Connect with us

ಬೆಂಗಳೂರು

ವಿಕಲಚೇತನರ ಮಾಸಿಕ ಪಿಂಚಣಿ ಹೆಚ್ಚಳ ಮಾಡಲ್ಲ – ಕೃಷ್ಣಬೈರೇಗೌಡ

ಬೆಂಗಳೂರು: ವಿಕಲಚೇತನರ ಮಾಸಿಕ ಪಿಂಚಣಿ (Disabled Monthly Pension) ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಅಂತ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byregowda) ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸತೀಶ್, ವಿಕಲಚೇತನರ ಪಿಂಚಣಿ ಹೆಚ್ಚಳ ಮಾಡುವಂತೆ ಒತ್ತಾಯ ಮಾಡಿದ್ರು. ಇದಕ್ಕೆ ಉತ್ತರ ನೀಡಿದ ಸಚಿವರು, ಮಾಸಿಕ ಪಿಂಚಣಿ ಹೆಚ್ಚಳ ಸಾಧ್ಯವಿಲ್ಲ ಎಂದು ನುಡಿದರು.

ಸಾಮಾಜಿಕ ಭದ್ರತೆ ಯೋಜನೆ (Social Security Scheme) ಅಡಿ ರಾಜ್ಯದಲ್ಲಿ 78 ಲಕ್ಷ ಫಲಾನುಭವಿಗಳಿಗೆ ಪಂಚಣಿ ನೀಡಲಾಗುತ್ತಿದೆ. 10,500 ಕೋಟಿ ರೂ. ಹಣ ವಾರ್ಷಿಕ ಹಣ ಇದಕ್ಕೆ ಖರ್ಚಾಗುತ್ತಿದೆ. ಕಾಲ ಕಾಲಕ್ಕೆ ಸಾಮಾಜಿಕ ಭದ್ರತಾ ವೇತನ ಪರಿಷ್ಕರಣೆ ಮಾಡುವ ಕೆಲಸ ಸರ್ಕಾರ ಮಾಡ್ತಿದೆ ಎಂದು ವಿವರಿಸಿದರು.

ಮುಂದುವರಿದು, ಕೇಂದ್ರ ಸರ್ಕಾರ 14 ವರ್ಷಗಳಿಂದ ಸಾಮಾಜಿಕ ಭದ್ರತಾ ಯೋಜನೆ ಹೆಚ್ಚಳ ಮಾಡಿಲ್ಲ. ಕೇಂದ್ರ ಸರ್ಕಾರ 13 ಲಕ್ಷ ಫಲಾನುಭವಿಗಳಿಗೆ ಮಾತ್ರ ಹಣ ಕೊಡ್ತಿದೆ. ಉಳಿದ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಹಣ ಕೊಡ್ತಿದೆ. ಕೇಂದ್ರ ಸರ್ಕಾರ 200-300 ರೂ ಮಾತ್ರ ಪ್ರತಿಯೊಬ್ಬರಿಗೆ ಕೊಡ್ತಿದೆ. ಆದ್ರೆ ನಮ್ಮ ಸರ್ಕಾರ 800 ರೂ, 2,000 ರೂ. ಕೊಡ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಹಣ ಹೆಚ್ಚಳ ಮಾಡಿದ್ರೆ ನಾವು ಮಾಡುವ ಬಗ್ಗೆ ಪರಿಶೀಲನೆ ಮಾಡ್ತೀವಿ ಅಂತ ತಿಳಿಸಿದರು

ಅಪರಾಧ

“ನಾನು ಯಾರು ಗೊತ್ತಾ? ಹೆಚ್ ಎಂ ರೇವಣ್ಣ ಪುತ್ರ” – ಶಶಾಂಕ್ ಕೂಗಿದ ಘಟನೆ

ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ, ಮಾಜಿ ಸಚಿವ ಹೆಚ್ ಎಂ ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ದುರಂತ ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ ಸಂಭವಿಸಿದೆ.

ಅಪಘಾತದಲ್ಲಿ ಶಶಾಂಕ್ ಎಂಬ ರೇವಣ್ಣ ಪುತ್ರನ ಫಾರ್ಚೂನರ್ ಕಾರು, ರಾಜೇಶ್ (23) ಎಂಬ ಯುವಕ ಬೈಕಿಗೆ ಡಿಕ್ಕಿ ಹೊಡೆದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಟೋಲ್ ನೂರು ಮೀಟರ್ ದೂರದಲ್ಲಿ ಸಂಭವಿಸಿದೆ.

ಗುರುವಾರ ರಾತ್ರಿ 10:30 ರ ಸುಮಾರಿಗೆ ಅಪಘಾತ ಎಸಗಿದ ಬಳಿಕ ಶಶಾಂಕ್ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಘಟನೆ ಸ್ಥಳದಲ್ಲಿದ್ದ ಸ್ಥಳೀಯರು 5 ಕಿ.ಮೀ. ಹಿಂಬಾಲಿಸಿ, ಸನ್‌ಫ್ಲವರ್ ಫ್ಯಾಕ್ಟರಿ ಬಳಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.

ಕಾರಿನಿಂದ ಇಳಿದ ನಂತರ ಶಶಾಂಕ್ “ನಾನು ಯಾರು ಗೊತ್ತಾ? ಹೆಚ್ ಎಂ ರೇವಣ್ಣ ಪುತ್ರ” ಎಂದು ಕೂಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಂತರ ಕಾರನ್ನು ಬದಿಯಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿ ಶಶಾಂಕ್ ಪರಾರಿಯಾಗಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ, ಕಾರಿನಲ್ಲಿ ರೇವಣ್ಣ ಕುಟುಂಬಸ್ಥರೂ ಇದ್ದರು.

ಹಿಟ್ ಅಂಡ್ ರನ್ ಪ್ರಕರಣ:
ತಡರಾತ್ರಿ ಫಾರ್ಚೂನರ್ ಕಾರು ಕುದೂರು ಪೊಲೀಸ್ ಠಾಣೆಗೆ ತರಲಾಗಿದ್ದು, ಪ್ರಕರಣದ ತನಿಖೆ ಪ್ರಾರಂಭವಾಗಿದೆ. ಘಟನೆ ಸಾರ್ವಜನಿಕ ಹಾಗೂ ರಾಜಕೀಯ ಗಮನ ಸೆಳೆದಿದೆ, ಮತ್ತು ಪೊಲೀಸರು ಶಶಾಂಕ್ ವಿರುದ್ಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Continue Reading

ದೇಶ

ಜನತೆಗೆ ವಿಶೇಷ ಸುದ್ದಿ – ರಾಜ್ಯ ಸರ್ಕಾರದ ಸೌಲಭ್ಯ

ಬೆಂಗಳೂರು, ಡಿಸೆಂಬರ್ 12, 2025: ಕರ್ನಾಟಕ ಸಾರಿಗೆ ಇಲಾಖೆ ಜನತೆಗೆ ದೊಡ್ಡ ಗುಡ್ ನ್ಯೂಸ್ ನೀಡಿದೆ. 1991-92 ರಿಂದ 2019-20ರವರೆಗೆ ದಾಖಲಾದ ಎಲ್ಲಾ ಬಾಕಿ ಟ್ರಾಫಿಕ್ ದಂಡಗಳಿಗೆ 50% ರಿಯಾಯಿತಿ ಘೋಷಿಸಲಾಗಿದೆ.

ಈ ವಿಶೇಷ ಒನ್-ಟೈಮ್ ಸೆಟಲ್ಮೆಂಟ್ ಯೋಜನೆ ನವೆಂಬರ್ 21, 2025 ರಿಂದ ಡಿಸೆಂಬರ್ 12, 2025 (ಇಂದು ಕೊನೆಯ ದಿನ) ವರೆಗೆ ಮಾತ್ರ ಅನ್ವಯವಾಗಲಿದೆ. ಈ ಅವಧಿಯಲ್ಲಿ ದಂಡದ ಅರ್ಧ ಮೊತ್ತ ಪಾವತಿಸಿದರೆ ಉಳಿದ 50% ಸರ್ಕಾರ ಮನ್ನಾ ಮಾಡಲಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಸಾರ್ವಜನಿಕರು ಈ ಸೌಲಭ್ಯವನ್ನು ಕಡ್ಡಾಯವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಯಾವೆಲ್ಲ ಪ್ರಕರಣಗಳಿಗೆ ರಿಯಾಯಿತಿ ಅನ್ವಯಿಸುತ್ತದೆ:

