ದೇಶ
PAN 2.0 ಯೋಜನೆಗೆ ಕೇಂದ್ರ ಒಪ್ಪಿಗೆ: ಇನ್ಮುಂದೆ QR ಕೋಡ್ ಜೊತೆ ಬರಲಿದೆ ಪ್ಯಾನ್ ಕಾರ್ಡ್; ಏನಿದರ ಉದ್ದೇಶ?
QR Code PAN Card: ಹಣಕಾಸು ವಹಿವಾಟಿಗೆ ಪ್ಯಾನ್ ಕಾರ್ಡ್(PAN Card) ಎಷ್ಟು ಮುಖ್ಯ ಎಂದು ಎಲ್ಲರಿಗೂ ಗೊತ್ತಿರುವಂಥದ್ದೇ. ತೆರಿಗೆದಾರರ ಗುರುತಿಗಾಗಿ ಮುಂಚೂಣಿಗೆ ಬಂದ ಪ್ಯಾನ್ ಇನ್ನು ಮುಂದೆ ಕ್ಯೂಆರ್ ಕೋಡ್‌ನೊಂದಿಗೆ ಬರಲಿದೆ. ಇದರಿಂದ ತೆರಿಗೆದಾರರ ಡಿಜಿಟಲ್ ಅನುಭವ ಹೆಚ್ಚಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ಪ್ಯಾನ್ 2.0 ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.
ಏನಿದರ ಉದ್ದೇಶ?: ಸರ್ಕಾರಿ ಇಲಾಖೆಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಲ್ಲಿ ಪ್ಯಾನ್ ಅನ್ನು ಮುಖ್ಯ ಗುರುತಿಸುವಿಕೆಯಾಗಿ ಬಳಸುವುದು ಇದರ ಹಿಂದಿನ ಉದ್ದೇಶ. ಈ ಯೋಜನೆಗೆ ಕೇಂದ್ರ ಸರ್ಕಾರ 1,435 ಕೋಟಿ ರೂಪಾಯಿ ವ್ಯಯಿಸಲಿದೆ. ಪ್ಯಾನ್ 2.0 ಯೋಜನೆಯು ತಂತ್ರಜ್ಞಾನದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳಲ್ಲಿ ದೊಡ್ಡ ಬದಲಾವಣೆ ತರಲು ಸಹಾಯ ಮಾಡಲಿದೆ. ತೆರಿಗೆದಾರರು ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಸುಲಭವಾಗಿ ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಸೇವೆಗಳ ವಿತರಣೆಯನ್ನೂ ತ್ವರಿತಗೊಳಿಸಬಹುದು ಮತ್ತು ಗುಣಮಟ್ಟವೂ ಸುಧಾರಿಸಲಿದೆ. ಎಲ್ಲಾ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಿರುತ್ತದೆ. ಡೇಟಾ ಸುರಕ್ಷಿತವಾಗಿ ಉಳಿಯುತ್ತದೆ. ಪರಿಸರಸ್ನೇಹಿ ಪ್ರಕ್ರಿಯೆ ವೆಚ್ಚ ತಗ್ಗಿಸುತ್ತದೆ.
ಉಚಿತ QR ಕೋಡ್ ಪ್ಯಾನ್ ಕಾರ್ಡ್: ಪ್ಯಾನ್ 2.0 ಯೋಜನೆಯಡಿ ಕ್ಯೂಆರ್ ಕೋಡ್ ಹೊಂದಿರುವ ಹೊಸ ಪ್ಯಾನ್ ಕಾರ್ಡ್ ಅನ್ನು ತೆರಿಗೆದಾರರಿಗೆ ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ಯಾನ್ 2.0 ಪ್ರಾಜೆಕ್ಟ್ ಅಸ್ತಿತ್ವದಲ್ಲಿರುವ PAN/TAN 1.0 ಫ್ರೇಮ್‌ವರ್ಕ್‌ನ ಅಪ್‌ಗ್ರೇಡ್ ಆವೃತ್ತಿಯಾಗಿದ್ದು, ಕೋರ್ ಮತ್ತು ಕೋರ್ ಅಲ್ಲದ PAN/TAN ಚಟುವಟಿಕೆಗಳೊಂದಿಗೆ ಪ್ಯಾನ್ ಪರಿಶೀಲನೆ ಸೇವೆಯನ್ನು ಸಂಯೋಜಿಸುತ್ತದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಲ್ಲಿಯವರೆಗೆ, ದೇಶದಲ್ಲಿ ಸುಮಾರು 78 ಕೋಟಿ ಪ್ಯಾನ್‌ಗಳನ್ನು ನೀಡಲಾಗಿದ್ದು, ಈ ಪೈಕಿ ಶೇ 98ರಷ್ಟು ಪ್ಯಾನ್‌ಗಳನ್ನು ವೈಯಕ್ತಿಕವಾಗಿ ನೀಡಲಾಗಿದೆ.
