ದೇಶ
ಈ ಸಲ ಕಪ್ ನಮ್ದೇ ಘೋಷವಾಕ್ಯ ಹುಟ್ಟಿದ್ದು ಹೇಗೆ? ಅದು ಆರ್ಸಿಬಿ ತಂಡಕ್ಕೆ ಸ್ಫೂರ್ತಿ ತುಂಬಿದ್ದು ಹೇಗೆ? ಇದರ ಹಿಂದಿದೆ ರೋಚಕ ಇತಿಹಾಸ!

ಬೆಂಗಳೂರು: 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಪ್ ಗೆದ್ದಿದೆ. ಕೋಟ್ಯಂತರ ಅಭಿಮಾನಿಗಳ ಆಶಯದಂತೆ ಈ ಸಲ ಕಪ್ ನಮ್ಮದಾಗಿದೆ. ಇದಕ್ಕೆ ಸ್ಫೂರ್ತಿ ಆಗಿದ್ದು, “ಈ ಸಲ ಕಪ್ ನಮ್ದೆ” ಎಂಬ ಘೋಷ ವಾಕ್ಯ! ಈ ಘೋಷ ವಾಕ್ಯದ ಹಿಂದೆಯೂ ಒಂದು ಐಪಿಲ್ ಇತಿಹಾಸ ಇದೆ. ಪ್ರತಿ ಬಾರಿ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಹೇಳಿಕೊಂಡೇ ಬರುತ್ತಿದ್ದರು. ಕೊನೆಗೂ ಅಭಿಮಾನಿಗಳ ಆಸೆ ಈಡೇರಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ಸಂಜೆ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸುತ್ತಿದ್ದಂತೆ ಈ ಸಲ ಕಪ್ ನಮ್ದೇ ಎಂಬ ಘೋಷ ವಾಕ್ಯ ಮುಗಿಲು ಮುಟ್ಟಿತ್ತು. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಕೂಗಿ ಕಪ್ಪಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಾಗಿದ್ದರೆ ಬನ್ನಿ ಈ ಸಲ ಕಪ್ ನಮ್ದೇ ಎಂಬ ಪದ ಹುಟ್ಟಿದ್ದು ಹೇಗೆ? ಅದರ ಹಿಂದಿನ ರೋಚಕ ಇತಿಹಾಸವನ್ನು ತಿಳಿಯೋಣ!
ಈ ಸಲ ಕಪ್ ನಮ್ದೇ ಪದ ಹುಟ್ಟಿದ್ದು ಹೇಗೆ?
ಅದು 2016. ಆರ್ಸಿಬಿ ಮಾಜಿ ನಾಯಕ ವಿರಾಟ್ ಕೋಹ್ಲಿ ತಮ್ಮ ವೃತ್ತಿ ಜೀವನದಲ್ಲೇ ಅತ್ಯುತ್ತಮ ಫಾರ್ಮ್ನಲ್ಲಿ ಇದ್ದರು. ಆ ವರ್ಷ ಆರ್ಸಿಬಿ ತಂಡ ಫೈನಲ್ ಅನ್ನು ತಲುಪಿತ್ತು. ಆದರೆ, ಅಂತಿಮ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 8 ರನ್ಗಳ ಅಂತರದಿಂದ ಸೋಲು ಅನುಭವಿಸಿತ್ತು. ಅದಾದ ಬಳಿಕ 2017ರಲ್ಲಿ ಆರ್ಸಿಬಿ ತಂಡದ ಪ್ರದರ್ಶನ ಹೇಳಿಕೊಳ್ಳುವ ಮಟ್ಟದಲ್ಲಿ ಇರಲಿಲ್ಲ. ಇಡೀ ತಂಡ ಅಭಿಮಾನಿಗಳ ಮುಂದೆ ತಲೆ ತಗ್ಗಿಸಿತ್ತು. ಆರ್ಸಿಬಿ 2017ರಲ್ಲಿ ಕೊನೆಯ ತಂಡವಾಗಿ ಟೂರ್ನಿಯನ್ನು ಸಮಾಪ್ತಿಗೊಳಿಸಿತ್ತು. ಆದರೆ, ಆರ್ಸಿಬಿ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಂಡವನ್ನು ಬಿಟ್ಟುಕೊಡಲಿಲ್ಲ. ಆರ್ಸಿಬಿಯ ಈ ಸೋಲೇ ಈ ಸಲ ಕಪ್ ನಮ್ದೇ ಎಂಬ ಘೋಷ ವಾಕ್ಯ ಹುಟ್ಟಲು ಕಾರಣವಾಯಿತು. ಸೋಲಿನಿಂದ ಧೃತಿಗೆಡದ ಆರ್ಸಿಬಿ ಅಭಿಮಾನಿಗಳು ಮುಂದಿನ ಬಾರಿ ಆರ್ಸಿಬಿ ಕಪ್ ಗೆದ್ದೇ ಗಲ್ಲಲಿದೆ ಎಂಬ ಭರವಸೆಯೊಂದಿಗೆ ಈ ಸಲ ಕಪ್ ನಮ್ದೇ ಎಂಬ ಘೋಷ ವಾಕ್ಯವನ್ನು ಹುಟ್ಟು ಹಾಕಿದರು. ಬಳಿಕ ಈ ವಾಕ್ಯ ಆರ್ಸಿಬಿ ಅಧಿಕೃತ ಜಾಲತಾಣವನ್ನು ಕೂಡ ಅಲಂಕರಿಸಿತು. ಆದರೆ, ಈ ಒಂದು ಕ್ಷಣಕ್ಕಾಗಿ ಆರ್ಸಿಬಿ ಅಭಿಮಾನಿಗಳು 8 ವರ್ಷ ಕಾಯಬೇಕಾಗಿ ಬಂತು!
ಈ ಪದ ಆರ್ಸಿಬಿಗೆ ಸ್ಫೂರ್ತಿ ತುಂಬಿದ್ದು ಹೇಗೆ?
2017ರ ಸೋಲಿನಿಂದ ಧೃತಿಗೆಡದ ಆರ್ಸಿಬಿ 2018ರ ಅನ್ಬಾಕ್ಸ್ ಇವೆಂಟ್ನಲ್ಲಿ ʼಈ ಸಲ ಕಪ್ ನಮ್ದೇ!ʼ ಎಂದು ಅಧಿಕೃತವಾಗಿ ಘೋಷಿಸಿತು. ಅಂದಿನ ನಾಯಕ ವಿರಾಟ್ ಕೊಹ್ಲಿ ಈ ಸಲ ಕಪ್ ನಮ್ದೇ ಎಂದು ಹೇಳಿದ್ದು ವೈರಲ್ ಆಯಿತು. ಈ ಮೂಲಕ ಈ ಪದ ಆರ್ಸಿಬಿ ತಂಡದ ಘೋಷವಾಕ್ಯವಾಗಿ ರೂಪಗೊಂಡಿತು. ಆದರೆ, 2018ರಲ್ಲಿಯೂ ಆರ್ಸಿಬಿ ಕಪ್ ಗೆಲ್ಲಲು ಆಗಲೇ ಇಲ್ಲ. ಆದರೂ ಅಭಿಮಾನಿಗಳು ಮಾತ್ರ ಈ ಬಾರಿ ಕಪ್ ನಮ್ದೇ ಎಂದು ಹೇಳುವುದನ್ನು ನಿಲ್ಲಿಸಲಿಲ್ಲ. ಪ್ರತಿ ಬಾರಿ ಆರ್ಸಿಬಿ ಸೋತಾಗಲೂ ಅ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತಿದ್ದು. ಟೀಕೆಗಳನ್ನು ಲೆಕ್ಕಿಸದೇ ಆರ್ಸಿಬಿ ಅಭಿಮಾನಿಗಳು ತಂಡವನ್ನು ಹುರುದುಂಬಿಸಿದರು. ಇದು ತಂಡದ ಸ್ಫೂರ್ತಿ ಪತಾಕೆಯನ್ನು ಎತ್ತಿಹಿಡಿಯಲು ಕಾರಣವಾಯಿತು. ಈ ಒಂದು ಪದವೇ ತಂಡಕ್ಕೆ ಸ್ಫೂರ್ತಿಯನ್ನು ತುಂಬಿತು. ಈ ಘೋಷವಾಕ್ಯ ಹುಟ್ಟಿ 8 ವರ್ಷದ ಬಳಿಕ ಆರ್ಸಿಬಿ ಕಪ್ ಗೆದ್ದಿದೆ. ಅಭಿಮಾನಿಗಳ ಕನಸು ನನಸಾಗಿದೆ.