  • 1991-92 ರಿಂದ 2019-20 ರವರೆಗೆ ದಾಖಲಾದ ಎಲ್ಲಾ DSA (Departmental Action) ಪ್ರಕರಣಗಳು
  • ಹೆಲ್ಮೆಟ್ ಇಲ್ಲದೇ ಓಡುವುದು, ಸೀಟ್ ಬೆಲ್ಟ್ ಬಳಸದಿರುವುದು
  • ಸಿಗ್ನಲ್ ಜಿಗಿಯುವುದು, ಓವರ್ ಸ್ಪೀಡ್, ತಪ್ಪು ಪಾರ್ಕಿಂಗ್
  • ದಾಖಲೆ ಇಲ್ಲದೇ ವಾಹನ ಚಲಾಯಿಸುವುದು ಮತ್ತು ಇತರ ಎಲ್ಲಾ ಟ್ರಾಫಿಕ್ ಉಲ್ಲಂಘನೆಗಳು

ದಂಡ ಪಾವತಿಸುವ ವಿಧಾನ:

1. ಆನ್‌ಲೈನ್ ಮೂಲಕ:

  • ಕೆಳಗಿನ ಅಧಿಕೃತ ಆಪ್‌ಗಳಲ್ಲಿ ಒಂದನ್ನು ಡೌನ್‌ಲೋಡ್ ಮಾಡಿ:
    • ಕರ್ನಾಟಕ ರಾಜ್ಯ ಪೊಲೀಸ್ ಆಪ್
    • ಕರ್ನಾಟಕ ಒನ್ ಆಪ್
    • ASTM (BTP ಟ್ರಾಫಿಕ್ ಉಲ್ಲಂಘನೆ ವ್ಯವಸ್ಥೆ) ಆಪ್
  • ಹಂತಗಳು:
    1. ಆಪ್ ತೆರೆಯಿರಿ – “Traffic Fine” ಅಥವಾ “Pay Fine” ಆಯ್ಕೆ ಮಾಡಿ
    2. ವಾಹನ ಸಂಖ್ಯೆ (KA-XX-XX-XXXX) ನಮೂದಿಸಿ
    3. ಬಾಕಿ ಪ್ರಕರಣಗಳ ಪಟ್ಟಿ ಬರುತ್ತದೆ – 50% ರಿಯಾಯಿತಿ ತೋರಿಸುತ್ತದೆ
    4. UPI / ಕಾರ್ಡ್ / ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ
    5. ರಶೀದಿ ಡೌನ್‌ಲೋಡ್ ಮಾಡಿ – ಪ್ರಕರಣ ಕ್ಲೋಸ್

2. ಆಫ್‌ಲೈನ್ ಮೂಲಕ:

  • ನಿಮ್ಮ ಜಿಲ್ಲೆಯ ಅಥವಾ ತಾಲೂಕಿನ:
    • ಹಿರಿಯ ಪ್ರಾದೇಶಿಕ ಸಾರಿಗೆ ಕಚೇರಿ (Sr. RTO)
    • ಪ್ರಾದೇಶಿಕ ಸಾರಿಗೆ ಕಚೇರಿ (RTO)
    • ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ (ARTO) ಅಥವಾ ಹತ್ತಿರದ ಸಂಚಾರ ಪೊಲೀಸ್ ಠಾಣೆ
  • ವಾಹನ ದಾಖಲೆಗಳೊಂದಿಗೆ ಅರ್ಧ ದಂಡ ಪಾವತಿಸಿ

ಗಮನಿಸಿ:

  • ಈ ಯೋಜನೆ ಡಿಸೆಂಬರ್ 12, 2025, ಸಂಜೆ 11:59ಕ್ಕೆ ಮುಕ್ತಾಯವಾಗಲಿದೆ.
  • ಈ ದಿನದ ನಂತರ ದಂಡವನ್ನು ಪೂರ್ಣ ಮೊತ್ತ + ಬಡ್ಡಿ ಪಾವತಿಸಬೇಕಾಗುತ್ತದೆ.
Continue Reading