PAN ಕಾರ್ಡ್ ಎಂದರೇನು?, ಏಕೆ ಬೇಕು?: ಆದಾಯ ತೆರಿಗೆ ಇಲಾಖೆಯಿಂದ(IT) ನೀಡಲಾಗುವ 10 ಅಂಕಿಯ ಆಲ್ಫಾನ್ಯೂಮರಿಕ್ ಗುರುತಿನ ಚೀಟಿಯೇ ಪ್ಯಾನ್. ಇದಕ್ಕಾಗಿ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿಗೆ ಈ ಕಾರ್ಡ್ ನೀಡಲಾಗುತ್ತದೆ. PAN ಸಂಖ್ಯೆಯ ಮೂಲಕ ಯಾವುದೇ ವ್ಯಕ್ತಿಯ ಆನ್‌ಲೈನ್ ಅಥವಾ ಹಣಕಾಸಿನ ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆ ಮೇಲ್ವಿಚಾರಣೆ ಮಾಡುತ್ತದೆ.
ದೇಶ
“ಯತೀಂದ್ರಗೆ ಮಿನಿಮಮ್ ಕಾಮನ್ ಸೆನ್ಸ್ ಇಲ್ಲ” – ಶಾಸಕ ಬಾಲಕೃಷ್ಣ ತೀವ್ರ ವಾಗ್ದಾಳಿ
ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಗಡಿ ಶಾಸಕ ಬಾಲಕೃಷ್ಣ ಕಿಡಿಕಾರಿದ್ದಾರೆ. “ಯತೀಂದ್ರ ಅವರಿಗೆ ಮಿನಿಮಮ್ ಕಾಮನ್ ಸೆನ್ಸ್ ಕೂಡ ಇಲ್ಲ” ಎಂದು ಅವರು ನೇರ ವಾಗ್ದಾಳಿ ನಡೆಸಿದರು.
ಹೈಕಮಾಂಡ್‌ನಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಯತೀಂದ್ರ ನೀಡಿದ್ದ ಹೇಳಿಕೆಗೆ ಸುವರ್ಣ ಸೌಧದಲ್ಲಿ ಪ್ರತಿಕ್ರಿಯಿಸಿದ ಬಾಲಕೃಷ್ಣ, “ದೊಡ್ಡವರಿಗೆ ಒಂದು ನ್ಯಾಯ, ಚಿಕ್ಕವರಿಗೆ ಒಂದು ನ್ಯಾಯ ಆಗುತ್ತಿದೆ. ಯತೀಂದ್ರಗೆ ನೋಟಿಸ್ ನೀಡದೇ ಇದ್ದದ್ದು ಅಸಮಾಧಾನಕಾರಿ” ಎಂದರು.
“ಈ ರೀತಿ ನಡೆಯುತ್ತಿರುವುದಕ್ಕೆ ನಮ್ಮ ಇಕ್ಬಾಲ್ ಹುಸೇನ್ ಮಾತಾಡಿದ್ರೆ ಬಲಾತ್ಕಾರ, ಯತೀಂದ್ರ ಮಾತಾಡಿದ್ರೆ ಚಮತ್ಕಾರ… ಅದನ್ನು ಅದ್ಭುತವಾಗಿ ಹೇಳಿದ್ದಾರೆ” ಎಂದು ಬಾಲಕೃಷ್ಣ ಮತ್ತಷ್ಟು ತಿರುಗೇಟು ನೀಡಿದರು.
