ ರಕ್ಷಣೆ ಪಡೆದಿದ್ದಾರೆ.

ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭವಿಷ್ಯದ ಘರ್ಷಣೆಗಳನ್ನು ತಪ್ಪಿಸಲು ಭಾರತದೊಂದಿಗೆ ಮಾತುಕತೆ ನಡೆಸಲು ಅಮೆರಿಕವು ನೆರವಾಗುವುದಾಗಿ ಅವರು ತಿಳಿಸಿದ್ದಾರೆ. ಸಂಘರ್ಷ ಶಮನಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಎರಡೂ ದೇಶಗಳಿಗೆ ರೂಬಿಯೊ ಒತ್ತಾಯಿಸಿದ್ದಾರೆ ಎಂದು ಅವರ ವಕ್ತಾರ ಟ್ಯಾಮಿ ಬ್ರೂಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶನಿವಾರ ಅಮೃತಸರದ ಖಾಸಾ ಕಂಟೋನ್ಮೆಂಟ್ ಮೇಲೆ ಹಾರುತ್ತಿದ್ದ ಪಾಕಿಸ್ತಾನಿ ಡ್ರೋನ್‌ಗಳನ್ನು ಭಾರತೀಯ ಸೇನೆ ಹೊಡೆದುಹಾಕಿದೆ. ಅಲ್ಲದೆ, ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸದಂತೆ ಇಸ್ಲಾಮಾಬಾದ್‌ಗೆ ಎಚ್ಚರಿಕೆ ನೀಡಿದೆ. ಪಶ್ಚಿಮ ಗಡಿಗಳಲ್ಲಿ ಡ್ರೋನ್ ದಾಳಿ ಮತ್ತು ಇತರ ಯುದ್ಧಸಾಮಗ್ರಿಗಳೊಂದಿಗೆ ಪಾಕಿಸ್ತಾನದ ದಾಳಿಯು ಹೆಚ್ಚಾಗುತ್ತಿದೆ. ಇಂದು ಬೆಳಗ್ಗೆ 5 ಗಂಟೆಗೆ ಅಮೃತಸರದ ಖಾಸಾ ಕ್ಯಾಂಟ್ ಮೇಲೆ ಹಾರುತ್ತಿರುವ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ವಾಯು ರಕ್ಷಣಾ ಪಡೆಗಳು ತಕ್ಷಣ ನಾಶಪಡಿಸಿವೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ರಾಜೌರಿಯಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಹಿರಿಯ ಅಧಿಕಾರಿ, ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಶುಕ್ರವಾರ ತಡರಾತ್ರಿ ಮನೆ ಮೇಲೆ ನಡೆದ ಶೆಲ್ ದಾಳಿಯಲ್ಲಿ ರಾಜೌರಿ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜ್ ಕುಮಾರ್ ಥಾಪ್ಪಾ ಸಾವನ್ನಪ್ಪಿದ್ದಾರೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತರಾಗಿದ್ದಾರೆ. ಇದೇ ವೇಳೆ, ಪಾಕಿಸ್ತಾನದ ಶೆಲ್ ದಾಳಿಯಿಂದ 2 ವರ್ಷದ ಮಗು ಮತ್ತು ಬಿಹಾರದ 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಅಧಿಕಾರಿಯ ಸಾವಿಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸಂತಾಪ ಸೂಚಿಸಿದ್ದಾರೆ. “ರಾಜೌರಿಯಿಂದ ಆಘಾತಕಾರಿ ಸುದ್ದಿ. ನಾವು ಜಮ್ಮು ಮತ್ತು ಕಾಶ್ಮೀರದ ಆಡಳಿತ ಸೇವೆಗಳ ಅಧಿಕಾರಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ಉಪ ಮುಖ್ಯಮಂತ್ರಿಯವರೊಂದಿಗೆ ಇದ್ದ ಅವರು, ಜಿಲ್ಲೆಯಾದ್ಯಂತ ಭೇಟಿ ಕೈಗೊಂಡಿದ್ದರು. ನಾನು ಅಧ್ಯಕ್ಷತೆ ವಹಿಸಿದ್ದ ಆನ್‌ಲೈನ್ ಸಭೆಯಲ್ಲೂ ಭಾಗವಹಿಸಿದ್ದರು” ಎಂದು ತಿಳಿಸಿದ್ದಾರೆ.

ರಾಜೌರಿಯಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಎರಡು ವರ್ಷದ ಮಗು, 35 ವರ್ಷದ ಪುರುಷ, ಪೂಂಚ್‌ನಲ್ಲಿ ಒಬ್ಬ ಮಹಿಳೆ ಮತ್ತು ಜಮ್ಮುವಿನ ಆರ್‌ಎಸ್ ಪುರದಲ್ಲಿ ಒಬ್ಬ ಪುರುಷ ಸಾವನ್ನಪ್ಪಿದ್ದಾರೆ. ರಾಜೌರಿ, ಪೂಂಚ್ ಮತ್ತು ಜಮ್ಮು ನಗರದ ಕೆಲವು ಭಾಗಗಳಲ್ಲಿ ಶೆಲ್ ದಾಳಿ ಮತ್ತು ಡ್ರೋನ್ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ.

ದೇಶ

“ಯತೀಂದ್ರಗೆ ಮಿನಿಮಮ್ ಕಾಮನ್ ಸೆನ್ಸ್ ಇಲ್ಲ” – ಶಾಸಕ ಬಾಲಕೃಷ್ಣ ತೀವ್ರ ವಾಗ್ದಾಳಿ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಗಡಿ ಶಾಸಕ ಬಾಲಕೃಷ್ಣ ಕಿಡಿಕಾರಿದ್ದಾರೆ. “ಯತೀಂದ್ರ ಅವರಿಗೆ ಮಿನಿಮಮ್ ಕಾಮನ್ ಸೆನ್ಸ್ ಕೂಡ ಇಲ್ಲ” ಎಂದು ಅವರು ನೇರ ವಾಗ್ದಾಳಿ ನಡೆಸಿದರು.

ಹೈಕಮಾಂಡ್‌ನಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಯತೀಂದ್ರ ನೀಡಿದ್ದ ಹೇಳಿಕೆಗೆ ಸುವರ್ಣ ಸೌಧದಲ್ಲಿ ಪ್ರತಿಕ್ರಿಯಿಸಿದ ಬಾಲಕೃಷ್ಣ, “ದೊಡ್ಡವರಿಗೆ ಒಂದು ನ್ಯಾಯ, ಚಿಕ್ಕವರಿಗೆ ಒಂದು ನ್ಯಾಯ ಆಗುತ್ತಿದೆ. ಯತೀಂದ್ರಗೆ ನೋಟಿಸ್ ನೀಡದೇ ಇದ್ದದ್ದು ಅಸಮಾಧಾನಕಾರಿ” ಎಂದರು.

“ಈ ರೀತಿ ನಡೆಯುತ್ತಿರುವುದಕ್ಕೆ ನಮ್ಮ ಇಕ್ಬಾಲ್ ಹುಸೇನ್ ಮಾತಾಡಿದ್ರೆ ಬಲಾತ್ಕಾರ, ಯತೀಂದ್ರ ಮಾತಾಡಿದ್ರೆ ಚಮತ್ಕಾರ… ಅದನ್ನು ಅದ್ಭುತವಾಗಿ ಹೇಳಿದ್ದಾರೆ” ಎಂದು ಬಾಲಕೃಷ್ಣ ಮತ್ತಷ್ಟು ತಿರುಗೇಟು ನೀಡಿದರು.

ಇದಕ್ಕೂ ಮುಂಚೆ ಸಚಿವ ಡಿ.ಕೆ. ಶಿವಕುಮಾರ್ ಪರವಾಗಿ ಕೆಲವು ಶಾಸಕರು ನೀಡಿದ ಹೇಳಿಕೆಗಳಿಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿತ್ತು. ಆದರೆ ಈಗ ಸಿಎಂ ಪುತ್ರ ಯತೀಂದ್ರ ನೇರವಾಗಿ ತಂದೆಯ ಪರ ಬ್ಯಾಟ್ ಬೀಸಿದರೂ ಇನ್ನೂ ನೋಟಿಸ್ ನೀಡಿಲ್ಲ ಎಂಬ ಪ್ರಶ್ನೆಯನ್ನು ಡಿಕೆ ಬೆಂಬಲಿಗ ಶಾಸಕರು ಎತ್ತಿದ್ದಾರೆ.

ಬೆಳಗಾವಿ ಅಧಿವೇಶನದ ರಾಜಕೀಯ ವಾತಾವರಣ ಈ ಆರೋಪ-ಪ್ರತ್ಯಾರೋಪಗಳಿಂದ ಮತ್ತಷ್ಟು ಕಾವು ಪಡೆದಿದೆ.

Continue Reading

ದೇಶ

ರಜನಿಕಾಂತ್ 75ನೇ ಜನ್ಮದಿನ: ಜೈಲರ್ 2 ಸೆಟ್‌ನಲ್ಲಿ ಭವ್ಯ ಸಂಭ್ರಮ

ಮುಂಬೈ/ಚೆನ್ನೈ: ಭಾರತೀಯ ಸಿನಿರಂಗದ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಇಂದು 75ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜೈಲರ್-2 (Jailer 2) ಚಿತ್ರದ ಶೂಟಿಂಗ್ ನಡುವೆ ಸೆಟ್‌ನಲ್ಲೇ ತಲೈವ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಚಿತ್ರದ ಸಂಪೂರ್ಣ ತಂಡ ವಿಶೇಷ ಕೇಕ್ ಕತ್ತರಿಸಿ ರಜನಿಕಾಂತ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿತು.

ಸದ್ಯ ರಜನಿಕಾಂತ್ ಸನ್ ಪಿಕ್ಚರ್ಸ್‌ ನಿರ್ಮಾಣದ ಜೈಲರ್ ಚಿತ್ರದ ಸೀಕ್ವೆಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 170ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತಲೈವ, 50 ವರ್ಷಗಳ ಸಿನಿಮಾ ಜೀವನ ಮುಗಿಸಿರುವ ಸಂದರ್ಭದಲ್ಲಿ ಈ ಹುಟ್ಟುಹಬ್ಬ ಅಭಿಮಾನಿಗಳಿಗಾಗಿ ಹೆಚ್ಚಿನ ಸಂಭ್ರಮವನ್ನು ತಂದಿದೆ.

1975ರಲ್ಲಿ ಕೆ.ಬಳಚಂದರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ರಜನಿಕಾಂತ್, ಅಂದಿನಿಂದಲೂ ದಕ್ಷಿಣ ಭಾರತದಷ್ಟೇ ಅಲ್ಲ ಭಾರತದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಿಂಚಿದ ರಜನಿಕಾಂತ್ ಅವರ ಅಭಿನಯಕ್ಕೆ ಮಾಯೆ, ಶೈಲಿ ಮತ್ತು ವಿಭಿನ್ನ ಹಾವಭಾವಗಳು ಎಂದಿಗೂ ವಿಶೇಷ.

ರಜನಿಕಾಂತ್ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ಉಡುಗೊರೆಯಾಗಿ, ಅವರು ಅಭಿನಯಿಸಿ ನಿರ್ಮಿಸಿದ್ದ ‘ಪಡೆಯಪ್ಪ’ ಚಿತ್ರ ಇಂದು ರೀ-ರಿಲೀಸ್ ಆಗಿದ್ದು ಅಭಿಮಾನಿಗಳು ಸಂಭ್ರಮದಿಂದ ಥಿಯೇಟರ್‌ಗಳಿಗೆ ಧಾವಿಸಿದ್ದಾರೆ. ರಜನಿಕಾಂತ್ ಅವರ 75ನೇ ಹುಟ್ಟುಹಬ್ಬ, 50 ವರ್ಷಗಳ ಸಿನಿಮಾ ಪ್ರಯಾಣ ಮತ್ತು ಜೈಲರ್-2 ಶೂಟಿಂಗ್—all combine ಆಗಿ ಅಭಿಮಾನಿಗಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿವೆ.