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿ ಉತ್ತಮ ಪ್ರದರ್ಶನ ತೋರಿ ಫೈನಲ್ ತಲುಪುತ್ತಿದ್ದತೆ ಪ್ರತಿಯೊಬ್ಬ ಅಭಿಮಾನಿಗಳ ಬಾಯಲ್ಲಿ ಬರುತ್ತಿದ್ದದ್ದು ಒಂದೇ ಪದ. ಈ ಸಲ ಕಪ್ ನಮ್ದೇ! ಫೈನಲ್ ಪಂದ್ಯದ 18 ನೇ ಓವರ್ನಲ್ಲಿ ಬಹುತೇಕ ಆರ್ಸಿಬಿ ಗೆಲುವು ಖಚಿತವಾಗುವ ರೀತಿಯಲ್ಲಿತ್ತು. ಸ್ಟೇಡಿಯಂನ ಬಿಗ್ ಸ್ಕ್ರೀನ್ನಲ್ಲಿ ಈ ಸಲ ಕಪ್ ನಮ್ದೇ ಎಂದು ತೋರಿಸುತ್ತಿದ್ದಂತೆ ಮೈದಾನದಲ್ಲಿ ಆರ್ಸಿಬಿ ಅಭಿಮಾನಿಗಳ ಕೂಗು ಮುಗಿಲು ಮಟ್ಟಿತ್ತು. ಅಭಿಮಾನಿಗಳು ಹುಚ್ಚೆದ್ದು ಕುಣಿಯಲು ಆರಂಭಿಸಿದರು. ಸಾಮಾಜಿಕ ಜಾಲತಾಣಗಳಲಿ #ಈ ಸಲ ಕಪ್ ನಮ್ದೇ ಟ್ರೆಂಡ್ ಆಯಿತು. ಸಾಮಾಜಿಕ ಜಾಲತಾಣದಲ್ಲಿ ಸಂಚಲನಕ್ಕೆ ಕಾರಣವಾಯಿತು.
ಕೊನೆಗೂ ಈ ಸಲ ಕಪ್ ನಮ್ಮದಾಯ್ತು!
ಹೌದು, ಈ ಸಲ ಕಪ್ ನಮ್ಮದಾಗಿದೆ. 18 ವರ್ಷಗಳ ಕಾಯುವಿಕೆ ಕೊನೆಗೊಂಡಿದೆ. ಈ ಒಂದು ಕ್ಷಣಕ್ಕಾಗಿ ಆರ್ಸಿಬಿ ಅಭಿಮಾನಿಗಳು 18 ವರ್ಷ ಕಾದಿದ್ದರು. ಪಂದ್ಯ ಮುಗಿದ ಬಳಿಕ ಆರ್ಸಿಬಿ ದಿಗ್ಗಜರಾದ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಹಾಗೂ ಕ್ರಿಸ್ಗೇಲ್ ಒಟ್ಟಿಗೇ ಸೇರಿ ಈ ಸಲ ಕಪ್ ನಮ್ದು! ಎಂದು ಘೋಷಿಸುಸಿದರು. ಸ್ವತಃ ವಿರಾಟ್ ಕೊಹ್ಲಿ ತಾನು ಜೀವನದಲ್ಲಿ ಈ ಒಂದು ಕ್ಷಣವನ್ನು ನೋಡುತ್ತೇನೆ ಅಂದುಕೊಂಡಿರಲಿಲ್ಲ. ಈ ಗೆಲುವಿಗೆ ಅಭಿಮಾನಿಗಳ ಸ್ಫೂರ್ತಿಯೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಆರ್ಸಿಬಿ ಅಭಿಮಾನಿಗಳಿಗೂ ಇದೇ ಬೇಕಿತ್ತು. ಕೊನೆಗೂ ಆ ಮಾತು ನಿಜವಾಗಿದೆ. ಈ ಸಲ ಕಪ್ ನಮ್ಮದು!