ದೇಶ

Bengaluru News ಟ್ರಾಫಿಕ್ ಪೊಲೀಸ್ ಬದಲು GBA ಟೋಯಿಂಗ್ — ಬೆಂಗಳೂರಿನಲ್ಲಿ ಹೊಸ ವ್ಯವಸ್ಥೆ

ಬೆಂಗಳೂರು: ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತೆ ಟೋಯಿಂಗ್ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಒಂದು ಟೋಯಿಂಗ್ ವಾಹನ ಖರೀದಿ ಆಗಿದ್ದು, ಉಳಿದ ನಾಲ್ಕು ಪಾಲಿಕೆಗಳಿಗೂ ಶೀಘ್ರದಲ್ಲೇ ಟೋಯಿಂಗ್ ವಾಹನಗಳು ಬರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ, ಗ್ಯಾರೇಜ್ ಸಮಸ್ಯೆ ಮತ್ತು ಅಕ್ರಮ ಪಾರ್ಕಿಂಗ್‌ಗಳು ದಿನೇದಿನೇ ಹೆಚ್ಚುತ್ತಿವೆ. ವಿಶೇಷವಾಗಿ ಬೀದಿ ಬದಿ ಹಾಗೂ ಮನೆ ಮುಂಭಾಗದ ಫುಟ್‌ಪಾತ್‌ಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಸಾಮಾನ್ಯವಾಗಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು GBA ಟ್ರಾಫಿಕ್ ಪೊಲೀಸರ ಸಹಕಾರದೊಂದಿಗೆ ಟೋಯಿಂಗ್ ಪುನರಾರಂಭ ಮಾಡಲು ಯೋಜಿಸಿದೆ.

ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರ ಮಾತುಗಳ ಪ್ರಕಾರ, ಅಕ್ರಮವಾಗಿ ಪಾರ್ಕ್ ಮಾಡಿದ ವಾಹನಗಳನ್ನು ಟೋಯಿಂಗ್ ಮಾಡಿದ ನಂತರ, ಮೋಟಾರು ವಾಹನ ನಿಯಮ ಪ್ರಕಾರ ದಂಡ ಹಾಕುವುದಷ್ಟೇ ಅಲ್ಲ, ಫುಟ್‌ಪಾತ್ ಜಾಗ ಕಬಳಿಸಿದಕ್ಕಾಗಿ GBA ವಿಶೇಷ ದಂಡವನ್ನು ಕೂಡ ವಿಧಿಸಲಿದೆ. ಈ ಮೂಲಕ ಪಾದಚಾರಿ ಹಕ್ಕುಗಳನ್ನು ಮತ್ತು ಸಾರ್ವಜನಿಕ ಜಾಗ ಉಪಯೋಗವನ್ನು ರಕ್ಷಿಸುವ ಗುರಿ ಹೊಂದಲಾಗಿದೆ.

GBA ವ್ಯಾಪ್ತಿಯಲ್ಲಿ ಐದು ಪಾಲಿಕೆಗಳು ಸೇರಲಿದ್ದು, ಪ್ರತಿ ಪಾಲಿಕೆಗೂ ವಿಶೇಷ ಟೋಯಿಂಗ್ ವಾಹನವನ್ನು ಒದಗಿಸಿ, ಒಂದು ತಿಂಗಳೊಳಗೆ ಟೆಂಡರ್ ಮೂಲಕ ಕಾರ್ಯಾಚರಣೆ ಪ್ರಾರಂಭಿಸಲು ಸಿದ್ಧತೆ ನಡೆದಿದೆ. ಇದರೊಂದಿಗೆ, ನಗರದಲ್ಲಿ ಎಲ್ಲಿ ತಾನೆ ಪಾರ್ಕ್ ಮಾಡುವ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸುವುದೂ ಉದ್ದೇಶವಾಗಿದೆ.

ಇದೇ ವೇಳೆ ಟ್ರಾಫಿಕ್ ಪೊಲೀಸರ ಬದಲಾಗಿ GBA ಸ್ವತಂತ್ರವಾಗಿ ಟೋಯಿಂಗ್ ನಡೆಸಲು ಮುಂದಾಗಿರುವುದು ನಗರದ ಜನರಲ್ಲಿ ಕುತೂಹಲ ಹುಟ್ಟಿಸಿದೆ. ಹೊಸ ವ್ಯವಸ್ಥೆಯಿಂದ ಸಂಚಾರದ ಸಮಸ್ಯೆ ಎಷ್ಟು ಮಟ್ಟಿಗೆ ಪರಿಹಾರವಾಗುತ್ತದೆ ಎಂಬುದು ಗಮನ ಸೆಳೆಯುತ್ತಿದೆ.

Continue Reading

Trending