Continue Reading

ದೇಶ

ಅಧಿವೇಶನದ ನಂತರ ಡಿಕೆಶಿ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್

ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್

ಬೆಳಗಾವಿ: “ಸಂಕ್ರಾಂತಿಯಲ್ಲ, ಅಧಿವೇಶನ ಮುಗಿದ ಕೂಡಲೇ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ” ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಬೆಳಗಾವಿ ಸುವರ್ಣಸೌಧದಲ್ಲಿ ಸ್ಪಷ್ಟಪಡಿಸಿದ್ದಾರೆ.

“ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಶಾಸಕನಾಗಿದ್ದೇನೆ. ಹಾಗೆಯೇ ಡಿ.ಕೆ. ಶಿವಕುಮಾರ್ ಅವರ ಹಣೆಯಲ್ಲಿ ಸಿಎಂ ಸ್ಥಾನ ಬರೆದಿದೆ. ಅವರು ಖಚಿತವಾಗಿ ಸಿಎಂ ಆಗುತ್ತಾರೆ” ಎಂದು ಇಕ್ಬಾಲ್ ಹುಸೇನ್ ಹೇಳಿದರು. “ನಿನ್ನೆ 55 ಜನ ಶಾಸಕರು ಒಟ್ಟಿಗೆ ಊಟ ಮಾಡಿದ್ದೇವೆ. ಅದರಲ್ಲಿ ಯಾವ ರಾಜಕೀಯ ಚರ್ಚೆಯೂ ನಡೆಯಲಿಲ್ಲ. ನಮಗೆ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು, ಆಗಲೇಬೇಕು” ಎಂದರು.

“ಡಿ.ಕೆ. ಶಿವಕುಮಾರ್ ಕಷ್ಟಪಟ್ಟಿದ್ದಾರೆ, ಅದರ ಫಲ ಅವರು ಪಡೆಯಲೇಬೇಕು. ಅಧಿವೇಶನ ಮುಗಿದ ತಕ್ಷಣ ಬದಲಾವಣೆ ಸಾಧ್ಯ. ಸಂಖ್ಯಾಬಲ ಮುಖ್ಯವಲ್ಲ, ಹೈಕಮಾಂಡ್ ನಿರ್ದೇಶನೆಯೇ ಅಂತಿಮ” ಎಂದು ಅವರು ಹೇಳಿದರು.

ಡಿನ್ನರ್‌ ಸಭೆಯಲ್ಲಿ 50–60 ಮಂದಿ ಸೇರಿದ್ದರೂ, ಇದು ರಾಜಕೀಯ ಚರ್ಚೆಗೆ ವೇದಿಕೆ ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು. “ಡಿ.ಕೆ. ಶಿವಕುಮಾರ್ ಕರೆದರೆ ಯಾವ ಪಕ್ಷದವರಾದರೂ ಬರುತ್ತಾರೆ. ವಿಶ್ವಾಸ, ಪ್ರೀತಿ, ಬಾಂಧವ್ಯ – ಪಕ್ಷವೇನೂ matter ಆಗೋದಿಲ್ಲ. ಕಾಂಗ್ರೆಸ್ ಶಿಸ್ತಿನ ಪಕ್ಷ” ಎಂದರು.

ಮುಖ್ಯಮಂತ್ರಿಯ ಪರವಾಗಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, “ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೀಡಿರುವ ಮಾರ್ಗದರ್ಶನವೇ ನಮಗೆ ಅಂತಿಮ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ; ನಾನು ಡಿನ್ನರ್‌ಗೆ ಹೋಗಿರಲಿಲ್ಲ” ಎಂದು ಹೇಳಿದರು.

Continue Reading

Trending