ದೇಶ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರ ಅಂಜನಾದ್ರಿ ಬೆಟ್ಟ ಭೇಟಿ – ಆಂಜನೇಯ ದರ್ಶನ ಪಡೆದು ವಿಶೇಷ ಪೂಜೆ

ಕೊಪ್ಪಳ, ಆಗಸ್ಟ್ 7 – ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಕುಟುಂಬದ ಸದಸ್ಯರೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ವಾಯುಪುತ್ರ ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲ್ಪಡುವ ಈ ಪವಿತ್ರ ಸ್ಥಳದಲ್ಲಿ ಅವರು 575 ಮೆಟ್ಟಿಲುಗಳನ್ನು 30 ನಿಮಿಷಗಳಲ್ಲಿ ಏರಿ ಭಕ್ತಿಯಿಂದ ದರ್ಶನ ಪಡೆದರು.
🌄 ಅಂಜನಾದ್ರಿ ಬೆಟ್ಟ – ಭಕ್ತರ ಆಸ್ಥೆಯ ಗಗನಚುಂಬಿ ಸಂಕೇತ
ಅಂಜನಾದ್ರಿ ಬೆಟ್ಟವು ಹನುಮಂತನ ಜನ್ಮಸ್ಥಳ ಎಂಬ ನಂಬಿಕೆಯಿಂದ ಹೆಸರಾಗಿದ್ದು, ಪ್ರತಿದಿನ ನೂರಾರು ಭಕ್ತರು ಇಲ್ಲಿ ಆಗಮಿಸುತ್ತಾರೆ. ಶ್ರೀ ರಾಮ, ಸೀತಾ ದೇವಿಗಳ ಮೂರ್ತಿಗಳೂ ಇಲ್ಲಿ ಪೂಜಿಸಲ್ಪಡುತ್ತವೆ. ಬೆಟ್ಟದ ಶಿಖರದಿಂದ ತುಂಗಭದ್ರಾ ನದಿಯ ನೋಟ, ಸೂರ್ಯಾಸ್ತದ ಸೌಂದರ್ಯ ಮತ್ತು ಹಂಪಿಯ ಇತಿಹಾಸದ ಅವಶೇಷಗಳು ಮನ ಮೋಹಿಸುತ್ತವೆ.
🛕 ಅಂಜನಾದ್ರಿ ಬೆಟ್ಟದ ಪ್ರಮುಖ ಅಂಶಗಳು:
- 575 ಮೆಟ್ಟಿಲುಗಳನ್ನು ಏರಿ ಸ್ವಾಮಿದರ್ಶನ
- ರಾಜ್ಯಪಾಲರಿಗೆ ಜಿಲ್ಲಾಡಳಿತದಿಂದ ಸನ್ಮಾನ
- ದೇವಾಲಯದ ಆಂತರಿಕ ಶ್ರದ್ಧಾ ಭರವಸೆಯ ಸ್ಥಳ
- ಹಂಪಿಯಿಂದ ನದಿ ದಾಟಿ ಬೋಟ್ ಮೂಲಕ ಪ್ರವೇಶದ ಅನುಕೂಲ
- ರೈಲು ಮಾರ್ಗ: ಕೊಪ್ಪಳ ಅಥವಾ ಮುನಿರಾಬಾದ್ ಮೂಲಕ
- ರಸ್ತೆ ಸಂಪರ್ಕ ಉತ್ತಮ, ವಿಮಾನ ಸಂಪರ್ಕ ಇಲ್ಲ
📜 ಅಂಜನಾದ್ರಿ ಅಭಿವೃದ್ಧಿಯ ಬಗ್ಗೆ ಸರ್ಕಾರದ ದೃಷ್ಟಿಕೋನ
ಹನುಮ ಮಾಲೆ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿ ಆಗಮಿಸುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಾಗ್ದಾನ ನೀಡಿದ್ದರು. ರಾಜ್ಯ ಸರಕಾರ ಕೂಡ ಈ ಸ್ಥಳವೇ ಆಂಜನೇಯನ ಜನ್ಮಭೂಮಿ ಎಂದು ಧರ್ಮಗ್ರಂಥಗಳ ಆಧಾರದ ಮೇಲೆ ದೃಢಪಡಿಸಿದೆ.
ದೇಶ
ಅಮೆರಿಕದ ಒತ್ತಡಕ್ಕೂ headstrong ಭಾರತದ ನಿಲುಹೊರೆ: ರೈತ ಮತ್ತು ಮೀನುಗಾರರ ಹಿತಾಸಕ್ತಿಗೆ ಪ್ರಧಾನಿಯರಿಂದ ಖಡಕ್ ಸಂದೇಶ

ನವದೆಹಲಿ, ಆಗಸ್ಟ್ 7 – ರೈತರು ಹಾಗೂ ಮೀನುಗಾರರ (Farmers & Fishermen) ಹಿತಾಸಕ್ತಿಗೆ ವಿರುದ್ಧವಾಗುವ ಯಾವುದೇ ಒಪ್ಪಂದವನ್ನು ಭಾರತ ಎಂದಿಗೂ ಮಾಡದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಆಗುವ ವಸ್ತುಗಳ ಮೇಲೆ 25% ಸುಂಕ ವಿಧಿಸಿದ ಬೆನ್ನಲ್ಲೇ ಮೋದಿ ಈ ಹೇಳಿಕೆಯಿಂದ ಅಮೆರಿಕಕ್ಕೆ ತೀಕ್ಷ್ಣ ಸಂದೇಶ ನೀಡಿದ್ದಾರೆ.
ರೈತರಿಗೆ ಬೆಂಬಲವೇ ಪ್ರಮುಖ ಆದ್ಯತೆ
ದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, “ರೈತರು, ಮೀನುಗಾರರು, ಹೈನುಗಾರರು ನಮ್ಮ ಆರ್ಥಿಕ ವ್ಯವಸ್ಥೆಯ ಪ್ರಮುಖ ಅಂಶಗಳು. ಅವರ ಹಿತಾಸಕ್ತಿಗೆ ಭಾರತ ಯಾವತ್ತೂ ರಾಜಿ ಆಗುವುದಿಲ್ಲ” ಎಂದರು.
ಸಾಂಸ್ಕೃತಿಕ ನಂಬಿಕೆಗೆ ಧಕ್ಕೆಯಾಗದಂತೆ ನಿರ್ಧಾರ
ಅಮೆರಿಕ ಭಾರತ ಮಾರುಕಟ್ಟೆಗೆ ಡೈರಿ ಉತ್ಪನ್ನ ಪ್ರವೇಶಕ್ಕೆ ಒತ್ತಡ ಹಾಕುತ್ತಿದ್ದರೂ ಭಾರತ ಅದನ್ನು ನಿರಾಕರಿಸಿದೆ. ಕಾರಣ, ಅಮೆರಿಕದಲ್ಲಿ ಜಾನುವಾರುಗಳಿಗೆ ಮಾಂಸಾಂಶ ಆಹಾರ ನೀಡಲಾಗುತ್ತದೆ. ಹೀಗೆ ಪಶು ಉತ್ಪನ್ನಗಳಿಂದ ಉತ್ಪತ್ತಿಯಾದ ಹಾಲು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ವಿರುದ್ಧವಾಗಿರುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಅಮೆರಿಕದ ಸುಂಕ ಸಮರ – ಭಾರತದ ತೀವ್ರ ಪ್ರತಿಕ್ರಿಯೆ
ಟ್ರಂಪ್ ಸರಕಾರ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಿರುದ್ಧ ಸುಂಕ ಸಮರ ಘೋಷಿಸಿದ್ದು, ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದೆ. ಆದರೆ ಭಾರತ ಕೃಷಿ, ಹೈನು ಉತ್ಪನ್ನ, ಮೀನುಗಾರಿಕೆ ಕ್ಷೇತ್ರಗಳ ಮೇಲೆ ಸಂಬಂಧಿತ ಮೌಲ್ಯಗಳನ್ನು ಬಲಪಡಿಸಿ ಅಮೆರಿಕದ ಒತ್ತಡಕ್ಕೆ ಕೀಳ್ಮಣೆ ನೀಡಿಲ್ಲ.
ಪ್ರಧಾನಿಯ ಮಾತುಗಳಲ್ಲಿ ಸ್ಪಷ್ಟ ಸಂದೇಶ:
“ಭಾರತದ ರೈತ, ಮೀನುಗಾರ ಮತ್ತು ಹೈನುಗಾರರು ನಮ್ಮ ಅಸ್ಥಿ-ಮಜ್ಜೆಯಂತಹವರು. ಅವರ ಹಿತದೃಷ್ಟಿಗೆ ಯಾವುದೇ ಬೆಲೆ ಕಟ್ಟಲು ನಾನು ಸಿದ್ಧ” ಎಂದು ಮೋದಿ ಹೇಳಿದ್ದಾರೆ.
ದೇಶ
ನವರಾತ್ರಿ ಸಮಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕ ದಾಳಿ ಎಚ್ಚರಿಕೆ – ಭದ್ರತೆ ಬಿಗಿ ಕ್ರಮ

ಭಾರತದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ನವರಾತ್ರಿಯ ವೇಳೆ ಭಯೋತ್ಪಾದಕ ದಾಳಿಯ ಅಪಾಯವಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಜಾರಿಯಲ್ಲಿದೆ.
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಆಗಸ್ಟ್ 4ರಂದು ಎಚ್ಚರಿಕೆ ಪ್ರಕಟಿಸಿ, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಭಯೋತ್ಪಾದನೆ ಅಥವಾ ಸಮಾಜ ವಿರೋಧಿ ಶಕ್ತಿಗಳಿಂದ ದಾಳಿ ಸಂಭವಿಸಬಹುದೆಂದು ಸೂಚಿಸಿದೆ.
🕵️ ಗುಪ್ತಚರ ಮೂಲದ ಮಹತ್ವದ ಎಚ್ಚರಿಕೆ:
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಏರ್ಸ್ಟ್ರಿಪ್ಗಳು, ಹೆಲಿಪ್ಯಾಡ್ಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳಾಗಿ ಈ ಕೆಳಗಿನ ಕ್ರಮಗಳು ಜಾರಿಗೆ ಬಂದಿವೆ:
- ಸಿಬ್ಬಂದಿ ಮತ್ತು ಸಂದರ್ಶಕರ ಗುರುತಿನ ಪರಿಶೀಲನೆ
- ಸಿಸಿಟಿವಿ ಕಣ್ಗಾವಲು ಬಿಗಿತ
- ಸರಕು, ಪಾರ್ಸೆಲ್ ಮತ್ತು ಮೇಲ್ಗಳ ತಪಾಸಣೆ
- ಸ್ಥಳೀಯ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಹಕಾರ
🇮🇳 ರಾಷ್ಟ್ರೀಯ ಭದ್ರತೆಗೆ ಒತ್ತು:
ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳು ಈ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಪ್ರಯಾಣಿಕರು ತಮ್ಮ ಗುರುತಿನ ದಾಖಲೆಗಳನ್ನು ಸಿದ್ಧವಾಗಿಡಬೇಕು. ತಪಾಸಣೆ ವಿಳಂಬದ ಸಾಧ್ಯತೆಯಿರುವುದರಿಂದ ಸಹಕಾರ ನೀಡುವಂತೆ BCAS ಮನವಿ ಮಾಡಿದೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು9 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