ಇದಕ್ಕೂ ಮುಂಚೆ ಸಚಿವ ಡಿ.ಕೆ. ಶಿವಕುಮಾರ್ ಪರವಾಗಿ ಕೆಲವು ಶಾಸಕರು ನೀಡಿದ ಹೇಳಿಕೆಗಳಿಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿತ್ತು. ಆದರೆ ಈಗ ಸಿಎಂ ಪುತ್ರ ಯತೀಂದ್ರ ನೇರವಾಗಿ ತಂದೆಯ ಪರ ಬ್ಯಾಟ್ ಬೀಸಿದರೂ ಇನ್ನೂ ನೋಟಿಸ್ ನೀಡಿಲ್ಲ ಎಂಬ ಪ್ರಶ್ನೆಯನ್ನು ಡಿಕೆ ಬೆಂಬಲಿಗ ಶಾಸಕರು ಎತ್ತಿದ್ದಾರೆ.
ಬೆಳಗಾವಿ ಅಧಿವೇಶನದ ರಾಜಕೀಯ ವಾತಾವರಣ ಈ ಆರೋಪ-ಪ್ರತ್ಯಾರೋಪಗಳಿಂದ ಮತ್ತಷ್ಟು ಕಾವು ಪಡೆದಿದೆ.
ದೇಶ
ರಜನಿಕಾಂತ್ 75ನೇ ಜನ್ಮದಿನ: ಜೈಲರ್ 2 ಸೆಟ್‌ನಲ್ಲಿ ಭವ್ಯ ಸಂಭ್ರಮ
ಮುಂಬೈ/ಚೆನ್ನೈ: ಭಾರತೀಯ ಸಿನಿರಂಗದ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಇಂದು 75ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜೈಲರ್-2 (Jailer 2) ಚಿತ್ರದ ಶೂಟಿಂಗ್ ನಡುವೆ ಸೆಟ್‌ನಲ್ಲೇ ತಲೈವ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಚಿತ್ರದ ಸಂಪೂರ್ಣ ತಂಡ ವಿಶೇಷ ಕೇಕ್ ಕತ್ತರಿಸಿ ರಜನಿಕಾಂತ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿತು.
ಸದ್ಯ ರಜನಿಕಾಂತ್ ಸನ್ ಪಿಕ್ಚರ್ಸ್ ನಿರ್ಮಾಣದ ಜೈಲರ್ ಚಿತ್ರದ ಸೀಕ್ವೆಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 170ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತಲೈವ, 50 ವರ್ಷಗಳ ಸಿನಿಮಾ ಜೀವನ ಮುಗಿಸಿರುವ ಸಂದರ್ಭದಲ್ಲಿ ಈ ಹುಟ್ಟುಹಬ್ಬ ಅಭಿಮಾನಿಗಳಿಗಾಗಿ ಹೆಚ್ಚಿನ ಸಂಭ್ರಮವನ್ನು ತಂದಿದೆ.
1975ರಲ್ಲಿ ಕೆ.ಬಳಚಂದರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ರಜನಿಕಾಂತ್, ಅಂದಿನಿಂದಲೂ ದಕ್ಷಿಣ ಭಾರತದಷ್ಟೇ ಅಲ್ಲ ಭಾರತದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಿಂಚಿದ ರಜನಿಕಾಂತ್ ಅವರ ಅಭಿನಯಕ್ಕೆ ಮಾಯೆ, ಶೈಲಿ ಮತ್ತು ವಿಭಿನ್ನ ಹಾವಭಾವಗಳು ಎಂದಿಗೂ ವಿಶೇಷ.
ರಜನಿಕಾಂತ್ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ಉಡುಗೊರೆಯಾಗಿ, ಅವರು ಅಭಿನಯಿಸಿ ನಿರ್ಮಿಸಿದ್ದ ‘ಪಡೆಯಪ್ಪ’ ಚಿತ್ರ ಇಂದು ರೀ-ರಿಲೀಸ್ ಆಗಿದ್ದು ಅಭಿಮಾನಿಗಳು ಸಂಭ್ರಮದಿಂದ ಥಿಯೇಟರ್‌ಗಳಿಗೆ ಧಾವಿಸಿದ್ದಾರೆ. ರಜನಿಕಾಂತ್ ಅವರ 75ನೇ ಹುಟ್ಟುಹಬ್ಬ, 50 ವರ್ಷಗಳ ಸಿನಿಮಾ ಪ್ರಯಾಣ ಮತ್ತು ಜೈಲರ್-2 ಶೂಟಿಂಗ್—all combine ಆಗಿ ಅಭಿಮಾನಿಗಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿವೆ.
