Connect with us

ದೇಶ

Char Dham Yatra ಶುರು: ಭಕ್ತರಿಂದ ಭರ್ಜರಿ ಸ್ವಾಗತ

Published

on

ಡೆಹ್ರಾಡೂನ್: ಆರು ತಿಂಗಳ ಚಳಿಗಾಲದ ವಿರಾಮದ ಬಳಿಕ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ Char Dham Yatra ಆರಂಭಗೊಂಡಿದೆ. ಉತ್ತರಾಖಂಡದ Gangotri Temple ಮತ್ತು Yamunotri Temple ದ್ವಾರಗಳು ಭಾನುವಾರ ವೇದ ಮಂತ್ರಗಳೊಂದಿಗೆ ತೆರೆಯಲ್ಪಟ್ಟವು.

ಗಂಗೋತ್ರಿ ದೇವಾಲಯದ ದ್ವಾರಗಳು ಮಧ್ಯಾಹ್ನ 12:15 ಕ್ಕೆ ಮತ್ತು ಯಮುನೋತ್ರಿ ದೇವಾಲಯದ ದ್ವಾರಗಳು 12:35 ಕ್ಕೆ ತೆರೆಯಲ್ಪಟ್ಟವು. ಈ ವೇಳೆ ನೂರಾರು ಭಕ್ತರು ಘೋಷಣೆ ಕೂಗಿ ಭಕ್ತಿ ಪ್ರದರ್ಶಿಸಿದರು. ಎರಡೂ ದೇವಾಲಯಗಳಲ್ಲಿ ಮೊದಲ ಪೂಜೆಯನ್ನು Narendra Modi ಅವರ ಹೆಸರಿನಲ್ಲಿ ಸಲ್ಲಿಸಲಾಯಿತು.

ಮುಖ್ಯಮಂತ್ರಿ Pushkar Singh Dhami ಗಂಗೋತ್ರಿ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ದೇಶದ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಯಾತ್ರೆ ಸುಗಮ ಮತ್ತು ಸುರಕ್ಷಿತವಾಗಿರಲು ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ದೇವಾಲಯ ಪ್ರವೇಶಕ್ಕೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. Badrinath Temple, Kedarnath Temple ಮತ್ತು ಗಂಗೋತ್ರಿ ದೇವಾಲಯಗಳಲ್ಲಿ ಹಿಂದೂಯೇತರರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂಬ ಮಾಹಿತಿ ಹೊರಬಂದಿದೆ. ಕೆಲವೆಡೆ ಪ್ರವೇಶಕ್ಕೆ ಧಾರ್ಮಿಕ ನಂಬಿಕೆ ದೃಢೀಕರಣ ಕಡ್ಡಾಯವಾಗಿದೆ.

ಆದರೆ ಯಮುನೋತ್ರಿ ದೇವಾಲಯ ಸಮಿತಿ ಎಲ್ಲ ಧರ್ಮದ ಭಕ್ತರನ್ನು ಸ್ವಾಗತಿಸುವ ನಿರ್ಧಾರ ಕೈಗೊಂಡಿದೆ. ದೇವಾಲಯ ಆವರಣದಲ್ಲಿ ಮೊಬೈಲ್ ಫೋನ್ ಮತ್ತು ಕ್ಯಾಮೆರಾ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.

ಈ ವರ್ಷ ಈಗಾಗಲೇ ಸುಮಾರು 19 ಲಕ್ಷ ಭಕ್ತರು ಯಾತ್ರೆಗೆ ನೋಂದಾಯಿಸಿಕೊಂಡಿದ್ದು, ಕಳೆದ ವರ್ಷ 51 ಲಕ್ಷಕ್ಕೂ ಹೆಚ್ಚು ಮಂದಿ ಚಾರ್ ಧಾಮ್ ಯಾತ್ರೆ ಕೈಗೊಂಡಿದ್ದರು.

ಕ್ರೀಡೆ

M S Dhoni : ವಾಂಖೆಡೆನಲ್ಲಿ ಧೋನಿಯ ಹೃದಯಸ್ಪರ್ಶಿ ಕ್ಷಣ

Published

on

ಮುಂಬೈ: MS Dhoni ಅವರ ಸರಳತೆ ಮತ್ತು ಮಕ್ಕಳ ಮೇಲಿನ ಪ್ರೀತಿ ಮತ್ತೆ ಎಲ್ಲರ ಮನಸೆಳೆಯುತ್ತಿದೆ. Chennai Super Kings ಮತ್ತು Mumbai Indians ನಡುವಿನ ಮಹತ್ವದ ಹಣಾಹಣಿಗೂ ಮುನ್ನ, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದ ವೇಳೆ ಧೋನಿ ಪುಟ್ಟ ಅಭಿಮಾನಿಯೊಂದಿಗೆ ನಡೆಸಿದ ಹೃದಯಸ್ಪರ್ಶಿ ಕ್ಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ?

ವೈರಲ್ ವಿಡಿಯೋದಲ್ಲಿ, ಕೈಯಲ್ಲಿ ಸಣ್ಣ ಬ್ಯಾಟ್ ಹಿಡಿದು ಬಂದಿದ್ದ ಮಗುವೊಂದು ಧೋನಿ ಬಳಿ ಆಟೋಗ್ರಾಫ್ ಕೇಳುತ್ತದೆ. ಈ ವೇಳೆ ಧೋನಿ ಮಗುವಿನೊಂದಿಗೆ ಸ್ನೇಹಪೂರ್ಣವಾಗಿ ಮಾತನಾಡಿ, ಬ್ಯಾಟ್ ಮೇಲೆ ಸಹಿ ಹಾಕಿ ನೀಡುತ್ತಾರೆ. ನಂತರ ಬಾಲಕನ ತಂದೆ ಕೊಟ್ಟ ಫೋಟೋ ಫ್ರೇಮ್‌ನ ಮೇಲೂ ಸಹಿ ಹಾಕಿ, “ಇದನ್ನು ನಿಮ್ಮ ತಂದೆಗೆ ಕೊಡು” ಎಂದು ಧೋನಿ ಹೇಳುತ್ತಾರೆ.

ಆಗ ಮಗು ಮುಗ್ಧವಾಗಿ “ಬ್ಯಾಟ್ ನನಗೆ, ಫೋಟೋ ಫ್ರೇಮ್ ನನ್ನ ತಂದೆಗೆ” ಎಂದು ಹೇಳಿದ ಕ್ಷಣ ಎಲ್ಲರ ಮನಗೆದ್ದಿದೆ. ಮಗುವಿನ ಸಂತೋಷ ಮತ್ತು ಧೋನಿಯ ಸರಳತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಅಭಿಮಾನಿಗಳ ಪ್ರತಿಕ್ರಿಯೆ

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, “ಎಷ್ಟೇ ಬ್ಯುಸಿ ಇದ್ದರೂ ಮಕ್ಕಳ ಜೊತೆ ಪ್ರೀತಿಯಿಂದ ನಡೆದುಕೊಳ್ಳುವುದನ್ನು ಧೋನಿ ಅವರಿಂದ ಕಲಿಯಬೇಕು” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಧೋನಿಯ ಇಂತಹ ಸರಳ ಮತ್ತು ಮಾನವೀಯ ಗುಣಗಳು ಮತ್ತೊಮ್ಮೆ ಹೊರಹೊಮ್ಮಿವೆ.

ಪಂದ್ಯ ಹಿನ್ನೆಲೆ

ಐಪಿಎಲ್ 2026ರಲ್ಲಿ ಧೋನಿ ಗಾಯದ ಕಾರಣದಿಂದ ಮೊದಲ ಆರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಆದರೆ ಏಪ್ರಿಲ್ 23ರಂದು Wankhede Stadiumನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ.

Continue Reading

ದೇಶ

10th ಬಳಿಕ ಡಿಪ್ಲೊಮಾ, ITI, B.Tech – AIಗೆ ಯಾವ ದಾರಿ ಬೆಸ್ಟ್?

Published

on

ಬೆಂಗಳೂರು: ಹತ್ತನೇ ತರಗತಿ (SSLC) ಫಲಿತಾಂಶದ ನಂತರ “ಮುಂದೇನು?” ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳನ್ನು ಕಾಡುತ್ತದೆ. ಸಾಂಪ್ರದಾಯಿಕ ಕೋರ್ಸ್‌ಗಳಿಗಿಂತ ಭಿನ್ನವಾಗಿ, ಭವಿಷ್ಯದ ತಂತ್ರಜ್ಞಾನವಾಗಿರುವ Artificial Intelligence ಕ್ಷೇತ್ರದಲ್ಲಿ ಈಗಲೇ ವೃತ್ತಿಜೀವನ ಆರಂಭಿಸಲು ಸಾಕಷ್ಟು ಅವಕಾಶಗಳು ಲಭ್ಯವಿವೆ. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವುದರಿಂದ AI ತಜ್ಞರಿಗೆ ಬೇಡಿಕೆ ಹೆಚ್ಚುತ್ತಿದೆ.

SSLC ನಂತರ AI ಕ್ಷೇತ್ರದಲ್ಲಿ ಪ್ರಮುಖ ಆಯ್ಕೆಗಳು

1. ಡಿಪ್ಲೊಮಾ ಇನ್ AI & ಮೆಷಿನ್ ಲರ್ನಿಂಗ್ (3 ವರ್ಷ)
ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಈ ಕೋರ್ಸ್ ಲಭ್ಯವಿದ್ದು, ಪ್ರೋಗ್ರಾಮಿಂಗ್, ಡೇಟಾ ಸೈನ್ಸ್ ಮತ್ತು ರೋಬೋಟಿಕ್ಸ್‌ನ ಮೂಲಭೂತ ಅಂಶಗಳನ್ನು ಕಲಿಸುತ್ತದೆ. ಕೋರ್ಸ್ ಪೂರ್ಣಗೊಂಡ ನಂತರ ಉದ್ಯೋಗ ಅಥವಾ ಇಂಜಿನಿಯರಿಂಗ್‌ಗೆ ಲ್ಯಾಟರಲ್ ಎಂಟ್ರಿ ಅವಕಾಶ ಸಿಗುತ್ತದೆ.

2. ಹೊಸ ತಲೆಮಾರಿನ ITI ಕೋರ್ಸ್‌ಗಳು (Industry 4.0)
ಕರ್ನಾಟಕದ ಐಟಿಐಗಳಲ್ಲಿ ಆಧುನಿಕ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ:
• IoT & AI ಟೆಕ್ನಿಷಿಯನ್ – ಸ್ಮಾರ್ಟ್ ಸಾಧನಗಳು ಮತ್ತು AI ತಂತ್ರಜ್ಞಾನ ನಿರ್ವಹಣೆಗೆ ತರಬೇತಿ.
ಈ ಕೋರ್ಸ್‌ಗಳು ಕಡಿಮೆ ಅವಧಿಯಲ್ಲಿ ಉದ್ಯೋಗಾವಕಾಶ ಕಲ್ಪಿಸುತ್ತವೆ.

3. ಪೈಥಾನ್ & ಡೇಟಾ ಸೈನ್ಸ್ ಸರ್ಟಿಫಿಕೇಶನ್
AI ಕಲಿಯಲು Python ಅತ್ಯಂತ ಪ್ರಮುಖ. SSLC ರಜೆ ಅಥವಾ ಪಿಯುಸಿ ಜೊತೆಗೇ ಆನ್‌ಲೈನ್ ಮೂಲಕ ಪ್ರಮಾಣಪತ್ರ ಪಡೆಯಬಹುದು. Google ಮತ್ತು Microsoft ವಿದ್ಯಾರ್ಥಿಗಳಿಗೆ ಉಚಿತ ‘AI for Beginners’ ಕೋರ್ಸ್‌ಗಳನ್ನು ನೀಡುತ್ತವೆ.

ಭವಿಷ್ಯದ ದೊಡ್ಡ ದಾರಿ: PUC → B.Tech

AI ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಲು:
• ಪಿಯುಸಿಯಲ್ಲಿ PCM (Physics, Chemistry, Maths) ಆಯ್ಕೆ ಮಾಡುವುದು
• ನಂತರ CET ಅಥವಾ JEE ಬರೆದು AI & Data Scienceನಲ್ಲಿ BE/B.Tech ಮಾಡುವುದು

ಯಶಸ್ಸಿಗೆ ಸಲಹೆಗಳು

• ಗಣಿತದಲ್ಲಿ ಹಿಡಿತ ಬೆಳೆಸಿಕೊಳ್ಳಿ – AI ಅಂಕಿಅಂಶಗಳ ಮೇಲೆ ಆಧಾರಿತ
• ಚಿಕ್ಕ ವಯಸ್ಸಿನಿಂದಲೇ ಕೋಡಿಂಗ್ ಅಭ್ಯಾಸ ಮಾಡಿ
• ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿಗಿಂತ ಕೌಶಲ್ಯವೇ ಮುಖ್ಯ. ತಂತ್ರಜ್ಞಾನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ SSLC ನಂತರ AI ಕ್ಷೇತ್ರವನ್ನು ಆಯ್ಕೆ ಮಾಡುವುದು ಭವಿಷ್ಯಕ್ಕೆ ಬಲವಾದ ಹೆಜ್ಜೆಯಾಗಿದೆ.

Continue Reading

ದೇಶ

“ಮಾಟ ಮಂತ್ರ ಕಾಲ ಹೋಗಿದೆ” – ಬಾಲಕೃಷ್ಣ ಸ್ಪಷ್ಟನೆ

Published

on

ಬೆಂಗಳೂರು: ಸಿಎಂ Siddaramaiah ಅವರಿಗೆ ಮಾಟ–ಮಂತ್ರ ಮಾಡಲಾಗಿದೆ ಎಂಬ ಹೇಳಿಕೆಯಿಂದ ರಾಜಕೀಯ ವಲಯದಲ್ಲಿ ಉಂಟಾದ ಚರ್ಚೆ ಇನ್ನಷ್ಟು ತೀವ್ರಗೊಂಡಿದೆ. ಮಾಜಿ ಸಚಿವ K N Rajanna ಅವರ ಹೇಳಿಕೆಗೆ ಈಗ ಕಾಂಗ್ರೆಸ್ ಶಾಸಕ Magadi Balakrishna ಲೇವಡಿ ಮಾಡಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಬಾಲಕೃಷ್ಣ, “ಮಾಟ–ಮಂತ್ರ ಮಾಡಿಸುವುದಾದರೆ ರಾಜಣ್ಣವರೇ ಮಾಡಿಸಿರಬೇಕು. ಅವರು ಸಿಎಂ ಹತ್ತಿರದವರು, ಧೈರ್ಯವೂ ಅವರಿಗೇ ಇದೆ. ಇಂತಹ ವಿಷಯಗಳಿಂದ ಯಾರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ” ಎಂದು ಕಟಾಕ್ಷಿಸಿದರು.

ಮಾಟ–ಮಂತ್ರಗಳ ಬಗ್ಗೆ ಮಾತನಾಡುತ್ತಾ, “ಇಂತಹ ವಾಮಾಚಾರಗಳಿಂದ ಕುಟುಂಬವೇ ನಾಶವಾಗುವ ಉದಾಹರಣೆಗಳಿವೆ. ಅಷ್ಟು ಮೂರ್ಖತನಕ್ಕೆ ಯಾರೂ ಹೋಗುವುದಿಲ್ಲ. ಈಗಿನ ಕಾಲದಲ್ಲಿ ಮಾಟ–ಮಂತ್ರದಿಂದ ಅಧಿಕಾರ ಪಡೆಯುವುದು ಅಥವಾ ಕಸಿದುಕೊಳ್ಳುವುದು ಸಾಧ್ಯವಿಲ್ಲ” ಎಂದು ಹೇಳಿದರು.

ರಾಜಣ್ಣ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅವರು ಸಾಮಾನ್ಯವಾಗಿ ಹೇಳಿರಬಹುದು. ಅದನ್ನು ಅತಿಯಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಸಿಎಂ ಸಿದ್ದರಾಮಯ್ಯ ಅವರ ಆಡಳಿತ ಸಾಮರ್ಥ್ಯದ ಬಗ್ಗೆ ಮಾತನಾಡಿದ ಅವರು, “ವಯೋ ಸಹಜ ಸಮಸ್ಯೆಗಳಿದ್ದರೂ ಆಡಳಿತವನ್ನು ಚುರುಕಾಗಿ ನಡೆಸುವ ಶಕ್ತಿ ಸಿಎಂ ಅವರಿಗೆ ಇದೆ” ಎಂದು ಬೆಂಬಲ ವ್ಯಕ್ತಪಡಿಸಿದರು. ಜೊತೆಗೆ “ನಾವು ಕೂಡ ಸಿಎಂ ಆಪ್ತರೇ, ನಮ್ಮನ್ನು ದೂರ ಮಾಡಬೇಡಿ” ಎಂದು ಹಾಸ್ಯಮಯವಾಗಿ ಹೇಳಿದರು.

ಇನ್ನೂ ಮುಸ್ಲಿಂ ಸಮುದಾಯದಿಂದ ಕಾಂಗ್ರೆಸ್‌ಗೆ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಒಂದು ಸಮುದಾಯ ಮಾತ್ರವಲ್ಲ, ಎಲ್ಲ ಸಮುದಾಯಗಳೂ ತಮ್ಮ ಧ್ವನಿಯನ್ನು ಎತ್ತುತ್ತಿವೆ. ಅದು ತಪ್ಪಲ್ಲ. ಈ ವಿಚಾರವನ್ನು ಹೈಕಮಾಂಡ್ ಗಮನಿಸುತ್ತದೆ” ಎಂದು ಹೇಳಿದರು.

Continue Reading

Trending