ದೇಶ
ಅಧಿವೇಶನದ ನಂತರ ಡಿಕೆಶಿ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಬೆಳಗಾವಿ: “ಸಂಕ್ರಾಂತಿಯಲ್ಲ, ಅಧಿವೇಶನ ಮುಗಿದ ಕೂಡಲೇ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ” ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಬೆಳಗಾವಿ ಸುವರ್ಣಸೌಧದಲ್ಲಿ ಸ್ಪಷ್ಟಪಡಿಸಿದ್ದಾರೆ.
“ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಶಾಸಕನಾಗಿದ್ದೇನೆ. ಹಾಗೆಯೇ ಡಿ.ಕೆ. ಶಿವಕುಮಾರ್ ಅವರ ಹಣೆಯಲ್ಲಿ ಸಿಎಂ ಸ್ಥಾನ ಬರೆದಿದೆ. ಅವರು ಖಚಿತವಾಗಿ ಸಿಎಂ ಆಗುತ್ತಾರೆ” ಎಂದು ಇಕ್ಬಾಲ್ ಹುಸೇನ್ ಹೇಳಿದರು. “ನಿನ್ನೆ 55 ಜನ ಶಾಸಕರು ಒಟ್ಟಿಗೆ ಊಟ ಮಾಡಿದ್ದೇವೆ. ಅದರಲ್ಲಿ ಯಾವ ರಾಜಕೀಯ ಚರ್ಚೆಯೂ ನಡೆಯಲಿಲ್ಲ. ನಮಗೆ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು, ಆಗಲೇಬೇಕು” ಎಂದರು.
“ಡಿ.ಕೆ. ಶಿವಕುಮಾರ್ ಕಷ್ಟಪಟ್ಟಿದ್ದಾರೆ, ಅದರ ಫಲ ಅವರು ಪಡೆಯಲೇಬೇಕು. ಅಧಿವೇಶನ ಮುಗಿದ ತಕ್ಷಣ ಬದಲಾವಣೆ ಸಾಧ್ಯ. ಸಂಖ್ಯಾಬಲ ಮುಖ್ಯವಲ್ಲ, ಹೈಕಮಾಂಡ್ ನಿರ್ದೇಶನೆಯೇ ಅಂತಿಮ” ಎಂದು ಅವರು ಹೇಳಿದರು.
ಡಿನ್ನರ್ ಸಭೆಯಲ್ಲಿ 50–60 ಮಂದಿ ಸೇರಿದ್ದರೂ, ಇದು ರಾಜಕೀಯ ಚರ್ಚೆಗೆ ವೇದಿಕೆ ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು. “ಡಿ.ಕೆ. ಶಿವಕುಮಾರ್ ಕರೆದರೆ ಯಾವ ಪಕ್ಷದವರಾದರೂ ಬರುತ್ತಾರೆ. ವಿಶ್ವಾಸ, ಪ್ರೀತಿ, ಬಾಂಧವ್ಯ – ಪಕ್ಷವೇನೂ matter ಆಗೋದಿಲ್ಲ. ಕಾಂಗ್ರೆಸ್ ಶಿಸ್ತಿನ ಪಕ್ಷ” ಎಂದರು.
ಮುಖ್ಯಮಂತ್ರಿಯ ಪರವಾಗಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, “ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೀಡಿರುವ ಮಾರ್ಗದರ್ಶನವೇ ನಮಗೆ ಅಂತಿಮ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ; ನಾನು ಡಿನ್ನರ್‌ಗೆ ಹೋಗಿರಲಿಲ್ಲ” ಎಂದು ಹೇಳಿದರು.
-
ಬಿಬಿಎಂಪಿ7 months agoತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years agoವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years agoಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years agoಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years agoGruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು2 years agoನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು1 year agoಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years agoದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ
